logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship-dating Trend: ಬದಲಾದ ಪ್ರಣಯದ ಪರಿಭಾಷೆ; ಹೀಗಿದೆ ನೋಡಿ 2023ರ ಡೇಟಿಂಗ್‌ ಟ್ರೆಂಡ್‌

Relationship-Dating Trend: ಬದಲಾದ ಪ್ರಣಯದ ಪರಿಭಾಷೆ; ಹೀಗಿದೆ ನೋಡಿ 2023ರ ಡೇಟಿಂಗ್‌ ಟ್ರೆಂಡ್‌

Reshma HT Kannada

Apr 11, 2023 04:20 PM IST

ಡೇಟಿಂಗ್‌ ಟ್ರೆಂಡ್‌

    • ಕೊರೊನಾ ಸಾಂಕ್ರಾಮಿಕವೂ ಸಕಲವನ್ನೂ ಬದಲಿಸಿತ್ತು, ಇದಕ್ಕೆ ಡೇಟಿಂಗ್‌ ಟ್ರೆಂಡ್ ಕೂಡ ಹೊರತಾಗಿಲ್ಲ. ಕಳೆದೆರಡು ವರ್ಷಗಳಿಂದ ಡೇಟಿಂಗ್‌ ಟ್ರೆಂಡ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ʼಬಂಬಲ್‌ ಡೇಟಿಂಗ್‌ ಆಪ್‌ʼ ಸಮೀಕ್ಷೆಯ ಪ್ರಕಾರ ಸದ್ಯ ಭಾರತದಲ್ಲಿ ಈ ಟ್ರೆಂಡ್‌ಗಳು ಹೆಚ್ಚು ಪ್ರಸ್ತುತದಲ್ಲಿವೆ. 
ಡೇಟಿಂಗ್‌ ಟ್ರೆಂಡ್‌
ಡೇಟಿಂಗ್‌ ಟ್ರೆಂಡ್‌

ಕೋವಿಡ್‌ ಕಾಲಘಟ್ಟ ಮನುಷ್ಯನ ಜೀವನವನ್ನು ಸಾಕಷ್ಟು ಬದಲಿಸಿತ್ತು. ಇದು ದುಃಖ, ನೋವು ಹಾಗೂ ಆತಂಕದ ಛಾಯೆಯನ್ನು ಹರಡುವ ಜೊತೆಗೆ ಸಂಬಂಧಗಳ ಮೌಲ್ಯವನ್ನೂ ಜನರಿಗೆ ಅರ್ಥ ಮಾಡಿಸಿತ್ತು.

ಟ್ರೆಂಡಿಂಗ್​ ಸುದ್ದಿ

Biscuit Bonda: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಬಿಸಿಯಾಗಿ ಮಾಡಿಕೊಡಿ ಬಿಸ್ಕತ್‌ ಬೊಂಡಾ, ಇಲ್ಲಿದೆ ಸ್ಪೆಷಲ್‌ ರೆಸಿಪಿ

Summer Tips: ಮನಸ್ಥಿತಿ ಸುಧಾರಣೆಯಿಂದ ದೇಹಕ್ಕೆ ಚೈತನ್ಯ ಒದಗಿಸುವವರೆಗೆ; ಬೇಸಿಗೆಯಲ್ಲಿ ಐಸ್‌ಕ್ರೀಮ್ ತಿಂದರೆ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

Heart Health: ತಾಪಮಾನ ಏರಿಕೆಯ ನಡುವೆ ಹೆಚ್ಚುತ್ತಿದೆ ಹೃದಯಾಘಾತ; ಈ ಅಂಶಗಳನ್ನು ಗಮನಿಸಿ, ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿಯಿರಿ

Personality Test: ಕಾಫಿ ಕಪ್‌, ಗೂಬೆ ಎರಡರಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಸುತ್ತೆ ಈ ಚಿತ್ರ

ಇನ್ನು, ಡೇಟಿಂಗ್‌ ವಿಚಾರಕ್ಕೆ ಬರುವುದಾದರೆ ಯಾರ ಜೊತೆ ಡೇಟ್‌ ಮಾಡಬೇಕು, ಡೇಟಿಂಗ್‌ನಲ್ಲಿ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆಲ್ಲಾ ಸಾಕಷ್ಟು ಯೋಚಿಸಿ ಮುಂದುವರಿಯಲು ಕೊರೊನಾ ಕಾಲಘಟ್ಟ ಅವಕಾಶ ಮಾಡಿಕೊಟ್ಟಿತ್ತು.

ಬಂಬಲ್‌ ನಡೆಸಿದ ಸಮೀಕ್ಷೆಯ ಪ್ರಕಾರ 2023ರಲ್ಲಿ ಶೇ 81ರಷ್ಟು ಭಾರತೀಯರು ಡೇಟಿಂಗ್‌ ಬಗ್ಗೆ ಧನಾತ್ಮಕ ಮುನ್ನೋಟವನ್ನು ಹೊಂದಿದ್ದಾರೆ. 2023ರಲ್ಲಿ ಡ್ರೈ ಡೇಟಿಂಗ್‌ನಿಂದ ಹಿಡಿದು ಓಪನ್‌ ಕಾಸ್ಟಿಂಗ್‌ವರೆಗೆ ಭಾರತೀಯ ಪ್ರೇಮಿಗಳು ಅನುಸರಿಸುತ್ತಿರುವ ಡೇಟಿಂಗ್‌ ಟ್ರೆಂಡ್‌ ಹೀಗಿದೆ ನೋಡಿ.

ಡ್ರೈ ಡೇಟಿಂಗ್

ಕೊರೊನಾ ನಂತರ ಡ್ರೈ ಡೇಟಿಂಗ್‌ ಮೇಲೆ ಒಲವು ಹೆಚ್ಚುತ್ತಿದೆ. ಡ್ರೈ ಡೇಟಿಂಗ್‌ ಎಂದರೆ ಡೇಟಿಂಗ್‌ ಅವಧಿಯಲ್ಲಿ ಮದ್ಯಪಾನ ಮಾಡದೇ ಇರುವುದು. ಸಂಶೋಧನೆಯ ಪ್ರಕಾರ ಸಾಂಕ್ರಾಮಿಕ ರೋಗ ಆವರಿಸಿದ ನಂತರ ಶೇ 32ರಷ್ಟು ಮಂದಿ ಅವಿವಾಹಿತರಲ್ಲಿ ಕುಡಿತದ ಪ್ರಮಾಣದ ಕಡಿಮೆಯಾಗಿದೆ. ಅಲ್ಲದೆ ಡೇಟಿಂಗ್‌ ಸಮಯದಲ್ಲಿ ಕುಡಿಯದೇ ಇರುವವರ ಸಂಖ್ಯೆಯೂ ಹೆಚ್ಚಿದೆ. 'ಡ್ರೈ ಡೇಟಿಂಗ್' ಪ್ರವೃತ್ತಿಯನ್ನುಆಯ್ಕೆ ಮಾಡಿಕೊಳ್ಳುವಲ್ಲಿ ʼZʼ ಜನರೇಷನ್‌ (1995-2005 ರಲ್ಲಿ ಜನಿಸಿರುವವರು) ಮುಂದಿದೆ.

ಓಪನ್ ಕಾಸ್ಟಿಂಗ್

ಕೊರೊನಾಕ್ಕೂ ಮೊದಲು ದೇಹಸೌಂದರ್ಯವನ್ನು ಪ್ರೀತಿಸುತ್ತಿದ್ದರು ಮತ್ತು ನಮ್ಮಂತೆಯೇ ಸುಂದರವಾದ ದೇಹಸಿರಿ ಹೊಂದಿರುವವರನ್ನು ಡೇಟ್‌ ಮಾಡಬೇಕು ಎಂದೆಲ್ಲಾ ಕನಸು ಕಾಣುವವರಿದ್ದರು. ಆದರೆ ಈಗ ಆ ಮನೋಭಾವ ಬದಲಾಗಿದೆ. ಎತ್ತರ, ಕಪ್ಪು, ತೆಳ್ಳಗೆ, ಬೆಳ್ಳಗೆ ಇಂತಹ ದೈಹಿಕ ಸೌಂದರ್ಯವನ್ನು ಅಳೆದು ಪ್ರೀತಿಸುವ ಕಾಲ ಈಗಿಲ್ಲ. ಟೈಪ್‌ ಕಾಸ್ಟಿಂಗ್‌ಗೆ ವ್ಯತಿರಿಕ್ತವಾಗಿ ಓಪನ್‌ ಕಾಸ್ಟಿಂಗ್‌ ಚಾಲ್ತಿಗೆ ಬಂದಿದೆ. ಈ ಅಧ್ಯಯನದ ಪ್ರಕಾರ ಮೂವರಲ್ಲಿ ಒಬ್ಬರು ತಮಗಿಂತ ದೇಹಸಿರಿಯಲ್ಲಿ ಭಿನ್ನವಾಗಿರುವವರನ್ನು ಡೇಟಿಂಗ್‌ ಮಾಡಲು ಸಿದ್ಧರಿದ್ದಾರೆ. ಹಾಗೆ ನಾಲ್ವರಲ್ಲಿ ಒಬ್ಬರು ತಾವು ಡೇಟಿಂಗ್‌ ಮಾಡುತ್ತಿರುವ ಸಂಗಾತಿಯ ಬಗ್ಗೆ ಜನ ಏನು ಅಂದುಕೊಳ್ಳಬಹುದು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಭೌತಿಕ ಹೊಂದಾಣಿಕೆಗಿಂತ ಭಾವನಾತ್ಮಕ ಪ್ರಬುದ್ಧತೆಗೆ ಹೆಚ್ಚು ಗಮನಹರಿಸುತ್ತಿದ್ದಾರೆ.

ಚೌಕಟ್ಟಿನಲ್ಲಿ ಬದುಕುವುದು

ಕಚೇರಿಗೆ ಮರಳುವುದು, ಕೊರೊನಾ ನಂತರ ಬದಲಾದ ಜೀವನಶೈಲಿ, ಬಿಡುವಿಲ್ಲದ ಸಾಮಾಜಿಕ ವೇಳಾಪಟ್ಟಿಗಳ ನಡುವೆ ಬಹುಪಾಲು ಜನರು ಒತ್ತಡದಲ್ಲಿ ಬದುಕುತ್ತಿದ್ದಾರೆ. ಇದು ಅವರ ವೈಯಕ್ತಿಕ ಬದುಕಿಗೆ ಸೀಮಿತ ಚೌಕಟ್ಟು ಹಾಕಿಕೊಳ್ಳುವಂತೆ ಮಾಡಿದೆ. ಕಳೆದೊಂದು ವರ್ಷದಲ್ಲಿ ಶೇ 52ರಷ್ಟು ಜನರು ಡೇಟಿಂಗ್‌ ವಿಷಯದಲ್ಲಿ ಬೌಂಡರಿ ಹಾಕಿಕೊಂಡಿದ್ದಾರೆ. ಅದರಲ್ಲಿ ಶೇ 63ರಷ್ಟು ಜನ ತಮ್ಮ ಭಾವನಾತ್ಮಕ ಅವಶ್ಯಕತೆ ಹಾಗೂ ಚೌಕಟ್ಟುಗಳ ಬಗ್ಗೆ ಸ್ವಷ್ಟತೆ ಹೊಂದಿದ್ದರೆ, ಶೇ 59ರಷ್ಟು ಜನ ತಮ್ಮನ್ನು ಹೇಗೆ ಚಿಂತನಶೀಲರನ್ನಾಗಿ ಬಿಂಬಿಸಿಕೊಳ್ಳಬೇಕು ಎಂಬ ಬಗ್ಗೆ ಗಮನ ಹರಿಸಿದ್ದಾರೆ.

ಪ್ರೀತಿ ಹಾಗೂ ಜೀವನದ ಸಮತೋಲನ

ಕೊರೊನಾ ನಂತರ ವೃತ್ತಿ ಹಾಗೂ ಸಂಗಾತಿ ಇಬ್ಬರ ನಡುವೆ ಸಮತೋಲನ ಸಾಧಿಸುವುದನ್ನು ಜನರು ಕಂಡುಕೊಂಡಿದ್ದಾರೆ. ಹಿಂದಿನಂತೆ ಹೆಚ್ಚು ಸಮಯ ಕೆಲಸದಲ್ಲಿ ಕಳೆಯುವುದು, ಸಂಗಾತಿಯನ್ನು ಕಡೆಗಣಿಸುವುದು, ಸಂಗಾತಿಗಾಗಿ ಕೆಲಸವನ್ನು ಕಡೆಗಣಿಸುವುದು ಇಂತಹ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲ್ಲದೆ ಈ ಎರಡಕ್ಕೂ ಸಮಾನ ನ್ಯಾಯ ಒದಗಿಸುವತ್ತ ಜನರು ಯೋಚಿಸುತ್ತಿದ್ದಾರೆ.

ಅದ್ಭುತ ಪ್ರೇಮ

ಬಂಬಲ್‌ ಸಂಸ್ಥೆಯ ಅಧ್ಯಯನದ ಪ್ರಕಾರ ಹಲವರು ಪಟ್ಟಣದಿಂದ ದೂರವಿರಲು ಹಾಗೂ ಪಟ್ಟಣದಿಂದ ಹೊರಗಿನ ಸಂಬಂಧವನ್ನು ಹೊಂದಲು ಆಸಕ್ತಿ ತೋರುತ್ತಿದ್ದಾರೆ. ಇದರೊಂದಿಗೆ ಪ್ರೀತಿ, ಪ್ರೇಮ, ಪ್ರಯಣದ ವಿಷಯಗಳಿಗೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಪ್ರೇಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಬಗೆಗಿನ ಯೋಚನೆಯೂ ಮಿಲೇನಿಯಲ್‌ ಮಂದಿಯಲ್ಲಿ ಕಾಣಬಹುದಾಗಿದೆ.

ಹೊಸ ಸಂಬಂಧದ ಮೇಲೆ ಒಲವು

ಕೊರೊನಾ ನಂತರ ಹೊಸ ಪ್ರೇಮ ಅಧ್ಯಾಯಕ್ಕಾಗಿ ಹಾತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮೂವರಲ್ಲಿ ಒಬ್ಬರು ಮದುವೆ ಅಥವಾ ಮದುವೆಯಂತಹ ದೀರ್ಘ ಸಂಬಂಧದ ಬಂಧದಿಂದ ಹೊರ ಬರಲು ಬಯಸುವವರಿದ್ದಾರೆ. ಈ ಮನೋಭಾವ ಭಾರತದಲ್ಲಿ ಕೊಂಚ ಹೆಚ್ಚೇ ಇದೆ. ತಮ್ಮ ಪ್ರೇಮ ಜೀವನದ ಎರಡನೇ ಅಧ್ಯಾಯ ಆರಂಭಿಸುವವರಲ್ಲಿ ಶೇ 42 ಭಾರತೀಯರಿದ್ದಾರೆ. ಅಲ್ಲದೆ ಇವರು ಮೊದಲ ಬಾರಿಗೆ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾ, ಹೊಸ ಡೇಟಿಂಗ್ ಪದಗಳ ಜೊತೆಗೆ ಡೇಟಿಂಗ್‌ನ ಹೊಸ ಭಾಷೆ ಮತ್ತು ಕೋಡ್‌ಗಳನ್ನು ಕಲಿಯುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು