logo
ಕನ್ನಡ ಸುದ್ದಿ  /  ಜೀವನಶೈಲಿ  /  Instant Guava Pickle Recipe: ಪೇರಲೆ ಹಣ್ಣಿನಿಂದಲೂ ಮಾಡಬಹುದು ಉಪ್ಪಿನಕಾಯಿ!; ಈ ರೆಸಿಪಿಯ ರುಚಿಯೇ ಬೇರೆ.. ಇಲ್ಲಿದೆ ಪಾಕವಿಧಾನ

Instant Guava pickle recipe: ಪೇರಲೆ ಹಣ್ಣಿನಿಂದಲೂ ಮಾಡಬಹುದು ಉಪ್ಪಿನಕಾಯಿ!; ಈ ರೆಸಿಪಿಯ ರುಚಿಯೇ ಬೇರೆ.. ಇಲ್ಲಿದೆ ಪಾಕವಿಧಾನ

HT Kannada Desk HT Kannada

Jan 04, 2023 12:57 PM IST

ಪೇರಲೆ ಹಣ್ಣಿನಿಂದಲೂ ಮಾಡಬಹುದು ಉಪ್ಪಿನಕಾಯಿ!; ಈ ರೆಸಿಪಿಯ ರುಚಿಯೇ ಬೇರೆ.. ಇಲ್ಲಿದೆ ಪಾಕವಿಧಾನ

    • ನೀವು ಎಂದಾದರೂ ಪೇರಲೆ ಹಣ್ಣಿನ ಉಪ್ಪಿನಕಾಯಿ ತಿಂದಿದ್ದೀರಾ? ಇದೀಗ ಸೀಬೆ ಹಣ್ಣು ಅಥವಾ ಪೇರಲೆ ಹಣ್ಣಿನ ಉಪ್ಪಿನಕಾಯಿ ಮಾಡುವ ಬಗೆ ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ..
ಪೇರಲೆ ಹಣ್ಣಿನಿಂದಲೂ ಮಾಡಬಹುದು ಉಪ್ಪಿನಕಾಯಿ!; ಈ ರೆಸಿಪಿಯ ರುಚಿಯೇ ಬೇರೆ.. ಇಲ್ಲಿದೆ ಪಾಕವಿಧಾನ
ಪೇರಲೆ ಹಣ್ಣಿನಿಂದಲೂ ಮಾಡಬಹುದು ಉಪ್ಪಿನಕಾಯಿ!; ಈ ರೆಸಿಪಿಯ ರುಚಿಯೇ ಬೇರೆ.. ಇಲ್ಲಿದೆ ಪಾಕವಿಧಾನ (chef_modeon)

Instant Guava pickle recipe: ಉಪ್ಪಿನಕಾಯಿಯಲ್ಲಿ ಒಂದಲ್ಲ ಎರಡಲ್ಲ ನೂರಾರು ಬಗೆಗಳಿವೆ. ಅದರಲ್ಲೂ ಹೆಚ್ಚು ಬಳಕೆಯಲ್ಲಿರುವುದು ಮಾವಿನ ಕಾಯಿ ಮತ್ತು ನಿಂಬೆ ಹಣ್ಣಿನ ಉಪ್ಪಿನಕಾಯಿ. ಇನ್ನುಳಿದಂತೆ ತರಕಾರಿಗಳಿಂದಲೂ ಬಾಯಿ ಚಪ್ಪರಿಸಿ ತಿನ್ನುವ ಉಪ್ಪಿನ ಕಾಯಿಯನ್ನು ಮಾಡಬಹುದು. ಆದರೆ, ಎಂದಾದರೂ ಪೇರಲೆ ಹಣ್ಣಿನ ಉಪ್ಪಿನಕಾಯಿ ತಿಂದಿದ್ದೀರಾ? ಇದೀಗ ಸೀಬೆ ಹಣ್ಣು ಅಥವಾ ಪೇರಲೆ ಹಣ್ಣಿನ ಉಪ್ಪಿನಕಾಯಿ ಮಾಡುವ ಬಗೆ ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ..

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಪೇರಲೆ ಉಪ್ಪಿನಕಾಯಿಗೆ ಬೇಕಿರುವ ಪದಾರ್ಥಗಳು

2 ಪೇರಲೆ ಅಥವಾ ಸೀಬೆ (ಮಧ್ಯಮ ಗಾತ್ರದ)

3 ಚಮಚ ಎಣ್ಣೆ

2 ಚಮಚ ಸಾಸಿವೆ ಬೀಜಗಳು

2 ಟೀಸ್ಪೂನ್ ಉಪ್ಪು

1 ಟೀಸ್ಪೂನ್ ಅರಿಶಿನ ಪುಡಿ

4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

1 ಟೀಸ್ಪೂನ್ ಹುರಿದ ಒಣ ಮೆಂತ್ಯದ ಪುಡಿ

1 ಚಮಚ ಬೆಲ್ಲದ ಪುಡಿ

1 ಚಮಚ ವಿನೆಗರ್

ಪೇರಲೆ ಉಪ್ಪಿನಕಾಯಿ ಮಾಡುವ ವಿಧಾನ

  • ಮೊದಲಿಗೆ ಒಂದು ಸಣ್ಣ ಬೌಲ್‌ನಲ್ಲಿ ಎಣ್ಣೆ ಕಾಯಿಸಲು ಇಡಿ.
  • ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ ಹಾಕಿ, ಅವು ಸಿಡಿದ ಬಳಿಕ ಗ್ಯಾಸ್‌ ಆಫ್‌ ಮಾಡಿ.
  • ಎಣ್ಣೆ ಮತ್ತು ಸಾಸಿವೆ ಮಿಶ್ರಣವನ್ನು ಕೆಲ ನಿಮಿಷ ಆರಲು ಬಿಡಿ.
  • ಇತ್ತ ಪೇರಲೆಯನ್ನು ಉಪ್ಪಿನಕಾಯಿಯ ಗಾತ್ರಕ್ಕೆ ಕತ್ತರಿಸಿಕೊಳ್ಳಿ.
  • ಹಾಗೆ ಕತ್ತರಿಸಿದ ಹೋಳುಗಳಿಗೆ ಉಪ್ಪು, ಕೆಂಪು ಖಾರದ ಪುಡಿ ಸೇರಿಸಿ.
  • ಅರಿಶಿನ ಪುಡಿ, ಮೆಂತ್ಯೆ ಪುಡಿ, ಒಂದು ಚಮಚ ಬೆಲ್ಲದ ಪುಡಿ ಹಾಕಿ ಮಿಶ್ರಣ ಮಾಡಿ.
  • ಕೊನೆಗೆ ಈ ಮಿಶ್ರಣಕ್ಕೆ ಮಿನೆಗರ್‌ ಹಾಕಿ ಮತ್ತೆ ಮಿಶ್ರಣ ಮಾಡಿ
  • ಆರಿದ ಎಣ್ಣೆಯನ್ನು ಮಿಶ್ರಣಕ್ಕೆ ಸುರಿಯಿರಿ. ಇಲ್ಲಿಗೆ ಪೇರಲೆ ಉಪ್ಪಿನ ಕಾಯಿ ರೆಡಿ.
  • ಈ ಉಪ್ಪಿನಕಾಯಿಯನ್ನು ಗಾಜಿನ ಬಾಟಲಿಗೆ ಹಾಕಿ ಮೂರು ದಿನ ಬಿಸಿಲಿಗೆ ಇಡಿ.
  • ಮೂರು ದಿನದ ಬಳಿಕ ನೀವು ಮುಂದಿನ ಮೂರು ತಿಂಗಳು ಇದನ್ನು ಸೇವಿಸಬಹುದು.
  • ಆದರೆ, ಇದನ್ನು ಫ್ರಿಜ್‌ನಲ್ಲಿ ಇಡುವುದು ಒಳಿತು. ಗಾಳಿಗೆ ಅಥವಾ ಬಾಯಿ ತೆರೆದಿಟ್ಟರೆ ಉಪ್ಪಿನಕಾಯಿ ಕೆಡಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು