logo
ಕನ್ನಡ ಸುದ್ದಿ  /  Lifestyle  /  Stop These Habits After Eating Food

Things to not do after meal: ಊಟ ಮಾಡಿದ ನಂತರ ನಿಮಗೂ ಈ ಅಭ್ಯಾಸಗಳಿವೆಯೇ...ಹಾಗಿದ್ರೆ ಮೊದಲು ತಪ್ಪಿಸಿ

HT Kannada Desk HT Kannada

Oct 06, 2022 01:26 PM IST

ಊಟದ ನಂತರ ಈ ಅಭ್ಯಾಸಗಳನ್ನು ತಪ್ಪಿಸಬೇಕು

    • ಆಹಾರ ಸೇವಿಸಿದ ನಂತರ ನಾವು ಅನುಸರಿಸುವ ಅನೇಕ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆಹಾರದ ವಿಚಾರದಲ್ಲಿ ಪದೇ ಪದೇ ತಪ್ಪು ಮಾಡುವುದು ಸರಿಯಲ್ಲ. ಹಾಗೇ ಊಟ ಮಾಡಿದ ನಂತರ ಈ ಕೆಲಸಗಳನ್ನು ಮಾಡಲೇಬಾರದು.
ಊಟದ ನಂತರ ಈ ಅಭ್ಯಾಸಗಳನ್ನು ತಪ್ಪಿಸಬೇಕು
ಊಟದ ನಂತರ ಈ ಅಭ್ಯಾಸಗಳನ್ನು ತಪ್ಪಿಸಬೇಕು (PC: unsplash.com)

ಆರೋಗ್ಯಕರವಾಗಿರಬೇಕಾದರೆ ಪ್ರತಿಯೊಬ್ಬರೂ ಆಹಾರ ಮತ್ತು ಫಿಟ್ನೆಸ್ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಆಹಾರ ಕ್ರಮದಲ್ಲಿ ನೀವು ಎಷ್ಟು ಶಿಸ್ತಿನಿಂದ ಇರುತ್ತೀರೋ ಅಷ್ಟು ಆರೋಗ್ಯವಂತರಾಗಿರುತ್ತೀರಿ. ಆಹಾರದ ವಿಷಯದಲ್ಲಿ ಎಚ್ಚರ ತಪ್ಪಿದರೆ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿಯೇ ಏನು ತಿನ್ನಬೇಕು, ಏನು ತಿನ್ನಬಾರದು, ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು ಎನ್ನುವುದು ಮುಖ್ಯ. ಅದರ ಜೊತೆಗೆ ತಿಂದ ನಂತರ ಕೆಲವೊಂದು ಕೆಲಸಗಳನ್ನು ಎಂದಿಗೂ ಮಾಡಬಾರದು.

ಟ್ರೆಂಡಿಂಗ್​ ಸುದ್ದಿ

ಇಲ್ಲಿದೆ ಕಾಶ್ಮೀರಿ ಸ್ಪೆಷಲ್: ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

ಹೆಣ್ಣು ಮತ್ತು ಹಸ್ತಮೈಥುನ: ಮುಚ್ಚಿಟ್ಟದ್ದು ಕೊಳೆಯುತ್ತೆ, ಬಿಚ್ಚಿಟ್ಟದ್ದು ಹೊಳೆಯುತ್ತದೆ, ಕಾಮದ ಚರ್ಚೆ ತಪ್ಪಲ್ಲ -ನಿತ್ಯಾನಂದ ವಿವೇಕವಂಶಿ ಬರಹ

ಕಠಿಣ ಶಾಖದ ಅಲೆಗಳಿಂದ ಕಣ್ಣನ್ನು ರಕ್ಷಿಸಿ; ಬೇಸಿಗೆಯಲ್ಲಿ ನಯನಗಳ ಆರೈಕೆಗೆ ವೈದ್ಯರ ಈ 6 ಸಲಹೆ ಮರೆಯದಿರಿ

ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ; ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ

ಆಹಾರ ಸೇವಿಸಿದ ನಂತರ ನಾವು ಅನುಸರಿಸುವ ಅನೇಕ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆಹಾರದ ವಿಚಾರದಲ್ಲಿ ಪದೇ ಪದೇ ತಪ್ಪು ಮಾಡುವುದು ಸರಿಯಲ್ಲ. ಹಾಗೇ ಊಟ ಮಾಡಿದ ನಂತರ ಈ ಕೆಲಸಗಳನ್ನು ಮಾಡಲೇಬಾರದು.

ವ್ಯಾಯಾಮ ಮಾಡಬೇಡಿ

ತಿಂದ ನಂತರ ಎಂದಿಗೂ ವ್ಯಾಯಾಮ ಮಾಡಬೇಡಿ. ಇದು ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ. ಹೀಗೆ ಮಾಡುವುದರಿಂದ ವಾಕರಿಕೆ, ವಾಂತಿ ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ವ್ಯಾಯಾಮವನ್ನು ತಪ್ಪಿಸಬೇಕು. ಇದು ಆಸಿಡ್ ರಿಫ್ಲಕ್ಸ್ ಕೂಡಾ ಉಂಟುಮಾಡಬಹುದು.

ತಿಂದ ಕೂಡಲೇ ಮಲಗಬೇಡಿ

ಊಟ ಮಾಡಿದ ಕೂಡಲೇ ತಕ್ಷಣ ಮಲಗುವುದನ್ನು ತಪ್ಪಿಸಿ. ಊಟ ತಿಂದ ನಂತರ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಅಥವಾ ಲಘುವಾಗಿ ಕೆಲಸ ಮಾಡಿ. ಆದರೆ ನಿದ್ದೆ ಮಾಡಬಾರದು. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಮುಂದಕ್ಕೆ ಬಾಗಬೇಡಿ

ತಿಂದ ನಂತರ ಎಂದಿಗೂ ಮುಂದಕ್ಕೆ ಬಾಗಬೇಡಿ. ಮುಂದಕ್ಕೆ ವಾಲುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಆಮ್ಲವನ್ನು ಹಾನಿಗೊಳಿಸುತ್ತದೆ.

ಹಣ್ಣುಗಳನ್ನು ತಿನ್ನಬೇಡಿ

ಊಟದ ನಂತರ ಹಣ್ಣುಗಳನ್ನು ತಿನ್ನಬಾರದು. ಆರೋಗ್ಯ ತಜ್ಞರ ಪ್ರಕಾರ, ಊಟದ ನಂತರ ಹಣ್ಣುಗಳನ್ನು ತಿನ್ನುವುದರಿಂದ ಆಹಾರದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ಇದರಿಂದ ದೇಹದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ

ಚಹಾ ಅಥವಾ ಕಾಫಿ ಕುಡಿಯಬೇಡಿ

ಚಹಾ ಅಥವಾ ಕಾಫಿಯಲ್ಲಿ ಫಿನಾಲಿಕ್ ಸಂಯುಕ್ತಗಳು ಕಂಡುಬರುತ್ತವೆ. ಊಟದ ನಂತರ ನೀವು ಚಹಾ ಅಥವಾ ಕಾಫಿಯನ್ನು ಸೇವಿಸಿದರೆ ಅದು ಕಬ್ಬಿಣದಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ತುಂಬಾ ಹಾನಿಕಾರಕವಾಗಿದೆ.

ಮದ್ಯಪಾನ ಮಾಡಬೇಡಿ

ಆಹಾರ ಸೇವಿಸಿದ ನಂತರ ಆಲ್ಕೋಹಾಲ್ ಅಥವಾ ಸಿಗರೇಟ್ ಸೇದಬೇಡಿ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ನೀವು ಊಟದ ನಂತರ ಇದನ್ನು ಮಾಡಿದರೆ ಗಂಭೀರ ಆರೋಗ್ಯ ಅಪಾಯಗಳು ಉಂಟಾಗುತ್ತವೆ.

ತಿಂದ ನಂತರ ಸ್ನಾನ ಮಾಡುವುದನ್ನು ತಪ್ಪಿಸಿ

ನಿಮಗೆ ಊಟ ಮಾಡಿದ ನಂತರ ಸ್ನಾನ ಮಾಡುವ ಅಭ್ಯಾಸ ಇದ್ದರೆ ಮೊದಲು ಅದನ್ನು ತಪ್ಪಿಸಿ. ವಾಸ್ತವವಾಗಿ ಊಟವನ್ನು ತಿಂದ ನಂತರ, ಜೀರ್ಣಕ್ರಿಯೆಗೆ ಸಹಾಯ ಮಾಡಲು ಹೊಟ್ಟೆಯ ಸುತ್ತಲೂ ರಕ್ತ ಪರಿಚಲನೆಯಾಗುತ್ತದೆ. ಅಂತಹ ಸಮಯದಲ್ಲಿ ಸ್ನಾನ ಮಾಡುವಾಗ, ದೇಹದ ಉಷ್ಣತೆಯು ಬದಲಾಗುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ.

ನೀರು ಕುಡಿಯಬೇಡಿ

ಆಹಾರ ಸೇವಿಸುವಾಗ, ಆಹಾರ ತಿಂದ ಕೂಡಲೇ ಅನಗತ್ಯವಾಗಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ. ನೀರು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೆಚ್ಚು ನೀರು ಕುಡಿಯುವುದು ಹೊಟ್ಟೆಯ ಆಮ್ಲವನ್ನು ದುರ್ಬಲಗೊಳಿಸುತ್ತದೆ ಮತ್ತು ಜೀರ್ಣಕಾರಿ ಪ್ರಕ್ರಿಯೆಯನ್ನು ಹದಗೆಡಿಸುತ್ತದೆ. ಹಾಗಾಗಿ ತಿಂದ ತಕ್ಷಣ ನೀರು ಕುಡಿಯುವ ಬದಲಿಗೆ ಸ್ವಲ್ಪ ಸಮಯದ ನಂತರ ಕುಡಿಯಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು