logo
ಕನ್ನಡ ಸುದ್ದಿ  /  ಜೀವನಶೈಲಿ  /  Opinion: ಮುಸ್ಲಿಮರನ್ನು ಪಂಚರ್ ಅಂಗಡಿ ಎನ್ನುವಷ್ಟೇ ಬಾಲಿಶ ಬ್ರಾಹ್ಮಣರನ್ನು ತಟ್ಟೆಕಾಸು ಎನ್ನುವುದು: ರಂಗಸ್ವಾಮಿ ಮೂಕನಹಳ್ಳಿ ಬರಹ

Opinion: ಮುಸ್ಲಿಮರನ್ನು ಪಂಚರ್ ಅಂಗಡಿ ಎನ್ನುವಷ್ಟೇ ಬಾಲಿಶ ಬ್ರಾಹ್ಮಣರನ್ನು ತಟ್ಟೆಕಾಸು ಎನ್ನುವುದು: ರಂಗಸ್ವಾಮಿ ಮೂಕನಹಳ್ಳಿ ಬರಹ

HT Kannada Desk HT Kannada

Aug 15, 2023 09:32 AM IST

ರಂಗಸ್ವಾಮಿ ಮೂಕನಹಳ್ಳಿ

    • Indian Independence Day: ನಾವೆಲ್ಲಾ ಭಾರತೀಯರು ಎನ್ನುವ ಮನೋಭಾವ ಬೆಳಸಿಕೊಳ್ಳೋಣ. ಈ ನಾವು , ನಮ್ಮದು ಎನ್ನುವ ಇನ್ಕ್ಲ್ಯೂಸಿವ್ ನೆಸ್ ಬರೆದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ. ಸ್ವಾತಂತ್ರ್ಯ ದಿನಾಚರಣೆಯಂದು ಅವರು ಬರೆದ ಫೇಸ್‌ಬುಕ್‌ ಬರಹದ ಪೂರ್ಣ ಪಾಠ ಇಲ್ಲಿದೆ.
ರಂಗಸ್ವಾಮಿ ಮೂಕನಹಳ್ಳಿ
ರಂಗಸ್ವಾಮಿ ಮೂಕನಹಳ್ಳಿ

ಸ್ವಾತಂತ್ರ್ಯ ದಿನಾಚರಣೆಯಂದು ಹೂಡಿಕೆ ತಜ್ಞ, ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ಫೇಸ್‌ಬುಕ್‌ನಲ್ಲಿ ಬರೆದ ಬರಹವೊಂದು ಚಿಂತನೆಗೆ ಹಚ್ಚಿದೆ. ಅವರು ತನ್ನ ಬರಹದಲ್ಲಿ ಭಾರತೀಯರ ಒಗ್ಗಟ್ಟಿನ ಕೊರತೆ, ಕೆಲವು ಸಮುದಾಯಗಳ ಕುರಿತು ಸಮಾಜದಲ್ಲಿ ತುಂಬಿರುವ ಅಭಿಪ್ರಾಯಗಳ ಕುರಿತು ಮುಕ್ತವಾಗಿ ಬರೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Mutton Tikka Biryani: ಒಂದೇ ರುಚಿಯ ಬಿರಿಯಾನಿ ತಿಂದು ಬೇಸರ ಆಗಿದ್ರೆ ಮಟನ್‌ ಟಿಕ್ಕಾ ಬಿರಿಯಾನಿ ಟ್ರೈ ಮಾಡಿ; ತಯಾರಿಸುವ ವಿಧಾನ ಇಲ್ಲಿದೆ

World Lupus Day: ದೇಹದ ಅಂಗಾಂಗಗಳನ್ನು ಕಾಡುವ ಲೂಪಸ್‌; ಏನಿದು ವಿಚಿತ್ರ ಕಾಯಿಲೆ, ಇದರಿಂದ ಪಾರಾಗೋದು ಹೇಗೆ?

West Nile Fever: ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ; ಈ ಜ್ವರ ಹರಡುವ ಬಗೆ, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ

ಮಿಲನವೆಂಬ ಶುಷ್ಕ ದೈಹಿಕ ಕರ್ತವ್ಯ: ನಿಮಗೂ ಹೀಗನ್ನಿಸುತ್ತಿದ್ದರೆ ಗಂಡ-ಹೆಂಡತಿ ಮಧ್ಯೆ 'ಪ್ರೊಟೆಸ್ಟ್ ಪೊಲ್ಕಾ' ಬಂದಿದೆ ಎಂದು ಅರ್ಥ -ಕಾಳಜಿ

ರಂಗಸ್ವಾಮಿ ಮೂಕನಹಳ್ಳಿ ಬರೆದಿರುವುದೇನು?

"ಅದೊಂದು ಕಾಲವಿತ್ತು , ಬದುಕು ಬಹಳ ಚಂದವಿತ್ತು. ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯಲ್ಲಿ ಕೈಗಿಡುವ ಸಣ್ಣ ಪೆಪ್ಪರ್ಮೆಂಟ್ ಆಸೆಗೆ ಗಂಟೆಗಟ್ಟಲೆ ಬಿಸಿಲಿನಲ್ಲಿ ಅದ್ಯಾರೋ ಮುಖ್ಯ ಅತಿಥಿಗಳು ಮಾಡುತ್ತಿದ್ದ ನಮಗೆ ಅರ್ಥವಾಗದ ಭಾಷಣವನ್ನು ಕೇಳುತ್ತಾ ಕುಳಿತಿರುತ್ತಿದೆವು. ಇವತ್ತು ಅದು ಶೋಷಣೆ ಎನ್ನಿಸಿಕೊಳ್ಳುತ್ತದೆ !

ಜೊತೆಯಲ್ಲಿರುವ ಸಹಪಾಠಿಗಳು ಯಾವ ಜಾತಿ , ಧರ್ಮ ಗೊತ್ತಾಗುತ್ತಿರಲಿಲ್ಲ . ಆದರೆ , ಹೆಸರಿನ ಮುಂದೆ ಗೌಡ ಎಂದಿದ್ದರೆ ಅವನನ್ನು ಕಿಚಾಯಿಸುತ್ತಿದ್ದೆವು , ನನ್ನ ಹೆಸರು ನೋಡಿ ಕೂಡ ಬೊಮ್ಮನ್ ಎಂದು ಕಿಚಾಯಿಸುತ್ತಿದ್ದರು , ಮುಸ್ಲಿಂ , ಕ್ರಿಶ್ಚಿಯನ್ ಇದ್ಯಾವುದೂ ನನ್ನ ಮಟ್ಟಿಗಂತೂ ಗೊತ್ತಾಗಲೇ ಇಲ್ಲ. ಅದೆಷ್ಟೋ ವರ್ಷಗಳಾದ ಮೇಲೆ ಅಲ್ಲಾ ಬಕಾಷ್ ಎನ್ನುವ ಹುಡುಗ ಮುಸ್ಲಿಂ ಎನ್ನುವುದು ತಿಳಿದದ್ದು ! ಕೆಲವು ಹುಡುಗರು ಅವನನ್ನು ಪಾಲಿಗಮಿ ಜೊತೆಗೆ ಇನ್ನೊಂದಷ್ಟು ಪದಗಳೊಂದಿಗೆ ಕರೆಯುತ್ತಿದ್ದರು , ಅವತ್ತಿಗೆ ಅದು ಅರ್ಥವೇ ಆಗುತ್ತಿರಲಿಲ್ಲ . ನನ್ನ ಬಗ್ಗೆ ಹೇಳುವುದಾದರೆ ' ಜನಿವಾರ ' 'ಪುಳಿಚಾರು ' ಪದಗಳು ಖಾಯಂ ಆಗಿದ್ದವು. ನನಗೆ ಅವರು ನನ್ನನ್ನು ಅವಹೇಳನ ಮಾಡುತ್ತಿದ್ದಾರೆ ಎನ್ನಿಸುತ್ತಲೇ ಇರಲಿಲ್ಲ . ಇವತ್ತಿಗೆ 'ತಟ್ಟೆಕಾಸು ' ಎನ್ನುವ ಪದಪುಂಜವನ್ನು ಟಂಕಿಸಲಾಗಿದೆ . ಮುಸ್ಲಿಮರನ್ನು ' ಪಂಚರ್ ' ಅಂಗಡಿ ಎನ್ನುವಷ್ಟೇ ಬಾಲಿಶ ಬ್ರಾಹ್ಮಣರನ್ನು 'ತಟ್ಟೆಕಾಸು ' ಎನ್ನುವುದು . ನಮ್ಮಲ್ಲಿ ಇದ್ದಂತೆ ಮುಸ್ಲಿಮರಲ್ಲೂ ಶ್ರೇಣೀಕೃತ ಸಮಾಜವಿದೆ. ಅವರಲ್ಲೂ ಅತ್ಯಂತ ಸುಸಂಸ್ಕೃತ ಜನರಿದ್ದಾರೆ. ಅಜಿಮ್ ಪ್ರೇಮ್ ಜೀ ಒಂದು ಉದಾಹರಣೆ.

ಬ್ರಾಹ್ಮಣರ ಬಗ್ಗೆ ಸಮಾಜದಲ್ಲಿ ತುಂಬಿರುವ ದ್ವೇಷವನ್ನು ಕಂಡಾಗ ಮನಸ್ಸು ಮುದುಡಿ ಹೋಗುತ್ತದೆ. ಸಂಖ್ಯೆಯ ದೃಷಿಯಲ್ಲಿ ನಿಜವಾದ ಅಲ್ಪ ಸಂಖ್ಯಾತ ಬ್ರಾಹ್ಮಣ. ಸಿನಿಮಾ ಮಂದಿ ಬ್ರಾಹ್ಮಣ ಬಗೆಗಿನ ನರೇಟಿವ್ ಕಟ್ಟುಕೊಟ್ಟಿರುವ ರೀತಿಯೇ ಸರಿಯಿಲ್ಲ. ಬ್ರಾಹ್ಮಣ ಎಂದರೆ ಬುದ್ದಿವಂತ ಆದರೆ ಕಿತಾಪತಿ ಮಾಡುವವ ಎಂತಲೋ , ಇಲ್ಲವೇ ಕಪಟಿ ಎಂತಲೋ ತೋರಿಸುತ್ತಾರೆ. ನೀವು ಚರಿತ್ರೆಯನ್ನು ಗಮನಿಸುತ್ತಾ ಬನ್ನಿ , ಬ್ರಾಹ್ಮಣ ಸಮುದಾಯ ಎಲ್ಲಿ ಗೌರವ , ಮರ್ಯಾದೆ ಸಿಗುತ್ತದೆ ಅಲ್ಲಿ ನೆಲೆ ನಿಲ್ಲುತ್ತದೆ. ಹೀಗಾಗಿ ನಾವು ಒಂದು ತರಹ ಅಲೆಮಾರಿಗಳು . ಮೈಗ್ರೇಶನ್ ಎನ್ನುವುದು ಬ್ರಾಹ್ಮಣರ ಬ್ಲಡ್ ನಲ್ಲಿದೆ. ಭಾರತದಲ್ಲಿ ಜಾತಿ ಆಧಾರಿತ ಸಮಾಜವನ್ನು ನಿರ್ಮೂಲನ ಮಾಡುತ್ತೇವೆ ಎನ್ನುವುದು ಸಾಧ್ಯವಿಲ್ಲದ ಮಾತು. ಆದರೆ ಶ್ರೇಷ್ಠ , ನಿಕೃಷ್ಟ ಎನ್ನುವ ಭಾವನೆಯನ್ನು ಹೋಗಲಾಡಿಸಲು ಶ್ರಮಿಸಬೇಕಾಗಿದೆ. ಯಾರೆಲ್ಲಾ ಜ್ಞಾನದಾಹಿಗಳೋ , ವಿಚಾರವಂತರೋ , ಉತ್ತಮ ಚಿಂತೆನೆ ಉಳ್ಳವರೋ , ಸಮಾಜದ ಒಳಿತಿಗೆ ಶ್ರಮಿಸುವರೋ ಅವರೆಲ್ಲರೊ ಬ್ರಾಹ್ಮಣರೇ .

ಮೊದಲ ಸಾಲುಗಳಲ್ಲಿ ಹೇಳಿದಂತೆ ಹಿಂದೆ ನಾವು ಮಾತನಾಡುತ್ತಿದ್ದ ರೀತಿ ಅಪರಾಧ ಎನ್ನಿಸುತ್ತಿರಲಿಲ್ಲ , ಇವತ್ತು ಬರೆದದ್ದು , ಹೇಳಿದ್ದು , ಉಸಿರಾಡುವ ರೀತಿ ಕೂಡ ಎಡ -ಬಲ , ಇಲ್ಲಸಲ್ಲದ ತತ್ವ ಸಿದ್ದಾಂತಗಳ ಕಾರಣ 'ದೊಡ್ಡದಾಗುತ್ತವೆ ' ಯಾವುದನ್ನು ನಕ್ಕು 'ಬಿಟ್ಟಾಕು' ಎನ್ನಬಹುದು ಅಂತಹ ವಿಷಯಗಳಿಗೂ ಕೇಸು , ದ್ವೇಷ.

ಈ ದ್ವೇಷವ ಹಂಚಿದ್ದು ಯಾರು ? ಸರಕಾರವನ್ನು ದೋಷಿಸೋಣವೇ ? ಇಲ್ಲ ನಮ್ಮ ನಡುವಿನ ರಾಜಕಾರಿಣಿಗಳನ್ನು ? ಅಥವಾ ನಮ್ಮನ್ನು ನಾವೇ ದೋಷಿಸಿಕೊಳ್ಳೋಣವೇ ? ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಎರಡು ಸಾಲು ಬರೆದು , ಯಾರೋ ಫಾರ್ವಾರ್ಡ್ ಮಾಡಿದ್ದ ಚಂದದ ಒಂದು ಫೋಟೋ ಲಗತ್ತಿಸಿ ಕೈ ತೊಳೆದು ಕೊಳ್ಳೋಣ ಎಂದುಕೊಂಡಿದ್ದೆ . ಆದರೇನು ಮಾಡುವುದು ಹುಚ್ಚು ಮನಸ್ಸು ಕೇಳುವುದಿಲ್ಲ. ಬರೆಸಿ ಬಿಡುತ್ತದೆ .

ಸಾರಾಂಶ ಇಷ್ಟೇ : ಮುಂದಿನ ೧೦/೨೦ ವರ್ಷ ಭಾರತಕ್ಕೆ ಸೇರಿದ್ದು , ಈ ಅವಕಾಶವನ್ನು ಜಗತ್ತು ತಾನಾಗೇ ಮಾಡಿಕೊಡುತ್ತಿದೆ. ಇಂತಹ ಸಮಯದಲ್ಲಿ ನಮ್ಮಲ್ಲಿ ಒಗ್ಗಟ್ಟಿಲ್ಲದಿರುವುದು ಬಹು ದೊಡ್ಡ ಸಮಸ್ಯೆ. ಒಗ್ಗಟ್ಟಾಗಿರೋಣ , ನಾವೆಲ್ಲಾ ಭಾರತೀಯರು ಎನ್ನುವ ಮನೋಭಾವ ಬೆಳಸಿಕೊಳ್ಳೋಣ. ಈ ನಾವು , ನಮ್ಮದು ಎನ್ನುವ ಇನ್ಕ್ಲ್ಯೂಸಿವ್ ನೆಸ್ ಬರೆದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ . ಇದರ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ.

ನಾವು ಕಷ್ಟ ಪಟ್ಟು ಗಳಿಸದ ವಸ್ತುಗಳ ಮೇಲೆ ನಮಗೆ ಯಾವ ಗೌರವಿರುತ್ತದೆ ಅದೇ ಗೌರವ ನಾವು ಸ್ವಾತಂತ್ರ್ಯಕ್ಕೂ ನೀಡುತ್ತಿದ್ದೇವೆ ಅಷ್ಟೇ , ಇರಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು . ಎಲ್ಲರಿಗೂ ಒಳಿತಾಗಲಿ - ಶುಭವಾಗಲಿ .

  • ಬರಹ: ರಂಗಸ್ವಾಮಿ ಮೂಕನಹಳ್ಳಿ (ಲೇಖಕರು ಹೂಡಿಕೆ ತಜ್ಞರಾಗಿ, ಬರಹಗಾರರಾಗಿ, ಅಂಕಣಗಾರರಾಗಿ ಜನಪ್ರಿಯರು).

    ಹಂಚಿಕೊಳ್ಳಲು ಲೇಖನಗಳು