logo
ಕನ್ನಡ ಸುದ್ದಿ  /  ಜೀವನಶೈಲಿ  /  Google Doodle New Year:2023ಕ್ಕೆ ವಿದಾಯ, 2024ರ ಹೊಸ ವರ್ಷ ಸ್ವಾಗತಕ್ಕೆ ಗೂಗಲ್‌ ಡ್ಯೂಡಲ್‌ ನೋಟ ಹೇಗಿದೆ

Google Doodle New year:2023ಕ್ಕೆ ವಿದಾಯ, 2024ರ ಹೊಸ ವರ್ಷ ಸ್ವಾಗತಕ್ಕೆ ಗೂಗಲ್‌ ಡ್ಯೂಡಲ್‌ ನೋಟ ಹೇಗಿದೆ

HT Kannada Desk HT Kannada

Dec 31, 2023 09:44 AM IST

ಹೊಸ ವರ್ಷವನ್ನು ವಿಭಿನ್ನವಾಗಿ ಬರ ಮಾಡಿಕೊಳ್ಳುವ ಪ್ರಯತ್ನವನ್ನು ಗೂಗಲ್‌ ಮಾಡಿದೆ.

    • Google doodle ಗೂಗಲ್‌ ವಿಶೇಷ ಸನ್ನಿವೇಶಕ್ಕೆ ವಿಭಿನ್ನ ರೂಪ ನೀಡುವ ಪ್ರಯತ್ನವನ್ನು ಮಾಡುತ್ತದೆ. ಈಗ ಹೊಸ ವರ್ಷ ಬರ ಮಾಡಿಕೊಳ್ಳುವ ಸಮಯ. ಇದರ ಪ್ರಯತ್ನ ಹೇಗಿರಬಹುದು. ಇಲ್ಲಿ ಓದಿ…
ಹೊಸ ವರ್ಷವನ್ನು ವಿಭಿನ್ನವಾಗಿ ಬರ ಮಾಡಿಕೊಳ್ಳುವ ಪ್ರಯತ್ನವನ್ನು ಗೂಗಲ್‌ ಮಾಡಿದೆ.
ಹೊಸ ವರ್ಷವನ್ನು ವಿಭಿನ್ನವಾಗಿ ಬರ ಮಾಡಿಕೊಳ್ಳುವ ಪ್ರಯತ್ನವನ್ನು ಗೂಗಲ್‌ ಮಾಡಿದೆ.

ಈಗ ಎಲ್ಲೆಡೆ 2023ರ ವರ್ಷವನ್ನು ಬೀಳ್ಕೊಡುವ ಬೇಸರದ ಸನ್ನಿವೇಶ. ಮತ್ತೊಂದು ಕಡೆ ಹೊಸ ವರ್ಷ 2024 ಬರ ಮಾಡಿಕೊಳ್ಳುವ ಸಂತಸದ ಸಮಯ. ಎರಡೂ ಒಟ್ಟೊಟ್ಟಿಗೆ ಪ್ರತಿ ವರ್ಷ ಬಂದೇ ಬರುತ್ತವೆ. ಎರಡನ್ನೂ ವಿಭಿನ್ನವಾಗಿ ನೋಡುವ ಪ್ರಯತ್ನ ಪ್ರತಿಯೊಬ್ಬರು ಮಾಡುತ್ತಾರೆ. ಅಂದರೆ ಹಳೆಯ ವರ್ಷದ ನೆನಪುಗಳನ್ನು ಮೆಲುಕು ಹಾಕುತ್ತಲೇ ಹೊಸ ವರ್ಷದ ಮೆಟ್ಟಿಲುಗಳನ್ನು ಏರುವ ಸಮಯ. ಇದನ್ನು ಗೂಗಲ್‌ ಕೂಡ ಭಿನ್ನವಾಗಿಯೇ ರೂಪಿಸಿದೆ. ನೀವು ಗೂಗಲ್‌ ಪೇಜ್‌ಗೆ ಹೋದರೆ ಗೂಗಲ್‌ ಡ್ಯೂಡಲ್‌ ಕಾಣುತ್ತದೆ. ಇದರಲ್ಲಿ ಹಳೆಯ ವರ್ಷದ ನೆನಪುಗಳನ್ನು ಮಾಡಿಕೊಳ್ಳುವ, ಹೊಸ ವರ್ಷವನ್ನು ಸಡಗರದಿಂದ ಬರ ಮಾಡಿಕೊಳ್ಳುವ ಸಂದೇಶಗಳಿವೆ. ಗೂಗಲ್‌ ಡ್ಯೂಡಲ್‌ನಲ್ಲಿ 2023ರ ವರ್ಷವನ್ನು ಬೀಳ್ಕೊಡುವ ಬೇಸರದ ಮೀಮ್ಸ್‌ಗಳಿವೆ. ಬೇಸರದ ಮುಖಭಾವದೊಂದಿಗೆ ಮೀಮ್ಸ್‌ಗಳು ಹಾದು ಹೋಗುವ 2023ರ ಡ್ಯೂಡಲ್‌ ಇದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇದೇ ರೀತಿ ಹೊಸ ವರ್ಷವನ್ನು ಸ್ವಾಗತಿಸಿಲು 3… 2… 1 ಎನ್ನುವ ಕ್ಷಣಗಣನೆಯನ್ನೂ ನೀಡಲಾಗಿದೆ. ಹೊಸ ವರ್ಷಕ್ಕೆ ಬೆಳಕಿನ ಚಿತ್ತಾರದ ಕ್ಷಣಗಳನ್ನು ಮೂಡಿಸಲಾಗಿದೆ. ಇನ್ನೇನು ಹೊಸ ವರ್ಷ ಬಂದೇ ಬಿಟ್ಟಿತು ಎಂದು ನೆನಪಿಸುವ ಪ್ರಯತ್ನವನ್ನು ಗೂಗಲ್‌ ಮಾಡಿದೆ.

ಕೊನೆಯ ಕ್ಷಣಗಳನ್ನು ದಾಟಿಕೊಂಡು ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಖುಷಿ ನಮ್ಮಲ್ಲಿ ಇರಲಿ. ಜಗತ್ತಿನ ಎಲ್ಲೆಡೆ ಈಗ ಹೊಸ ವರ್ಷವನ್ನು ಸಂತಸದಿಂದಲೇ ಬರ ಮಾಡಿಕೊಳ್ಳುವ ಕ್ಷಣ ಎದುರಾಗುತ್ತಿದೆ. ನಮ್ಮ ಹೊಸ ಸಂಕಲ್ಪಗಳು, ಶುಭಾಶಗಳೊಂದಿಗೆ ಮುಂದುವರಿಯೋಣ, ಪ್ರೀತಿ, ಸಂತಸ, ಯಶಸ್ಸು ಎಲ್ಲವೂ ಸಿಗುವಂತಾಗಲಿ ಎಂದು ಗೂಗಲ್‌ ಶುಭಾಶಯಗಳನ್ನು ಕೋರಿದೆ.

ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ನಾವೇ ರೂಪಿಸಿಕೊಂಡ ಖುಷಿಯ ಕ್ಷಣಗಳಿಗೆ ಅಣಿಯಾಗುತ್ತಿದ್ದೇವೆ. ಕೆಲವು ಭಾರೀ ಸಂಭ್ರಮಕ್ಕೆ, ಮತ್ತೆ ಕೆಲವರು ಕುಟುಂಬದವರು, ಸ್ನೇಹಿತರೊಂದಿಗೆ ಪ್ರವಾಸ ಕೈಗೊಂಡು, ಇನ್ನಷ್ಟು ಮಂದಿ ಮನೆಯಲ್ಲಿಯೇ ಇದ್ದುಕೊಂಡು ಹೊಸ ವರ್ಷ ಬರ ಮಾಡಿಕೊಳ್ಳುವವರು ಇದ್ದೇವೆ. ಇದು ನಾವು ಹೊಸತನಕ್ಕೆ ನಮ್ಮ ಮೈ- ಮನಗಳನ್ನು ಒಡ್ಡಿಕೊಳ್ಳುವ ಕ್ಷಣವೂ ಹೌದು. ನಮ್ಮೆಲ್ಲ ವೈಯಕ್ತಿಕ ಬೆಳವಣಿಗೆ ಹಾಗೂ ಸಾಧನೆಗಳಿಗೆ ಇಂತಹ ಖುಷಿ ಕ್ಷಣಗಳೇ ದಾರಿ ಮಾಡಿಕೊಡುತ್ತವೆ. ಹಳೆಯದನ್ನು ಮರೆಯದೇ ಹೊಸದರಲ್ಲಿ ಮೈ ಮರೆಯದೇ ನಾವು ಮುನ್ನಡೆಯೋಣ ಎನ್ನುವ ಸಂದೇಶವನ್ನು ಗೂಗಲ್‌ ಸಾರಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು