logo
ಕನ್ನಡ ಸುದ್ದಿ  /  ಜೀವನಶೈಲಿ  /  ಮೊಬೈಲ್ ಚಾರ್ಜ್ ಮಾಡಿದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದೆಯೆ? ಇದಕ್ಕೆ ಪರಿಹಾರ ಇಲ್ಲಿದೆ

ಮೊಬೈಲ್ ಚಾರ್ಜ್ ಮಾಡಿದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದೆಯೆ? ಇದಕ್ಕೆ ಪರಿಹಾರ ಇಲ್ಲಿದೆ

Jayaraj HT Kannada

Nov 28, 2024 03:58 PM IST

google News

ಮೊಬೈಲ್ ಚಾರ್ಜ್ ಮಾಡಿದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದೆಯೆ? ಪರಿಹಾರ ಇಲ್ಲಿದೆ

    • ಮೊಬೈಲ್ ಫೋನ್ ಚಾರ್ಜ್ ಮಾಡುವಾಗ, ನೀವು ಕಂಪನಿಯಿಂದ ಸ್ವೀಕರಿಸಿದ ಚಾರ್ಜರ್ ಮಾತ್ರ ಬಳಸಿ. ಯಾವುದೇ ಕಾರಣದಿಂದ ಚಾರ್ಜರ್ ಹಾಳಾಗಿದ್ದರೆ, ನೀವು ಕಂಪನಿಯ ಒರಿಜಿನಲ್ ಚಾರ್ಜರ್ ಅನ್ನು ಮಾತ್ರ ಖರೀದಿಸಬೇಕು. ಬೇರೆ ಚಾರ್ಜರ್ ಬಳಸಿದರೆ ಬ್ಯಾಟರಿ ಹಾಳಾಗಿ ಚಾರ್ಜ್ ನಿಲ್ಲದಂತಾಗುತ್ತದೆ.
ಮೊಬೈಲ್ ಚಾರ್ಜ್ ಮಾಡಿದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದೆಯೆ? ಪರಿಹಾರ ಇಲ್ಲಿದೆ
ಮೊಬೈಲ್ ಚಾರ್ಜ್ ಮಾಡಿದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದೆಯೆ? ಪರಿಹಾರ ಇಲ್ಲಿದೆ (Pixabay)

ಸ್ಮಾರ್ಟ್‌ಫೋನ್‌ನಲ್ಲಿ ಚಾರ್ಜ್ ನಿಲ್ಲುತ್ತಿಲ್ಲ, ಚಾರ್ಜ್ ಆದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿ ಆಗುತ್ತಿದೆಯೇ? ಇದೇ ರೀತಿಯ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಈ ಲೇಖನ ನಿಮಗಾಗಿ. ಈಗ ಫೋನ್ ಬ್ಯಾಟರಿ ಡ್ರೈನ್ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಲು ಹಲವು ಕಾರಣಗಳಿವೆ. ಬ್ಯಾಟರಿ ಡ್ರೈನ್ ಸಮಸ್ಯೆಯಿಂದ ಬೇಸತ್ತು ಕೆಲವರು ಫೋನ್ ಅನ್ನೇ ಬದಲಾವಣೆ ಮಾಡಲು ಹೊರಡುತ್ತಾರೆ. ಆದರೆ, ಕೆಲವು ಟ್ರಿಕ್ ಮೂಲಕ ನಿಮ್ಮ ಫೋನ್ ಬ್ಯಾಟರಿಯ ಡ್ರೈನ್ ಸಮಸ್ಯೆಯನ್ನು ಸರಿಪಡಿಸಬಹುದು. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್.

ಚಾರ್ಜ್‌ಗೆ ಹಾಕಿದ್ದಾಗ ಮೊಬೈಲ್ ಬಳಸದಿರಿ

ಫೋನ್ ಅನ್ನು ಚಾರ್ಜ್ ಮಾಡುವಾಗ ಅದನ್ನು ಬಳಸುವ ಅನೇಕ ಜನರಿದ್ದಾರೆ. ಹೀಗೆ ಮಾಡಲೇಬಾರದು. ಈ ರೀತಿ ಮಾಡುವುದರಿಂದ ಫೋನ್‌ನ ಪ್ರೊಸೆಸರ್‌ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಫೋನ್ ಚಾರ್ಜ್ ಮಾಡುವಾಗ, ನೀವು ಕಂಪನಿಯಿಂದ ಸ್ವೀಕರಿಸಿದ ಚಾರ್ಜರ್ ಅನ್ನು ಬಳಸಿ. ಯಾವುದೇ ಕಾರಣದಿಂದ ಚಾರ್ಜರ್ ಹಾಳಾಗಿದ್ದರೆ, ನೀವು ಕಂಪನಿಯ ಒರಿಜಿನಲ್ ಚಾರ್ಜರ್ ಅನ್ನು ಮಾತ್ರ ಖರೀದಿಸಬೇಕು. ಬೇರೆ ಚಾರ್ಜರ್ ಬಳಸಿದರೆ ಬ್ಯಾಟರಿ ಹಾಳಾಗಿ ಚಾರ್ಜ್ ನಿಲ್ಲದಂತಾಗುತ್ತದೆ.

ಬ್ಯಾಕ್​ಗ್ರೌಂಡ್ ಅಪ್ಲಿಕೇಶನ್‌ಗಳು

ನಾವು ಈ ಬಗ್ಗೆ ಕೂಡ ಗಮನ ಹರಿಸುವುದಿಲ್ಲ. ಇಂದು ಅಪ್ಲಿಕೇಶನ್‌ ತೆರೆದು ಬಳಿಕ ನೇರವಾಗಿ ಹೋಮ್ ಪೇಜ್​ಗೆ ಹೋಗುತ್ತೇವೆ. ಈ ಕಾರಣದಿಂದಾಗಿ, ಅನೇಕ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಬ್ಯಾಟರಿಯನ್ನು ತಿನ್ನುತ್ತವೆ. ನೀವು ಅವುಗಳನ್ನು ಬಳಸದಿದ್ದರೂ ಸಹ ಈ ಅಪ್ಲಿಕೇಶನ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಆಗ ಬ್ಯಾಟರಿ ಖಾಲಿ ಆಗುತ್ತದೆ.

ಸಾಮಾನ್ಯವಾಗಿ ಬ್ಯಾಟರಿಯು ಲೊಕೇಷನ್ ಆನ್ ಮಾಡಿದರೂ ಸಹ ತ್ವರಿತವಾಗಿ ಬರಿದಾಗುತ್ತದೆ. ಜಿಪಿಎಸ್, ವೆದರ್ ಅಪ್ಲಿಕೇಶನ್‌ಗಳು, ಫಿಟ್‌ನೆಸ್ ಟ್ರ್ಯಾಕರ್‌ಗಳಂತಹ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡುತ್ತದೆ. ನೀವು ಬ್ಲೂಟೂತ್, ವೈ-ಫೈ ಮತ್ತು ಸೆಲ್ಯುಲಾರ್ ಡೇಟಾದಂತಹ ಸೇವೆಗಳನ್ನು ಸದಾ ಆನ್​ನಲ್ಲಿ ಇರಿಸಿದರೂ ಸಹ, ನಿಮ್ಮ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹೀಗಾಗಿ ಇದನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿ.

ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು?

ಬ್ಯಾಟರಿ ಬೇಗನೆ ಖಾಲಿಯಾಗುತ್ತಿದ್ದರೆ, ಆಂಡ್ರಾಯ್ಡ್​ ಫೋನ್​ನಲ್ಲಿ ನೀವು ಸೆಟ್ಟಿಂಗ್‌ಗಳು > ಬ್ಯಾಟರಿ > ಬ್ಯಾಟರಿ ಬಳಕೆಗೆ ಹೋಗಬೇಕು. ನೀವು iOS ಬಳಕೆದಾರರಾಗಿದ್ದರೆ ಸೆಟ್ಟಿಂಗ್‌ಗಳು > ಬ್ಯಾಟರಿ ಆಯ್ಕೆಗೆ ಹೋಗಿ. ಬ್ಯಾಟರಿ ಸೇವರ್ ಮೋಡ್ ಅನ್ನು ಆನ್ ಮಾಡಿ. ಇದು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸೇವರ್ ಅಥವಾ ಪವರ್ ಸೇವಿಂಗ್ ಮೋಡ್‌ನೊಂದಿಗೆ ಬರುತ್ತದೆ. ಇದರಿಂದ ನಿಮ್ಮ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು.

ಚಾರ್ಜಿಂಗ್‌ನಲ್ಲಿ 80:20 ನಿಯಮ

ಹೆಚ್ಚಿನ ಜನರು ಬ್ಯಾಟರಿಯಲ್ಲಿ ಚಾರ್ಜ್ ಪೂರ್ತಿ ಖಾಲಿಯಾದಾಗ, ಅಂದರೆ 0 ಶೇಕಡಾ ತಲುಪಿದಾಗ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಆದರೆ, ಇದು ಸರಿಯಲ್ಲ ಎನ್ನುತ್ತಾರೆ ತಜ್ಞರು. ಹಾಗೆಯೆ ಸ್ಮಾರ್ಟ್‌ಫೋನ್‌ ಪೂರ್ತಿಯಾಗಿ, ಅಂದರೆ 100 ಶೇಕಡಾ ಚಾರ್ಜ್ ಕೂಡ ಮಾಡಬಾರದು. ಫೋನ್ ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್‌ಚಾರ್ಜ್‌ ಆಗಲು ಬಿಡಬಾರದು ಅಥವಾ ಫುಲ್ ಚಾರ್ಜ್ ಮಾಡಬಾರದು. ಫೋನ್ ಚಾರ್ಜ್ ಮಾಡುವಾಗ ಯಾವಾಗಲೂ 20:80 ಅನುಪಾತವನ್ನು ನೆನಪಿನಲ್ಲಿಡಿ. 20:80 ಅನುಪಾತ ಎಂದರೆ, ಬ್ಯಾಟರಿ 20 ಶೇಕಡಾ ಬಂದಾಗ ಮೊಬೈಲ್ ಅನ್ನು ಚಾರ್ಜ್ ಮಾಡುವುದು. ಅಲ್ಲದೆ, ಚಾರ್ಜಿಂಗ್ 80 ಪ್ರತಿಶತವನ್ನು ತಲುಪಿದಾಗ, ಅದನ್ನು ತೆಗೆಯಬೇಕು. ಇದನ್ನು 20:80 ಅನುಪಾತ ಎಂದು ಕರೆಯಲಾಗುತ್ತದೆ. ಬ್ಯಾಟರಿಯನ್ನು 90 ಪ್ರತಿಶತದವರೆಗೂ ಚಾರ್ಜ್ ಮಾಡಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ. ನೀವು ಈ ನಿಯಮವನ್ನು ಅನುಸರಿಸಿದರೆ ನಿಮ್ಮ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ