logo
ಕನ್ನಡ ಸುದ್ದಿ  /  ಜೀವನಶೈಲಿ  /  Carrot Halwa Without Grating:ಮನೆಗೆ ಗೆಸ್ಟ್‌ ಬರ್ತೀದ್ದಾರಾ, ಟೈಂ ಇಲ್ವಾ...ಹಾಗಿದ್ರೆ ತುರಿಯದೆ ಕ್ಯಾರೆಟ್‌ ಹಲ್ವಾ ಮಾಡೋದು ಹೇಗೆ ಕಲಿಯಿರಿ

Carrot Halwa without Grating:ಮನೆಗೆ ಗೆಸ್ಟ್‌ ಬರ್ತೀದ್ದಾರಾ, ಟೈಂ ಇಲ್ವಾ...ಹಾಗಿದ್ರೆ ತುರಿಯದೆ ಕ್ಯಾರೆಟ್‌ ಹಲ್ವಾ ಮಾಡೋದು ಹೇಗೆ ಕಲಿಯಿರಿ

HT Kannada Desk HT Kannada

Oct 07, 2022 08:51 PM IST

google News

ಕ್ಯಾರೆಟ್ ತುರಿಯದೆ ಹಲ್ವಾ ಮಾಡುವ ವಿಧಾನ

    • ಕ್ಯಾರೆಟ್‌ ಹಲ್ವಾ ತಿನ್ನಲು ಬಹಳ ರುಚಿ, ಆದರೆ ಅದನ್ನು ತುರಿಯುತ್ತಾ ಕೂರುವುದು ದೊಡ್ಡ ಕೆಲಸ. ಮನೆಗೆ ಯಾರಾದರೂ ಗೆಸ್ಟ್‌ ಬರುತ್ತಿದ್ದಾರೆ. ಅವರಿಗೆ ಹಲ್ವಾ ಇಷ್ಟ. ನಿಮಗೆ ಹಲ್ವಾ ಮಾಡಲು ಸಮಯ ಇಲ್ಲದ ಪರಿಸ್ಥಿತಿ ಬಹುತೇಕರಿಗೆ ಎದುರಾಗಿರುತ್ತದೆ. ಆದರೆ ಕ್ಯಾರೆಟ್‌ ತುರಿಯದೆ ಕೂಡಾ ಹಲ್ವಾ ಮಾಡಬಹುದು ಎಂಬ ವಿಚಾರ ಬಹಳ ಜನರಿಗೆ ಗೊತ್ತಿಲ್ಲ.
ಕ್ಯಾರೆಟ್ ತುರಿಯದೆ ಹಲ್ವಾ ಮಾಡುವ ವಿಧಾನ
ಕ್ಯಾರೆಟ್ ತುರಿಯದೆ ಹಲ್ವಾ ಮಾಡುವ ವಿಧಾನ (PC: freepik.com)

ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿತಿಂಡಿಯಲ್ಲಿ ಕ್ಯಾರೆಟ್‌ ಹಲ್ವಾ ಕೂಡಾ ಒಂದು. ಸಾಮಾನ್ಯವಾಗಿ ಶುಭ ಸಂದರ್ಭ, ಹಬ್ಬ, ಹರಿದಿನದಂತ ವಿಶೇಷ ಸಂದರ್ಭಗಳಲ್ಲಿ ಕ್ಯಾರೆಟ್‌ ಹಲ್ವಾ ತಯಾರಿಸುತ್ತೇವೆ. ಹಾಗಂತ ಸಿಹಿಪ್ರಿಯರು ಅದನ್ನು ತಿನ್ನಲು ವಿಶೇಷ ದಿನಗಳನ್ನೇ ಕಾದು ಕೂರುವುದಿಲ್ಲ.

ಇನ್ನು ಕ್ಯಾರೆಟ್‌ ಹಲ್ವಾ ತಿನ್ನಲು ಬಹಳ ರುಚಿ, ಆದರೆ ಅದನ್ನು ತುರಿಯುತ್ತಾ ಕೂರುವುದು ದೊಡ್ಡ ಕೆಲಸ. ಮನೆಗೆ ಯಾರಾದರೂ ಗೆಸ್ಟ್‌ ಬರುತ್ತಿದ್ದಾರೆ. ಅವರಿಗೆ ಹಲ್ವಾ ಇಷ್ಟ. ನಿಮಗೆ ಹಲ್ವಾ ಮಾಡಲು ಸಮಯ ಇಲ್ಲದ ಪರಿಸ್ಥಿತಿ ಬಹುತೇಕರಿಗೆ ಎದುರಾಗಿರುತ್ತದೆ. ಆದರೆ ಕ್ಯಾರೆಟ್‌ ತುರಿಯದೆ ಕೂಡಾ ಹಲ್ವಾ ಮಾಡಬಹುದು ಎಂಬ ವಿಚಾರ ಬಹಳ ಜನರಿಗೆ ಗೊತ್ತಿಲ್ಲ. ಕ್ಯಾರೆಟ್‌ ತುರಿಯದೆ ಹಲ್ವಾ ಮಾಡೋದು ಹೇಗೆ..? ಅದನ್ನು ತಯಾರಿಸಲು ಏನೆಲ್ಲಾ ಸಾಮಗ್ರಿಗಳು ಬೇಕು ಎಂಬುದನ್ನು ನೋಡೋಣ.

ಕ್ಯಾರೆಟ್‌ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್‌ - 1/2 ಕೆಜಿ

ಹಾಲು - 1/2 ಲೀಟರ್‌

ಸಕ್ಕರೆ - 1 ಕಪ್‌

ತುಪ್ಪ - 4 ಟೇಬಲ್‌ ಸ್ಪೂನ್‌

ಏಲಕ್ಕಿ ಪುಡಿ - 1/4 ಟೀ ಚಮಚ

ಪಿಸ್ತಾ ಚೂರುಗಳು - 3 ಟೇಬಲ್‌ ಸ್ಪೂನ್

ಕ್ಯಾರೆಟ್‌ ಹಲ್ವಾ ತಯಾರಿಸುವ ವಿಧಾನ

ಕ್ಯಾರೆಟ್‌ ಸಿಪ್ಪೆ ತೆಗೆದು 4-5 ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ

ಒಂದು ಕುಕ್ಕರ್‌ನಲ್ಲಿ ಕ್ಯಾರೆಟ್‌, ಸ್ವಲ್ಪ ಹಾಲು ಹಾಗೂ ಸ್ವಲ್ಪ ತುಪ್ಪ ಸೇರಿಸಿ ಮಿಕ್ಸ್‌ ಮಾಡಿ ಮುಚ್ಚಳ ಮುಚ್ಚಿ 1 ಸೀಟಿ ಕೂಗಿಸಿಕೊಳ್ಳಿ

ಕುಕ್ಕರ್‌ ತಣ್ಣಗಾದಾಗ ಮುಚ್ಚಳ ತೆಗೆದು ಬೇಯಿಸಿಕೊಂಡ ಕ್ಯಾರೆಟ್‌ಗೆ ಉಳಿದ ಹಾಲು ಸೇರಿಸಿ

ಜೊತೆಗೆ ಪಿಸ್ತಾ ಚೂರುಗಳನ್ನು ಸೇರಿಸಿ ಹೆಚ್ಚಿನ ಉರಿಯಲ್ಲಿ 20 ನಿಮಿಷ ಕುದಿಸಿ

ಆಗ್ಗಾಗ್ಗೆ ಸ್ಪಾಚುಲಾದಿಂದ ಮಿಶ್ರಣವನ್ನು ತಿರುವುತ್ತಾ ಮ್ಯಾಷ್‌ ಮಾಡಿಕೊಳ್ಳಿ (ಅಥವಾ ಕುಕ್ಕರ್‌ ಮುಚ್ಚಳ ತೆಗೆದಾಗ ಹಾಲು ಸೇರಿಸುವ ಮುನ್ನವೇ ಮ್ಯಾಷರ್‌ನಿಂದ ಮ್ಯಾಷ್‌ ಮಾಡಿಕೊಳ್ಳಬಹುದು)

ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಸಕ್ಕರೆ ಹಾಗೂ ಉಳಿದಿರುವ ತುಪ್ಪ ಸೇರಿಸಿ ತಿರುವಿ

ಸಕ್ಕರೆ ಸೇರಿಸಿದಾಗ ಹಲ್ವಾ ನೀರು ಬಿಡುತ್ತದೆ. ಆದ್ದರಿಂದ ಮತ್ತೆ 5-10 ನಿಮಿಷ ಕುಕ್‌ ಮಾಡಿ ನಂತರ ಸ್ಟೋವ್‌ ಆಫ್‌ ಮಾಡಿ ಏಲಕ್ಕಿ ಪುಡಿ ಹಾಗೂ ಮತ್ತಷ್ಟು ತುಪ್ಪ ಸೇರಿಸಿ ಮಿಕ್ಸ್‌ ಮಾಡಿ

ಸರ್ವಿಂಗ್‌ ಪ್ಲೇಟ್‌ಗೆ ವರ್ಗಾಯಿಸಿ ಮತ್ತಷ್ಟು ಪಿಸ್ತಾ ಚೂರುಗಳಿಂದ ಅಲಂಕರಿಸಿ

ಗಮನಿಸಿ: ಹಲ್ವಾಗೆ ಮತ್ತಷ್ಟು ರುಚಿ ನೀಡಲು ಮಿಲ್ಕ್‌ ಮೇಯ್ಡ್‌ ಅಥವಾ ಖೋವಾ ಕೂಡಾ ಸೇರಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ