ಜನವರಿ 1ರಂದು ಹೊಸ ವಾಹನ ಡೆಲಿವರಿ ಪಡೆಯಬೇಕಿದ್ರೆ ಯಾವಾಗ ಬುಕ್ ಮಾಡಬೇಕು? ಹೊಸ ವರ್ಷಕ್ಕೆ ಹೊಸ ಕಾರು ಬೈಕ್ ಖರೀದಿಸಲು ಸಲಹೆ
Nov 27, 2024 01:03 PM IST
ಜನವರಿ 1ರಂದು ಹೊಸ ವಾಹನ ಡೆಲಿವರಿ ಪಡೆಯಬೇಕಿದ್ರೆ ಯಾವಾಗ ಬುಕ್ ಮಾಡಬೇಕು?
- ಜನವರಿ 1, 2025ರಂದು ನಿಮಗೆ ವಾಹನ ಡೆಲಿವರಿಯಾಗಬೇಕಾದರೆ ಒಂದೆರಡು ತಿಂಗಳು ಮೊದಲೇ ವಾಹನ ಬುಕ್ಕಿಂಗ್ ಮಾಡುವುದು ಉತ್ತಮ. ಆದರೆ, ಇನ್ನು ಒಂದೇ ತಿಂಗಳು ಬಾಕಿ ಉಳಿದಿದೆ. ನೀವು ಯಾವ ಕಾರು, ಯಾವ ಬೈಕ್ ಖರೀದಿಸುವಿರಿ ಅದರ ಆಧಾರದ ಮೇಲೆ ಡೆಲಿವರಿ, ವೇಟಿಂಗ್ ಪಿರೆಯಿಡ್ ಇರುತ್ತದೆ.
ಜನವರಿ 1, 2025ರಂದು ನಿಮಗೆ ವಾಹನ ಡೆಲಿವರಿಯಾಗಬೇಕಾದರೆ ಒಂದೆರಡು ತಿಂಗಳು ಮೊದಲೇ ವಾಹನ ಬುಕ್ಕಿಂಗ್ ಮಾಡುವುದು ಉತ್ತಮ. ನೀವು ಯಾವ ಕಾರು, ಯಾವ ಬೈಕ್ ಖರೀದಿಸುವಿರಿ ಅದರ ಆಧಾರದ ಮೇಲೆ ಡೆಲಿವರಿ, ವೇಟಿಂಗ್ ಪಿರೆಯಿಡ್ ಇರುತ್ತದೆ. ಹೀಗಿದ್ದರೂ, ಜನವರಿ 1ರಂದು ಡೆಲಿವರಿಗೆ ಸಾಕಷ್ಟು ಜನರು ಕಾಯುತ್ತಿರುವುದರಿಂದ ಕಂಪನಿಗಳು ಆ ಸಮಯದಲ್ಲಿ ಡೆಲಿವರಿ ಮಾಡಲು ಪ್ರಯತ್ನಿಸುತ್ತವೆ. ಹೀಗಾಗಿ, ವಿವಿಧ ಶೋರೂಂಗಳಲ್ಲಿ ಜನವರಿ 1ರಂದು ನೀವು ಬಯಸಿದ ಕಾರು ಡೆಲಿವರಿ ಮಾಡಲು ಸಾಧ್ಯವೇ ಎಂದು ವಿಚಾರಿಸಬಹುದು.
ಯಾವ ಕಾರಿಗೆ ಎಷ್ಟು ದಿನ ಕಾಯಬೇಕು?
- ನೀವು ಟಾಟಾ ನೆಕ್ಸಾನ್‌ಕಾರು ಖರೀದಿಸಲು ಬಯಸಿದರೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ನೆಕ್ಸಾನ್ ಕಾರಿಗೆ 1-2 ತಿಂಗಳು ವೇಟಿಂಗ್ ಪಿರೆಯಿಡ್ ಇರುತ್ತದೆ
- ಹ್ಯುಂಡೈ ವೆನ್ಯೂ ಎನ್ ಲೈನ್‌ಗೆ ಸುಮಾರು ಒಂದು ತಿಂಗಳು ವೇಟಿಂಗ್ ಪಿರೆಯಿಡ್ ಇರುತ್ತದೆ.
- ಮಾರುತಿ ಬಲೆನೋ ಬೆಂಗಳೂರಿನಲ್ಲಿ ಒಂದು ವಾರದಲ್ಲಿ ಡೆಲಿವರಿಯಾಗಬಹುದು.
- ಟಾಟಾ ಆಲ್ಟ್ರೋಜ್ ರೇಸರ್ ಕಾರಿಗೆ 2-3 ತಿಂಗಳು ಕಾಯಬೇಕು
- ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ವೇಟಿಂಗ್ ಪಿರೆಯಿಡ್ 1-2 ತಿಂಗಳು ಇರುತ್ತದೆ.
- ಟೊಯೊಟಾ ಗ್ಲಾಂಜಾ ವೇಟಿಂಗ್ ಪಿರೆಯಿಡ್ ಸುಮಾರು ಒಂದು ತಿಂಗಳು ಇದೆ.
- ಹ್ಯುಂಡೈ ಎಕ್ಸ್‌ಟೇರ್‌ಗೆ ಸುಮಾರು ಅರ್ಧ ತಿಂಗಳು ಕಾದರೆ ಸಾಕು.
- ಹ್ಯುಂಡೈ ವೆನ್ಯೂ ಕಾರಿಗೆ ಸುಮಾರು ಅರ್ಧ ತಿಂಗಳು ಕಾದರೆ ಸಾಕು.
ಇದನ್ನೂ ಓದಿ: Upcoming Cars: ಮುಂದಿನ ವರ್ಷ ಝೇಂಕರಿಸಲಿವೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕಾರುಗಳು, ಟಾಟಾದಿಂದ ಟೊಯೊಟಾ ತನಕ ಇಲ್ಲಿದೆ ಪಟ್ಟಿ
ಇದು ವೇಟಿಂಗ್ ಪಿರೆಯಿಡ್ ಕುರಿತು ಲಭ್ಯವಿರುವ ಮಾಹಿತಿ ಆಧರಿಸಿ ನೀಡಿರುವುದು. ನಿಜವಾಗಿಯೂ ಯಾವ ವಾಹನಕ್ಕೆ ಎಷ್ಟು ವೇಟಿಂಗ್ ಪಿರೆಯಿಡ್ ಇದೆ ಎಂದು ನಿಮ್ಮ ಹತ್ತಿರದ ಶೋರೂಂನಲ್ಲಿ ವಿಚಾರಿಸುವುದು ಉತ್ತಮ. ಎಲ್ಲಾದರೂ ಬಾಯ್ಮಾತಿಗೆ "ಜನವರಿ 1ರಂದು ಡೆಲಿವರಿ ನೀಡಲು ಪ್ರಯತ್ನಿಸಲಾಗುವುದು" ಎಂದರೆ ನಂಬಬೇಡಿ. ಜನವರಿ 1ರಂದೇ ಡೆಲಿವರಿ ಮಾಡಲು ಖಚಿತಪಡಿಸಿದರೆ ಮಾತ್ರ ಖರೀದಿಸಿ.
ವಾಹನದ ಬಣ್ಣ, ವಾಹನದ ಟ್ರಿಮ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಿರಾದರೆ ಕೆಲವೊಂದು ಮಾಡೆಲ್‌ಗಳು ಬೇಗ ಡೆಲಿವರಿಗೆ ದೊರಕಬಹುದು. ಹೊಸ ಮಾಡೆಲ್‌ಗಳು, ಅತ್ಯಧಿಕ ಬೇಡಿಕೆ ಇರುವ ಮಾಡೆಲ್‌ಗಳ ಡೆಲಿವರಿಗೆ ಹಲವು ತಿಂಗಳು ಬೇಕಾಗಬಹುದು.
ಈ ಅಂಶಗಳನ್ನು ಗಮನಿಸಿ
ಮೊದಲಿಗೆ ನೀವು ಯಾವ ಕಾರು ಅಥವಾ ಬೈಕ್ ಖರೀದಿಸಬೇಕು ಎಂದು ರಿಸರ್ಚ್ ಮಾಡಿ. ಅದೇ ವಾಹನ ಖರೀದಿಸಲು ಪ್ರಯತ್ನಿಸಿ. ಹೊಸ ವರ್ಷದ ಮೊದಲ ದಿನ ಕಾರು ಅಥವಾ ಬೈಕ್ ಮನೆಗೆ ಬಂದರೆ ಸಂತೋಷ. ಹಾಗಂತ, ನಿಮ್ಮ ಕನಸಿನ ಬಂಡಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ. ನಿಮಗೆ ಬೇಕಾದ ಕಾರನ್ನು ಪಡೆಯಲು ಕೆಲವು ದಿನ ವಿಳಂಬವಾದರೂ ಪರವಾಗಿಲ್ಲ. ಅದೇ ವಾಹನ ಖರೀದಿಸಲು ಯತ್ನಿಸಿ. ಹೊಸ ವರ್ಷದ ಮೊದಲ ದಿನ ಡೆಲಿವರಿ ಆಗದೆ ಇದ್ದರೆ ಸಂಕ್ರಾಂತಿ ಹಬ್ಬದ ದಿನ ಡೆಲಿವರಿ ಪಡೆಯಲು ಯತ್ನಿಸಿ. ಅವತ್ತು ಸಾಧ್ಯವಾಗದೆ ಇದ್ದರೆ ಬೇರೆ ಶುಭದಿನದಂದು ಪಡೆಯಲು ಯತ್ನಿಸಿ.