logo
ಕನ್ನಡ ಸುದ್ದಿ  /  ಜೀವನಶೈಲಿ  /  Diabetes: ಮಧುಮೇಹ ಇರುವವರು ಮದ್ಯ ಸೇವಿಸಬಹುದೇ? ಕುಡಿಯುವುದಾದರೆ ಮುಂಜಾಗ್ರತೆ ಹೇಗಿರಬೇಕು?

Diabetes: ಮಧುಮೇಹ ಇರುವವರು ಮದ್ಯ ಸೇವಿಸಬಹುದೇ? ಕುಡಿಯುವುದಾದರೆ ಮುಂಜಾಗ್ರತೆ ಹೇಗಿರಬೇಕು?

HT Kannada Desk HT Kannada

Aug 14, 2022 10:15 PM IST

ಸಾಂದರ್ಭಿಕ ಚಿತ್ರ

    • ಸಕ್ಕರೆ ಕಾಯಿಲೆ ಇರುವವರಲ್ಲಿ ಅನೇಕರು ಮದ್ಯ ಪ್ರಿಯರು ಇರುತ್ತಾರೆ. ಆದರೆ ಮಧುಮೇಹ ಬಂದರೂ, ಮದ್ಯಪಾನ ಮಾಡುವುದನ್ನು ಅವರು ಬಿಡುವುದಿಲ್ಲ. ಈ ಕಾರಣದಿಂದಾಗಿ, ಅವರ ಜೀವಿತಾವಧಿ ಕಡಿಮೆಯಾಗುವ ಸಂಭವ ಹೆಚ್ಚು. ಇದರಿಂದ ಅಕಾಲಿಕ ಮರಣವೂ ಸಂಭವಿಸಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (freepik)

ಒಮ್ಮೆ ದೇಹಕ್ಕೆ ಮಧುಮೇಹ ವಕ್ಕರಿಸಿದರೆ ಸಾಕು. ಆಹಾರದ ವಿಷಯವಾಗಿ ತುಂಬಾ ಜೋಪಾನವಾಗಿರಬೇಕು. ಸಕ್ಕರೆ ಕಾಯಿಲೆ ಇರುವ ರೋಗಿಗಳು ಕೆಲವು ರೀತಿಯ ಆಹಾರವನ್ನು ತ್ಯಜಿಸಲೇಬೇಕು. ಇಲ್ಲದಿದ್ದರೆ, ಅವರ ಆರೋಗ್ಯವು ಬೇಗನೆ ಹದಗೆಡುತ್ತದೆ. ಕೆಲ ಸಮಯದಲ್ಲಿ ಇದು ಮಾರಣಾಂತಿಕ ಸಮಸ್ಯೆಯೂ ಆಗಬಹುದು. ಪ್ರತಿದಿನವೂ ಔಷಧಗಳನ್ನು ತಪ್ಪದೆ ತೆಗೆದುಕೊಳ್ಳಬೇಕು. ಒಂದು ವೇಳೆ ಅಜಾಗರೂಕತೆಯಿಂದ ಇದ್ದರೆ, ನೀವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ನಿದ್ರೆ ಮಾಡಿಸುವರೆಗೆ; ಕೊಲಂಬಿಯಾದಲ್ಲಿ ಪುರುಷರಿಗಿದೆ ಮಕ್ಕಳ ಕಾಳಜಿ ವಹಿಸುವ ತರಬೇತಿ ಶಾಲೆ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಸಕ್ಕರೆ ಕಾಯಿಲೆ ಇರುವವರಲ್ಲಿ ಅನೇಕರು ಮದ್ಯ ಪ್ರಿಯರು ಇರುತ್ತಾರೆ. ಆದರೆ ಮಧುಮೇಹ ಬಂದರೂ, ಮದ್ಯಪಾನ ಮಾಡುವುದನ್ನು ಅವರು ಬಿಡುವುದಿಲ್ಲ. ಒಮ್ಮೊಮ್ಮೆ ಬಿಡಬೇಕು ಅನಿಸಿದರೂ, ಮದ್ಯ ನಮ್ಮನ್ನು ಬಿಟ್ಟು ದೂರ ಹೋಗುವುದಿಲ್ಲ ಎಂಬುದಾಗಿ ಹಲವರು ಹೇಳುವುದಿದೆ. ಈ ಕಾರಣದಿಂದಾಗಿ, ಅವರ ಜೀವಿತಾವಧಿ ಕಡಿಮೆಯಾಗುವ ಸಂಭವ ಹೆಚ್ಚು. ಇದರಿಂದ ಅಕಾಲಿಕ ಮರಣವೂ ಸಂಭವಿಸಬಹುದು. ಏಕೆಂದರೆ, ಮಧುಮೇಹ ಇರುವವರು ಮದ್ಯಪಾನ ಮಾಡಬಾರದು. ಅದು ಹವ್ಯಾಸವಾಗಿದ್ದರೂ, ಅದನ್ನು ಬಿಡಲೇಬೇಕು. ಇಲ್ಲದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ.

ಮಧುಮೇಹ ಇರುವವರು ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸಬೇಕು. ಅವರ ಆಹಾರದಲ್ಲಿ ಸಕ್ಕರೆ ಅಧಿಕವಾಗಿದ್ದರೆ, ಅದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅಪಾಯದ ಸಾಧ್ಯತೆ ಇದೆ. ಅಂಥವರು ಆಲ್ಕೋಹಾಲ್ ಸೇವಿಸಿದರೆ, ಆ ಆಲ್ಕೋಹಾಲ್ ನರಗಳಿಗೂ ಹಾನಿ ಮಾಡುತ್ತದೆ. ಅಂದರೆ, ಮಧುಮೇಹ ಇರುವವರು ಮದ್ಯಪಾನ ಮಾಡಿದರೆ ನರಗಳು ಬಲು ಬೇಗನೆ ಹಾನಿಗೊಳಗಾಗುತ್ತವೆ. ನರಗಳು ಹಾನಿಗೊಳಗಾದರೆ, ಹಲವಾರು ತೊಂದರೆಗಳು ಉಂಟಾಗುತ್ತವೆ. ಕಾಲುಗಳು ಮತ್ತು ತೋಳುಗಳು ನಿಶ್ಯಕ್ತಿಯಿಂದ ಕೂಡುತ್ತದೆ. ನಂತರ ಕಾಲುಗಳು ಮತ್ತು ಪಾದಗಳು ನಿಶ್ಚೇಷ್ಟಿತವಾಗುತ್ತವೆ. ನೋವು ಮತ್ತು ಗಾಯಗಳು ಹೆಚ್ಚಾಗಿ ಅಂತಿಮವಾಗಿ ಅದನ್ನು ಕತ್ತರಿಸಿ ತೆಗೆಯಬೇಕಾಗಿಯೂ ಬರಬಹುದು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಮದ್ಯವನ್ನು ತ್ಯಜಿಸುವುದು ಉತ್ತಮ.

ಒಂದು ವೇಳೆ ನೀವು ಆಕಸ್ಮಿಕವಾಗಿ ಅಥವಾ ಅನಿವಾರ್ಯವಾಗಿ ಮದ್ಯಪಾನ ಮಾಡಬೇಕಾಗಿ ಬಂದರೆ, ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಕುಡಿಯಿರಿ. ಮದ್ಯ ಕುಡಿದ ತಕ್ಷಣವೇ ಆಹಾರ ಸೇವಿಸಿ. ಆಲ್ಕೋಹಾಲ್ ಕುಡಿದ ನಂತರ ನೀವು ತಿನ್ನದಿದ್ದರೆ, ಅದು ದೇಹಕ್ಕೆ ತುಂಬಾ ಸಮಸ್ಯೆ ಮಾಡುತ್ತದೆ.

ಮಧುಮೇಹದ ಔಷಧಿಗಳನ್ನು ಊಟದ ನಂತರವೇ ತೆಗೆದುಕೊಳ್ಳಬೇಕು. ನೀವು ತಿನ್ನದಿದ್ದರೆ ಅದನ್ನು ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಆಲ್ಕೊಹಾಲ್ ಸೇವಿಸಿದ ನಂತರ ನೀವು ತಿನ್ನದಿದ್ದರೆ ಗ್ಲೂಕೋಸ್ ಮಟ್ಟವು ಕಡಿಮೆಯಾಗುವ ಸಾಧ್ಯತೆಯಿದೆ. ಆಗ ಹೈಪೊಗ್ಲಿಸಿಮಿಯಾ ಎಂಬ ಸ್ಥಿತಿ ಬರಬಹುದು. ಇದು ತುಂಬಾ ಮಾರಣಾಂತಿಕ ಘಟ್ಟ. ಆ ಸಮಯದಲ್ಲಿ ತಕ್ಷಣ ಚಿಕಿತ್ಸೆ ನೀಡದಿದ್ದರೆ, ಜೀವಕ್ಕೆ ಅಪಾಯ.

ಔಷಧಿಗಳನ್ನು ತೆಗೆದುಕೊಳ್ಳುವ ಜನರು ಎಂದಿಗೂ ಮದ್ಯಪಾನ ಮಾಡಬಾರದು. ಅದು ಯಾವುದೇ ಔಷಧಿಯಾಗಿರಲಿ. ಇದನ್ನು ವೈದ್ಯರು ಕೂಡಾ ಹೇಳಿರುತ್ತಾರೆ. ಏಕೆಂದರೆ ಕೆಲವೊಮ್ಮೆ ಗಂಭೀರ ಸನ್ನಿವೇಶಗಳು ಎದುರಾಗಬಹುದು. ಕೆಲವರು ನಾನು ಪ್ರತಿನಿತ್ಯ ಮದ್ಯವೂ ಸೇವಿಸುತ್ತೇನೆ ಮತ್ತು ಪ್ರತಿದಿನ ಔಷಧವೂ ಸೇವಿಸುತ್ತೇನೆ ಎನ್ನುತ್ತಾರೆ. ಅಪಾಯಕಾರಿ ಸಂದರ್ಭಗಳು ಯಾವಾಗಲೂ ಬರುವುದಿಲ್ಲ, ಅವು ಇದ್ದಕ್ಕಿದ್ದಂತೆ ಬರುತ್ತವೆ. ಅಪಾಯ ಎದುರಾದ ನಂತರ ಬಳಲುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಅದಕ್ಕಾಗಿಯೇ ಆ್ಯಂಟಿಬಯೋಟಿಕ್ ಮತ್ತು ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಮುಂಚೆ ಮದ್ಯದಿಂದ ದೂರವಿರುವುದು ಉತ್ತಮ. ಕೆಲವು ಜನರಲ್ಲಿ, ಈ ಔಷಧಿಗಳು ಮತ್ತು ಮದ್ಯದ ಸಂಯೋಜನೆಯು ರಕ್ತದ ವಾಂತಿಗೆ ಕಾರಣವಾಗಬಹುದು. ಆಮೇಲೆ ಪ್ರಾಣಾಪಾಯ ಖಂಡಿತ.

    ಹಂಚಿಕೊಳ್ಳಲು ಲೇಖನಗಳು