ದೃಷ್ಟಿ ಚುರುಕಾಗುವುದರಿಂದ ನೆನಪಿನ ಶಕ್ತಿ ಹೆಚ್ಚುವವರೆಗೆ; ಮಾವಿನಹಣ್ಣು ತಿನ್ನುವುದರಿಂದ ಮಕ್ಕಳಿಗಾಗುವ ಪ್ರಯೋಜನಗಳಿವು
May 09, 2024 01:00 PM IST
ಮಾವಿನಹಣ್ಣು ತಿನ್ನುವುದರಿಂದ ಮಕ್ಕಳಿಗಾಗುವ ಪ್ರಯೋಜನಗಳಿವು
- ಇದು ಮಾವಿನಹಣ್ಣಿನ ಕಾಲ, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರು ಹಣ್ಣುಗಳ ರಾಜನದ್ದೇ ಕಾರುಬಾರು. ಮಾವಿನಹಣ್ಣು ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮ. ಮಾವಿನಹಣ್ಣು ತಿನ್ನುವುದರಿಂದ ಮಕ್ಕಳ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಮಕ್ಕಳಿಗಾಗುವ ಪ್ರಯೋಜನ ಕೇಳಿದ್ರೆ ನೀವು ತಪ್ಪದೇ ಮಕ್ಕಳಿಗೆ ಮಾವಿನಹಣ್ಣು ತಿನ್ನಿಸ್ತೀರಿ.
ಹಣ್ಣುಗಳ ರಾಜ ಮಾವು ಎಂದರೆ ಎಲ್ಲರಿಗೂ ಇಷ್ಟ. ಅದ್ಭುತ ರುಚಿ, ಪರಿಮಳ ಹೊಂದಿರುವ ಮಾವಿನಹಣ್ಣು ಎಂದರೆ ಮಕ್ಕಳಿಗೆ ಪಂಚಪ್ರಾಣ. ಆದರೆ ಕೆಲವರು ಮಕ್ಕಳಿಗೆ ಮಾವಿನಹಣ್ಣು ತಿನ್ನಲು ಬಿಡುವುದಿಲ್ಲ. ಅದಕ್ಕೆ ಕಾರಣ ಹೊಟ್ಟೆ ಕೆಡಬಹುದು ಅಥವಾ ಅಲರ್ಜಿಯಾಗಬಹುದು ಎಂದು. ಆದರೆ ಮಾವಿನಹಣ್ಣಿನಿಂದ ಮಕ್ಕಳಿಗಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಅಚ್ಚರಿಗೊಳ್ಳುತ್ತೀರಿ. ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಾವು ತಿನ್ನುವುದರಿಂದ ಮಕ್ಕಳಿಗೆ ಹಲವು ಪ್ರಯೋಜನಗಳಿವೆ. ಇದನ್ನು ತಿನ್ನುವುದರಿಂದ ಮಕ್ಕಳ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
ದೃಷ್ಟಿ ಸುಧಾರಣೆ
ಮಾವಿನಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಒಂದು ಕಪ್ ಮಾವಿನಹಣ್ಣಿನಲ್ಲಿ ಶೇ 25 ರಷ್ಟು ವಿಟಮಿನ್ ಎ ಅಂಶವಿರುತ್ತದೆ. ವಿಟಮಿನ್ ಎ ದೃಷ್ಟಿಗೆ ಬಹಳ ಉತ್ತಮ. ಮಾವಿನ ಹಣ್ಣನ್ನು ತಿನ್ನುವುದು ಇರುಳುಗಣ್ಣು, ಕಣ್ಣಿನ ಉರಿ, ತುರಿಕೆ, ಕಾರ್ನಿಯಾ ಮೃದುವಾಗುವುದು, ಕಣ್ಣಿನ ದೋಷ, ಕಣ್ಣು ಒಣಗುವುದು ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಜೀರ್ಣಕ್ರಿಯೆಯನ್ನ ವೃದ್ಧಿಸುತ್ತದೆ
ಮಾವಿನಹಣ್ಣು ಹಲವು ಜೀರ್ಣಕಾರಿ ಕಿಣ್ವಗಳನ್ನು ಹೊಂದಿದ್ದು, ಇದು ದೇಹಕ್ಕೆ ಪ್ರೊಟೀನ್‌ಗಳನ್ನು ಒದಗಿಸುತ್ತದೆ. ಇದು ಮಕ್ಕಳಲ್ಲಿ ಸುಗಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಮಕ್ಕಳಲ್ಲಿ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಆಮ್ಲೀಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಉತ್ತಮ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ನಾರಿನಾಂಶವು ಮಕ್ಕಳಲ್ಲಿ ಮಲಬದ್ಧತೆಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ಮಾವಿನಹಣ್ಣು ತಿಂದ ನಂತರ ತಪ್ಪಿಯೂ ಈ ಆಹಾರ ಸೇವಿಸಬೇಡಿ
ನೆನೆಪಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಮಾವಿನಹಣ್ಣಿನಲ್ಲಿ ಗ್ಲುಟಾಮಿಕ್ ಆಮ್ಲವಿದೆ. ಇದನ್ನು ತಿನ್ನುವುದರಿಂದ ಗ್ಲುಟಾಮಿಕ್ ಆಮ್ಲದ ಕೊರತೆ ನೀಗುವುದು. ಇದು ನೆನಪಿನ ಶಕ್ತಿ ಹೆಚ್ಚಲು ಬಹಳ ಅವಶ್ಯ. ಇದು ಮಕ್ಕಳಲ್ಲಿ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
ಚರ್ಮದ ಆರೋಗ್ಯ ಸುಧಾರಿಸುತ್ತದೆ
ಮಾವಿನಹಣ್ಣು ತಿನ್ನುವುದರಿಂದ ಮಗುವಿನ ಚರ್ಮದ ಕಾಂತಿ ವೃದ್ಧಿಸುತ್ತದೆ. ಚರ್ಮವು ಮೃದುವಾಗುತ್ತದೆ. ಮಾವಿನಹಣ್ಣಿನ ತಿರುಳನ್ನು ಮಗು ಅಥವಾ ಮಕ್ಕಳ ಚರ್ಮಕ್ಕೆ ಹಚ್ಚಿ ಹಾಗೇ ಬಿಡಿ. 10 ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಚರ್ಮದ ರಂಧ್ರಗಳು ಮುಚ್ಚತ್ತವೆ, ಮಾತ್ರವಲ್ಲ ಮಕ್ಕಳ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.
ಕ್ಯಾನ್ಸರ್ ಅನ್ನು ತಡೆಯುತ್ತದೆ
ಮಾವಿನಹಣ್ಣಿನಲ್ಲಿ ಪೆಕ್ಟಿನ್ ಸಮೃದ್ಧವಾಗಿದೆ. ಕರಗುವ ನಾರಿನಾಂಶ ಮಾವಿನಹಣ್ಣಿನಲ್ಲಿ ಸಮೃದ್ಧವಾಗಿರುವುದರಿಂದ ಮಕ್ಕಳಲ್ಲಿ ಜಠರಗರುಳಿನ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳು ಮಾವಿನಹಣ್ಣು ತಿನ್ನುವುದರಿಂದ ಕ್ಯಾನ್ಸರ್ ಬೆಳವಣಿಗೆಯ ಅಪಾಯ ಕಡಿಮೆಯಾಗುತ್ತದೆ.
ರಕ್ತಹೀನತೆಯನ್ನು ನಿವಾರಿಸುತ್ತದೆ
ಪ್ಯಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಶನ್ (PAHO) ಪ್ರಕಾರ, ಆರರಿಂದ 59 ತಿಂಗಳು ವಯಸ್ಸಿನ ಅಮೆರಿಕ ಮೂಲದ ಮಕ್ಕಳಲ್ಲಿ ರಕ್ತಹೀನತೆಯ ಹರಡುವಿಕೆಯು 2019ರಲ್ಲಿ ಶೇ 6.1 ಆಗಿತ್ತು. ಮಾವಿನಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಿದ್ದು ಮಕ್ಕಳಲ್ಲಿ ರಕ್ತಹೀನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮಾವು ಮಕ್ಕಳಲ್ಲಿ ಕೆಂಪು ರಕ್ತ ಕಣಗಳ (RBC) ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯ ಪ್ರತಿಕೂಲ ಪರಿಣಾಮಗಳನ್ನು ತಡೆಯುತ್ತದೆ.
ತೂಕ ಏರಿಕೆಗೆ ಉತ್ತಮ
ಮಾವಿನಹಣ್ಣನ್ನು ಮಧ್ಯಮ ಪ್ರಮಾಣದಲ್ಲಿ ತಿನ್ನುವುದರಿಂದ ಮಕ್ಕಳಲ್ಲಿ ತೂಕ ಹೆಚ್ಚಲು ಸಹಕಾರಿ.ಕೇವಲ 150 ಗ್ರಾಂ ಮಾವು ನಿಮ್ಮ ಮಗುವಿಗೆ ಸುಮಾರು 86 ಕ್ಯಾಲೊರಿಗಳನ್ನು ನೀಡುತ್ತದೆ, ಅದು ಅವನ ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಅವನ ತೂಕವನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಮಕ್ಕಳಿಗೆ ಮಾವಿನ ಹಣ್ಣಿನ ರಸ ಅಥವಾ ಮಿಲ್ಕ್‌ಶೇಕ್ ಅನ್ನು ನೀಡಬಹುದು
ಮಾವಿನಹಣ್ಣು ತಿನ್ನುವುದರಿಂದ ಮಕ್ಕಳ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. ಹಾಗಂತ ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಮಾವಿನಹಣ್ಣನ್ನು ಅತಿಯಾಗಿ ತಿನ್ನುವುದರಿಂದ ಆರೋಗ್ಯ ಕೆಡಬಹುದು.