logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Body Pains After Waking Up: ನಿದ್ದೆಯಿಂದ ಎದ್ದೇಳುತ್ತಲೇ ಮೈ-ಕೈ ನೋವಾಗುತ್ತಾ?: ಪರಿಹಾರ ಏನು?

Body Pains After Waking Up: ನಿದ್ದೆಯಿಂದ ಎದ್ದೇಳುತ್ತಲೇ ಮೈ-ಕೈ ನೋವಾಗುತ್ತಾ?: ಪರಿಹಾರ ಏನು?

Jan 19, 2023 12:54 PM IST

ಅನೇಕ ಜನರು ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೇ ದೇಹದ ವಿವಿಧ ಭಾಗಗಳಲ್ಲಿ ಹಲವು ರೀತಿಯ ನೋವು ಅನುಭವಿಸುತ್ತಾರೆ. ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆಗಳನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.

  • ಅನೇಕ ಜನರು ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೇ ದೇಹದ ವಿವಿಧ ಭಾಗಗಳಲ್ಲಿ ಹಲವು ರೀತಿಯ ನೋವು ಅನುಭವಿಸುತ್ತಾರೆ. ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆಗಳನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
ನಿದ್ದೆಯಿಂದ ಎದ್ದೇಳುತ್ತಲೇ ಕೆಲವರು ಕುತ್ತಿಗೆ ನೋವು, ಬೆನ್ನು ನೋವು, ಭುಜದ ನೋವು ಅನುಭವಿಸುತ್ತಾರೆ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚುತ್ತದೆ. ಇದನ್ನು ತಪ್ಪಿಸುವ ಮಾರ್ಗಗಳನ್ನು ನೋಡೋಣ.
(1 / 6)
ನಿದ್ದೆಯಿಂದ ಎದ್ದೇಳುತ್ತಲೇ ಕೆಲವರು ಕುತ್ತಿಗೆ ನೋವು, ಬೆನ್ನು ನೋವು, ಭುಜದ ನೋವು ಅನುಭವಿಸುತ್ತಾರೆ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚುತ್ತದೆ. ಇದನ್ನು ತಪ್ಪಿಸುವ ಮಾರ್ಗಗಳನ್ನು ನೋಡೋಣ.(HT)
ನೀವು ಎಚ್ಚರವಾದ ನಂತರ ಬೆನ್ನು ನೋವು ಹೊಂದಿದ್ದರೆ, ಅದು ಫೈಬ್ರೊಮ್ಯಾಲ್ಗಿಯಾ ಸಮಸ್ಯೆ ಆಗಿರಬಹುದು. ಆದರೆ ಭಯಪಡಬೇಡಿ, ಇದು ಭಯಾನಕ ರೋಗವಲ್ಲ. ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದ್ದು, ಇದನ್ನು ಸುಲಭವಾಗಿ ದೂರ ಮಾಡಬಹುದಾಗಿದೆ.
(2 / 6)
ನೀವು ಎಚ್ಚರವಾದ ನಂತರ ಬೆನ್ನು ನೋವು ಹೊಂದಿದ್ದರೆ, ಅದು ಫೈಬ್ರೊಮ್ಯಾಲ್ಗಿಯಾ ಸಮಸ್ಯೆ ಆಗಿರಬಹುದು. ಆದರೆ ಭಯಪಡಬೇಡಿ, ಇದು ಭಯಾನಕ ರೋಗವಲ್ಲ. ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದ್ದು, ಇದನ್ನು ಸುಲಭವಾಗಿ ದೂರ ಮಾಡಬಹುದಾಗಿದೆ.(HT)
ನಿಯಮಿತ ವ್ಯಾಯಾಮವು ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಸ್ನಾಯುಗಳು ಆರೋಗ್ಯಕರವಾಗಿದ್ದರೆ, ಈ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು.
(3 / 6)
ನಿಯಮಿತ ವ್ಯಾಯಾಮವು ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಸ್ನಾಯುಗಳು ಆರೋಗ್ಯಕರವಾಗಿದ್ದರೆ, ಈ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು.(HT)
ಅನೇಕರು ತಡರಾತ್ರಿವರೆಗೂ ಮೊಬೈಲ್‌ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಮಲಗುವ ಮುನ್ನ ಯಾವುದೇ ಉತ್ತೇಜಕ ಚಟುವಟಿಕೆ ಇರಬಾರದು. ಇದು ನಿದ್ದೆಯ ಮೇಲೆ ಗಂಭಿರ ಪರಿಣಾಮ ಬೀರುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ನೀವು ಸುಸ್ತು ಮತ್ತು ನೋವು ಅನುಭವಿಸುವಿರಿ.
(4 / 6)
ಅನೇಕರು ತಡರಾತ್ರಿವರೆಗೂ ಮೊಬೈಲ್‌ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಮಲಗುವ ಮುನ್ನ ಯಾವುದೇ ಉತ್ತೇಜಕ ಚಟುವಟಿಕೆ ಇರಬಾರದು. ಇದು ನಿದ್ದೆಯ ಮೇಲೆ ಗಂಭಿರ ಪರಿಣಾಮ ಬೀರುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ನೀವು ಸುಸ್ತು ಮತ್ತು ನೋವು ಅನುಭವಿಸುವಿರಿ.(HT)
ದೈನಂದಿನ ಕೆಲಸದ ಒತ್ತಡವು ಮನಸ್ಸು ಮತ್ತು ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಮಲಗುವ ಮುನ್ನ ಪ್ರಾಣಾಯಾಮ ಮಾಡುವುದರಿಂದ ಈ ಒತ್ತಡವನ್ನು ನಿವಾರಿಸಬಹುದಾಗಿದೆ, ಇದರಿಂದ ಬೆಳಗ್ಗೆ ನೀವು ಉಲ್ಲಾಸದಿಂದ ಎಚ್ಚರಗೊಳ್ಳುತ್ತೀರಿ.
(5 / 6)
ದೈನಂದಿನ ಕೆಲಸದ ಒತ್ತಡವು ಮನಸ್ಸು ಮತ್ತು ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಮಲಗುವ ಮುನ್ನ ಪ್ರಾಣಾಯಾಮ ಮಾಡುವುದರಿಂದ ಈ ಒತ್ತಡವನ್ನು ನಿವಾರಿಸಬಹುದಾಗಿದೆ, ಇದರಿಂದ ಬೆಳಗ್ಗೆ ನೀವು ಉಲ್ಲಾಸದಿಂದ ಎಚ್ಚರಗೊಳ್ಳುತ್ತೀರಿ.(HT)
ನಿದ್ದೆಯಿಂದ ಎದ್ದ ನಂತರ ನೋವಿಗೆ ಯಾವುದೇ ನೋವು ನಿವಾರಕಗಳ ಮಾತ್ರೆಗಳನ್ನು ಸೇವಿಸುವುದು ಸೂಕ್ತವಲ್ಲ. ನಿಮಗೆ ತೀವ್ರವಾದ ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಿ.
(6 / 6)
ನಿದ್ದೆಯಿಂದ ಎದ್ದ ನಂತರ ನೋವಿಗೆ ಯಾವುದೇ ನೋವು ನಿವಾರಕಗಳ ಮಾತ್ರೆಗಳನ್ನು ಸೇವಿಸುವುದು ಸೂಕ್ತವಲ್ಲ. ನಿಮಗೆ ತೀವ್ರವಾದ ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಿ.(HT)

    ಹಂಚಿಕೊಳ್ಳಲು ಲೇಖನಗಳು