logo
ಕನ್ನಡ ಸುದ್ದಿ  /  Lifestyle  /  Signs Of Diabetes What To Do If You Have High Diabetes

Signs of High Diabetes: ದೇಹದಲ್ಲಿನ ಈ ಬದಲಾವಣೆಗಳೇ ಸಕ್ಕರೆ ಕಾಯಿಲೆಯ ಲಕ್ಷಣಗಳು... ನೀವಿನ್ನೂ ಗಮನಿಸಿಲ್ಲವೆ..

HT Kannada Desk HT Kannada

Sep 04, 2022 06:43 PM IST

ದೇಹದಲ್ಲಿನ ಈ ಬದಲಾವಣೆಗಳೇ ಸಕ್ಕರೆ ಕಾಯಿಲೆಯ ಲಕ್ಷಣಗಳು... ನೀವಿನ್ನೂ ಗಮನಿಸಿಲ್ಲವೆ..

    • ಇತ್ತೀಚಿನ ದಿನಗಳಲ್ಲಿ ಮಧುಮೇಹವು ಸಾಮಾನ್ಯ ಸಮಸ್ಯೆಯಲ್ಲೊಂದಾಗಿದೆ. ಆದಾಗ್ಯೂ, ನಿರ್ಲಕ್ಷಿಸಿದರೆ ಸಮಸ್ಯೆ ಹೆಚ್ಚಾಗಲಿದೆ ಹೊರತು ಕಡಿಮೆ ಆಗದು. ಹಾಗಾದರೆ, ಈ ಸಕ್ಕರೆ ಕಾಯಿಲೆಯ ಲಕ್ಷಣಗಳೇನು? ಇದನ್ನು ಗುರುತಿಸುವುದು ಹೇಗೆ? ಈ ಬಗ್ಗೆ ಪೌಷ್ಟಿಕತಜ್ಞ ತಜ್ಞ ಕರಿಷ್ಮಾ ಶಾ ಅಧಿಕ ಸಕ್ಕರೆ ಕಾಯಿಲೆಯ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ದೇಹದಲ್ಲಿನ ಈ ಬದಲಾವಣೆಗಳೇ ಸಕ್ಕರೆ ಕಾಯಿಲೆಯ ಲಕ್ಷಣಗಳು... ನೀವಿನ್ನೂ ಗಮನಿಸಿಲ್ಲವೆ..
ದೇಹದಲ್ಲಿನ ಈ ಬದಲಾವಣೆಗಳೇ ಸಕ್ಕರೆ ಕಾಯಿಲೆಯ ಲಕ್ಷಣಗಳು... ನೀವಿನ್ನೂ ಗಮನಿಸಿಲ್ಲವೆ..

ಇತ್ತೀಚಿನ ದಿನಗಳಲ್ಲಿ ಮಧುಮೇಹವು ಸಾಮಾನ್ಯ ಸಮಸ್ಯೆಯಲ್ಲೊಂದಾಗಿದೆ. ಆದಾಗ್ಯೂ, ನಿರ್ಲಕ್ಷಿಸಿದರೆ ಸಮಸ್ಯೆ ಹೆಚ್ಚಾಗಲಿದೆ ಹೊರತು ಕಡಿಮೆ ಆಗದು. ಹಾಗಾದರೆ, ಈ ಸಕ್ಕರೆ ಕಾಯಿಲೆಯ ಲಕ್ಷಣಗಳೇನು? ಇದನ್ನು ಗುರುತಿಸುವುದು ಹೇಗೆ? ಈ ಬಗ್ಗೆ ಪೌಷ್ಟಿಕತಜ್ಞ ಕರಿಷ್ಮಾ ಶಾ ಅಧಿಕ ಸಕ್ಕರೆ ಕಾಯಿಲೆಯ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Parenting Tips: ಮಕ್ಕಳನ್ನು ಬೆಳೆಸುವಾಗ ಅಮ್ಮಂದಿರು ಎಂದಿಗೂ ಈ 9 ತಪ್ಪುಗಳನ್ನು ಮಾಡಲೇಬಾರದು; ತಾಯಂದಿರಿಗೆ ಇಲ್ಲಿದೆ ಮಹತ್ವದ ಸಲಹೆ

Parenting: ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು; ಈ ಮಾತುಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ

Breast Milk: ತಾಯಿಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆಗೆ ತೊಂದರೆ ಆಗಿದ್ಯಾ, ಎದೆಹಾಲು ಹೆಚ್ಚಲು ಇಲ್ಲಿದೆ 5 ಮನೆಮದ್ದು

ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಲೇ ಬೇಡಿ

1) ತೂಕ ಇಳಿಕೆ

ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯು ಎಂದಿನಂತೆ ಆಹಾರ ಸೇವಿಸಿದರೂ ತೂಕವನ್ನು ಕಳೆದುಕೊಳ್ಳುತ್ತಿದ್ದರೆ, ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾಗಿದೆ ಎಂದೇ ಅರ್ಥ. ಈ ರೀತಿ ನಿಮ್ಮಲ್ಲೂ ಆದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

2) ನಿಧಾನವಾಗಿ ಗುಣಮುಖವಾಗುವ ಗಾಯ

ದೇಹದ ರಕ್ಷದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ, ದೇಹದ ಮೇಲಾಗಿರುವ ಗಾಯ ಸುದೀರ್ಘ ದಿನದವರೆಗೂ ಮಾಯದೇ ಇರಬಹುದು. ಏಕೆಂದರೆ, ನೋವನ್ನು ಗುಣಪಡಿಸುವ ಗುಣ ಬಿಳಿರಕ್ತಕಣಗಳಿಗಿರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಇದು ಅಸಾಧ್ಯ.

3) ವಿಶ್ರಾಂತಿಯ ನಂತರವೂ ಆಯಾಸ

ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾದಾಗ, ದೇಹದಿಂದ ಅದರ ಹೀರಿಕೊಳ್ಳುವಿಕೆ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ನಿದ್ರೆ ಅಥವಾ ವಿಶ್ರಾಂತಿ ಪಡೆದ ನಂತರವೂ ಸುಸ್ತು ಕಾಣಿಸುತ್ತದೆ.

4) ಆಗಾಗ್ಗೆ ಬರುವ ಮೂರ್ಛೆ, ಉಸಿರಾಟದ ತೊಂದರೆ..

ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಶೇಖರಣೆ ಆದರೆ ದೇಹದಲ್ಲಿ ಇನ್ನೂ ಹಲವು ಸಮಸ್ಯೆಗಳು ಗೋಚರವಾಗುತ್ತವೆ. ನಿರಂತರ ಭುಜದ ನೋವು, ಮೂರ್ಛೆ, ಉಸಿರಾಟದ ತೊಂದರೆ ಮತ್ತು ಎದೆ ಭಾಗದ ನೋವು, ತೋಳುಗಳು ಅಥವಾ ಹಲ್ಲಿಬ ದವಡೆಯಲ್ಲಿಯೂ ಅಸ್ವಸ್ಥತೆ ಕಾಣಿಸುತ್ತದೆ.

5) ಮಸುಕಾದ ದೃಷ್ಟಿ

ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಕಣ್ಣಿನ ದೃಷ್ಟಿಯೂ ಕುಗ್ಗುತ್ತದೆ. ಫ್ಲೋಟರ್ಸ್ ಎಂಬ ಸಣ್ಣ ಚುಕ್ಕೆಗಳ ರಚನೆಯಿಂದಾಗಿ ಮಂದ ದೃಷ್ಟಿ ನಿಮ್ಮದಾಗುತ್ತದೆ. ಹಾಗಾಗಿ ಈ ಮೇಲಿನ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ.

    ಹಂಚಿಕೊಳ್ಳಲು ಲೇಖನಗಳು