logo
ಕನ್ನಡ ಸುದ್ದಿ  /  ಜೀವನಶೈಲಿ  /  ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

Jayaraj HT Kannada

May 05, 2024 08:10 AM IST

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ

    • ತ್ವಚೆಯ ಬಗ್ಗೆ ಹೆಂಗಳೆಯರಿಗೆ ಎಲ್ಲಿಲ್ಲದ ಕಾಳಜಿ. ಆಗಾಗ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ, ತ್ವಚೆ ಕಳೆಗುಂದಿದ್ದರೆ ಚಿಂತಿಸುತ್ತಾ ಅದಕ್ಕೆ ಏನಾದರೂ ಉತ್ಪನ್ನವನ್ನು ಹಚ್ಚುತ್ತಿರುತ್ತಾರೆ. ಇನ್ನೂ ಕೆಲವರು ಪದೇ ಪದೇ ಮುಖ ತೊಳೆಯುತ್ತಾರೆ. ಕೆಲಮೊಮ್ಮೆ ಕೆಟ್ಟ ಅಭ್ಯಾಸಗಳು ನಿಮ್ಮ ತ್ವಚೆಯ ಸೌಂದರ್ಯಕ್ಕೆ ತೊಡಕಾಗಬಹುದು. ಅದರ ಬಗ್ಗೆ ಇಲ್ಲಿದೆ ಮಾಹಿತಿ.
ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ
ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ

ಬಹುತೇಕ ಹೆಣ್ಮಕ್ಕಳು ತಮ್ಮ ತ್ವಚೆಯ ಬಗ್ಗೆ ಸಾಕಷ್ಟು ಚಿಂತಿಸುತ್ತಾರೆ. ಮುಖ ಕಾಂತಿಯುತವಾಗಿ ಹೊಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಬಳಸಲು ಕೂಡ ಸಿದ್ಧರಿರುತ್ತಾರೆ. ಗಂಟೆಗೊಂದು ಬಾರಿ ಅಥವಾ ಅರ್ಧ ಗಂಟೆಗೆ ಒಂದು ಸಲ ಮುಖ ತೊಳೆಯುವುದು, ದುಬಾರಿ ಉತ್ಪನ್ನಗಳನ್ನು ಬಳಸುವುದರಿಂದ ಮುಖ ಹೊಳೆಯುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ, ಇದು ತಪ್ಪು ಕಲ್ಪನೆ. ಕೆಲಮೊಮ್ಮೆ ಚಿಕ್ಕ-ಪುಟ್ಟ ವಿಷಯಗಳನ್ನು ನೀವು ನಿರ್ಲಕ್ಷಿಸುತ್ತೀರಿ. ಇದರಿಂದ ಚರ್ಮದ ಕೋಶಗಳು ಹಾನಿಗೊಂಡು ಚರ್ಮದ ಆರೋಗ್ಯ ಹದಗೆಡುತ್ತದೆ. ನಿಮ್ಮ ಚರ್ಮವನ್ನು ಹಾಳುಗೆಡವುದರ ಕೆಟ್ಟ ಅಭ್ಯಾಸಗಳನ್ನು ಇಂದೇ ಬಿಟ್ಟು ಬಿಡಿ. ನಿಮಗೆ ಗೊತ್ತಿಲ್ಲದಂತೆ ನೀವು ನಿಮ್ಮ ಚರ್ಮವನ್ನು ಯಾವ ರೀತಿ ಹಾಳು ಮಾಡುವಿರಿ ಎಂಬ 10 ಕೆಟ್ಟ ಅಭ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

1. ಮಲಗುವಾಗ ಮೇಕಪ್ ತೆಗೆಯದಿರುವುದು

ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿ ಬಂದಾಗ ಮೊದಲು ಮಾಡಬೇಕಿರುವ ಕೆಲಸವೇನೆಂದರೆ ನೀವು ನಿಮ್ಮ ಮುಖಕ್ಕೆ ಹಾಕಿರುವ ಮೇಕಪ್ ಅನ್ನು ತೆಗೆಯುವುದು. ಆದರೆ, ಬಹುತೇಕರು ಆ ರೀತಿ ಮಾಡುವುದಿಲ್ಲ. ಹೊರಗೆ ಹೋಗಿ ಸುಸ್ತಾಗಿ ಬಂದ ನೀವು ಮೇಕಪ್ ಅನ್ನು ತೆಗೆಯದೆಯೇ ಮಲಗಿಬಿಡುತ್ತೀರಿ. ಇದು ಬಹುತೇಕ ಹೆಣ್ಮಕ್ಕಳು ಮಾಡುವ ತಪ್ಪು. ಮೇಕಪ್ ತೆಗೆಯದೆ ಮಲಗುವುದರಿಂದ ನಿಮ್ಮ ಚರ್ಮ ಹಾನಿಗೊಳಗಾಗಬಹುದು.

2. ಸನ್‌ಸ್ಕ್ರೀನ್ ಹಚ್ಚದಿರುವುದು

ಸನ್‌ಸ್ಕ್ರೀನ್ ಹಚ್ಚುವುದನ್ನು ಎಂದಿಗೂ ನಿರ್ಲಕ್ಷಿಸದಿರಿ. ಮುಖಕ್ಕೆ ಯಾವುದೇ ರಕ್ಷಣೆಯಿಲ್ಲದೆ ಸೂರ್ಯನ ಬಿಸಿಲಿಗೆ ಒಡ್ಡುವುದರಿಂದ ಮುಖ ಸುಕ್ಕಾಗುವುದು, ಸುಟ್ಟಂತಾಗುವುದು ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಮೋಡ ಕವಿದ ದಿನಗಳಲ್ಲಿಯೂ ಸಹ, ಹೊರಗೆ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿರಿ. ಇದರಿಂದ ತ್ವಚೆಯ ಚರ್ಮಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ.

3. ಅತಿಯಾಗಿ ಶುಚಿಗೊಳಿಸುವಿಕೆ

ನಿಮ್ಮ ಮುಖವನ್ನು ತೊಳೆಯುವುದು ಮತ್ತು ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಿಜವಾಗಿಯೂ ಮುಖ್ಯ. ಆದರೆ, ಅತಿಯಾಗಿ ಸ್ವಚ್ಛಗೊಳಿಸುವುದು ಮತ್ತು ಪದೇ ಪದೇ ಮುಖ ತೊಳೆಯುವುದು ಅತ್ಯಂತ ಹಾನಿಕಾರಕ. ಮಿತಿಮೀರಿ ಶುಚಿಗೊಳಿಸುವಿಕೆಯು ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಕಾಂತಿಯುತ ಚರ್ಮವನ್ನು ಪಡೆಯುವ ಉದ್ದೇಶದಿಂದ ಫೇಸ್ ವಾಶ್ ಹಚ್ಚಿ ಅತಿಯಾಗಿ ತೊಳೆಯಬೇಡಿ. ಇದರಿಂದ ಚರ್ಮವು ಉರಿಯೂತ ಮತ್ತು ಕಿರಿಕಿರಿ ಅನುಭವಿಸಬಹುದು.

ಇದನ್ನೂ ಓದಿ | Summer Tips: ಬೇಸಿಗೆ ಕಾಲದಲ್ಲಿ ತಪ್ಪಿಯೂ ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಕೆಡಬಹುದು ಎಚ್ಚರ

4. ತ್ವಚೆ ಉತ್ಪನ್ನಗಳನ್ನು ಆಗಾಗ್ಗೆ ಬದಲಾಯಿಸುವುದು

ಕೆಲವರು ತಮ್ಮ ತ್ವಚೆಯ ಉತ್ಪನ್ನಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಹಳೆಯ ಸೌಂದರ್ಯ ಉತ್ಪನ್ನದಿಂದ ಯಾವುದೇ ಫಲಿತಾಂಶ ಕಾಣುವುದಿಲ್ಲ. ಹೀಗಾಗಿ ಹೊಸ ಉತ್ಪನ್ನಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ. ಉತ್ಪನ್ನಗಳನ್ನು ಆಗಾಗ್ಗೆ ಬದಲಾಯಿಸುವುದರಿಂದ ಚರ್ಮದ ಸೂಕ್ಷ್ಮತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆಗಾಗ್ಗೆ ಸೌಂದರ್ಯ ಉತ್ಪನ್ನಗಳನ್ನು ಬದಲಾಯಿಸದಿರಿ.

5. ನಿದ್ದೆಯ ಕೊರತೆ

ಸಾಕಷ್ಟು ನಿದ್ದೆ ಮಾಡದಿರುವುದು ಕೂಡ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಡಾರ್ಕ್ ಸರ್ಕಲ್‌ ಉಂಟಾಗುವುದು, ಕಣ್ಣಿನ ಕೆಳಗೆ ಚೀಲದಂತೆ ಚರ್ಮ ಸುಕ್ಕುಗಟ್ಟುವುದು ಮಾತ್ರವಲ್ಲದೆ ಮಂದ ಚರ್ಮಕ್ಕೂ ಕಾರಣವಾಗುತ್ತದೆ. ಹೀಗಾಗಿ ಆದಷ್ಟು ಚೆನ್ನಾಗಿ ನಿದ್ದೆ ಮಾಡಬೇಕು.

6. ತ್ವಚೆಗೆ ಬಿಸಿ ನೀರು ಬಳಸುವುದು

ಬಿಸಿನೀರು ನೈಸರ್ಗಿಕ ತೈಲದ ಅಂಶವನ್ನು ತೆಗೆದುಹಾಕಬಹುದು. ಹೀಗಾಗಿ ತೇವಾಂಶದ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸುವಾಗ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಸೂಕ್ತ.

7. ಮೊಡವೆಗಳನ್ನು ಕೀಳುವುದು ಅಥವಾ ಕಲೆ ಹೋಗಲಾಡಿಸಲು ಸೌಂದರ್ಯ ಉತ್ಪನ್ನಗಳ ಬಳಕೆ

ನಿಮ್ಮ ತ್ವಚೆಯಲ್ಲಿ ಮೊಡವೆ ಉಂಟಾಗಿದ್ದರೆ ಅದನ್ನು ಉಗುರಿನಿಂದ ಕೀಳಬೇಡಿ. ಇದರಿಂದ ಉರಿಯೂತ ಮತ್ತು ಬ್ಯಾಕ್ಟೀರಿಯಾದ ಹರಡುವಿಕೆಗೆ ಕಾರಣವಾಗಬಹುದು. ಮೊಡವೆಗಳನ್ನು ಕೀಳಿದರೆ ಅಲ್ಲಿ ಕಲೆಗಳುಂಟಾಗುತ್ತದೆ. ಇದರಿಂದ ಕೆಲವರು ಬೇಕಾಬಿಟ್ಟಿ ಸೌಂದರ್ಯ ಉತ್ಪನ್ನಗಳನ್ನು ಬಳಸಲು ಮುಂದಾಗುತ್ತಾರೆ. ಇದರಿಂದ ಮುಖದ ಚರ್ಮ ಮತ್ತಷ್ಟು ಹಾಳಾಗಬಹುದು. ಸಾಧ್ಯವಾದಷ್ಟು ಅವುಗಳನ್ನು ನೈಸರ್ಗಿಕವಾಗಿ ಗುಣಪಡಿಸಲು ಅಥವಾ ತಜ್ಞ ವೈದ್ಯರ ಸಹಾಯವನ್ನು ಪಡೆಯುವುದು ಒಳಿತು.

8. ಮಾಯಿಶ್ಚರೈಸರ್ ಬಳಸದೆ ಇರುವುದು

ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಮಾಯಿಶ್ಚರೈಸರ್ ಬಳಸಬೇಕು. ಮಾಯಿಶ್ಚರೈಸರ್ ಬಳಸದಿರುವುದು ಶುಷ್ಕತೆ ಕಡಿಮೆಯಾಗುತ್ತದೆ. ನಿಮ್ಮ ಚರ್ಮದ ಅಗತ್ಯಗಳಿಗೆ ಸರಿಹೊಂದುವ ಮಾಯಿಶ್ಚರೈಸರ್ ಅನ್ನು ಆರಿಸಿ ಮತ್ತು ಅದನ್ನು ಪ್ರತಿದಿನ ನಿಮ್ಮ ಮುಖಕ್ಕೆ ಹಚ್ಚಿ.

9. ತ್ವಚೆ ಮೇಲೆ ಪರಿಣಾಮ ಬೀರುತ್ತವೆ ಮೊಬೈಲ್ ಫೋನ್‌ಗಳು

ಮೊಬೈಲ್ ಫೋನ್‌ಗಳು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಯ ಕೇಂದ್ರವಾಗಿದೆ. ಇದು ನಿಮ್ಮ ಮುಖದಲ್ಲಿ ಮೊಡವೆಗಳು ಉಂಟಾಗಲು ಕಾರಣವಾಗಬಹುದು. ಇದರ ಬಗ್ಗೆ ಅರಿವಿರದೆ ಬಹುತೇಕ ಮಂದಿ ಎಲ್ಲರೂ ಫೋನ್‌ಗಳಿಗೆ ಅಂಟಿಕೊಂಡಿರುತ್ತಾರೆ. ಹೀಗಾಗಿ ಯಾವಾಗಲೂ ನಿಮ್ಮ ಬಳಿ ಒದ್ದೆಯಾದ ಒರೆಸುವ ಬಟ್ಟೆಗಳನ್ನು ಇಟ್ಟುಕೊಳ್ಳಿ. ನಿಮ್ಮ ಫೋನ್‌ಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ.

10. ಮೇಕಪ್ ಬ್ರಷ್‌ಗಳನ್ನು ಸ್ವಚ್ಛಗೊಳಿಸದಿರುವುದು

ಮೇಕಪ್ ಬ್ರಷ್‌ಗಳನ್ನು ಸ್ವಚ್ಛಗೊಳಿಸುವುದನ್ನು ಎಂದಿಗೂ ಮರೆಯಬಾರದು. ಇದನ್ನು ಸ್ವಚ್ಛಗೊಳಿಸದಿದ್ದಲ್ಲಿ ಮೊಡವೆಗಳು ಮತ್ತು ಚರ್ಮ ಕಾಂತಿ ಕಳೆದುಕೊಳ್ಳಲು ಕಾರಣವಾಗಬಹುದು. ಮೇಕಪ್ ಬ್ರಷ್‌ಗಳನ್ನು ಸರಿಯಾಗಿ ಅಥವಾ ಬಳಕೆ ಮಾಡಿದ ನಂತರ ಸ್ವಚ್ಛಗೊಳಿಸದಿದ್ದರೆ, ಇದರಲ್ಲಿ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾ ಬೆಳೆಯಬಹುದು. ನಿಮ್ಮ ಬ್ರಷ್‌ಗಳನ್ನು ಕೊಳಕು ಮತ್ತು ಸೂಕ್ಷ್ಮಾಣುಗಳನ್ನು ತೊಡೆದುಹಾಕಲು ಸೋಪ್ ಅಥವಾ ಬ್ರಷ್ ಕ್ಲೆನ್ಸರ್‌ನಿಂದ ನಿಮ್ಮ ಮೇಕಪ್ ಬ್ರಷ್‌ಗಳನ್ನು ತೊಳೆಯಬೇಕು.

ಒಟ್ಟಿನಲ್ಲಿ ನಿಮ್ಮ ತ್ವಚೆಯ ಅಂದದ ಗುಟ್ಟು ನಿಮ್ಮ ಕೈಯಲ್ಲೇ ಇರುತ್ತದೆ. ತ್ವಚೆಯನ್ನು ಚೆನ್ನಾಗಿ ನೋಡಿಕೊಂಡರೆ ಚರ್ಮದ ಗುಣಮಟ್ಟ ಹಾಳಾಗುವುದಿಲ್ಲ. ನಿಮಗೆ ಗೊತ್ತಾಗದಂತೆ ಏನೆಲ್ಲಾ ನಿರ್ಲಕ್ಷ್ಯ ಮಾಡುತ್ತೀರಿ ಎಂಬ ಬಗ್ಗೆ ತಿಳಿಯಿತಲ್ವಾ? ಇನ್ನಾದ್ರೂ ಇದರ ಬಗ್ಗೆ ಎಚ್ಚರದಿಂದಿದ್ದು ತ್ವಚೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಿ.

(ಪ್ರಿಯಾಂಕಾ ಗೌಡ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು