logo
ಕನ್ನಡ ಸುದ್ದಿ  /  ಜೀವನಶೈಲಿ  /  ತುಟಿ, ಹುಬ್ಬುಗಳಿಗೆ ಹಚ್ಚಲಾಗುತ್ತದೆ ಮೆಹಂದಿ ಬಣ್ಣ: ಈ ವೈರಲ್ ಮೇಕಪ್ ಟ್ರೆಂಡ್ ಒಳ್ಳೆಯದೇ? ಇಲ್ಲಿದೆ ಮಾಹಿತಿ

ತುಟಿ, ಹುಬ್ಬುಗಳಿಗೆ ಹಚ್ಚಲಾಗುತ್ತದೆ ಮೆಹಂದಿ ಬಣ್ಣ: ಈ ವೈರಲ್ ಮೇಕಪ್ ಟ್ರೆಂಡ್ ಒಳ್ಳೆಯದೇ? ಇಲ್ಲಿದೆ ಮಾಹಿತಿ

Priyanka Gowda HT Kannada

Oct 28, 2024 01:46 PM IST

google News

ತುಟಿ ಮತ್ತು ಹುಬ್ಬುಗಳಿಗೆ ಹಚ್ಚಲಾಗುತ್ತದೆ ಮೆಹಂದಿ ಬಣ್ಣ. ಈ ವೈರಲ್ ಮೇಕಪ್ ಟ್ರೆಂಡ್ ಬಗ್ಗೆ ಇಲ್ಲಿದೆ ಮಾಹಿತಿ.

  • ಇದೀಗ ವೈರಲ್ ಆಗಿರುವ ಮೆಹಂದಿ ಮೇಕಪ್ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಪ್ರವೃತ್ತಿಯನ್ನು ಪ್ರಯತ್ನಿಸುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ. ಈ ಗೋರಂಟಿ ಮೇಕಪ್‍ನ ಸಾಧಕ-ಬಾಧಕಗಳ ಬಗ್ಗೆ ಇಲ್ಲಿದೆ ಮಾಹಿತಿ.

ತುಟಿ ಮತ್ತು ಹುಬ್ಬುಗಳಿಗೆ ಹಚ್ಚಲಾಗುತ್ತದೆ ಮೆಹಂದಿ ಬಣ್ಣ. ಈ ವೈರಲ್ ಮೇಕಪ್ ಟ್ರೆಂಡ್ ಬಗ್ಗೆ ಇಲ್ಲಿದೆ ಮಾಹಿತಿ.
ತುಟಿ ಮತ್ತು ಹುಬ್ಬುಗಳಿಗೆ ಹಚ್ಚಲಾಗುತ್ತದೆ ಮೆಹಂದಿ ಬಣ್ಣ. ಈ ವೈರಲ್ ಮೇಕಪ್ ಟ್ರೆಂಡ್ ಬಗ್ಗೆ ಇಲ್ಲಿದೆ ಮಾಹಿತಿ. (PC: Instagram)

ಬಹುತೇಕ ಹೆಣ್ಮಕ್ಕಳಿಗೆ ಮೇಕಪ್ ಅಂದರೆ ಬಹಳ ಅಚ್ಚುಮೆಚ್ಚು. ಮನೆಯಿಂದ ಹೊರಗೆ ಕಾಲಿಡುವಾಗ ಮುಖಕ್ಕೆ ಮೇಕಪ್ ಹಚ್ಚದೆ ಹೋಗುವುದಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗೋರಂಟಿ (ಮೆಹಂದಿ) ಮೇಕಪ್ ಸದ್ದು ಮಾಡುತ್ತಿದೆ. ತುಟಿಗಳಿಗೆ ಕೆಂಪು ಬಣ್ಣವನ್ನು ನೀಡುವ ಮೆಹಂದಿ, ಕಣ್ಣುಗಳ ಕಪ್ಪು ಬಣ್ಣಕ್ಕೆ ಗೋರಂಟಿ ಹೀಗೆ ನಾನಾ ರೀತಿಯಲ್ಲಿ ಮೆಹಂದಿಯನ್ನು ಬಳಸುತ್ತಾರೆ. ಇದರಿಂದ ಮೇಕಪ್ ಮಾಡುವುದು ತುಂಬಾ ಸುಲಭ ಎಂದು ಹೇಳಲಾಗುತ್ತದೆ.

ಒಮ್ಮೆ ಮೆಹಂದಿಯನ್ನು ತುಟಿಗೆ ಹಚ್ಚಿಕೊಂಡರೆ ಕನಿಷ್ಠ ಒಂದು ವಾರದವರೆಗೆ ಲಿಪ್ ಸ್ಟಿಕ್ ಹಚ್ಚಿಕೊಳ್ಳಬಾರದು. ಹಾಗೆಯೇ ಕಪ್ಪು ಗೋರಂಟಿಯನ್ನು ಹುಬ್ಬುಗಳಿಗೆ ಹಚ್ಚಿದರೆ ಐಬ್ರೋ ಪೆನ್ಸಿಲ್ ಬಳಸದೆಯೇ ಹುಬ್ಬುಗಳು ದಪ್ಪವಾಗಿ ಕಾಣುತ್ತವೆ. ಕಣ್ಣು ರೆಪ್ಪೆಗಳ ಮೇಲೆ ಹಾಕಿದರೆ ಐ ಶ್ಯಾಡೋ ಕೂಡ ಬೇಕಾಗಿಲ್ಲ ಎಂಬ ಬಗೆಗಿನ ರೀಲ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನಿಜವಾಗಿಯೂ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮೆಹಂದಿ ಮೇಕಪ್ ಟ್ರೆಂಡ್

ವೈರಲ್ ಆಗುತ್ತಿರುವ ಮೆಹಂದಿ ಮೇಕ್ಅಪ್ ಅನ್ನು ಹಚ್ಚುವುದರಿಂದ ಏನೂ ತೊಂದರೆ ಉಂಟಾಗುವುದಿಲ್ಲ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಈ ತಾತ್ಕಾಲಿಕ ಬಣ್ಣವು ಹಾನಿಯನ್ನುಂಟುಮಾಡುತ್ತದೆ ಎಂದು ಚರ್ಮರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೆಹಂದಿಯು ಪ್ಯಾರಾ-ಫೀನಿಲೀನಮೈನ್ ಅನ್ನು ಹೊಂದಿರುತ್ತದೆ. ಇದನ್ನು ಹೆಚ್ಚಾಗಿ ಕಪ್ಪು ಗೋರಂಟಿ ಹಚ್ಚೆಗಾಗಿ ಬಳಸಲಾಗುತ್ತದೆ. ಇದು ಚರ್ಮದ ಮೇಲೆ ಊತ ಮತ್ತು ದದ್ದುಗಳನ್ನು ಉಂಟುಮಾಡಬಹುದು. ಇದು ತೀವ್ರವಾದ ಅಲರ್ಜಿಯನ್ನು ಸಹ ಉಂಟುಮಾಡಬಹುದು.

ನೈಸರ್ಗಿಕ ಮೆಹಂದಿ ಎಲೆಗಳು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಕೆಲವು ಸಂಶೋಧನೆಗಳು ಅದರ ಬಳಕೆಯಿಂದ ಅಲರ್ಜಿಯ ಸಾಧ್ಯತೆಗಳಿವೆ ಎಂದು ಸೂಚಿಸುತ್ತವೆ. ವಿಶೇಷವಾಗಿ ಮುಖದ ಚರ್ಮವು ತುಂಬಾ ತೆಳು ಮತ್ತು ಸೂಕ್ಷ್ಮವಾಗಿರುತ್ತದೆ. ಮೆಹಂದಿ ಕೋನ್‌ಗಳು ಸೀಸದಂತಹ ಹಾನಿಕಾರಕ ವಸ್ತುಗಳನ್ನು ಸಹ ಹೊಂದಿರುತ್ತವೆ. ಇದು ಚರ್ಮವನ್ನು ಮತ್ತಷ್ಟು ಹಾನಿಗೊಳಿಸುತ್ತದೆ. ಹೀಗಾಗಿ ಇದನ್ನು ಮುಖಕ್ಕೆ ಹಚ್ಚುವ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮೆಹಂದಿಯ ಹಾನಿಕಾರಕ ಪರಿಣಾಮಗಳು

ನೈಸರ್ಗಿಕ ಮೆಹಂದಿ ಎಲೆಗಳು ಗೋರಂಟಿ ಅಥವಾ ಲಾಸೋನಿಯಾ ಸಸ್ಯದಿಂದ ಪಡೆಯಲಾಗುತ್ತದೆ. ಇದು ಲಾಸೋನ್ ಎಂಬ ವಸ್ತುವನ್ನು ಹೊಂದಿರುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಆಕ್ಸಿಡೇಟಿವ್ ಕ್ರಿಯೆಯು ಚರ್ಮ ಮತ್ತು ಕೂದಲಿಗೆ ಕಿತ್ತಳೆ-ಕೆಂಪು ಬಣ್ಣವನ್ನು ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಮೆಹಂದಿಗಳು ಪ್ಯಾರಾಫೆನಿಲೆನೆಡಿಯಮೈನ್ (ಪಿಪಿಡಿ) ನಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ಸಂಶ್ಲೇಷಿತ ಸಂಯುಕ್ತವಾಗಿದೆ. ನೈಸರ್ಗಿಕ ಮೆಹಂದಿಯ ಕಿತ್ತಳೆ-ಕೆಂಪು ಬಣ್ಣಕ್ಕಿಂತ ಭಿನ್ನವಾಗಿ, ಸಿಂಥೆಟಿಕ್ ಮೆಹಂದಿಯಲ್ಲಿರುವ ಪಿಪಿಡಿ ತುರಿಕೆ, ಸುಡುವಿಕೆ, ಕೆಂಪಾಗುವಿಕೆ, ಗುಳ್ಳೆಗಳು ಮತ್ತು ಗುರುತು ಸೇರಿದಂತೆ ಗಂಭೀರ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು.

ನೈಸರ್ಗಿಕ ಗೋರಂಟಿ ಬಳಸುವುದರ ಪ್ರಯೋಜನಗಳು

ನೈಸರ್ಗಿಕ ಗೋರಂಟಿ ಚರ್ಮದ ಒಳಪದರಗಳನ್ನು ಭೇದಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಇದರಿಂದ ಯಾವುದೇ ಅಲರ್ಜಿ ಉಂಟಾಗುವುದಿಲ್ಲ. ಇದು ಸುರಕ್ಷಿತವಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಸೋಂಕುಗಳು ಮತ್ತು ಉರಿಯೂತದಿಂದ ಚರ್ಮವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಸೂಕ್ಷ್ಮ ಚರ್ಮದ ಮೇಕಪ್ ಟ್ರೆಂಡ್ ಅನುಸರಿಸಲು ಬಯಸುವವರು ನೈಸರ್ಗಿಕ ಮೆಹಂದಿಯನ್ನು ತುಂಬಾ ಕಡಿಮೆ ಬಳಸಬಹುದು. ಇದು ಸ್ವಲ್ಪ ಅನುಕೂಲಕರ ಆಯ್ಕೆಯಾಗಿದೆ. ಆದರೆ, ರಾಸಾಯನಿಕ ಪ್ಯಾಕ್ ಮಾಡಿದ ಗೋರಂಟಿ ಬಳಸುವುದು ಉತ್ತಮವಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ