logo
ಕನ್ನಡ ಸುದ್ದಿ  /  ಜೀವನಶೈಲಿ  /  Grey Hair: ಯೌವ್ವನದಲ್ಲೇ ಕೂದಲು ಬೆಳ್ಳಗಾಗುತ್ತಿದೆಯಾ? ಈ ನೈಸರ್ಗಿಕ ವಿಧಾನದಿಂದ ಕೂದಲ ಬಣ್ಣ ಸರಿಪಡಿಸಿ

Grey hair: ಯೌವ್ವನದಲ್ಲೇ ಕೂದಲು ಬೆಳ್ಳಗಾಗುತ್ತಿದೆಯಾ? ಈ ನೈಸರ್ಗಿಕ ವಿಧಾನದಿಂದ ಕೂದಲ ಬಣ್ಣ ಸರಿಪಡಿಸಿ

HT Kannada Desk HT Kannada

Aug 28, 2022 10:33 PM IST

ಬಿಳಿ ಕೂದಲಿಗೆ ಪರಿಹಾರವಿದೆ(ಸಾಂದರ್ಭಿಕ ಚಿತ್ರ)

    • ಸಾಮಾನ್ಯವಾಗಿ ನಾವು ನಮ್ಮ ಕೂದಲು ಮತ್ತು ನೆತ್ತಿಯ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ಈ ನಿರ್ಲಕ್ಷ್ಯವು ನಿಧಾನವಾಗಿ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗಲು ದಾರಿ ಮಾಡಿಕೊಡುತ್ತದೆ. ಆದರೆ ಇದಕ್ಕೆ ಗಾಬರಿಯಾಗಬೇಕೆಂದಿಲ್ಲ. ಇದಕ್ಕೂ ಪರಿಹಾರವಿದೆ.
ಬಿಳಿ ಕೂದಲಿಗೆ ಪರಿಹಾರವಿದೆ(ಸಾಂದರ್ಭಿಕ ಚಿತ್ರ)
ಬಿಳಿ ಕೂದಲಿಗೆ ಪರಿಹಾರವಿದೆ(ಸಾಂದರ್ಭಿಕ ಚಿತ್ರ)

ವಯಸ್ಸಾಗುವುದು ಸಹಜ ಪ್ರಕ್ರಿಯೆ. ವಯಸ್ಸಾದಂತೆ ಕೂದಲು ಬಿಳಿ ಅಥವಾ ಬೂದು ಬಣ್ಣಕ್ಕೆ ಬದಲಾಗುವುದು ಕೂಡಾ ವಯಸ್ಸಿನ ಮತ್ತೊಂದು ನೈಸರ್ಗಿಕ ಭಾಗವಾಗಿದೆ. ಆದರೆ ಕೆಲವೊಬ್ಬರಿಗೆ ಯೌವ್ವನದಲ್ಲೇ ಕೂದಲು ಬೆಳ್ಳಗಾಗುತ್ತದೆ. ವಯಸ್ಸಿಗೆ ಮುಂಚೆಯೇ ಮೆಲನಿನ್ ಉತ್ಪಾದನೆಯಲ್ಲಿ ಕಡಿಮೆಯಾದಾಗ ಕೂದಲು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಹಿಂದಿನ ಕಾಲದಲ್ಲಿ ಇಂತಹ ಸಂದರ್ಭಗಳು ತುಂಬಾ ಕಡಿಮೆಯಿತ್ತು. ಆದರೆ ಈಗೀಗ ನೈಸರ್ಗಿಕವಾಗಿ ವಯಸ್ಸಾಗುವ ಪ್ರಕ್ರಿಯೆಯನ್ನು ನಾವೇ ವೇಗಗೊಳಿಸಿದ್ದೇವೆ. ಈಗಿನ ಯುವಕರಿಗೆ ಅಕಾಲಿಕವಾಗಿ ವಯಸ್ಸಾಗುತ್ತಿದೆ. ಬಲುಬೇಗನೆ ಕೂದಲುಗಳು ಬಣ್ಣ ಕಳೆದುಕೊಳ್ಳುತ್ತದೆ.

ನಮ್ಮ ಆಹಾರದ ಆಯ್ಕೆ, ಜೀವನಶೈಲಿ, ಭಾವನೆಗಳು ಮತ್ತು ಒತ್ತಡದ ಮಟ್ಟವು ಅಕಾಲಿಕ ವಯಸ್ಸಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಕೂದಲು ಮತ್ತು ನೆತ್ತಿಯ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ಈ ನಿರ್ಲಕ್ಷ್ಯವು ನಿಧಾನವಾಗಿ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗಲು ದಾರಿ ಮಾಡಿಕೊಡುತ್ತದೆ. ಆದರೆ ಇದಕ್ಕೆ ಗಾಬರಿಯಾಗಬೇಕೆಂದಿಲ್ಲ. ಆರೋಗ್ಯಕರ ಆಹಾರ, ಕೂದಲ ರಕ್ಷಣೆ, ಬೆಲ್ಲ ಮತ್ತು ಮೆಂತ್ಯೆಯನ್ನು ತಿನ್ನುವ ಮೂಲಕ ಬೂದು ಕೂದಲನ್ನು ತೊಡೆದುಹಾಕಬಹುದು.

ಬಿಳಿ ಮತ್ತು ಬೂದು ಕೂದಲಿಗೆ ಚಿಕಿತ್ಸೆ ನೀಡಲು ಮನೆಮದ್ದು

ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆ ಇದ್ದರೆ, ಮೆಂತ್ಯ ಮತ್ತು ಬೆಲ್ಲದ ಮನೆಮದ್ದುಗಳನ್ನು ಬಳಸಬಹುದು. ಬಿಳಿ ಕೂದಲು ಕಪ್ಪಾಗಲು ಮೆಂತ್ಯ ಕಾಳನ್ನು ಪುಡಿ ಮಾಡಿ ನಂತರ 1 ಚಮಚ ಮೆಂತ್ಯ ಪುಡಿಯನ್ನು ಒಂದು ತುಂಡು ಬೆಲ್ಲದೊಂದಿಗೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಮನೆಮದ್ದು ಬಿಳಿ ಕೂದಲನ್ನು ಕಪ್ಪು ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಸ ಬಿಳಿ ಕೂದಲು ಬರದಂತೆ ತಡೆಯುತ್ತದೆ.

ಬಿಳಿ ಕೂದಲಿಗೆ ಕಾರಣಗಳು

ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬರುತ್ತದೆ. ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲು ಬರಲು ಹಲವು ಕಾರಣಗಳಿರಬಹುದು. ಉದಾಹರಣೆಗೆ, ಜೆನೆಟಿಕ್ಸ್, ಒತ್ತಡ, ಆಟೋಇಮ್ಯೂನ್ ಕಾಯಿಲೆಗಳು, ಥೈರಾಯ್ಡ್ ಅಸ್ವಸ್ಥತೆಗಳು, ದೇಹದಲ್ಲಿ ವಿಟಮಿನ್ ಬಿ-12 ಕೊರತೆ, ಧೂಮಪಾನ, ಇತ್ಯಾದಿ ಕಾರಣಗಳಿಂದ ಕೂದಲು ಬೆಳ್ಳಗಾಗಬಹುದು. ನೀವು ಬೂದು ಕೂದಲಿಂದ ದೂರವಿರಬೇಕು ಎಂದು ಬಯಸಿದರೆ, ನೀವು ನಿಯಮಿತ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಸಮರ್ಪಕ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಿ.

ಆಹಾರದಲ್ಲಿ ಬದಲಾವಣೆ ಮಾಡಿ

ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಯೊಂದಿಗೆ ಕೆಲವು ಸಂದರ್ಭಗಳಲ್ಲಿ ಕೂದಲಿನ ಅಕಾಲಿಕ ಬೂದುಬಣ್ಣವನ್ನು ತಡೆಯಬಹುದು. ಸಮತೋಲಿತ ಆಹಾರ ಕೂಡಾ ಸಹಾಯ ಮಾಡುತ್ತದೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಗ್ರೀನ್‌ ಟೀ, ಆಲಿವ್ ಎಣ್ಣೆ, ಮೀನು, ಇತ್ಯಾದಿ ಸೇರಿದಂತೆ ಉತ್ಕರ್ಷಣ ನಿರೋಧಕ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಕರಿಬೇವಿನ ಎಲೆಗಳು, ಭೃಂಗರಾಜ ಮತ್ತು ನೆಲ್ಲಿಕಾಯಿ ಸಹ ಉತ್ತಮ ಆಹಾರ. ಕೆಲವೊಬ್ಬರಿಗೆ ಆಹಾರ ಸೇವಿಸುವಾಗ ಕರಿಬೇವಿನ ಎಲೆ ಸೇರಿದಂತೆ ಕೆಲ ವಸ್ತುಗಳನ್ನು ಬದಿಗೆ ಸರಿಸುವ ಅಭ್ಯಾಸವಿದೆ. ಈ ಅಭ್ಯಾಸವನ್ನು ನಿಲ್ಲಿಸಿ, ಎಲ್ಲಾ ಆರೋಗ್ಯಕರ ಆಹಾರಗಳನ್ನು ತಪ್ಪದೆ ಸೇವಿಸಿ.

ಜೀವನಶೈಲಿಯ ಬದಲಾವಣೆ

ಧೂಮಪಾನವನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಮತ್ತು ಹೆಚ್ಚಿನ ಆಂಟಿ-ಆಕ್ಸಿಡೆಂಟ್‌ಗಳನ್ನು ಸೇವಿಸುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಬಿಳಿ ಕೂದಲನ್ನು ನಿಧಾನವಾಗಿ ಅಥವಾ ಸಂಪೂರ್ಣವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಧೂಮಪಾನದಿಂದ ಆಗುವ ಪ್ರಯೋಜನಗಳೇನೂ ಇಲ್ಲ. ಹೀಗಾಗಿ ಅದನ್ನು ನಿಮ್ಮ ಜೀವನಶೈಲಿಯಿಂದ ಇಲ್ಲವಾಗಿಸುವುದು ಉತ್ತಮ.

ಅಕಾಲಿಕವಾಗಿ ವಯಸ್ಸಾದವರಂತೆ ಕಾಣಲು ಯಾರಿಗೂ ಇಷ್ಟವಿರುವುದಿಲ್ಲ. ಈ ನಡುವೆ ಬಿಳಿ ಕೂದಲಿನಿಂದಾಗಿ ವಯಸ್ಕರಂತೆ ಕಾಣುವುದು ಕೂಡಾ ಮುಜುಗರದ ವಿಚಾರ. ಕೆಲವೊಬ್ಬರಿಗೆ ಇದು ಸಣ್ಣ ವಿಚಾರ ಅಥವಾ ಸಾಮಾನ್ಯ ವಿಚಾರ ಎಂದು ಅನಿಸಬಹುದು. ಆದರೆ, ಕಾರಣವಿಲ್ಲದೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಪರಿಹಾರ ಇದ್ದಾಗ ಅದನ್ನು ಪರಿಹರಿಸಿಕೊಳ್ಳುವುದು ಕೂಡಾ ಜಾಣತನ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು