logo
ಕನ್ನಡ ಸುದ್ದಿ  /  ಜೀವನಶೈಲಿ  /  Ola Price Reduce: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಕಡಿತ; ಯಾವ ಮಾಡೆಲ್‌ಗೆ ಎಷ್ಟಿದೆ

Ola Price Reduce: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಕಡಿತ; ಯಾವ ಮಾಡೆಲ್‌ಗೆ ಎಷ್ಟಿದೆ

Raghavendra M Y HT Kannada

Feb 16, 2024 05:07 PM IST

google News

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಬೆಲೆ ಕಡಿತ ಮಾಡಲಾಗಿದೆ. ಯಾವ ಸ್ಕೂಟರ್‌ಗೆ ಎಷ್ಟು ಕಡಿತವಾಗಿದೆ ಅನ್ನೋದರ ವಿವರ ಇಲ್ಲಿದೆ

    • Ola Electric Price: ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು 25,000 ರೂಪಾಯಿ ವರೆಗೆ ಕಡಿತ ಮಾಡಿದೆ. ಯಾವ ಮಾಡೆಲ್ ಮೇಲೆ ಎಷ್ಟು ಬೆಲೆಯನ್ನ ಇಳಿಸಲಾಗಿದೆ ಅನ್ನೋದನ್ನ ತಿಳಿಯಿರಿ.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಬೆಲೆ ಕಡಿತ ಮಾಡಲಾಗಿದೆ. ಯಾವ ಸ್ಕೂಟರ್‌ಗೆ ಎಷ್ಟು ಕಡಿತವಾಗಿದೆ ಅನ್ನೋದರ ವಿವರ ಇಲ್ಲಿದೆ
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಬೆಲೆ ಕಡಿತ ಮಾಡಲಾಗಿದೆ. ಯಾವ ಸ್ಕೂಟರ್‌ಗೆ ಎಷ್ಟು ಕಡಿತವಾಗಿದೆ ಅನ್ನೋದರ ವಿವರ ಇಲ್ಲಿದೆ

Ola Electric Price Reduced in India: ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು 25,000 ರೂಪಾಯಿ ವರೆಗೆ ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಆಯ್ದ ಮಾಡೆಲ್‌ಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಓಲಾ ಎಲೆಕ್ಟ್ರಿಕ್ ಫೆಬ್ರವರಿ ತಿಂಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟ್ರ್‌ಗಳ ಬೆಲೆಯಲ್ಲಿ ಕಡಿತ ಮಾಡುವುದಾಗಿ ಹೇಳಿದೆ. ಎಸ್‌1 ಪ್ರೊ, ಎಸ್‌1 ಏರ್, ಎಸ್‌1 ಎಕ್ಸ್ ಪ್ಲಸ್ ಸ್ಕೂಟರ್‌ಗಳ ಮೇಲೆ 25,000 ವರೆಗೆ ಕಡಿಮೆ ಮಾಡಲಾಗಿದೆ. ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಕ್ಸ್‌ ಶೋ ರೂಂ ಬೆಲೆ 1.30 ಲಕ್ಷ ರೂಪಾಯಿ, 1.05 ಲಕ್ಷ ಹಾಗೂ 85 ಸಾವಿರ ರೂಪಾಯಿವರೆಗೆ ಇದೆ. ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕಡಿತದ ನಂತರ ಆಯಾ ಮಾದರಿಗಳ ಬೆಲೆಗಳು ಈ ಕೆಳಗಿನಂತಿವೆ.

ಬೆಲೆ ಕಡಿತ ಬಳಿಕ ಪ್ರಸ್ತುತ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ

  • S1 Pro: S1 Pro ಪ್ರಸ್ತುತ 1,47,499 ರೂಪಾಯಿ ಇದ್ದು, 17,500 ರೂಪಾಯಿ ಕಡಿತದ ಬಳಿಕ 1,29,999 ರೂಪಾಯಿಗೆ ಲಭ್ಯವಿದೆ
  • S1 Air: ಎಸ್‌1 ಏರ್ ಪ್ರಸ್ತುತ ದರ 1,19,999 ರೂಪಾಯಿ ಇದ್ದು, 15,000 ರೂಪಾಯಿ ಕಡಿತದ ಬಳಿಕ 1,04,999 ರೂಪಾಯಿಗೆ ಲಭ್ಯವಿದೆ
  • S1 X+ (3kWh): ಎಸ್‌1 ಎಕ್ಸ್‌ಪ್ಲಸ್ ಓಲಾ ಸ್ಕೂಟರ್ ಬೆಲೆ 1,09,000 ರೂಪಾಯಿ ಇದ್ದು ಇದರ ಮೇಲೆ 25,000 ರೂಪಾಯಿ ಕಡಿತ ಮಾಡಲಾಗಿದೆ. ಇದೀಗ ಈ ಸ್ಕೂಟರ್ 84,999 ರೂಪಾಯಿ. ಇದು 3ಕೆಡಬ್ಲ್ಯೂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ

ಈ ಹಿಂದೆಯೂ ಸ್ಕೂಟರ್‌ಗಳ ಬೆಲೆ ತಗ್ಗಿಸಿದ್ದ ಓಲಾ

ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ಕಡಿಮೆ ಮಾಡಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ ಎಸ್‌1 ಎಕ್ಸ್‌ಪ್ಲಸ್ ಮಾಡೆಲ್ ಮೇಲೆ ಫ್ಲಾಟ್ 20,000 ರೂಪಾಯಿಗಳ ರಿಯಾಯಿತಿಯನ್ನು ನೀಡಿತ್ತು. ಆದರೆ ಎಸ್‌1 ಪ್ರೊ ಮತ್ತು ಎಸ್‌1 ಏರ್ ಮಾದರಿಗಳಲ್ಲಿ ಉಚಿತ ವಿಸ್ತೃತ ವಾರಂಟಿಗಳನ್ನು ನೀಡಿತ್ತು. ಜೊತೆಗೆ ಎಸ್‌1 ಪ್ರೊ ನಲ್ಲಿ 6,999 ಮತ್ತು ಎಸ್‌1 ಏರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 3,000 ವರೆಗೆ ವಿನಿಮಯ ಬೋನಸ್ ನೀಡಿದೆ.

ಇದೂ ಅಲ್ಲದೆ, ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡುವವರಿಗೆ ವಿಶೇಷ 5,000 ರೂಪಾಯಿವರೆಗೆ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಜೊತೆಗೆ ಜೀರೋ ಡೌನ್ ಪೇಮೆಂಟ್, ನೋ ಕಾಸ್ಟ್ ಇಎಂಐ, ಜಿರೋ ಪ್ರೊಸೆಸಿಂಗ್ ಫೀಸ್ ಹಾಗೂ ಶೇಕಡಾ 7.99 ಬಡ್ಡಿದರಗಳಂತಹ ಸೌಲಭ್ಯಗಳಿವೆ.

ಎಸ್‌1 ಪ್ರೊ, ಎಸ್‌1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ವಿಸ್ತೃತ ವಾರಂಟಿ

ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ಎಸ್‌1 ಏರ್ ಮತ್ತು ಎಕ್ಸ್‌1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ಪ್ಯಾಕ್‌ನಲ್ಲಿ 8 ವರ್ಷ / 80,000 ಕಿಮೀ ವಾರಂಟಿಯನ್ನು ನೀಡುತ್ತಿದೆ. 5 ಸಾವಿರ ರೂಪಾಯಿಗೆ ಹೆಚ್ಚುವರಿಯಾಗಿ 1 ಲಕ್ಷ ಕಿಮೀ ವಿಸ್ತೃತ ವಾರಂಟಿ ಮತ್ತು 1.25 ಲಕ್ಷ ಕಿಮೀ ವಿಸ್ತೃತ ವಾರಂಟಿಗೆ 12,500 ರೂಪಾಯಿ ಪಾವತಿಸುವ ಸೌಲಭ್ಯವನ್ನು ನೀಡುತ್ತಿದೆ.

ಓಲಾ ಈ ವರ್ಷದ ಕೊನೆಯಲ್ಲಿ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ. ಓಲಾ ನಾಲ್ಕು ಮೋಟಾರ್‌ಸೈಕಲ್ ಮಾದರಿಗಳಾದ ಓಲಾ ಎಲೆಕ್ಟ್ರಿಕ್ ಡೈಮಂಡ್ ಹೆಡ್, ಅಡ್ವೆಂಚರ್, ಕ್ರೂಸರ್ ಮತ್ತು ರೋಡ್‌ಸ್ಟರ್ ಅನ್ನು ಈಗಾಗಲೇ ಪ್ರದರ್ಶಿಸಿದೆ.

ಸಾಫ್ಟ್ವೇರ್ ಅಪ್ಡೇಟ್

ಓಲಾ ಎಲೆಕ್ಟ್ರಿಕ್ ಸಹ ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿದೆ. MoveOS 4 ಎಂಬ ಅಪ್ಡೇಟ್ ಆವೃತ್ತಿಯನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಇದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸುತ್ತದೆ. MoveOS 4 ಅಪ್‌ಡೇಟ್ ಟ್ಯಾಂಪರ್ ಅಲರ್ಟ್, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. (This copy first appeared in Hindustan Times Kannada website. To read more like this please logon to kannada.hindustantimes.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ