logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Drinks: ಮಜ್ಜಿಗೆ, ಲಸ್ಸಿ; ಬೇಸಿಗೆಯ ದಾಹ ನೀಗಿಸುವ ಪಾನೀಯಗಳಲ್ಲಿ ಯಾವುದು ಉತ್ತಮ; ಇಲ್ಲಿದೆ ತಜ್ಞರ ಅಭಿಪ್ರಾಯ

Summer Drinks: ಮಜ್ಜಿಗೆ, ಲಸ್ಸಿ; ಬೇಸಿಗೆಯ ದಾಹ ನೀಗಿಸುವ ಪಾನೀಯಗಳಲ್ಲಿ ಯಾವುದು ಉತ್ತಮ; ಇಲ್ಲಿದೆ ತಜ್ಞರ ಅಭಿಪ್ರಾಯ

Reshma HT Kannada

May 26, 2023 08:31 AM IST

ಮಜ್ಜಿಗೆ, ಲಸ್ಸಿ ಯಾವುದು ಉತ್ತಮ

    • ಬಿರು ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಕುಡಿಯುವುದರಿಂದ ಮನಸ್ಸಿಗೆ ಹಾಯ್‌ ಎನ್ನಿಸುವುದು ಸಹಜ. ಬಿಸಿಲಿನ ತಾಪ ನೀಗಿಸಲು ಲಸ್ಸಿ ಹಾಗೂ ಮಜ್ಜಿಗೆ ಕುಡಿಯುತ್ತೇವೆ. ಆದರೆ ಈ ಎರಡರಲ್ಲಿ ಯಾವುದು ಉತ್ತಮ ಎನ್ನುವ ಅನುಮಾನವಿದೆಯೇ? ಇದಕ್ಕೆ ಇಲ್ಲಿದೆ ತಜ್ಞರ ಅಭಿಪ್ರಾಯ. 
ಮಜ್ಜಿಗೆ, ಲಸ್ಸಿ ಯಾವುದು ಉತ್ತಮ
ಮಜ್ಜಿಗೆ, ಲಸ್ಸಿ ಯಾವುದು ಉತ್ತಮ

ಬೇಸಿಗೆಯಲ್ಲಿ ಅತಿಯಾದ ಸೂರ್ಯನ ಶಾಖ, ಹೆಚ್ಚಿದ ಆರ್ದ್ರತೆ ಹಾಗೂ ತಾಪಮಾನದ ಹೆಚ್ಚಳದ ಕಾರಣದಿಂದ ನಮ್ಮನ್ನು ರಿಫ್ರೆಶ್‌ ಆಗಿರಿಸಿಕೊಳ್ಳಲು ಹಾಗೂ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತೇವೆ. ನಿರ್ಜಲೀಕರಣ ತಪ್ಪಿಸಲು ನೀರು ಕುಡಿಯುವ ಜೊತೆಗೆ ಜಿಹ್ವ ಚಪಲ ತಣಿಸುವ ಪಾನೀಯಗಳನ್ನೂ ಸೇವಿಸುತ್ತೇವೆ. ಅದರಲ್ಲೂ ಭಾರತೀಯರಿಗೆ ಬೇಸಿಗೆಯಲ್ಲಿ ಜಿಹ್ವ ಚಪಲ ತಣಿಸಲು ದೇಸಿ ಪಾನೀಯಗಳೇ ಹೆಚ್ಚು ಇಷ್ಟವಾಗುತ್ತವೆ. ಅವುಗಳಲ್ಲಿ ಲಸ್ಸಿ ಹಾಗೂ ಮಸಾಲೆ ಮಜ್ಜಿಗೆ ಸೇವನೆಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಇವು ಸೂಪರ್‌ ಹೈಡ್ರೇಟಿಂಗ್‌ ಪಾನೀಯಗಳು ಮಾತ್ರವಲ್ಲ ಇವು ವಿಟಮಿನ್‌ ಹಾಗೂ ಖನಿಜಾಂಶ ಸಮೃದ್ಧವಾಗಿವೆ. ಇವು ಸಾಮಾನ್ಯವಾಗಿ ಕೆಲವೊಂದು ಅಂಶಗಳಲ್ಲಿ ಹೋಲಿಕೆ ಇದ್ದರೂ ಇವುಗಳ ನಡುವೆ ಪ್ರತ್ಯೇಕ ಅಂಶಗಳಿವೆ. ಒಂದು ಇನ್ನೊಂದಕ್ಕಿಂತ ಆರೋಗ್ಯಕರ ಎಂಬುದು ಸುಳ್ಳಲ್ಲ. ಇವುಗಳ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Optical Illusion: ಇಲ್ಲಿರುವ ನಾಲ್ಕು ಬಾಕ್ಸ್‌ಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಉತ್ತರ ಹೇಳಿ

ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ

ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ಬೆಂಗಳೂರಿನ ಜಿಂದಾಲ್‌ ನೇಚರ್‌ಕ್ಯೂರ್‌ ಇನ್‌ಸ್ಟಿಟ್ಯೂಟ್‌ನ ಪೌಷ್ಟಿಕ ತಜ್ಞೆ ಸುಷ್ಮಾ ಪಿಎಸ್‌ ʼಬೇಸಿಗೆಯ ದಾಹವನ್ನು ನೀಗಿಸಲು ಭಾರತದಲ್ಲಿ ಮಜ್ಜಿಗೆ ಹಾಗೂ ಲಸ್ಸಿ ಕುಡಿಯವುದು ಸಾಮಾನ್ಯ. ಈ ಎರಡರ ಮೂಲ ಮೊಸರು ಆಗಿದ್ದರೂ ಈ ಪಾನೀಯಗಳ ತಯಾರಿಕಾ ವಿಧಾನ ಹಾಗೂ ಪರಿಮಳ ಬೇರೆ ರೀತಿ ಇರುತ್ತದೆ.

ಮಜ್ಜಿಗೆ ಅಥವಾ ಮಸಾಲ ಮಜ್ಜಿಗೆ ತೆಳ್ಳನೆಯ ಹಾಗೂ ಮಸಾಲೆಯುಕ್ತ ಪಾನೀಯವಾಗಿದ್ದರೆ, ಲಸ್ಸಿ ಕೆನೆಭರಿತ ಸಿಹಿ ಪಾನೀಯವಾಗಿದೆ. ಅದಾಗ್ಯೂ ಸಿಹಿಯ ಪ್ರಮಾಣವು ಸೇವಿಸುವವರ ಆದ್ಯತೆ ಹಾಗೂ ರೆಸಿಪಿಗೆ ಅನುಗುಣವಾಗಿ ಬದಲಾಗುತ್ತದೆ, ಲಸ್ಸಿ ಸಾಕಷ್ಟು ಸಿಹಿ ಇರುತ್ತದೆ. ಚಾಸ್‌ ಅಥವಾ ಮಜ್ಜಿಗೆ ಕಟುವಾದ ರುಚಿಯನ್ನು ಹೊಂದಿರುತ್ತದೆ. ಕಾರಣ ಅದಕ್ಕೆ ಉಪ್ಪು ಹಾಗೂ ಮಸಾಲೆನ್ನು ಬಳಸಲಾಗಿರುತ್ತದೆʼ ಎಂದು ಲಸ್ಸಿ ಹಾಗೂ ಮಜ್ಜಿಗೆಯ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ.

ಈ ಎರಡನ್ನೂ ಮೊಸರಿನಿಂದಲೇ ತಯಾರಿಸಲಾಗುತ್ತದೆ. ಇವು ಪ್ರೊಟೀನ್‌, ಕ್ಯಾಲ್ಸಿಯಂ ಹಾಗೂ ಪ್ರೊಬಯೊಟಿಕ್‌ ಸಮೃದ್ಧವಾಗಿವೆ. ಈ ಅಂಶಗಳು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಹಾಯವಾಗುವ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುತ್ತವೆ. ಅವುಗಳ ಸೇವನೆಯಿಂದ ಆಮ್ಲೀಯತೆ, ಎದೆಯುರಿ ಕಡಿಮೆಯಾಗಲು ಹಾಗೂ ಮೂಳೆಗಳ ಬಲವರ್ಧನೆಗೆ ಸಹಾಯವಾಗುತ್ತದೆ. ಪಾನೀಯಗಳಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಡಿ ಕೂಡ ಸಮೃದ್ಧವಾಗಿದೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ʼ ಎಂದು ಸುಷ್ಮಾ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯಾವುದು ಆರೋಗ್ಯಕ್ಕೆ ಉತ್ತಮ

ಮಜ್ಜಿಗೆ ಮತ್ತು ಲಸ್ಸಿ ಎರಡೂ ಬೇಸಿಗೆಯಲ್ಲಿ ಉತ್ತಮ ಪಾನೀಯಗಳಾಗಿದ್ದರೂ, ಮಜ್ಜಿಗೆ ಆರೋಗ್ಯಕರ ಆಯ್ಕೆಯಾಗಿದೆ ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಹೆಚ್ಚು ಸೂಕ್ತವಾಗಿದೆ.

ʼತೂಕ ಇಳಿಸುವುದು ಇತ್ತೀಚಿನ ದಿನಗಳಲ್ಲಿ ಸವಾಲೇ ಸರಿ. ದೇಹದಲ್ಲಿ ಅತಿಯಾದ ಕ್ಯಾಲೊರಿಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆ ಕಾರಣಕ್ಕೆ ಕ್ಯಾಲೊರಿ ಅಂಶವುಳ್ಳ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ, ಕ್ಯಾಲೊರಿಯನ್ನು ಬರ್ನ್‌ ಮಾಡಬೇಕು ಎಂದರೆ ಹೆಚ್ಚು ಹೆಚ್ಚು ಮಜ್ಜಿಗೆ ಕುಡಿಯಬೇಕು. ಮಜ್ಜಿಗೆಯಲ್ಲಿ ಲಸ್ಸಿಗಿಂತ ಶೇ 50ರಷ್ಟು ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿ ಅಂಶಗಳಿರುತ್ತವೆ. ಶೇ 75 ರಷ್ಟು ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ. ಅದೇ ಇದು ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ. ಆ ಕಾರಣಕ್ಕೆ ಲಸ್ಸಿಗಿಂತ ಮಜ್ಜಿಗೆ ಉತ್ತಮ. ಲಸ್ಸಿಯಲ್ಲಿ ಸಕ್ಕರೆ ಮತ್ತು ಪರಿಮಳ ಸೂಸುವ ಕೃತಕ ವಸ್ತುಗಳನ್ನು ಬಳಸುವ ಕಾರಣ ಇದು ಪೌಷ್ಟಿಕಾಂಶದ ಗುಣಗಳನ್ನು ಕಡಿಮೆ ಮಾಡಬಹುದುʼ ಎನ್ನುತ್ತಾರೆ ಸುಷ್ಮಾ.

ಇದನ್ನೂ ಓದಿ

Stronger Bones: ಮೂಳೆಗಳ ಸಾಂದ್ರತೆ ವೃದ್ಧಿಗೆ ಹೀಗಿರಲಿ ನಿಮ್ಮ ಬೆಳಗಿನ ದಿನಚರಿ

Morning Routine Increase Bone Density: ಮೂಳೆಗಳ ಆರೋಗ್ಯ ವೃದ್ಧಿಗೆ ನಮ್ಮ ಬೆಳಗಿನ ದಿನಚರಿಯಲ್ಲಿ ಕೆಲವೊಂದು ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಹದಿ ವಯಸ್ಸಿನಿಂದಲೇ ಈ ದಿನಚರಿಯನ್ನು ಪಾಲಿಸುವುದರಿಂದ ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು