Happy Couple: ಸುಖ ಸಂಸಾರಕ್ಕೆ 100 ಪ್ರಶ್ನೆಗಳು; ನೀವಿಬ್ಬರೇ ಇದ್ದಾಗ ಖುಲ್ಲಂಖುಲ್ಲ ಈ ವಿಷಯ ಚರ್ಚಿಸಿ, ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳಿ
Jul 25, 2023 08:07 PM IST
ಸಂಗಾತಿ ಮನಸ್ಸು ಅರ್ಥ ಮಾಡಿಕೊಳ್ಳಲು ಟಿಪ್ಸ್ (ಪ್ರಾತಿನಿಧಿಕ ಚಿತ್ರ)
- Relationship Tips: ಲವ್ ಮ್ಯಾರೇಜ್ ಆದ್ರೂ ಸರಿ, ಅರೇಂಜ್ಡ್ ಮ್ಯಾರೇಜ್ ಆದ್ರೂ ಸರಿ. ಹೆಂಡತಿ-ಗಂಡ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು ಬದುಕೋದು ಮುಖ್ಯ. ಅವಳಿಗೆ ಅವನು ಒಗಟು, ಅವನಿಗೆ ಅವಳು ನಿಗೂಢ ಎನ್ನುವಂತಿದ್ದರೆ ಏನು ಸುಖ? ನೀವಿಬ್ಬರೂ ಈ 100 ಪ್ರಶ್ನೆ ಎದುರಿಗಿಟ್ಟುಕೊಂಡು ಉತ್ತರ ಹುಡುಕಿದರೆ ಇಬ್ಬರಿಗೂ ಇಬ್ಬರೂ ಅರ್ಥವಾಗ್ತೀರಿ. ಹ್ಯಾಪಿ ರೀಡಿಂಗ್.
Spark of Romance: ಮದುವೆ ಎಂಬ ಸುಂದರ ಸಂಬಂಧದಲ್ಲಿ ಪ್ರೀತಿ, ಪ್ರೇಮ, ಒಲುಮೆ… ಎಲ್ಲವೂ ಜೊತೆಯಾಗಿ ಸಾಗಬೇಕು. ಬಾಂಧವ್ಯದ ಪಯಣವು ಮುಚ್ಚುಮರೆ ಇಲ್ಲದೆ ಮುಂದುವರಿಯಬೇಕು. ದಂಪತಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತವಾದ ಮುಕ್ತ ಪ್ರಶ್ನೆಗಳು ಇಲ್ಲಿದೆ. ನಿಮ್ಮ ಸಂಗಾತಿಗೆ ಈ ಪ್ರಶ್ನೆಗಳನ್ನು ಕೇಳಿ ನೋಡಿ, ಈ ಅಂಶಗಳನ್ನು ನೀವೂ ನಿಮ್ಮ ಸಂಗಾತಿಗೆ ಅರ್ಥ ಮಾಡಿಸಲು ಪ್ರಯತ್ನಿಸಿ. ಈ ಪ್ರಶ್ನೋತ್ತರಗಳು ನಿಮ್ಮ ನಡುವಣ ಪ್ರೀತಿ ಮತ್ತು ಅನ್ಯೋನ್ಯತೆಯ ಭಾವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಗುನಗುತ್ತಾ ಇಂಥ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಮುಕ್ತವಾಗಿ ಕೇಳುವುದು, ಚರ್ಚಿಸುವುದು ಪರಸ್ಪರ ಇಷ್ಟಗಳನ್ನು, ಬೇಕು-ಬೇಡಗಳನ್ನು ಅರಿಯಲು ಸಹಾಯ ಮಾಡುತ್ತದೆ. ಇದು ಸಂಗಾತಿಗಳ ನಡುವೆ ಇರಬಹುದಾದ ಸಂವಹನ ಅಂತರ (ಕಮ್ಯುನಿಕೇಶನ್ ಗ್ಯಾಪ್) ದೂರ ಮಾಡಲು ಸಹಕಾರಿ.
ನೀವು ಈಗಷ್ಟೇ ಮದುವೆಯಾಗಿರುವ ಜಸ್ಟ್ ಮ್ಯಾರೀಡ್ ಕಪಲ್ ಇರಬಹುದು, ಅಥವಾ ಮದುವೆಯಾಗಿ ಕೆಲವು ವರ್ಷಗಳು ಕಳೆದ ಮಾಗಿದ ದಾಂಪತ್ಯ ನಿಮ್ಮದಾಗಿರಬಹುದು. ಆದರೆ ಈ ರೀತಿಯ ಕೆಲವು ಪ್ರಶ್ನೆಗಳನ್ನು ಪರಸ್ಪರ ಕೇಳಿಕೊಳ್ಳುವುದರಿಂದ ನಿಮ್ಮ ಸಂಬಂಧ ಸುಧಾರಿಸುತ್ತೆ. ಪರಸ್ಪರ ಪ್ರೀತಿ ಹೆಚ್ಚಾಗುತ್ತೆ. ಮದುವೆಯ ಬಂಧ ಬಿಗಿಯಾಗಲು, ಬದುಕಿನ ಖುಷಿ ಹೆಚ್ಚಾಗಲು ದಂಪತಿಗಳು ಒಬ್ಬರಿಗೊಬ್ಬರು ಕೇಳಬಹುದಾದ 100 ಪ್ರಶ್ನೆಗಳು ಹೀಗಿವೆ.
1. ಈ ಹಾಡಿನ ಮೊದಲ ಸಾಲು ನೀನು ಅಂದ್ಕೊಳ್ಳೋಣ. ಅದು ಯಾವ ಹಾಡಾಗಿರಬಹುದು?
2. ನಾವಿಬ್ಬರೂ ಒಟ್ಟಿಗೆ ಎಲ್ಲಾದ್ರೂ ದೂರ ಹೋಗೋಣ್ವಾ? ಹೇಳು ನೀನು ಎಲ್ಲಿಗೆ ಹೋಗಬೇಕು ಅಂದ್ಕೊಳ್ತಿದ್ದೀಯಾ? ಮತ್ತು ಯಾಕೆ?
3. ನಮ್ಮಿಬ್ಬರ ಸಂಬಂಧದಲ್ಲಿ ನೀನು ತುಂಬಾ ಮೆಚ್ಚುವಂಥ ವಿಷಯ ಯಾವುದು?
4. ನಮ್ಮ ವೈಯಕ್ತಿಕ ಗುರಿ ಹಾಗೂ ಕನಸಿನ ವಿಚಾರದಲ್ಲಿ ಒಬ್ಬರಿಗೊಬ್ಬರು ಯಾವ ರೀತಿ ಸಹಾಯ ಮಾಡಬಹುದು ಹಾಗೂ ಧೈರ್ಯ ನೀಡಬಹುದು?
5. ನಾವು ಡೇಟಿಂಗ್ ಮಾಡಲು ಅಥವಾ ಪ್ರೀತಿ ಮಾಡಲು ಆರಂಭಿಸಿದ ಕ್ಷಣದಿಂದ ಇಲ್ಲಿಯವರೆಗೆ ಮೆಲುಕು ಹಾಕಬಹುದಾದ ಒಂದು ಸುಂದರ ನೆನಪು ಯಾವುದು?
6. ನಾವಿಬ್ಬರೂ ಜೊತೆಯಾಗಿ ಮಾಡಬಹುದಾದ ಚಟುವಟಿಕೆ ಅಥವಾ ಹವ್ಯಾಸ ಯಾವುದು ಎಂದು ನಿನಗನ್ನಿಸುತ್ತದೆ?
7. ನಾವಿಬ್ಬರೂ ಜೊತೆಯಾಗಿ ಮುಂದುವರಿಸಲು ಬಯಸುವ ಕನಸು ಅಥವಾ ಅಡ್ವೆಂಚರ್ ಯಾವುದು?
8. ನಮ್ಮ ಸಂಬಂಧದಲ್ಲಿನ ಪ್ರೀತಿ ಹಾಗೂ ಮೆಚ್ಚುಗೆಯನ್ನು ಯಾವ ರೀತಿ ಅನುಭವಿಸಲು ನಿನಗಿಷ್ಟ?
9. ನಾನು ನಿನ್ನ ಮಾತಾಡ್ಸೋ ರೀತಿ ಇಷ್ಟ ಆಗ್ತಿದ್ಯಾ? ಬೇರೆ ಥರ ಕರೀಬೇಕು ಅನ್ಸತ್ತಾ? ಹೇಳು ಏನಂತ ಕರೀಲಿ ನಿನ್ನ. ಚಿನ್ನ ಅಂದ್ರೆ ಸಾಕಾ? ರೀ ಅಂದ್ರೂ ಓಕೆನಾ?
10. ನಮ್ಮ ಸಂಬಂಧದಲ್ಲಿ ಇನ್ನಷ್ಟು ಉತ್ಸಾಹ ತುಂಬಬೇಕು ಎಂದರೆ ಏನು ಮಾಡಬೇಕು?
11. ನಾವಿಬ್ಬರೂ ಜೊತೆಯಾಗಿ ಒತ್ತಡ ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವುದು ಹೇಗೆ?
12. ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ನಾವು ಒಟ್ಟಾಗಿ ನಿರ್ವಹಿಸಬಹುದಾದ ಗುರಿ ಹಾಗೂ ಯೋಜನೆಗಳು ಯಾವುವು ಎಂದು ನಿಂಗೆ ಅನ್ಸುತ್ತೆ?
13. ಇನ್ನೊಂದ್ ಜನ್ಮ ಅಂತ ಇದ್ರೆ ನಾನು-ನೀನು ಮತ್ತೆ ಒಂದಾಗಬೇಕು ಅನ್ಸತ್ತಾ ನಿನಗೆ?
14. ಭವಿಷ್ಯದ ದಿನಗಳ ಬಗ್ಗೆ ಹೇಳುವುದಾದರೆ, ನೀನು ನನ್ನಿಂದ ಏನನ್ನು ತಿಳಿದುಕೊಳ್ಳಲು ಬಯಸುತ್ತೀಯಾ?
15. ನಮ್ಮ ಡೇಟಿಂಗ್ ನೈಟ್ ಅನ್ನು ಬಹಳ ಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಯಾವ ರೀತಿ ಆಚರಿಸಬಹುದು?
16. ನೀನು ನನ್ನ ಬಗ್ಗೆ ಕಂಡ ಕನಸುಗಳಲ್ಲಿ ಬೆಸ್ಟ್ ಕನಸು ಯಾವುದು ಅಂತ ನಿಂಗೆ ಅನ್ಸುತ್ತೆ?
17. ನಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸಂತೋಷ ಹಾಗೂ ಮೋಜಿನಿಂದ ಕಳೆಯಲು ಏನು ಮಾಡಬಹುದು?
18. ನಮ್ಮ ಭವಿಷ್ಯದ ಜೀವನದ ಬಗೆಗಿನ ನಿನ್ನ ಕನಸು ಹಾಗೂ ಗುರಿಗಳೇನು?
19. ಖುಷಿಗೋಸ್ಕರ ಹೀಗೆ ಮಾಡಬಾರದಿತ್ತು ಅಂತ ಯಾವುದಾದರೂ ವಿಷಯ ನಿನ್ನನ್ನು ಕಾಡಿದ್ಯಾ? ಯಾವುದು ಅದು?
20. ನಮ್ಮ ಸಂಬಂಧದಲ್ಲಿ ಅನ್ಯೋನ್ಯತೆ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಹೇಗೆ ಆದ್ಯತೆ ನೀಡಬಹುದು?
21. ನಮ್ಮ ಸಂಬಂಧವನ್ನು ಇನ್ನಷ್ಟು ವಿಶೇಷವಾಗಿಸಲು ನಾವು ಪಾಲಿಸಬಹುದಾದ ಹೊಸ ಆಚರಣೆ ಹಾಗೂ ಸಂಪ್ರದಾಯಗಳೇನು?
22. ನನ್ನ ಸ್ವಭಾವದ ಯಾವ ಅಂಶವು ನಿನ್ನನ್ನು ವಿಸ್ಮಯಗೊಳಿಸಿದೆ?
23. ದಿನವನ್ನು ಮೋಜಿನಿಂದ ದಿನ ಕಳೆಯಲು ಏನು ಮಾಡಬಹುದು?
24. ನೀನು ನನ್ನೊಂದಿಗೆ ಮಾಡಲು ಬಯಸುವ ಸಾಹಸಮಯ ಚಟುವಟಿಕೆ ಯಾವುದು?
25. ನಮ್ಮ ಸಂಬಂಧಕ್ಕೆ ಥೀಮ್ ಸಾಂಗ್ ಅಂತಿದ್ದರೆ, ಅದು ಯಾವುದು?
26. ನಮಗೆ ಮಾತ್ರ ತಿಳಿದಿರುವ ಮೋಜಿನ ಪೆಟ್ ನೇಮ್ ಅಥವಾ ನಮಗೆ ಮಾತ್ರ ಅರ್ಥವಾಗುವಂತಹ ತಮಾಷೆಯ ಸಂಗತಿಯನ್ನು ಹಂಚಿಕೊಳ್ಳುವುದಾದರೆ?
27. ಸಮಯದೊಂದಿಗೆ ಹಿಂದೆ ಸರಿಯಲು ಸಾಧ್ಯವಾದರೆ, ನಿನಗೆ ಮರಳಿ ಯಾವ ವಯಸ್ಸು ಬೇಕು ಎಂದು ಅನ್ನಿಸುತ್ತೆ?
28. ನಿನ್ನ ಜೀವನದ ಅತಿ ದೊಡ್ಡ ವಿಷಾದ ಯಾವುದು?
29. ನಮ್ಮ ಮದುವೆ ದಿನ ಅಥವಾ ನಾನು ನಿಮಗೆ ಪ್ರೇಮ ನಿವೇದನೆ ಮಾಡಿದ ದಿನದ ಫನ್ನಿ ಅಥವಾ ನಿನ್ನಿಷ್ಟದ ನೆನಪು ಯಾವುದು?
30. ಯಾರಾದ್ರೂ ಸೆಲೆಬ್ರಿಟಿ ಕಪಲ್ ನಮ್ಮ ಬೆಸ್ಟ್ ಫ್ರೆಂಡ್ಸ್ ಆಗಿರಬೇಕು ಎಂದರೆ, ಯಾರಾಗಬೇಕು ಎಂಬುದು ನಿನ್ನ ಆಸೆ ಮತ್ತು ಯಾಕೆ?
31. ನಾವಿಬ್ಬರೂ ಜೊತೆಯಾಗಿ ಆಡಬಹುದಾದ ನಿನ್ನಿಷ್ಟದ ಬೋರ್ಡ್ ಗೇಮ್ ಅಥವಾ ಚಟುವಟಿಕೆ ಯಾವುದು?
32. ನಾವು ಆಯೋಜಿಸಬಹುದಾದ ಅತ್ಯಂತ ಅತಿರಂಜಿತ ಹಾಗೂ ಕಾಲ್ಪನಿಕ ಡೇಟ್ ನೈಟ್ ಬಗ್ಗೆ ನಿನ್ನ ವಿವರಣೆ?
33. ನಾವು ರೋಮ್-ಕಾಮ್ ಪಾತ್ರಧಾರಿಗಳಾಗಿದ್ದರೆ, ನಮ್ಮ ಪ್ರೇಮಕಥೆ ಯಾವ ರೀತಿ ಆರಂಭವಾಗುತ್ತದೆ?
34. ನಾವು ಒಟ್ಟಿಗೆ ಅನುಭವಿಸಿದ ಉಲ್ಲಾಸದ ʼವಾವ್ʼ ಎನ್ನಿಸುವ ಕ್ಷಣಗಳನ್ನು ಹಂಚಿಕೊಳ್ಳುವುದಾದರೆ?
35. ನಿನ್ನ ಜೀವನದಲ್ಲಿ ಅತ್ಯಂತ ಮುಜಗರಕ್ಕೆ ಒಳಗಾದ ಕ್ಷಣ ಯಾವುದು?
36. ನಾವು ಈಗ ಪ್ರವಾಸ ಆಯೋಜಿಸಿದರೆ ನೀನು ಎಲ್ಲಿಗೆ ಹೋಗಲು ಬಯಸುತ್ತೀಯಾ ಮತ್ತು ಯಾಕೆ?
37. ಸ್ನೇಹಿತರು ಹಾಗೂ ಕುಟುಂಬದ ಮುಂದೆ ನಾವಿಬ್ಬರೂ ಜೊತೆಯಾಗಿ ಮಾಡಬಹುದಾದ ತಮಾಷೆಯ ಸಂಗತಿ ಯಾವುದು?
38. ಸಿಲ್ಲಿ ಹಾಗೂ ಚಮತ್ಕಾರಿ ಸ್ಥಳಗಳನ್ನು ಒಳಗೊಂಡ ಡ್ರೀಮ್ ವೆಕೇಷನ್ ಯಾವುದು?
39. ನಿನ್ನನ್ನು ಪ್ರೀತಿಸುವ ಹಾಗೂ ಪ್ರೀತಿ ಭಾವನೆಗಳನ್ನು ಉಂಟು ಮಾಡುವ ಸರಳ ಸನ್ನೆಗಳು ಯಾವುವು?
40. ನಮ್ಮ ಸಂಬಂಧದಲ್ಲಿ ನಾವು ಗಮನಿಸಿದ, ಪಾಲಿಸಬೇಕು ಎನ್ನಿಸುವ ಗುಣಗಳು ಯಾವುವು? ನೀವು ನನಗೆ ಸಂಬಂಧದ ಬಗ್ಗೆ ಏನಾದರೂ ಸಲಹೆ ನೀಡಲು ಬಯಸುತ್ತೀಯಾ?
41. ನಿನಗೆ ಈಗಲೂ ನನ್ನ ಮೇಲೆ ಮುಂಚಿನಷ್ಟೇ ಪ್ರೀತಿ, ಒಲವು ಇದೆಯೇ?
42. ಈ ಹಿಂದೆ ನನ್ನೊಂದಿಗೆ ಕಳೆದ ಒಂದು ವಿಶೇಷ ಕ್ಷಣವನ್ನು ಮೆಲುಕು ಹಾಕುವುದಾದರೆ ಯಾವುದನ್ನು ಆಯ್ಕೆ ಮಾಡ್ಕೊತೀಯಾ?
43. ನನ್ನೊಂದಿಗೆ ಆತ್ಮೀಯವಾಗಿರುವ ಯಾವ ಕ್ಷಣ ಹೆಚ್ಚು ಆನಂದ ನೀಡುತ್ತದೆ?
44. ನಾವು ಪರಸ್ಪರ ನೀಡಬಹುದಾದ ಸಣ್ಣ ಸರ್ಪ್ರೈಸ್ ಅಥವಾ ಲವ್ ನೋಟ್ ಹೇಗಿರಬೇಕು?
45. ನಾವು ಮದುವೆಯಾದಾಗಿನಿಂದ ನಮ್ಮ ನಡುವಿನ ಪ್ರೀತಿ ಬಗ್ಗೆ ನಿನಗೆ ಏನನ್ನಿಸುತ್ತದೆ.
46. ನಾವು ಮಾಡಿಕೊಂಡಿರುವ ಪ್ರತಿಜ್ಞೆಗಳನ್ನು ನವೀಕರಿಸಬಹುದಾದರೆ ನೀನು ಏನನ್ನು ಸೇರಿಸಲು ಬಯಸುತ್ತೀಯಾ?
47. ಇದ್ದರೆ ಇವರಂತೆ ಇರಬೇಕು ಎಂದು ಯಾರನ್ನಾದರೂ ನೋಡಿ ಅನ್ನಿಸಿದ್ಯಾ?
48. ನಿನಗೆ ನನ್ನ ದೇಹದಲ್ಲಿ ಇಷ್ಟವಾಗುವ ಭಾಗ?
49. ನಾವು ಯಾವತ್ತೂ ಹಾಸಿಗೆಯಲ್ಲಿ ಪ್ರಯತ್ನಿಸದ ಹೊಸತನ್ನು ಪ್ರಯತ್ನಿಸಬೇಕು ಎಂದರೆ ನೀನು ಏನನ್ನು ಬಯಸುತ್ತೀಯಾ?
50. ನಮ್ಮ ಆರೋಗ್ಯಕರ ಸಂಬಂಧಕ್ಕೆ ನೀನು ಸೇರಿಸಲು ಬಯಸುವ ಒಂದು ವಿಷಯ?
51. ನಾವು ಒಂದಾಗುವ ಮೊದಲು ನೀನು ಯಾರೊಂದಿಗಾದರೂ ಸಂಧಿಸಿದ್ದೀಯಾ?
52. ನಿನ್ನ ಇಷ್ಟದ ರೊಮ್ಯಾಂಟಿಕ್ ಸಿನಿಮಾ ಯಾವುದು?
53. ಹಾಸಿಗೆಯಲ್ಲಿ ವಿಲಕ್ಷಣವಾದದ್ದನ್ನು ಪ್ರಯತ್ನಿಸುವ ಹಂಬಲವಿದೆಯೇ?
54. ನನ್ನ ಬಗ್ಗೆ ನೀನು ಅತಿಯಾಗಿ ಮೆಚ್ಚುವ ವಿಷಯ?
55. ನಿನ್ನ ಸಂತೋಷದ ಸ್ಥಳ ಯಾವುದು ಎಂದು ನಿನಗೆ ಅನ್ನಿಸುತ್ತದೆ?
56. ಒಂದು ವೇಳೆ ಹಣ ಒಂದು ಮುಖ್ಯವಲ್ಲ ಎನ್ನಿಸಿದರೆ, ನೀನು ಹೇಗೆ ಸಮಯ ಕಳೆಯಲು ಬಯಸುತ್ತೀಯಾ?
57. ನಿನ್ನ ಪ್ರಕಾರ ನಮ್ಮ ಸಂಬಂಧದ ಅತ್ಯಂತ ಸವಾಲಿನ ಅವಧಿ ಯಾವುದು?
58. ನಮ್ಮ ಸಂಬಂಧವನ್ನು ಬಲಪಡಿಸಲು ನಾವು ಪರಿಹರಿಸಬೇಕಾದ, ಈ ಹಿಂದೆ ಪರಿಹರಿಸಲು ಸಾಧ್ಯವಾದಗ ಸಮಸ್ಯೆಗಳು ಯಾವುವು?
59. ನಮ್ಮ ಸಂಬಂಧವನ್ನು ಗಟ್ಟಿಸಿಕೊಳ್ಳುವ ಜೊತೆಗೆ ವೃತ್ತಿಜೀವನವನ್ನು ಸಮತೋಲನ ಮಾಡಿಕೊಂಡು ಹೋಗುವುದು ಹೇಗೆ?
60. ನೀನು ಬದುಕಲು ಒಂದು ದಿನ ಮಾತ್ರ ಉಳಿದಿದೆ ಎಂದರೆ ಏನು ಮಾಡುತ್ತೀಯಾ?
61. ನಿನ್ನ ಬಾಲ್ಯದ ಸುಂದರ ನೆನಪುಗಳು ಯಾವುದು?
62. ನಿಂಗೆ ಯಾವತ್ತಾದ್ರೂ ಖ್ಯಾತಿ ಹೊಂದಬೇಕು ಅನ್ನಿಸಿದ್ಯಾ? ಅನ್ನಿಸಿದ್ರೆ ಯಾವ ವಿಷಯದಲ್ಲಿ ಖ್ಯಾತಿ ಹೊಂದಬೇಕು ಅನ್ನಿಸಿತ್ತು?
63. ನಿನ್ನ ಪ್ರಕಾರ ನೀನು ಮಾಡಬಹುದಾದ ಅತ್ಯಂತ ಬೋರ್ ಎನ್ನಿಸುವ ಸಂಗತಿ ಯಾವುದು?
64. ಕುಟುಂಬದಲ್ಲಿ ಅನುಸರಿಸುವ ನಿನ್ನಿಷ್ಟದ ಒಂದು ಸಂಪ್ರದಾಯ ಯಾವುದು?
65. ನಾವು ವಾಸಿಸುವ ಸ್ಥಳದಲ್ಲಿ ಒಂದು ವಿಷಯವನ್ನು ಬದಲಿಸಬಹುದು ಎಂದಾದರೆ, ನೀನು ಏನನ್ನು ಬದಲಿಸಲು ಬಯಸುತ್ತೀಯಾ?
66. ನಮ್ಮ ಸಂಬಂಧದಲ್ಲಿ ಯಾವುದು ನಿನ್ನನ್ನು ಬರಿದು ಮಾಡುತ್ತದೆ ಎನ್ನಿಸುತ್ತದೆ?
67. ನೀನು ಯಾವಾಗಲೂ ನೆನಪಿಸಿಕೊಳ್ಳುವ ನಿನ್ನ ಇಷ್ಟದ ಸ್ಕೂಲ್ ಟ್ರಿಪ್ ಅಥವಾ ಚಟುವಟಿಕೆ ಯಾವುದು?
68. ವಾರಾಂತ್ಯವನ್ನು ಆರಾಮಾಗಿ ಕಳೆಯುವ ಅವಕಾಶ ಸಿಕ್ಕರೆ, ನೀನು ಎಲ್ಲಿಗೆ ಹೋಗಲು ಬಯಸುತ್ತಿಯಾ?
69. ನಿನ್ನ ಪ್ರಕಾರ ನಿನ್ನನ್ನು ಕಾಡುವ ಅತಿ ದೊಡ್ಡ ಭಯ, ನಿನ್ನಲ್ಲಿರುವ ಸಾಮರ್ಥ್ಯ ಹಾಗೂ ನಿನ್ನ ದೌರ್ಬಲ್ಯ ಯಾವುದು?
70. ನಿನಗೆ ನನ್ನೊಂದಿಗೆ ಗಂಭೀರವಾದ ಸಂಬಂಧವನ್ನು ಹೊಂದಬಹುದು ಎಂದು ಯಾವಾಗ ಅನ್ನಿಸಿತ್ತು?
71. ನೀನು ನನ್ನನ್ನು ಮೊದಲ ಬಾರಿ ನೋಡಿದಾಗ ನಿನ್ನಲ್ಲಿ ಮೂಡಿದ ಭಾವನೆ?
72. ನಾವು ಡೇಟಿಂಗ್ ಮಾಡಲು ಆರಂಭಿಸಿದಾಗ ನಿನಗೆ ನನ್ನನ್ನು ಬಾಯ್ ಫ್ರೆಂಡ್ ಎಂದು ಒಪ್ಪಿಕೊಳ್ಳಲು ಸಾಧ್ಯವಾಯ್ತಾ?
73. ನಿನ್ನ ಇಷ್ಟದ ಹಗಲುಗನಸು ಯಾವುದು?
74. ನಿನ್ನಲ್ಲಿ ಚೈತನ್ಯ ಮೂಡಿಸುವ ಚಟುವಟಿಕೆ ಯಾವುದು?
75. ನಿನಗೆ ಹೆಚ್ಚು ಅಸಹ್ಯ, ಕಿರಿಕಿರಿ ಅನ್ನಿಸುವ ಒಂದು ವಿಷಯ ಯಾವುದು?
76. ಕ್ಯಾಲೆಂಡರ್‌ನಿಂದ ಒಂದು ತಿಂಗಳನ್ನು ತೆಗೆಯುವುದಾದರೆ ನೀನು ಯಾವುದನ್ನು ತೆಗೆಯುತ್ತೀಯಾ?
77. ನೀನು ಹಿಂದೆಂದೂ ಕಂಡಿರದ ಕ್ರೇಜಿಯೆಸ್ಟ್ ಕನಸು ಎಂದರೆ ಯಾವುದು?
78. ಏಲಿಯನ್ಸ್ ಬಗ್ಗೆ ನಿನಗೆ ನಂಬಿಕೆ ಇದೆಯೇ?
79. ಏನು ಎಂದೂ ತಿಂದಿರದ ವಿಚಿತ್ರ ತಿನಿಸು ಯಾವುದು?
80. ನೀನು ಬಾಲ್ಯದಲ್ಲಿದ್ದಾಗ ಮುಂದೆ ಏನಾಗಬೇಕು ಎಂದು ಬಯಸಿದ್ದೆ?
81. ನಿನ್ನ ಇಷ್ಟದ ನುಡಿಮುತ್ತು ಯಾವುದು?
82. ಯಾವುದೇ ವಿಷಯವನ್ನು ಭಿನ್ನವಾಗಿ ಮಾಡಲು ಬಯಸಿದರೆ ಅದನ್ನು ಹೇಗೆ ಪ್ರಯತ್ನಿಸುತ್ತೀಯಾ?
83. ನಮ್ಮ ಸಂಬಂಧದಲ್ಲಿ ನಗೆಪಾಟಲಿಗೆ ಒಳಗಾದ ಕ್ಷಣ ಯಾವುದು?
84. ಬೆಟ್ಟಗುಡ್ಡಗಳು ಹಾಗೂ ಬೀಚ್, ಇವುಗಳಲ್ಲಿ ನಿನಗೆ ಯಾವುದಿಷ್ಟ?
85. ನಮ್ಮ ಪ್ರೇಮಕಥೆ ಸಿನಿಮಾವಾದರೆ, ಅದರ ಅಂತ್ಯ ಹೇಗಿರಬೇಕು ಎಂದು ನೀನು ಬಯಸುತ್ತೀಯಾ?
86. ನೀನು ಬೇರೆಯವರಿಗೋಸ್ಕರ ಮಾಡಿದ ಬಹಳ ಆಪ್ತವಾದ ಕೆಲಸ ಯಾವುದು?
87. ನಾವಿಬ್ಬರು ಜತೆ ಕಳೆದ ದಿನಗಳಲ್ಲಿ ಒಂದು ದಿನವನ್ನು ಮೆಲುಕು ಹಾಕುವುದಾದರೆ ನೀನು ಯಾವುದನ್ನು ಆರಿಸಿಕೊಳ್ಳುತ್ತೀಯಾ ಮತ್ತು ಯಾಕೆ?
88. ನೀನು 5 ಖ್ಯಾತ ವ್ಯಕ್ತಿಗಳೊಂದಿಗೆ ಡಿನ್ನರ್ ಪಾರ್ಟಿ ಆಯೋಜಿಸುವುದಾದರೆ ಯಾರೊಂದಿಗೆ ಆಯೋಜಿಸುತ್ತೀಯಾ?
89. ನೀನು ಅಂದುಕೊಂಡಂತೆ ನಡೆದ ಒಂದು ಘಟನೆ ಅಥವಾ ವಿಷಯ?
90. ನೀನು ಬೇರೆಯವರಿಗೆ ನೀಡಲು ಬಯಸುವ ಒಂದು ಅತ್ಯುತ್ತಮ ಸಲಹೆ?
91? ನಿಂಗೆ ಸೆಲೆಬ್ರಿಟಿಯನ್ನು ಮದುವೆಯಾಗುವ ಅವಕಾಶ ಸಿಕ್ಕರೆ ಯಾರನ್ನೂ ಆಗುತ್ತೀಯಾ?
92. ನಿನ್ನ ಜೀವನವನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಸಾಧ್ಯವಾದರೇ, ಯಾರೊಂದಿಗೆ ಹಂಚಿಕೊಳ್ಳುವ ಬಯಕೆ ನಿನಗಿದೆ?
93. ನಿನ್ನ ಬಗ್ಗೆ ಯಾರಿಗೂ ತಿಳಿದಿರದ ಒಂದು ವಿಷಯ?
94. ನೀನು ಯಾವಾಗಲೂ ಋಣಿಯಾಗಿರುವ ಒಂದು ವಿಚಾರ ಯಾವುದು?
95. ನೀನು ಹಗಲಿನಲ್ಲೂ ನನ್ನ ಬಗ್ಗೆ ಏನನ್ನಾದರೂ ಯೋಚನೆ ಮಾಡ್ತೀಯಾ?
96. ಮಕ್ಕಳನ್ನು ಪಡೆಯಲು ಯಾವ ವಯಸ್ಸು ಸೂಕ್ತ ಎಂದು ನಿಂಗೆ ಅನ್ಸುತ್ತೆ?
97. ಮದುವೆಯ ಬಗ್ಗೆ ನೀನು ನಿನ್ನ ತಂದೆ, ತಾಯಿಯಿಂದ ಕಲಿತ ವಿಷಯ ಯಾವುದು?
98. ನೀನು ನಿವೃತ್ತ ಜೀವನವನ್ನು ಯಾವ ರೀತಿ ಕಳೆಯಲು ಬಯಸುತ್ತೀಯಾ?
99. ನೀನು ಮೊಮ್ಮಕ್ಕಳ ಬಗ್ಗೆ ಯೋಚಿಸಿದ್ದೀಯಾ?
100. ನೀನು ನಾನು ಒಂದಾದ ಆ ಆತ್ಮೀಯ ಕ್ಷಣದ ನಂತರ ನಿನ್ನ ತಲೆಯಲ್ಲಿ ಯಾವ ವಿಚಾರ ಓಡಿತ್ತು?