logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಏಪ್ರಿಲ್‌ 16; ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆ ಮಳೆ ನಿರೀಕ್ಷೆ, ಉಳಿದೆಡೆ ಒಣಹವೆ

ಕರ್ನಾಟಕ ಹವಾಮಾನ ಏಪ್ರಿಲ್‌ 16; ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆ ಮಳೆ ನಿರೀಕ್ಷೆ, ಉಳಿದೆಡೆ ಒಣಹವೆ

Umesh Kumar S HT Kannada

Apr 16, 2024 06:24 AM IST

ಕರ್ನಾಟಕ ಹವಾಮಾನ ಏಪ್ರಿಲ್‌ 16: ಹೇಗಿದೆ ಇಂದಿನ ಹವಾಮಾನ ಸ್ಥಿತಿಗತಿ?

  • ಕರ್ನಾಟಕ ಹವಾಮಾನ ಏಪ್ರಿಲ್ 16: ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಒಣಹವೆ ಮುಂದುವರಿಯಲಿದೆ ಆದಾಗ್ಯೂ ಮೈಸೂರು ಬಳ್ಳಾರಿಯ ಒಂದೆರಡು ಕಡೆ ಚದುರಿದ ಮಳೆ ಬೀಳಬಹುದು ಎಂದು ಕರ್ನಾಟಕ ಮಳೆ ಮುನ್ಸೂಚನೆ ವರದಿ ಹೇಳಿದೆ.

ಕರ್ನಾಟಕ ಹವಾಮಾನ ಏಪ್ರಿಲ್‌ 16: ಹೇಗಿದೆ ಇಂದಿನ ಹವಾಮಾನ ಸ್ಥಿತಿಗತಿ?
ಕರ್ನಾಟಕ ಹವಾಮಾನ ಏಪ್ರಿಲ್‌ 16: ಹೇಗಿದೆ ಇಂದಿನ ಹವಾಮಾನ ಸ್ಥಿತಿಗತಿ?

ಬೆಂಗಳೂರು: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ಇರಲಿದ್ದು, ಬಿಸಿಲು ಕಾಡಲಿದೆ. ಈ ಭಾಗದಲ್ಲಿ ಒಣಹವೆಯ ತಾಪಮಾನ ಮತ್ತು ಆರ್ದ್ರತೆಯ ಕಾರಣ ಜನ ಸಂಕಟ ಅನುಭವಿಸಲಿದ್ದಾರೆ. ಇನ್ನುಳಿದಂತೆ, ದಕ್ಷಿಣ ಒಳನಾಡಿನ ಬಳ್ಳಾರಿ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ

ಕರ್ನಾಟಕ ಹವಾಮಾನ ಮೇ 9; ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು ಸೇರಿ 23 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದೇ ಪ್ರಕಟ; 10ನೇ ತರಗತಿ ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಸೇರಿ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ತಾಪಮಾನ ಹೆಚ್ಚಳ ನಿರೀಕ್ಷಿತ. ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆ ಮಳೆ, ಉಷ್ಣಾಂಶ ಹೆಚ್ಚಳ ಕಾಡಬಹುದು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ, ಏಪ್ರಿಲ್ 17 ಮತ್ತು 18 ರಂದು ಕರ್ನಾಟಕ ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆ, ಏಪ್ರಿಲ್‌ 16 ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಗುಡುಗು ಮಿಂಚು ಸಹಿತ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಹವಾಮಾನ ಇಂದು (ಏಪ್ರಿಲ್‌ 16), ಗರಿಷ್ಠ 36 ಡಿಗ್ರಿ ಸೆಲ್ಶಿಯಸ್ ಕನಿಷ್ಠ 22 ಡಿಗ್ರಿ ಸೆಲ್ಶಿಯಸ್

ಬೆಂಗಳೂರು ನಗರದಲ್ಲಿ ಇಂದು (ಏಪ್ರಿಲ್‌ 16) ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಶಿಯಸ್ ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುನ್ಸೂಚನಾ ವರದಿ ತಿಳಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೂಡ ಗರಿಷ್ಠ 36 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಬಹುದು. ನಿನ್ನೆ (ಏಪ್ರಿಲ್ 15) ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 35.4 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 36 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಏಪ್ರಿಲ್ 15) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.

ಪ್ರಮುಖ ನಗರಗಳ ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಏಪ್ರಿಲ್ 16) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು – 27.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 63)

ಮಂಗಳೂರು – 29.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 77)

ಚಿತ್ರದುರ್ಗ – 29.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 42)

ಗದಗ – 28 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 42)

ಹೊನ್ನಾವರ – 30 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 74)

ಕಲಬುರಗಿ – 31.5 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 30)

ಬೆಳಗಾವಿ – 30.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 39)

ಕಾರವಾರ – 28.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 83 )

----------------------

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು