logo
ಕನ್ನಡ ಸುದ್ದಿ  /  ಜೀವನಶೈಲಿ  /  Heart Health: ತಾಪಮಾನ ಏರಿಕೆಯ ನಡುವೆ ಹೆಚ್ಚುತ್ತಿದೆ ಹೃದಯಾಘಾತ; ಈ ಅಂಶಗಳನ್ನು ಗಮನಿಸಿ, ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿಯಿರಿ

Heart Health: ತಾಪಮಾನ ಏರಿಕೆಯ ನಡುವೆ ಹೆಚ್ಚುತ್ತಿದೆ ಹೃದಯಾಘಾತ; ಈ ಅಂಶಗಳನ್ನು ಗಮನಿಸಿ, ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿಯಿರಿ

Reshma HT Kannada

May 07, 2024 03:20 PM IST

ಈ ಅಂಶಗಳನ್ನು ಗಮನಿಸಿ, ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿಯಿರಿ

    • ಭಾರತದಲ್ಲಿ ತಾಪಮಾನ ಏರಿಕೆಯ ನಡುವೆ ಹೃದಯಾಘಾತದ ಪ್ರಮಾಣವೂ ಹೆಚ್ಚುತ್ತಿದೆ. ಪ್ರತಿದಿನ ಹೃದಯಾಘಾತದಿಂದ ಹಲವರು ಸಾವನ್ನಪ್ಪುತ್ತಿದ್ದಾರೆ. ಹಾಗಾದರೆ ನಮ್ಮ ಹೃದಯ ಆರೋಗ್ಯವಾಗಿದ್ಯಾ, ಇಲ್ವಾ ಎಂದು ತಿಳಿದುಕೊಳ್ಳುವುದು ಹೇಗೆ? ಈ ವಿಧಾನಗಳನ್ನು ಪರಿಶೀಲಿಸಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಈ ಅಂಶಗಳನ್ನು ಗಮನಿಸಿ, ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿಯಿರಿ
ಈ ಅಂಶಗಳನ್ನು ಗಮನಿಸಿ, ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿಯಿರಿ

ಭಾರತದಲ್ಲಿ ದಿನೇ ದಿನೇ ಉಷ್ಣಾಂಶ ಏರಿಕೆಯಾಗುತ್ತಿದೆ. ಅತಿಯಾದ ತಾಪಮಾನವು ಇಲ್ಲದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಬಿಸಿಲಿನ ನಡುವೆ ಹೃದಯಾಘಾತದ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೃದ್ರೋಗದ ಬಗ್ಗೆ ಯಾವುದೇ ಸೂಚನೆ ಇಲ್ಲದವರಲ್ಲೂ ಸಮಸ್ಯೆಗಳು ಉಲ್ಬಣವಾಗುತ್ತಿದೆ. ಇಸಿಜಿ, ಎಕೋ, ಟಿಎಂಟಿ ಫಲಿತಾಂಶಗಳು ಕಳವಳವನ್ನು ಹೆಚ್ಚಿಸಿದೆ. ಹೃದಯಾಘಾತದ ಪ್ರಮಾಣ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಥ್ರೆಡ್‌ಮಿಲ್‌ ಮೇಲೆ ನಡೆಯುವವರು, ನೃತ್ಯ ಮಾಡುವವರು, ಆಟೋಟಗಳು ಮತ್ತು ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದಾಗಲೇ ಜನರು ಕುಸಿದು ಬೀಳುವುದನ್ನು ಸೆರೆ ಹಿಡಿದಿರುವ ವಿಡಿಯೊಗಳನ್ನು ನಾವು ನೋಡಿದ್ದೇವೆ. ಅಲ್ಲದೇ ಇಂತಹವನ್ನು ನೋಡಿದಾಗ ಆತಂಕ ಹೆಚ್ಚುವುದು ಸಹಜ. ಇದರೊಂದಿಗೆ ಕರ್ನಾಟಕದಲ್ಲೂ ದಿನೇ ದಿನೇ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಅಕಾಲಿಕ ಹೃದಯಾಘಾತ ಮತ್ತು ಹೃದಯ ಸ್ತಂಭನಗಳ ಸ್ಥಿತಿ ಉಲ್ಬಣವಾಗಿದೆ. ಭಾರತದಲ್ಲಿ ಹೆಚ್ಚು ಧೂಮಪಾನಿಗಳು ಹಾಗೂ ನಿರಂತರ ಒತ್ತಡದಲ್ಲಿ ಬದುಕುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರಪಂಚದಾದ್ಯಂತ ಹೃದ್ರೋಗವು ಅತಿ ಹೆಚ್ಚು ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಗ್ರಸ್ಥಾನ ಪಡೆದಿದೆ. ವಿಶ್ವದಾದ್ಯಂತ ವರ್ಷಕ್ಕೆ 1.79 ಕೋಟಿ ಜನರು ಅಂದರೆ ಪ್ರತಿದಿನ 50,000 ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಶೇ 80-90 ರಷ್ಟು ರೋಗಿಗಳು ಹೃದಯಾಘಾತದ ನಂತರ ಆಸ್ಪತ್ರೆ ತಲುಪುತ್ತಾರೆ. ಅಂದರೆ ಅವರಲ್ಲಿ ಯಾವುದೇ ಹೃದ್ರೋಗದ ಲಕ್ಷಣಗಳು ಮೊದಲೇ ಕಾಣಿಸಿರುವುದಿಲ್ಲ. ಭಾರತವು ಹೃದ್ರೋಗದಲ್ಲಿ ಮುಂಚೂಣಿಯಲ್ಲಿದೆ. ಶೇ40 ರಿಂದ 50 ರಷ್ಟು ಪ್ಲೇಕ್‌ ತಡೆಗಟ್ಟುವಿಕೆಯನ್ನು ಹೊಂದಿದ್ದು ಪ್ಲೇಕ್‌ ಛಿದ್ರವು ಹಠಾತ್‌ ಹೃದಯಾಘಾತಕ್ಕೆ ಕಾರಣವಾಗುವವರೆಗೂ ಗಮನಕ್ಕೆ ಬರುವುದಿಲ್ಲ. ಕೆಲವರಿಗೆ ಯಾವುದೇ ರೋಗಲಕ್ಷಣಗಳಿಲ್ಲದೇ ಶೇ 90 ರಿಂದ 95ರವರೆಗೆ ಅಪಧಮನಿಯ ತಡೆಯನ್ನು ಹೊಂದಿರುತ್ತಾರೆ.

ಹೃದಯ ಆರೋಗ್ಯವಾಗಿದ್ಯಾ ನೋಡಿಕೊಳ್ಳೋದು ಹೇಗೆ?

ಹೃದ್ರೋಗ ಹಾಗೂ ಹೃದಯಾಘಾತದ ಪ್ರಮಾಣ ಗ್ರಮನಾರ್ಹ ರೀತಿಯಲ್ಲಿ ಏರಿಕೆಯಾಗುತ್ತಿರುವುದು ಹಲವರಲ್ಲಿ ಈ ಪ್ರಶ್ನೆ ಮೂಡುವಂತೆ ಮಾಡಿದೆ.

ಕೆಲವು ಹೃದಯದ ಆರೋಗ್ಯ ಸೂಚಕಗಳಿವು

ರಕ್ತದೊತ್ತಡ (ಬ್ಲಡ್‌ ಪ್ರೆಶರ್‌): ರಕ್ತದೊತ್ತಡದ ಸಾಮಾನ್ಯ ಶ್ರೇಣಿಯು 120/80 mmHg ಗಿಂತ ಕಡಿಮೆಯಿರುತ್ತದೆ.

ಕೊಲೆಸ್ಟ್ರಾಲ್‌ ಮಟ್ಟ: ಎಲ್‌ಡಿಎಲ್‌ (ಕೆಟ್ಟ) ಕೊಲೆಸ್ಟ್ರಾಲ್‌ 100 mg/dL ಗಿಂತ ಕಡಿಮೆಯಿರಬೇಕು. HDL (ಉತ್ತಮ) ಕೊಲೆಸ್ಟ್ರಾಲ್ ಪುರುಷರಿಗೆ 40 mg/dL ಮತ್ತು ಮಹಿಳೆಯರಿಗೆ 50 mg/dL ಗಿಂತ ಹೆಚ್ಚಿರಬೇಕು. ಒಟ್ಟು ಕೊಲೆಸ್ಟ್ರಾಲ್ 200 mg/dL ಗಿಂತ ಕಡಿಮೆಯಿರಬೇಕು.

ಹೃದಯ ಬಡಿತ: ಒಬ್ಬರ ಹೃದಯ ಬಡಿತವು ನಿಮಿಷಕ್ಕೆ 60 ಮತ್ತು 100 ಬಡಿತಗಳ ನಡುವೆ ವಿಶ್ರಾಂತಿ ಪಡೆಯುವುದು ಆರೋಗ್ಯಕರ ಎಂದು ಭಾವಿಸಲಾಗಿದೆ.

ಬಾಡಿ ಮಾಸ್‌ ಇಂಡೆಕ್ಸ್‌ (BMI): 18.5 ಮತ್ತು 24.9 ರ ನಡುವಿನ BMI ಹೊಂದಿರುವವರು ಹೃದ್ರೋಗದ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ.

ದೈಹಿಕ ಚಟುವಟಿಕೆ: ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆಹಾರ: ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಲೀನ್‌ ಮೀಟ್‌ ಮತ್ತು ಆರೋಗ್ಯಕರ ಕೊಬ್ಬಿನಿಂದ ಕೂಡಿದ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಹೃದಯದ ಆರೋಗ್ಯವನ್ನು ಬೆಂಬಲಿಸಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟ: ಉಪವಾಸದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯವಾಗಿ 100 mg/dL ಗಿಂತ ಕಡಿಮೆಯಿರಬೇಕು.

ತಂಬಾಕು ಬಳಕೆ: ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳಿಂದ ದೂರವಿದ್ದಷ್ಟು ಹೃದಯದ ಆರೋಗ್ಯಕ್ಕೆ ಉತ್ತಮ.

ಒತ್ತಡದ ಮಟ್ಟ: ವ್ಯಾಯಾಮ, ಸಾಮಾಜಿಕ ಬೆಂಬಲ ಹಾಗೂ ವಿಶ್ರಾಂತಿ ತಂತ್ರಗಳೊಂದಿಗೆ ಒತ್ತಡವನ್ನು ಕಡಿಮೆ ಮಾಡಿಕೊಂಡು ಹೃದಯವನ್ನು ಆರೋಗ್ಯಕರವಾಗಿಡಬಹುದು.

ಕೌಟುಂಬಿಕ ಇತಿಹಾಸ: ಯಾವುದೇ ಅನುವಂಶಿಕ ಅಂಶಗಳ ಬಗ್ಗೆ ತಿಳಿದಿರುವುದು ಹಾಗೂ ಅವುಗಳ ಆರೋಗ್ಯ ರಕ್ಷಣೆ ಬಹಳ ಮುಖ್ಯ. ಕೌಟುಂಬಿಕ ಇತಿಹಾಸ ಇರುವವರಲ್ಲಿ ಹೃದ್ರೋಗದ ಅಪಾಯ ಹೆಚ್ಚು.

ನಿಮ್ಮಲ್ಲಿ ಈ ಅಂಶಗಳಿದ್ದರೆ ವೈದ್ಯರನ್ನು ಭೇಟಿ ಮಾಡಿ

* ಹೃದ್ರೋಗದ ಸಮಸ್ಯೆ ಇರುವ ಕೌಟುಂಬಿಕ ಹಿನ್ನೆಲೆ

* ಕಾರ್ಡಿಯಾಕ್‌ ರಿಸ್ಕ್‌ ಫ್ಯಾಕ್ಟರ್‌ (ಧೂಮಪಾನ, ಮಧುಮೇಹ, ರಕ್ತದೊತ್ತಡ, ಕೌಟುಂಬಿಕ ಇತಿಹಾಸ, ಲಿಪಿಡ್‌ ಪ್ರೊಫೈಲ್‌, ಜಡಜೀವನಶೈಲಿ ಹಾಗೂ ಇತರೆ).

* ರಕ್ತಪರೀಕ್ಷೆ

* ಇಸಿಜಿ, ಎಕೋ, ಟಿಎಂಟಿಯಂತಹ ಪರೀಕ್ಷೆಗಳು ಹೃದಯದ ಆರೋಗ್ಯವನ್ನು ಪರೀಕ್ಷಿಸುವ ವೈದ್ಯಕೀಯ ವಿಧಾನಗಳಾಗಿವೆ.

ಹೃದಯವನ್ನು ಕಾಪಾಡಿಕೊಳ್ಳುವ ಇತರ ಮಾರ್ಗಗಳು

* ಧೂಮಪಾನ ತ್ಯಜಿಸುವುದು

* ದೈಹಿಕ ಚಟುವಟಿಕೆಗೆ ಒತ್ತು ನೀಡುವುದು

* ಒತ್ತಡ ನಿಯಂತ್ರಣ ತಂತ್ರಗಳನ್ನು ಅನುಸರಿಸುವುದು

* ಪ್ರತಿನಿತ್ಯ ವಾಕ್‌ ಮಾಡುವುದು

* ಯೋಗಾಭ್ಯಾಸ

* ಸಮತೋಲಿತ ಆಹಾರ ಸೇವನೆ

* ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸುವುದು

ಈ ಎಲ್ಲಾ ತಂತ್ರಗಳನ್ನು ಅನುಸರಿಸುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು