logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Food: ಮೊಸರನ್ನದಿಂದ ಬಾರ್ಲಿ ಸಲಾಡ್‌ವರೆಗೆ; ಬೇಸಿಗೆಯಲ್ಲಿ ದೇಹತಾಪ ತಣಿಸಿ ಕರುಳಿನ ಆರೋಗ್ಯ ಸುಧಾರಿಸುವ ಆಹಾರಗಳಿವು

Summer Food: ಮೊಸರನ್ನದಿಂದ ಬಾರ್ಲಿ ಸಲಾಡ್‌ವರೆಗೆ; ಬೇಸಿಗೆಯಲ್ಲಿ ದೇಹತಾಪ ತಣಿಸಿ ಕರುಳಿನ ಆರೋಗ್ಯ ಸುಧಾರಿಸುವ ಆಹಾರಗಳಿವು

Reshma HT Kannada

May 17, 2023 05:39 PM IST

ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಸುಧಾರಿಸುವ ಆಹಾರ ಪದಾರ್ಥಗಳು

    • Summer Food good for Health: ಬೇಸಿಗೆಯಲ್ಲಿ ಕಾಡುವ ಅರ್ಜೀಣ, ಹುಳಿತೇಗು, ಹೊಟ್ಟೆಯುಬ್ಬರದಂತಹ ಸಮಸ್ಯೆಗಳಿಗೆ ಆಹಾರದಿಂದಲೇ ಪರಿಹಾರ ಕಂಡುಕೊಳ್ಳಬಹುದು. ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಸುಧಾರಿಸುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ದೇಹತಾಪ ತಣಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಅಂತಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ ನೋಡಿ. 
ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಸುಧಾರಿಸುವ ಆಹಾರ ಪದಾರ್ಥಗಳು
ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಸುಧಾರಿಸುವ ಆಹಾರ ಪದಾರ್ಥಗಳು

ಬೇಸಿಗೆಯ ಬಿರು ಬಿಸಿಲು ಹಸಿವನ್ನು ನಾಶ ಮಾಡುತ್ತದೆ. ಈ ಸಮಯದಲ್ಲಿ ತಣ್ಣನೆಯ ಆಹಾರ ಅಥವಾ ಪಾನೀಯ ಸೇವನೆಗೆ ಮನಸ್ಸು ಹಾತೊರೆಯುತ್ತದೆ. ಆದರೆ ಇವುಗಳಿಂದ ಆರೋಗ್ಯ ಹಾಗೂ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುವುದೇ ಜಾಸ್ತಿ. ಆ ಕಾರಣಕ್ಕೆ ಕರುಳಿನ ಆರೋಗ್ಯ ಸುಧಾರಿಸುವಂತಹ ಆಹಾರಗಳ ಸೇವನೆಗೆ ಒತ್ತು ನೀಡಬೇಕು. ಸುಧಾರಿತ ಕರುಳಿನ ಆರೋಗ್ಯವು ಬೇಸಿಗೆಯಲ್ಲಿ ಆಮ್ಲೀಯತೆ (ಆಸಿಡಿಟಿ), ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕರುಳನ್ನು ಆರೋಗ್ಯಕರವಾಗಿಡಲು ಆಹಾರದಲ್ಲಿ ಸರಿಯಾದ ಪ್ರೋಬಯಾಟಿಕ್‌ಗಳು ಮತ್ತು ಕೂಲಿಂಗ್ ಆಹಾರವನ್ನು ಸೇರಿಸುವ ಅಗತ್ಯವಿದೆ. ಆ ಕಾರಣಕ್ಕೆ ಬರೀ ಅನ್ನ ಸಾರು ಸೇವನೆಯ ಬದಲು ಮೊಸರನ್ನ, ಬಾರ್ಲಿ ಗಂಜಿ, ರಾಗಿ ಗಂಜಿಯಂತಹ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರೊಂದಿಗೆ ಮಜ್ಜಿಗೆ, ಎಳನೀರು, ಕಬ್ಬಿನರಸ ಕೂಡ ಸೇವಿಸಬಹುದು. ಇದು ಅತಿಯಾದ ಶಾಖದಿಂದ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಟ್ರೆಂಡಿಂಗ್​ ಸುದ್ದಿ

Sanitary Pads: ಸ್ಯಾನಿಟರಿ ಪ್ಯಾಡ್ ಮೊದಲು ಕಂಡುಹಿಡಿದಿದ್ದೇ ಪುರುಷರಿಗಾಗಿ; ಆಸಕ್ತಿಕರ ವಿವರ ಇಲ್ಲಿದೆ

Heat headaches: ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು, ಇದರಿಂದ ಪಾರಾಗುವುದು ಹೇಗೆ?

ಭಾರತದಲ್ಲಿ ಹೆಚ್ಚುತ್ತಿದೆ ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆ; ಆ ನಿರ್ಧಾರಕ್ಕೆ ಬರುವ ಮುನ್ನ ಈ ಅಂಶಗಳು ಗಮನದಲ್ಲಿರಲಿ

Summer Tips: ಬೇಸಿಗೆಯಲ್ಲಿ ಸನ್‌ಗ್ಲಾಸ್‌ ಧರಿಸುವುದು ಕಣ್ಣಿಗೆ ಅಪಾಯವೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

ಹಾಗಾದರೆ ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಸುಧಾರಣೆಗೆ ಯಾವ ರೀತಿಯ ಆಹಾರ ಸೇವಿಸಬೇಕು. ಇಲ್ಲಿದೆ ಕೆಲವು ಸಲಹೆ:

ಸಾಂಪ್ರದಾಯಿಕ ಮೊಸರನ್ನ

ಬಿಸಿಲಿನ ತಾಪವನ್ನು ನೀಗಿಸಿ, ಕರುಳಿನ ಆರೋಗ್ಯವನ್ನು ಸುಧಾರಿಸಲು ಮೊಸರನ್ನ ಸೇವನೆ ಉತ್ತಮ. ಇದು ದೇಹವನ್ನು ತಂಪಾಗಿಡುತ್ತದೆ. ಇದರಲ್ಲಿ ಪ್ರೊಬಾಯೊಟಿಕ್‌ ಅಂಶಗಳು ಸಮೃದ್ಧವಾಗಿದ್ದು, ಇದು ಕರುಳಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳ ನಿವಾರಣೆಗೂ ಸಹಾಯ ಮಾಡುತ್ತದೆ. ಮೊಸರನ್ನದಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೊಟೀನ್‌ ಅಂಶ ಅಧಿಕವಾಗಿದ್ದು, ಇದು ಮೂಳೆಗಳು ಹಾಗೂ ಸ್ನಾಯುಗಳ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ದೇಹದ ಮೇಲೆ ಹಿತವಾದ ಪರಿಣಾಮ ಬೀರುವ ಜೊತೆಗೆ ಕರುಳನ್ನು ತಂಪಾಗಿಸುತ್ತದೆ.

ಬಾರ್ಲಿ ಸಲಾಡ್‌

ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಿ ಕರುಳಿನ ಆರೋಗ್ಯ ಸುಧಾರಿಸಲು ನೆರವಾಗಲು ಬಾರ್ಲಿ ಸಲಾಡ್‌ ಉತ್ತಮ ಆಯ್ಕೆ. ಬಾರ್ಲಿಯು ಉತ್ತಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಇದು ಮಲಬದ್ಧತೆ ಹಾಗೂ ಹೊಟ್ಟೆಯುಬ್ಬರ ನಿಯಂತ್ರಣಕ್ಕೂ ಸಹಕಾರಿ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಕರುಳಿನ ಆರೋಗ್ಯ ಸುಧಾರಣೆಗೆ ಬೆಸ್ಟ್‌ ಆಯ್ಕೆಯಾಗಿದೆ.

ಬಾರ್ಲಿಯಲ್ಲಿ ವಿಟಮಿನ್‌ ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ ಮತ್ತು ಸೆಲೆನಿಯಂನಂತಹ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕರುಳಿನ ಸಮಸ್ಯೆಗಳನ್ನು ತಡೆಯುತ್ತದೆ. ಹಣ್ಣುಗಳು, ತರಕಾರಿ, ಒಣಹಣ್ಣುಗಳೊಂದಿಗೆ ನಿಮಗೆ ಇಷ್ಟವಾಗುವ ರೀತಿಯಲ್ಲಿ ಸಲಾಡ್‌ ತಯಾರಿಸಿ ತಿನ್ನಬಹುದು.

ಮಜ್ಜಿಗೆ

ಬೇಸಿಗೆಯಲ್ಲಿ ಮಜ್ಜಿಗೆ ದೇಹವನ್ನು ತಂಪು ಮಾಡುವ ಜೊತೆಗೆ ಕರುಳಿನ ಆರೋಗ್ಯವನ್ನು ಸುಧಾರಿಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮೊಸರಿಗೆ ನೀರನ್ನು ಮಿಶ್ರಣ ಮಾಡಿ ತಯಾರಿಸುವ ನೀರು ಮಜ್ಜಿಗೆ ಕರುಳಿನ ಆರೋಗ್ಯಕ್ಕೆ ಬೆಸ್ಟ್‌. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಜೊತೆಗೆ ಮಲಬದ್ಧತೆ, ಹೊಟ್ಟೆ ಉಬ್ಬರಿಸುವುದು ಇಂತಹ ಸಮಸ್ಯೆಗೂ ಪರಿಹಾರ ನೀಡುತ್ತದೆ. ಮಜ್ಜಿಗೆಯು ಕಡಿಮೆ ಕೊಬ್ಬಿನಾಂಶ ಹಾಗೂ ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 12 ನಂತಹ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ, ಇದು ಉತ್ತಮ ಕರುಳಿನ ಆರೋಗ್ಯಕ್ಕೆ ಅವಶ್ಯವಾಗಿದೆ.

ಇದಕ್ಕೆ ಕರಿಬೇವು, ಸಾಸಿವೆ ಒಗ್ಗರಣೆ ಹಾಕಿ, ಪುದಿನಾ ಸೊಪ್ಪು ಸೇರಿಸಿ. ಸಾಸಿವೆ ಉತ್ಕರ್ಷಣ ವಿರೋಧಿಯಾಗಿದೆ ಹಾಗೂ ಉರಿಯೂತ ನಿವಾರಣೆಗೂ ಇದು ಸಹಕಾರಿ. ಪುದಿನ ಮತ್ತು ಕರಿಬೇವು ಕೂಡ ಉತ್ಕರ್ಷಣ ವಿರೋಧಿ ಅಂಶವನ್ನು ಹೊಂದಿವೆ. ಇವು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಹೆಸರುಕಾಳಿನ ಸಲಾಡ್‌

ಮೊಳಕೆ ಬರಿಸಿದ ಹೆಸರುಕಾಳಿನ ಸಲಾಡ್‌ ಕರುಳಿನ ಆರೋಗ್ಯ ಸುಧಾರಣೆಗೂ ಸಹಕಾರಿ. ಇದರಲ್ಲಿ ನಾರಿನಾಂಶ, ಕಿಣ್ವಗಳು, ವಿಟಮಿನ್‌ ಹಾಗೂ ಖನಿಜಾಂಶ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಇದು ಮಲಬದ್ಧತೆ ಹಾಗೂ ಹೊಟ್ಟೆ ಉಬ್ಬರವನ್ನೂ ನಿಯಂತ್ರಿಸುತ್ತದೆ. ಇದು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಮೊಳಕೆ ಬರಿಸಿದ ಹೆಸರುಕಾಳಿನ ಸಲಾಡ್‌ಗೆ ಮೊಸರು ಸೇರಿಸಿ ಸೇವಿಸುವುದು ಇನ್ನೂ ಉತ್ತಮ. ಇದರಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿ ಸಮಸ್ಯೆಗಳ ನಿವಾರಣೆಗೂ ಇದು ಸಹಕಾರಿ.

ಕುಂಬಳಕಾಯಿ ಜ್ಯೂಸ್‌

ಚಳಿಗಾಲದ ಕಲ್ಲಂಗಡಿ ಜ್ಯೂಸ್‌ ಎಂದು ಕರೆಯುಲ್ಪಡುವ ಬೂದುಗುಂಬಳಕಾಯಿ ಜ್ಯೂಸ್‌ ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಪಾನೀಯವಾಗಿದೆ. ಇದರಲ್ಲಿ ಸಾಕಷ್ಟು ನೀರಿನಾಂಶವಿದ್ದು, ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯುತ್ತದೆ. ಇದು ದೇಹದಲ್ಲಿ ಪಿಎಚ್‌ ಹಂತ ಸಮತೋಲನದಲ್ಲಿರುವ ಸಹಾಯ ಮಾಡುತ್ತದೆ. ಇದು ಹುಳಿತೇಗು, ಹೊಟ್ಟೆಯುಬ್ಬರ ಹಾಗೂ ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿನ ನಾರಿನಾಂಶವು ಕರುಳನ್ನು ಸ್ವಚ್ಛವಾಗಿರುಸುತ್ತದೆ ಹಾಗೂ ಕರುಳಿನ ಆರೋಗ್ಯ ಸುಧಾರಣೆಗೂ ಸಹಕಾರಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಹಾಗೂ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು