logo
ಕನ್ನಡ ಸುದ್ದಿ  /  ಕರ್ನಾಟಕ  /  Who Is Siddeshwara Swamiji: ಬದುಕಿಗೆ ಪ್ರವಚನಗಳ ದಾರಿದೀಪ ಕೊಟ್ಟ ನಡೆದಾಡುವ ಸಂತ

Who is siddeshwara swamiji: ಬದುಕಿಗೆ ಪ್ರವಚನಗಳ ದಾರಿದೀಪ ಕೊಟ್ಟ ನಡೆದಾಡುವ ಸಂತ

HT Kannada Desk HT Kannada

Jan 03, 2023 06:49 AM IST

google News

ದುಕಿಗೆ ಪ್ರವಚನಗಳ ದಾರಿದೀಪ ಕೊಟ್ಟ ನಡೆದಾಡುವ ಸಂತ

  • Who is siddeshwara swamiji: ಬದುಕುವುದು ಹೇಗೆ? ಎಂಬ ಸರಣಿ ಉಪನ್ಯಾಸಗಳ ಮೂಲಕ ಜನರ ಬದುಕಿಗೆ ಪ್ರವಚನಗಳ ದಾರಿದೀಪ ಕೊಟ್ಟವರು ವಿಜಯಪುರದ ಈ ಜ್ಞಾನಯೋಗಿ. ವೈಕುಂಠ ಏಕಾದಶಿಯ ದಿನವಾದ ನಿನ್ನೆ ಮುಸ್ಸಂಜೆ ಶ್ರೀಸಿದ್ಧೇಶ್ವರ ಸ್ವಾಮೀಜಿಯವರು ಪರಂಧಾಮ ಸೇರಿದರು. ಅವರ ಬದುಕಿನ ಕಡೆಗೊಂದು ಕಿರು ನೋಟ ಇಲ್ಲಿದೆ.

ದುಕಿಗೆ ಪ್ರವಚನಗಳ ದಾರಿದೀಪ ಕೊಟ್ಟ ನಡೆದಾಡುವ ಸಂತ
ದುಕಿಗೆ ಪ್ರವಚನಗಳ ದಾರಿದೀಪ ಕೊಟ್ಟ ನಡೆದಾಡುವ ಸಂತ

ಜ್ಞಾನಯೋಗಿ, ನಡೆದಾಡುವ ಸಂತ ಎಂದೇ ಜನಪ್ರಿಯರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿನ್ನೆ ಮುಸ್ಸಂಜೆ ಲೌಕಿಕದಿಂದ ಅಲೌಕಿಕದೆಡೆಗೆ ಪ್ರಯಾಣಬೆಳೆಸಿದರು.

ಅವರು ವಿಜಯಪುರದ ಜೀವಂತ ದೇವರು ಎಂದೇ ಜನಪ್ರಿಯರಾಗಿದ್ದರು. ಆಧ್ಯಾತ್ಮಿಕ ಪ್ರವಚನಗಳ ಮೂಲಕ ಕೇಳುಗರ ಬದುಕಿಗೆ ಮಾರ್ಗದರ್ಶನ ನೀಡಿದ ದಾರ್ಶನಿಕರಾಗಿದ್ದರು. ಆಧ್ಯಾತ್ಮದ ಆಳ ಅಧ್ಯಯನ ನಡೆಸಿದ್ದ ಸ್ವಾಮೀಜಿಯವರು, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಪುಣರೂ ಆಗಿದ್ದರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ 1940ರ ದಶಕದಲ್ಲಿ ಜನಿಸಿದ ಅವರ ಬಾಲ್ಯದ ಹೆಸರು ಸಿದ್ದಗೊಂಡಪ್ಪ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ, ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು.

ಬದುಕುವುದು ಹೇಗೆ? ನಾವು ಹೇಗೆ ಬದುಕಬೇಕು/ ದಾರಿ ಮಾಡಿಕೊಳ್ಳಬೇಕು

ಹೌದು, “ಬದುಕುವುದು ಹೇಗೆ, ನಾವು ಹೇಗೆ ಬದುಕಬೇಕು/ ದಾರಿ ಮಾಡಿಕೊಳ್ಳಬೇಕು” ಎಂಬ ಅವರ ಉಪನ್ಯಾಸ ಸರಣಿ ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾಗಿ ಬೆಳಗಿದೆ. ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಅವರು ಕೊಟ್ಟ ಪ್ರಾಯೋಗಿಕ ಪಾಠಗಳನ್ನು ಜನ ಮೆಚ್ಚಿದ್ದಾರೆ.

ಅಲ್ಲಮ ಪ್ರಭುವಿನ ವಚನಗಳ ಕುರಿತ ಆಳ ಅಧ್ಯಯನ ನಡೆಸಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಆ ಕುರಿತ ಅಧಿಕೃತ ಭಾಷಣಕಾರರಾಗಿದ್ದರು. ಆ ವಚನಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದ್ದರು. ವಿಶ್ವದ ತತ್ವಜ್ಞಾನಿಗಳ ಹೋಲಿಕೆಯು ಒಂದು ನಿರ್ದಿಷ್ಟ ವಿಷಯದ ದೃಷ್ಟಿಕೋನಕ್ಕೆ ಒಳಪಡಿಸಿದಾಗ ಅವರ ಉಪನ್ಯಾಸದ ಅತ್ಯುತ್ತಮ ಹೊರಬಂದಿದೆ.

ಸರಳ ಜೀವನ ಶೈಲಿ, ಆದರ್ಶ ನಡೆ ನುಡಿ

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರದ್ದು ಸರಳ ಸ್ಪೂರ್ತಿದಾಯಕ ಜೀವನ ಶೈಲಿಯಾಗಿತ್ತು. ಇದು ನೆಮ್ಮದಿಯ ಜೀವನಕ್ಕೆ ಉದಾಹರಣೆ ಎಂಬುದನ್ನು ಬಾಳಿ ತೋರಿದವರು ಸ್ವಾಮೀಜಿ. ಬದುಕನ್ನು ಆಧ್ಯಾತ್ಮಕ್ಕೆ ಮೀಸಲಿಟ್ಟ ಅವರು, ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಾಗಿ ಹೆಸರುವಾಸಿಯಾಗಿದೆ. ಪತಂಜಲಿ ಯೋಗಶಾಸ್ತ್ರವನ್ನೂ ಅರಿತುಕೊಂಡಿದ್ದ ಸ್ವಾಮೀಜಿ, ಅದರಲ್ಲೂ ಪಾಂಡಿತ್ಯ ಹೊಂದಿದ್ದರು.

ಸರಳತೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಹೋಲಿಸಲಾಗದ ಶಾಂತ ಮತ್ತು ಸಂಯೋಜನೆಯ ವ್ಯಕ್ತಿತ್ವ ಹೊಂದಿದ್ದ ಸಿದ್ದೇಶ್ವರ ಸ್ವಾಮೀಜಿ, ಜನರ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದವರು.

ಸಮಯ ಪರಿಪಾಲನೆಯಲ್ಲಿ ಅವರಿಗೆ ಅವರೇ ಸಾಟಿ. ಯಾವುದೇ ಕಾರ್ಯಕ್ರಮ ಇದ್ದರೂ ಅದನ್ನು ಸಮಯದ ಚೌಕಟ್ಟಿನಲ್ಲೇ ಮುಗಿಸುವುದು ಅವರಿಗೆ ಸಿದ್ಧಿಸಿತ್ತು. ಅವರೂ ಸ್ವತಃ ಸಮಯ ಪಾಲನೆ ಮಾಡುತ್ತಿದ್ದರು. ಈ ವಿಚಾರದಲ್ಲೂ ಅವರ ಬದುಕು ಎಲ್ಲರಿಗೂ ಮಾದರಿಯೇ ಆಗಿತ್ತು ಎಂಬುದು ಅವರನ್ನು ಬಲ್ಲ ಎಲ್ಲರಿಗೂ ವೇದ್ಯವಾದ ವಿಚಾರವಾಗಿತ್ತು.

ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಲಿದು ಬಂದಿತ್ತು. ಆದರೆ ಈ ಪ್ರಶಸ್ತಿಯನ್ನು ಹಿಂದಿರುಗಿಸಿದ ಸ್ವಾಮೀಜಿ, ನಾನೊಬ್ಬ ಸರಳ ವ್ಯಕ್ತಿ. ನನಗೆ ಯಾವುದೇ ಪ್ರಶಸ್ತಿಗಳ ಅವಶ್ಯತೆ ಇಲ್ಲ. ಅನ್ಯಥಾ ಭಾವಿಸದಿರಿ ಎಂದು ನಾಜೂಕಾಗಿ ಪ್ರಶಸ್ತಿ ನಿರಾಕರಿಸಿದ್ದರು. ಇಷ್ಟೇ ಅಲ್ಲದೆ ಕರ್ನಾಟಕ ವಿಶ್ವವಿದ್ಯಾನಿಲಯ ನೀಡಲು ಹೊರಟ ಗೌರವ ಡಾಕ್ಟರೇಟ್ ಅನ್ನೂ ಶ್ರೀಗಳು ಸ್ವೀಕರಿಸಿಲ್ಲ. ಇವೆಲ್ಲವೂ ಅವರ ಹಿರಿಮೆ, ಗರಿಮೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ