logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ದಾಂಪತ್ಯದಲ್ಲಿನ ಅನುಬಂಧ ಗಟ್ಟಿಯಾಗಲು ಇಲ್ಲಿವೆ ಕೆಲವು ಸೂತ್ರಗಳು

Relationship: ದಾಂಪತ್ಯದಲ್ಲಿನ ಅನುಬಂಧ ಗಟ್ಟಿಯಾಗಲು ಇಲ್ಲಿವೆ ಕೆಲವು ಸೂತ್ರಗಳು

HT Kannada Desk HT Kannada

Mar 10, 2023 03:02 PM IST

ಗಂಡ-ಹೆಂಡತಿ

    • ಇಂದು ಗಂಡ-ಹೆಂಡತಿ ಸಂಬಂಧವೆಂದರೆ ನೀರ ಮೇಲಿನ ಗುಳ್ಳೆಯಂತೆ. ಯಾವ ಕ್ಷಣಕ್ಕೆ ಗುಳ್ಳೆ ಒಡೆದು ಹೋಗುತ್ತದೆ ಎಂಬುದರ ಅರಿವು ಇರುವುದಿಲ್ಲ. ಪ್ರೀತಿ ಮೂಡಿದಷ್ಟೇ ಬೇಗ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹಾಗಾದರೆ ದಾಂಪತ್ಯದಲ್ಲಿ ಒಡಕು ಮೂಡದಂತೆ ನೋಡಿಕೊಂಡು ಸುಖ ಸಂಸಾರ ಸಾಗಿಸುವುದು ಹೇಗೆ?
ಗಂಡ-ಹೆಂಡತಿ
ಗಂಡ-ಹೆಂಡತಿ

ಸಂಬಂಧಗಳೆಂದರೆ ಇಂದು ಹುಟ್ಟಿ ನಾಳೆ ಸಾಯುವುದಲ್ಲ. ಸಂಬಂಧಗಳಿಗೆ ಸಾವಿಲ್ಲ. ಮದುವೆಯಾದ ಮೇಲೆ ಗಂಡ-ಹೆಂಡತಿ ಸಂಬಂಧ ಎಂಬುದು ಸದಾ ಲವಲವಿಕೆಯಿಂದ ಜೀವಂತವಾಗಿರಬೇಕು. ಸಂಬಂಧದಲ್ಲಿ ಒಮ್ಮೆ ಬೇಸರದ ಗಾಳಿ ಮೂಡಿದರೆ ಅದನ್ನು ಸರಿಪಡಿಸುವುದು ಕಷ್ಟ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಇತ್ತೀಚೆಗೆ ಮದುವೆಯಾಗಿ ತಿಂಗಳಲ್ಲೇ, ವರ್ಷದಲ್ಲೇ ದಂಪತಿಗಳು ದೂರಗುತ್ತಾರೆ. ಹೊಂದಾಣಿಕೆ ಇಲ್ಲದೇ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಲ್ಲಿ ಸೋತು ಸಂಬಂಧಕ್ಕೆ ಗುಡ್‌ಬಾಯ್‌ ಹೇಳುತ್ತಾರೆ. ಆದರೆ ಸಂಬಂಧ ದೀರ್ಘಕಾಲ ಉಳಿಯಬೇಕು ಎಂದರೆ ಒಂದಿಷ್ಟು ನಿಯಮಗಳನ್ನು ಅನುಸರಿಸಬೇಕು. ಆ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬಹುದು ಎನ್ನುತ್ತಾರೆ ಅನುಭವಸ್ಥರು.

ಲೈಂಗಿಕ ವಿಷಯದಲ್ಲಿ ತೆರದ ಮನಸ್ಸಿನಿಂದಿರಿ

ಮದುವೆಯಾದ ಗಂಡ-ಹೆಂಡತಿಯ ನಡುವೆ ಎಲ್ಲಾ ವಿಷಯದಲ್ಲೂ ಪ್ರಮಾಣಿಕತೆ ಬಹಳ ಮುಖ್ಯ. ಲೈಂಗಿಕ ವಿಷಯಕ್ಕೆ ಬಂದಾಗ ಮುಕ್ತವಾಗಿ ಮಾತನಾಡಿಕೊಳ್ಳಬೇಕು. ದೇಹ ಒಂದಾದ ಮೇಲೆ ಮನಸ್ಸು ಇನ್ನಷ್ಟು ತೆರೆದುಕೊಳ್ಳಲು ಸಾಧ್ಯ. ಇಬ್ಬರಿಗೂ ಇಷ್ಟವಾಗುವ ರೀತಿ, ಬೇಕೆನ್ನಿಸಿದಷ್ಟು ಹೊತ್ತು, ಮನಸ್ಸಿಗೆ ಖುಷಿ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸಂಬಂಧದ ವೃದ್ಧಿಗೆ ಕಾರಣವಾಗುತ್ತದೆ. ಆ ಕಾರಣಕ್ಕೆ ಈ ವಿಷಯದಲ್ಲಿ ಮುಚ್ಚುಮರೆ ಮಾಡಬಾರದು.

ಸಮಯ ಮೀಸಲಿಡುವುದು

ಹಲವು ಭಾರತೀಯ ದಂಪತಿಗಳು ಮದುವೆಯಾಗಿ ಮಕ್ಕಳಾಗುವರೆಗೆ ಚೆನ್ನಾಗಿಯೇ ಇರುತ್ತಾರೆ. ಆದರೆ ಮಕ್ಕಳಾದ ಮೇಲೆ ಒಬ್ಬರ ಮೇಲೆ ಒಬ್ಬರು ಆಸಕ್ತಿ ಕಳೆದುಕೊಳ್ಳುತ್ತಾರೆ. ಆ ಕಾರಣಕ್ಕೆ ಮಕ್ಕಳಾದ ಮೇಲೂ ಒಬ್ಬರೂ ಜೊತೆಯಾಗಿ ಸಮಯ ಕಳೆಯಬೇಕು. ಡೇಟ್‌ ನೈಟ್‌, ಡಿನ್ನರ್‌ ಪಾರ್ಟಿಗಳಿಗೆ ಒಟ್ಟಾಗಿ ಹೋಗಬೇಕು.

ಮೌಲ್ಯಗಳಿಗೆ ಬೆಲೆ ಕೊಡಿ

ಗಂಡ ಹೆಂಡತಿ ಆದವರು ಒಬ್ಬರಿಗೊಬ್ಬರು ಪ್ರಾಶಸ್ತ್ಯ ನೀಡಬೇಕು. ಇಬ್ಬರ ನಡುವೆ ಏನು ಮಾಡಿದರೆ ಪ್ರೀತಿ ಹೆಚ್ಚಬಹುದು ಎಂಬುದನ್ನು ಅರಿತು ಅದಕ್ಕೆ ತಕ್ಕ ಹಾಗೆ ಇರಬೇಕು. ಭಾವನೆ, ಮೌಲ್ಯಗಳಿಗೆ ಬೆಲೆ ಕೊಡುವುದನ್ನು ಕಲಿಯಬೇಕು.

ವಾದಗಳು ಜಗಳಕ್ಕೆ ತಿರುಗದಿರಲಿ

ಸಂಸಾರ, ಗಂಡ-ಹೆಂಡತಿ ಎಂದ ಮೇಲೆ ವಾದ ವಿವಾದಗಳು ನಡೆಯುವುದು ಸಹಜ. ಹಾಗಂತ ವಾದವನ್ನೇ ಮುಂದುವರಿಸಿ ಜಗಳದ ಹಂತದವರೆಗೆ ತೆಗೆದುಕೊಂಡು ಹೋಗಬೇಡಿ. ಒಬ್ಬರು ವಾದ ಮಾಡುತ್ತಿದ್ದರೆ, ಅದಕ್ಕೆ ಪ್ರತಿವಾದಿಸಬೇಡಿ. ನಿಮ್ಮ ಸಂಗಾತಿ ಸಮಾಧಾನವಾಗುವರೆಗೂ ಕಾದು, ಆ ನಂತರ ಅವರಿಗೆ ಸರಿ, ತಪ್ಪು ಯಾವುದು ಅರ್ಥ ಮಾಡಿಸಿ.

ಸ್ನೇಹಿತರಾಗಿರಿ

ಸ್ನೇಹ ಸಂಬಂಧ ಎನ್ನುವುದು ಶಾಶ್ವತ ಹಾಗೂ ಅದು ನಿಸಾರ್ಥ ಸಂಬಂಧ. ಹಾಗಾಗಿ ಗಂಡ-ಹೆಂಡತಿ ದಂಪತಿಯಾಗುವ ಮೊದಲು ಸ್ನೇಹಿತರಾಗಬೇಕು. ಸ್ನೇಹದಲ್ಲಿನ ನಿಷ್ಕಲ್ಮಶ ಭಾವ ನಿಮ್ಮ ಪ್ರೇಮದಲ್ಲೂ ಇರಬೇಕು. ಇದರಿಂದ ಸಂಬಂಧ ಬಹಳ ಕಾಲದವರೆಗೆ ಹಸಿರಾಗಿರುತ್ತದೆ.

ಮೆಚ್ಚಿಸುವ ಮಾರ್ಗ ಕಂಡುಕೊಳ್ಳಿ

ದಾಂಪತ್ಯವೆಂದರೆ ಒಬ್ಬರನ್ನು ಒಬ್ಬರು ಮೆಚ್ಚಿಸಿಕೊಂಡು ಮುಂದೆ ಹೋಗುವುದು. ನಿಮ್ಮ ಸಂಗಾತಿ ನಿಮ್ಮಿಂದ ಮೆಚ್ಚುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಅವರು ಮೆಚ್ಚುವ ಕೆಲಸಗಳ ಮೇಲೆ ಹೆಚ್ಚು ಗಮನ ಹರಿಸಿ. ನಿಮ್ಮ ಸಂಗಾತಿಗೆ ಹೆಮ್ಮೆ ತರುವ ಕೆಲಸಗಳನ್ನು ಮಾಡಿ. ಇದರಿಂದ ಅವರಿಗೆ ನಿಮ್ಮ ಮೇಲೆ ಪ್ರೀತಿ ಜೊತೆಗೆ ಅಭಿಮಾನವೂ ಹೆಚ್ಚಾಗುತ್ತದೆ.

ಅನುದಿನವೂ ಪ್ರೀತಿಸಿ

ಮದುವೆಯಾದ ಬಹಳಷ್ಟು ಮಂದಿ ದಂಪತಿಗಳು ಮಾಡುವ ತಪ್ಪೆಂದರೆ ಆರಂಭದಲ್ಲಿ ಅತಿಯಾಗಿ ಪ್ರೀತಿಸುವುದು ನಂತರ ನಿಧಾನಕ್ಕೆ ಪ್ರೀತಿಯ ಪ್ರಮಾಣವನ್ನು ಕಡಿಮೆ ಮಾಡುವುದು. ಇದು ದೊಡ್ಡ ತಪ್ಪು. ಪ್ರೀತಿಯ ಭಾವ ಎಂದಿಗೂ ಸಮಾನವಾಗಿರಬೇಕು, ಮದುವೆಯಾಗಿ 40 ವರ್ಷ ಕಳೆದ ಮೇಲೂ ಮೊದಲ ದಿನದ ಪ್ರೀತಿ ಹೇಗೆ ಇತ್ತೋ ಹಾಗೆ ಇರುವಂತೆ ನೋಡಿಕೊಂಡಾಗ ದಾಂಪತ್ಯದಲ್ಲಿ ವಿರಸ ಮೂಡಲು ಸಾಧ್ಯವೇ ಇರುವುದಿಲ್ಲ.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ನೀಡಿ

ಸಂಬಂಧ ಯಾವುದೇ ಆಗಿರಲಿ, ಆ ಸಂಬಂಧದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಬಹಳ ಮುಖ್ಯ. ನಿಮ್ಮ ಸಂಗಾತಿ ಅವರ ಮನಸ್ಸಿಗೆ ಇಷ್ಟವಾಗುವ ರೀತಿ ಬಟ್ಟೆ ಧರಿಸುವುದು, ಮೇಕಪ್‌ ಮಾಡುವುದು, ಹೇರ್‌ಸ್ಟೈಲ್‌ ಮಾಡುವುದು, ಜಿಮ್‌ಗೆ ಹೋಗುವುದು ಇದನ್ನೆಲ್ಲಾ ವಿರೋಧಿಸಬೇಡಿ. ಅವರ ಅಭಿವ್ಯಕ್ತಿಗೆ ಗೌರವ ನೀಡುವುದನ್ನು ಕಲಿಯಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು