logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ; ಇಲ್ಲಿದೆ ಪೋಷಕರಿಗೆ ಸಲಹೆ

Parenting: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ; ಇಲ್ಲಿದೆ ಪೋಷಕರಿಗೆ ಸಲಹೆ

HT Kannada Desk HT Kannada

Jun 02, 2023 07:30 PM IST

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ

    • ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುವುದು ಪೋಷಕರ ಜವಾಬ್ದಾರಿ. ಮಕ್ಕಳು ಜೀವನದಲ್ಲಿ ಯಶಸ್ಸು ಕಾಣಲು ಆತ್ಮವಿಶ್ವಾಸ ಬೆಳೆಸುವುದು ಬಹಳ ಮುಖ್ಯ. ಹಾಗಾದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯಲು ಪೋಷಕರು ಏನು ಮಾಡಬಹುದು ನೋಡಿ. 
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ. ಇದು ಹೇಗೆ ಸಾಧ್ಯ ಎಂಬುದು ಪೋಷಕರ ಚಿಂತೆ. ಮುಖ್ಯವಾಗಿ ನಿಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಕಷ್ಟ, ದುಡ್ಡಿನ ಕೊರತೆ, ಶಿಸ್ತು ಎಲ್ಲವನ್ನೂ ಕಲಿಸಬೇಕು. ಇದರಲ್ಲಿ ಮುಖ್ಯವಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದನ್ನು ನಾವು ಕಲಿಸಲೇಬೇಕು. ಇದರಿಂದ ಮೇಲಿನ ಎಲ್ಲವೂ ಮಕ್ಕಳಲ್ಲಿ ತಾನಾಗಿಯೇ ಬರಲಿದೆ ಎಂಬುದು ಹಿರಿಯರ ಅಭಿಪ್ರಾಯ. ಅದರಲ್ಲೂ ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲು ಈ ನಾಲ್ಕು ಅಂಶಗಳು ಬಹಳ ಮುಖ್ಯ.

ಟ್ರೆಂಡಿಂಗ್​ ಸುದ್ದಿ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಖಾಲಿ ಹೊಟ್ಟೆಯಲ್ಲಿ ಜ್ಯೂಸ್‌ ಕುಡಿಯುವ ಅಭ್ಯಾಸ ಇದ್ರೆ ಇಂದೇ ಸ್ಟಾಪ್‌ ಮಾಡಿ, ಇದರಿಂದ ಸಮಸ್ಯೆ ತಪ್ಪಿದ್ದಲ್ಲ

Summer Tips: ಬೇಸಿಗೆಯಲ್ಲಿ ಎಣ್ಣೆ ಚರ್ಮದ ನಿರ್ವಹಣೆ ಹೇಗೆ, ತ್ವಚೆಯ ಆರೈಕೆಗೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

ಪಾಸಿಟಿವ್‌ ಮಾತುಗಳು ಹೆಚ್ಚಿರಲಿ

ಮಕ್ಕಳ ಎದುರು ನೆಗೆಟಿವ್‌ ಅಥವಾ ಋಣಾತ್ಮಕ ಮಾತುಗಳನ್ನು ಆಡದೇ ಇರುವುದು ಉತ್ತಮ. ಮಕ್ಕಳಿಗೆ ಅತಿಯಾಗಿ ಹೆದರಿಸುವುದನ್ನು ಬಿಡಬೇಕು. ಪರೀಕ್ಷಾ ಸಮಯದಲ್ಲಿ ಪದೇ ಪದೇ ಓದು ಎಂದು ಹಿಂಸೆ ಕೊಡುವುದು, ಓದು ಇಲ್ಲದಿದ್ದರೆ ಫೇಲಾಗುತ್ತಿಯಾ ಎಂದು ಹೆದರಿಸುವುದು ಈ ರೀತಿ ಮಾಡಬಾರದು. ವೇದಿಕೆ ಮೇಲೆ ಮಾತನಾಡಲು ಮಕ್ಕಳನ್ನು ಕಳುಹಿಸಬೇಕು. ಹಾಗೆಯೇ, ಕತ್ತಲೆಯಲ್ಲಿ ನಡೆದಾಡಲು ಮಕ್ಕಳನ್ನು ಬಿಡಬೇಕು. ಅಲ್ಲಿ ಹೋಗಬೇಡ, ಎಲ್ಲಿ ಹೋಗಬೇಡ ಎಂದು ನಿರ್ಬಂಧ ಹೇರುವುದು ತಪ್ಪು.

ಯೆಸ್-ನೋ ಬಗ್ಗೆ ಅರಿವಿರಲಿ

ಮಕ್ಕಳು ಹೇಳಿದ್ದಕ್ಕೆಲ್ಲಾ ʼಎಸ್‌ʼ ʼಓಕೆʼ ಎನ್ನುವ ಅಭ್ಯಾಸ ಬಿಡಬೇಕು. ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಬಾರದು. ಆಟಿಕೆ ಅಥವಾ ಮಕ್ಕಳು ಕೇಳಿದ್ದನ್ನು ಕೊಡಿಸಲು ಆದರೂ ತಕ್ಷಣಕ್ಕೆ ಕೊಡಿಸಬಾರದು. ಅದನ್ನೇ ಮಕ್ಕಳು ಅಭ್ಯಾಸ ಮಾಡಿಕೊಳ್ಳುತ್ತಾರೆ. ಪ್ರತಿ ಬಾರಿ ಎಸ್‌ ಎಂದು ಹೇಳಿ, ಯಾವಾಗಲೋ ನೋ ಅಂದರೆ ಮಕ್ಕಳು ಅದರಿಂದ ಡಿಸ್ಟರ್ಬ್‌ ಆಗುತ್ತಾರೆ. ಕೆಟ್ಟ ದಾರಿಯನ್ನು ಹಿಡಿಯುತ್ತಾರೆ. ಬದಲಾಗಿ ನೋ ಅನ್ನಬಹುದು ಎಂಬುದು ಅವರಿಗೆ ಗೊತ್ತಿರಬೇಕು. ಇದರಿಂದ ಕಾಯುವುದು ಹಾಗೂ ತಾಳ್ಮೆ ಅವರಲ್ಲಿ ಬೆಳೆಯಲಿದೆ.

ಮಕ್ಕಳಿಗೆ ಆಯ್ಕೆಗೂ ಬೆಲೆ ನೀಡಿ

ಬೆಳಗ್ಗೆ ಅಮ್ಮ ಮಾಡಿದ ತಿಂಡಿ ಬಗ್ಗೆ ಮಕ್ಕಳು ಕಿರಿಕಿರಿ ಮಾಡುವುದುಂಟು. ಇದು ಬೇಡ, ಅದು ಬೇಕು ಎನ್ನುವುದೇ ಹೆಚ್ಚು. ಹೀಗಾಗಿ, ಅವರಿಗೆ ಇಷ್ಟವಾಗುವ ತಿಂಡಿಯನ್ನೇ ಮಾಡಿಕೊಡಿ. ಇಷ್ಟಪಟ್ಟು ಹೆಚ್ಚು ತಿನ್ನುತ್ತಾರೆ. ಇನ್ನೂ ಬಟ್ಟೆಗಳ ವಿಷಯದಲ್ಲಿ ಅವರಿಗೆ ನಾಲ್ಕೈದು ಬಟ್ಟೆ ತೋರಿಸಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಬಿಡಿ. ಅಗತ್ಯವಿದ್ದರೆ ಮಾತ್ರ ಒಂದಕ್ಕಿಂತ ಹೆಚ್ಚು ಖರೀದಿಸಿ. ಅನಗತ್ಯವಾಗಿ ಮಕ್ಕಳಿಗೆ ಶಾಪಿಂಗ್‌ ಮಾಡಿಸಬೇಡಿ.

ಅವರ ಯುದ್ಧ ಅವರೇ ಆಡಬೇಕು

ಶಾಲೆಯಲ್ಲಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಜಗಳವಾಡುತ್ತಾರೆ. ಅಮ್ಮನ ಬಳಿ ಕಂಪ್ಲೇಂಟ್‌ ಹೇಳಿದಾಗ ಒಳ್ಳೆಯ ಮಾತುಗಳನ್ನೇ ಆಡುವುದು ಮುಖ್ಯ. ಅವರ ಸ್ನೇಹವನ್ನು ಅವರೇ ಸರಿ ಮಾಡಿಕೊಳ್ಳಬೇಕು ಎಂಬ ಬುದ್ಧಿವಾದದ ಮಾತುಗಳನ್ನು ಅವರಿಗೆ ಹೇಳಿ. ಇದೇ ಅವರಿಗೆ ಮುಂದಿನ ದಿನಗಳಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸಂಬಂಧವನ್ನು ಉಳಿಸಿ, ಬೆಳೆಸಿಕೊಳ್ಳುವುದನ್ನು ಕಲಿಯುತ್ತಾರೆ.

ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದುವುದು ಮುಖ್ಯ. ಆ ಸಮಯದಲ್ಲಿ ಮಕ್ಕಳನ್ನು ವಹಿಸಿಕೊಳ್ಳುವಂತಹ ತಪ್ಪು ಪೋಷಕರಿಂದ ಆಗಬಾರದು. ಇದರಿಂದ ಮಕ್ಕಳು ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡುವುದಿಲ್ಲ.

ಪ್ರತಿ ಬಾರಿಯೂ ಮಕ್ಕಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪೋಷಕರೊಂದಿಗೆ ಚರ್ಚಿಸಬೇಕು ಎಂಬುದರ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಕೊಡಬೇಕು. ಇವೆಲ್ಲಾ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ.

ಲೇಖನ: ಅಕ್ಷರಾ ಕಿರಣ್‌

ವಿಭಾಗ

    ಹಂಚಿಕೊಳ್ಳಲು ಲೇಖನಗಳು