logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕಿಯಾ ಕಾರ್ನಿವಲ್‌ ಲಿಮೋಸಿನ್‌ ಬಿಡುಗಡೆ: ಇನ್ನೋವಾ ಹೈಕ್ರಾಸ್‌- ಟೊಯೊಟಾ ವೆಲ್‌ಫೈರ್‌ ನಡುವಿನ ನಿರ್ವಾತ ತುಂಬಿದ ಎಂಪಿವಿ

ಕಿಯಾ ಕಾರ್ನಿವಲ್‌ ಲಿಮೋಸಿನ್‌ ಬಿಡುಗಡೆ: ಇನ್ನೋವಾ ಹೈಕ್ರಾಸ್‌- ಟೊಯೊಟಾ ವೆಲ್‌ಫೈರ್‌ ನಡುವಿನ ನಿರ್ವಾತ ತುಂಬಿದ ಎಂಪಿವಿ

Praveen Chandra B HT Kannada

Oct 14, 2024 11:20 AM IST

google News

ಕಿಯಾ ಕಾರ್ನಿವಲ್‌ ಲಿಮೋಸಿನ್‌

    • ಕಿಯಾ ಇಂಡಿಯಾವು ಹೊಸ ತಲೆಮಾರಿನ ಕಾರ್ನಿವಲ್‌ ಕಾರನ್ನು ಪರಿಚಯಿಸಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್‌ ಮತ್ತು ಟೊಯೊಟಾ ವೆಲ್‌ಫೈರ್‌ ನಡುವಿನ ಕಾರು. 2024ರ ಕಾರ್ನಿವಲ್‌ ಲಿಮೋಸಿನ್‌ನಲ್ಲಿ 12.3 ಇಂಚಿನ ಡಿಸ್‌ಪ್ಲೇ, ಬಾಷ್‌ ಸೌಂಡ್‌ ಸಿಸ್ಟಮ್‌, 2.2 ಲೀಟರ್‌ನ ಡೀಸೆಲ್‌ ಎಂಜಿನ್‌ ಇದೆ. ಇದರ ಎಕ್ಸ್‌ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ.
ಕಿಯಾ ಕಾರ್ನಿವಲ್‌ ಲಿಮೋಸಿನ್‌
ಕಿಯಾ ಕಾರ್ನಿವಲ್‌ ಲಿಮೋಸಿನ್‌

ಬೆಂಗಳೂರು: ಕಿಯಾ ಕಂಪನಿಯು ಕಾರ್ನಿವಲ್‌ನ ಹೊಸ ಪೀಳಿಗೆಯನ್ನು ಬಿಡುಗಡೆ ಮಾಡಿದೆ. ವಾಹನ ಮಾರುಕಟ್ಟೆಯಲ್ಲಿ ಈ ಕಾರು ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ವೆಲ್‌ಫೈರ್ ನಡುವೆ ಇದೆ. ಹೊಸ ಕಿಯಾ ಕಾರ್ನಿವಲ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.

ಕಿಯಾ ಕಾನಿವಲ್‌ ಲಿಮೋಸಿನ್‌ ಫೀಚರ್‌ಗಳು

2024 ಕಾರ್ನಿವಲ್ ಎಂಪಿವಿಯು 12.3-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ ಹೊಂದಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿದೆ. ಇದರ ಅವಳಿ ಡಿಸ್‌ಪ್ಲೇ ಕಾರಿಗೆ ಅನನ್ಯ ಲುಕ್‌ ನೀಡುತ್ತದೆ. 12.3-ಇಂಚಿನ ಡಿಜಿಟಲ್ ಡ್ರೈವರ್‌ ಸೀಟ್‌ ಇದೆ. ಇದು 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಮತ್ತು 11-ಇಂಚಿನ ಹೆಡ್ಸ್-ಅಪ್ ಡಿಸ್‌ಪ್ಲೇ ಇದೆ. ಮೊದಲ ಮತ್ತು ಎರಡನೇ ಸಲಾಇನಲ್ಲ ಪವರ್‌ ಮತ್ತು ವೆಂಟಿಲೇಟೆಡ್‌ ಸೀಟುಗಳಿವೆ. ವೈರ್‌ಲೆಸ್‌ ಫೋನ್‌ ಚಾರ್ಜಿಂಗ್‌ ಸಾಮರ್ಥ್ಯವನ್ನೂ ಹೊಂದಿವೆ. ಮೂರು ವಲಯದ ಕ್ಲೈಮೆಟ್‌ ಕಂಟ್ರೊಲ್‌, ಎಲೆಕ್ಟ್ರಿಕಲ್‌ ಆಗಿ ಆಪರೇಟ್‌ ಮಾಡಬಹುದಾದ ಸ್ಲೈಡಿಂಗ್‌ ಡೋರ್‌ಗಳು, ಸುಧಾರಿತ ಸಂಪರ್ಕಿತ ಕಾರ್‌ ಕಾರ್ಯನಿರ್ವಹಣೆ ಹೊಂದಿದೆ.

ವಿನ್ಯಾಸ ಮತ್ತು ಗಾತ್ರ

ಕಾರ್ನಿವಲ್ ಹೊಸ ವಿನ್ಯಾಸದಿಂದ ಆಗಮಿಸಿದೆ. ಹಳೆಯ ಕಾರ್ನಿವಲ್‌ಗೂ ಹೊಸ ಕಾರ್ನಿವಲ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಆಟೋ ಎಕ್ಸ್‌ಪೋ 2023ನಲ್ಲಿ ಪ್ರದರ್ಶಿಸಲಾದ ಕೆ4 ಆವೃತ್ತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಂಪನಿ ಎಸ್‌ಯುವಿಗಳಿಗೆ ಅನುಗುಣವಾಗಿದೆ. ಕಿಯಾ ಕಾರ್ನಿವಲ್ 5,155 ಮಿಮೀ ಉದ್ದ, 1,995 ಮಿಮೀ ಅಗಲ ಮತ್ತು 1,775 ಮಿಮೀ ಎತ್ತರ ಹೊಂದಿದೆ. 3,090 ಎಂಎಂ ವೀಲ್‌ಬೇಸ್‌ ಹೊಂದಿದೆ.

ಕಿಯಾ ಕಾರ್ನಿವಲ್‌ ಲಿಮೋಸಿನ್‌: ಸ್ಪೆಸಿಫಿಕೇಷನ್‌

2024ರ ಕಿಯಾ ಕಾರ್ನಿವಲ್‌ ಕಾರು 2.2 ಲೀಟರ್‌ನ ಡೀಸೆಲ್‌ ಎಂಜಿನ್‌ ಹೊಂದಿದೆ.ಇದು 190 ಬಿಎಚ್‌ಪಿ ಮತ್ತು 441 ಎನ್‌ಎಂ ಟಾರ್ಕ್‌ ನೀಡುತ್ತದೆ. ಇದು 8 ಸ್ಪೀಡ್‌ನ ಆಟೋಮ್ಯಾಟಿಕ್‌ ಗಿಯರ್‌ಬಾಕಸ್‌ ಹೊಂದಿದೆ. ಇದು ಫ್ರಂಟ್‌ ವೀಲ್‌ ಡ್ರೈವ್‌ ಕಾನ್ಫಿಗರೇಷನ್‌ ಹೊಂದಿದೆ. ಇದೇ ಎಂಜಿನ್‌ ಹಳೆಯ ಮಾಡೆಲ್‌ನಲ್ಲಿತ್ತು. ಭಾರತಕ್ಕೆ ಕಂಪನಿಯು ಡೀಸೆಲ್‌ ಮಾಡೆಲ್‌ ಮಾತ್ರ ಪರಿಚಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಆವೃತ್ತಿಯೂ ಲಭ್ಯವಿದೆ.

ಕಿಯಾ ಕಾರ್ನಿವಲ್‌ ಲಿಮೋಸಿನ್‌: ದರವೆಷ್ಟು?

ಭಾರತದಲ್ಲಿ ಕಿಯಾ ಕಾರ್ನಿವಲ್‌ ಲಿಮೋಸಿನ್‌ ಕೇವಲ ಒಂದು ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಇದರ ಎಕ್ಸ್‌ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಭಾರತಕ್ಕೆ ಸಿಕೆಡಿ ಅಥವಾ ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಿಸಿ ಭಾರತಕ್ಕೆ ತರುವ ಕಾರಣ ದರ ಹೆಚ್ಚಾಗಿದೆ. ಭಾರತದಲ್ಲಿಯೇ ಜೋಡಿಸಿದ್ದರೆ ದರ ಕಡಿಮೆಯಾಗುತ್ತಿತ್ತು.

ವಾಹನಪ್ರಿಯರ ನೆಚ್ಚಿನ ಜಗತ್ತು >> ವಾಹನ ಪ್ರಪಂಚ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ