logo
ಕನ್ನಡ ಸುದ್ದಿ  /  ಜೀವನಶೈಲಿ  /  Eggplant Snacks Recipe: ಬದನೆಕಾಯಿಂದ ಎಂದಾದ್ರೂ ಈ ರುಚಿಯಾದ ಸ್ನಾಕ್ಸ್‌ ತಯಾರಿಸಿದ್ದೀರಾ? ಇಂದೇ ಟ್ರೈ ಮಾಡಿ..ಇಲ್ಲಿದೆ ರೆಸಿಪಿ

Eggplant snacks recipe: ಬದನೆಕಾಯಿಂದ ಎಂದಾದ್ರೂ ಈ ರುಚಿಯಾದ ಸ್ನಾಕ್ಸ್‌ ತಯಾರಿಸಿದ್ದೀರಾ? ಇಂದೇ ಟ್ರೈ ಮಾಡಿ..ಇಲ್ಲಿದೆ ರೆಸಿಪಿ

HT Kannada Desk HT Kannada

Jan 10, 2023 10:14 PM IST

ಕ್ರಿಸ್ಪಿ ಎಗ್‌ಪ್ಲಾಂಟ್‌ ರೆಸಿಪಿ

    • ಸಾಮಾನ್ಯವಾಗಿ ಬದನೆಕಾಯಿಂದ ವಾಂಗಿಬಾತ್‌, ಪಲ್ಯವನ್ನೇ ಹೆಚ್ಚಾಗಿ ತಯಾರಿಸುತ್ತೇವೆ. ಅದರೆ ಅದರಿಂದ ನೀವು ಎಂದಾದರೂ ಸ್ನಾಕ್ಸ್‌ ತಯಾರಿಸಿದ್ದೀರಾ? ಬದನೆಕಾಯಿಂದ ಕೂಡಾ ನೀವು ಹಿಂದೆಂದೂ ತಿಂದಿರದಂತಹ ರುಚಿಯಾದ ಸ್ನಾಕ್ಸ್‌ ತಯಾರಿಸಬಹುದು. ಇದನ್ನು ತಯಾರಿಸಲು ಹೆಚ್ಚಿನ ಸಮಯ ಕೂಡಾ ಅಗತ್ಯವಿಲ್ಲ.
ಕ್ರಿಸ್ಪಿ ಎಗ್‌ಪ್ಲಾಂಟ್‌ ರೆಸಿಪಿ
ಕ್ರಿಸ್ಪಿ ಎಗ್‌ಪ್ಲಾಂಟ್‌ ರೆಸಿಪಿ

ಮೈದಾಹಿಟ್ಟು, ಮೊಟ್ಟೆ ಸೇರಿದಂತೆ ಕೆಲವೇ ಕೆಲವು ಸಾಮಗ್ರಿಗಳಿಂದ ನೀವು ಈ ರೆಸಿಪಿ ತಯಾರಿಸಬಹುದು. ಈ ಕ್ರಿಸ್ಪಿ ಎಗ್‌ಪ್ಲಾಂಟ್‌ ರೆಸಿಪಿಯನ್ನು ಫಟಾಫಟ್‌ ಅಂತ ಬಹಳ ಬೇಗ ತಯಾರಿಸಬಹುದು. ಮನೆಗೆ ಗೆಸ್ಟ್‌ ಬಂದಾಗ, ಪಾರ್ಟಿ ಇದ್ದಾಗ, ನಿಮಗೆ ಏನಾದರೂ ಸ್ನಾಕ್ಸ್‌ ತಿನ್ನಬೇಕೆನಿಸದಾಗ ಈ ಸಿಂಪಲ್‌ ಹಾಗೂ ರುಚಿಯಾದ ಸ್ನಾಕ್ಸ್‌ ತಯಾರಿಸಿ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಕ್ರಿಸ್ಪಿ ಎಗ್‌ಪ್ಲಾಂಟ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಗುಂಡು ಬದನೆಕಾಯಿ - 2

ಮೈದಾಹಿಟ್ಟು - 1 ಕಪ್‌

ಮೊಟ್ಟೆ - 3

ಪೆಪ್ಪರ್‌ ಪೌಡರ್‌ - 1/4 ಟೀ ಸ್ಪೂನ್‌

ಅಚ್ಚ ಖಾರದ ಪುಡಿ - 1/4 ಟೀ ಸ್ಪೂನ್‌

ಎಣ್ಣೆ - ಕರಿಯಲು

ಉಪ್ಪು - ರುಚಿಗೆ ತಕ್ಕಷ್ಟು

ಕ್ರಿಸ್ಪಿ ಎಗ್‌ಪ್ಲಾಂಟ್‌ ತಯಾರಿಸುವ ವಿಧಾನ

ಬದನೆಕಾಯಿ ತೊಳೆದು ನೀರು ಒರೆಸಿ ಅದನ್ನು ಗುಂಡಗೆ ಕತ್ತರಿಸಿಕೊಳ್ಳಿ. ನಂತರ ಇದನ್ನು ಉದ್ದ ತುಂಡುಗಳನ್ನಾಗಿ ಮಾಡಿಕೊಳ್ಳಿ.

ಬದನೆಕಾಯನ್ನು ಒಂದು ಬೌಲ್‌ಗೆ ಸೇರಿಸಿ ಚಿಟಿಕೆ ಉಪ್ಪನ್ನು ಸೇರಿಸಿ ಮಿಕ್ಸ್‌ ಮಾಡಿ

ಒಂದು ಬೌಲ್‌ನಲ್ಲಿ ಮೊಟ್ಟೆ ಒಡೆದು ಬೀಟ್‌ ಮಾಡಿ

ಇದಕ್ಕೆ ಉಪ್ಪು, ಕರಿಮೆಣಸಿನ ಪುಡಿ, ಅಚ್ಚ ಖಾರದ ಪುಡಿ ಸೇರಿಸಿ ಮಿಕ್ಸ್‌ ಮಾಡಿ

ಇದಕ್ಕೆ ಸ್ವಲ್ಪ ಮೈದಾ ಹಿಟ್ಟು ಸೇರಿಸಿ ಮಿಕ್ಸ್‌ ಮಾಡಿ

ಈ ಮಿಶ್ರಣಕ್ಕೆ ಬದನೆಕಾಯಿ ಸೇರಿಸಿ ಮಿಶ್ರಣ ಚೆನ್ನಾಗಿ ಕೋಟ್‌ ಆಗುವಂತೆ ಮಿಕ್ಸ್‌ ಮಾಡಿ

ಇದನ್ನು ಕಂದು ಬಣ್ಣ ಬರುವರೆಗೂ ಕಡಿಮೆ ಉರಿಯಲ್ಲಿ ಫ್ರೈ ಮಾಡಿ

ನಿಮಗಿಷ್ಟವಾದ ಡಿಪ್‌ ಜೊತೆ ಬದನೆಕಾಯಿ ಚಟ್‌ಪಟಿಯನ್ನು ಎಂಜಾಯ್‌ ಮಾಡಿ

ಮಕ್ಕಳು ಕೂಡಾ ಈ ಸ್ನಾಕ್ಸನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ, ಒಮ್ಮೆ ಟ್ರೈ ಮಾಡಿ

ಗಮನಿಸಿ: ನೀವು ಸಸ್ಯಹಾರಿಗಳಾಗಿದ್ದರೆ ಮೈದಾಹಿಟ್ಟು ಹಾಗೂ ಕಡ್ಲೆಹಿಟ್ಟನ್ನು ಸಮಪ್ರಮಾಣದಲ್ಲಿ ಬೆರೆಸಿ ಮೊಟ್ಟೆ ಬದಲಿಗೆ ಮೊಸರು ಅಥವಾ ನೀರು ಮಿಕ್ಸ್‌ ಮಾಡಿ ಅದರಿಂದ ಈ ರೆಸಿಪಿ ತಯಾರಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು