Instagram Reels: ಇನ್‌ಸ್ಟಾಗ್ರಾಂ ರೀಲ್ಸ್‌ ಅಪ್ಲೋಡ್‌ ಮಾಡಲು ಸರಿಯಾದ ಸಮಯ ಯಾವುದು? ಜಾಸ್ತಿ ವೀಕ್ಷಣೆ, ಲೈಕ್ಸ್‌ ಬೇಕಿದ್ರೆ ಹೀಗೆ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Instagram Reels: ಇನ್‌ಸ್ಟಾಗ್ರಾಂ ರೀಲ್ಸ್‌ ಅಪ್ಲೋಡ್‌ ಮಾಡಲು ಸರಿಯಾದ ಸಮಯ ಯಾವುದು? ಜಾಸ್ತಿ ವೀಕ್ಷಣೆ, ಲೈಕ್ಸ್‌ ಬೇಕಿದ್ರೆ ಹೀಗೆ ಮಾಡಿ

Instagram Reels: ಇನ್‌ಸ್ಟಾಗ್ರಾಂ ರೀಲ್ಸ್‌ ಅಪ್ಲೋಡ್‌ ಮಾಡಲು ಸರಿಯಾದ ಸಮಯ ಯಾವುದು? ಜಾಸ್ತಿ ವೀಕ್ಷಣೆ, ಲೈಕ್ಸ್‌ ಬೇಕಿದ್ರೆ ಹೀಗೆ ಮಾಡಿ

Instagram reels best practices 2024: ಇನ್​ಸ್ಟಾಗ್ರಾಮ್​ ರೀಲ್‌ಗಳಲ್ಲಿ ಗುಣಮಟ್ಟ ಮತ್ತು ಕಂಟಿನ್ಯುಟಿ (ನಿರಂತರವಾಗಿ ರೀಲ್ಸ್ ಅಪ್ಲೋಡ್ ಮಾಡುವುದು) ಬಹಳ ಮುಖ್ಯ. ಜತೆಗೆ, ನಿಮ್ಮ ರೀಲ್ಸ್ ಅನ್ನು ಸರಿಯಾದ ಸಮಯದಲ್ಲಿ ಪೋಸ್ಟ್ ಮಾಡುವುದು ಕೂಡ ಮುಖ್ಯ. ರೀಲ್ಸ್‌ಗೆ ಉತ್ತಮ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಯಾವ ಸಮಯದಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಯಿರಿ.

Instagram Reels: ಇನ್‌ಸ್ಟಾಗ್ರಾಂ ರೀಲ್ಸ್‌ ಅಪ್ಲೋಡ್‌ ಮಾಡಲು ಸರಿಯಾದ ಸಮಯ ಯಾವುದು?
Instagram Reels: ಇನ್‌ಸ್ಟಾಗ್ರಾಂ ರೀಲ್ಸ್‌ ಅಪ್ಲೋಡ್‌ ಮಾಡಲು ಸರಿಯಾದ ಸಮಯ ಯಾವುದು?

Instagram reels best practices 2024: ಇನ್​ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಅಪ್‌ಲೋಡ್ ಮಾಡುವಾಗ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಲ್ಲಿ ಅತ್ಯಂತ ಮುಖ್ಯವಾದ ಸಂಗತಿ ಎಂದರೆ ರೀಲ್ ಅನ್ನು ಪೋಸ್ಟ್ ಮಾಡಲು ಸರಿಯಾದ ಸಮಯ. ರೀಲ್‌ಗಳಿಗೆ ಬರುವ ವೀವ್ಸ್ ಮತ್ತು ಲೈಕ್ಸ್ ಅದನ್ನು ಪೋಸ್ಟ್ ಮಾಡುವ ಸಮಯವನ್ನು ಅವಲಂಬಿಸಿರುತ್ತದೆ. ನೀವು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ನಿಮ್ಮ ಇನ್​ಸ್ಟಾಗ್ರಾಮ್​ ಖಾತೆಯ ವ್ಯಾಪ್ತಿಯನ್ನು ಹೆಚ್ಚಿಸುವ ಅವಕಾಶಗಳಿವೆ.

ಇನ್​ಸ್ಟಾಗ್ರಾಮ್​ ರೀಲ್‌ಗಳಲ್ಲಿ ಗುಣಮಟ್ಟ ಮತ್ತು ಕಂಟಿನ್ಯುಟಿ (ನಿರಂತರವಾಗಿ ರೀಲ್ಸ್ ಅಪ್ಲೋಡ್ ಮಾಡುವುದು) ಬಹಳ ಮುಖ್ಯ. ಅದೇ ಸಮಯದಲ್ಲಿ ನಿಮ್ಮ ರೀಲ್ಸ್ ಅನ್ನು ಸರಿಯಾದ ಸಮಯದಲ್ಲಿ ಪೋಸ್ಟ್ ಮಾಡುವುದು ಕೂಡ ಮುಖ್ಯ. ನೀವು ಅಪ್ಲೋಡ್ ಮಾಡುವ ರೀಲ್ಸ್​ಗೆ ಉತ್ತಮ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಯಾವ ಸಮಯದಲ್ಲಿ ಅಪ್‌ಲೋಡ್ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಇನ್​ಸ್ಟಾಗ್ರಾಮ್​ನ ಅಲ್ಗಾರಿದಮ್ ಪ್ರಕಾರ, ನಿಮ್ಮ ಹೆಚ್ಚಿನ ಅನುಯಾಯಿಗಳು ಸಕ್ರಿಯವಾಗಿರುವ ಸಮಯದಲ್ಲಿ ನಿಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ನೀವು ರೀಲ್‌ಗಳನ್ನು ಪೋಸ್ಟ್ ಮಾಡಬೇಕು. ಈಗ ಸರಿಯಾದ ಸಮಯ ಯಾವುದು ಎಂಬುದನ್ನು ಕಂಡುಹಿಡಿಯಲು, ನಿಮ್ಮ ಇನ್​ಸ್ಟಾಗ್ರಾಮ್‌ನ ಒಳನೋಟಗಳು/ವೃತ್ತಿಪರ ಡ್ಯಾಶ್‌ಬೋರ್ಡ್ ವಿಭಾಗವನ್ನು ಪರಿಶೀಲಿಸಬೇಕು. ಸಕ್ರಿಯ ಬಳಕೆದಾರರ ಸಮಯವನ್ನು ಇಲ್ಲಿ ತಿಳಿಯಬಹುದು.

ಇದಲ್ಲದೇ ಖಾತೆಯ ಹಲವು ವಿವರಗಳನ್ನು ನಿಮಗೆ ತೋರಿಸಲಾಗುತ್ತದೆ, ಯಾವ ರೀಲ್, ಫೋಟೋ ಪೋಸ್ಟ್‌ಗಳಿಗೆ ಹೆಚ್ಚು ಲೈಕ್ಸ್ ಬಂದಿದೆ ಎಂಬ ಟೇಬಲ್ ಅನ್ನು ತೋರಿಸಲಾಗುತ್ತದೆ. ನಿಮ್ಮ ಖಾತೆಯು ಕಂಟೆಂಟ್ ಕ್ರಿಯೇಟರ್ ಅಥವಾ ಬಿಸ್ನೆಸ್‌ ಆಗಿದ್ದರೆ ಮಾತ್ರ ನೀವು ಈ ಎಲ್ಲಾ ವಿವರಗಳನ್ನು ನೋಡಬಹುದು ಎಂಬುದನ್ನು ನೆನಪಿನಲ್ಲಿಡಿ.

ಪೋಸ್ಟ್ ಮಾಡಲು ಇದು ಸರಿಯಾದ ಸಮಯ

ಇನ್‌ಸ್ಟಾಗ್ರಾಂನಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡಲು ಸರಿಯಾದ ಸಮಯ ಯಾವುದು ಎಂಬುದನ್ನು ನೋಡುವುದಾದರೆ, ಬೆಳಿಗ್ಗೆ 6, 9, 12 ಅಥವಾ ಮಧ್ಯಾಹ್ನ 3, 6 ಗಂಟೆಗೆ ಪೋಸ್ಟ್ ಮಾಡುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಇದಲ್ಲದೆ, ನೀವು ರಾತ್ರಿಯಲ್ಲಿ ಪೋಸ್ಟ್ ಮಾಡಲು ಬಯಸಿದರೆ, ರೀಲ್‌ಗಳನ್ನು ರಾತ್ರಿ 9 ರಿಂದ 11 ರಿಂದ 12ರ ನಡುವೆ ಪೋಸ್ಟ್ ಮಾಡಬಹುದು. ಈ ಸಮಯದಲ್ಲಿ ಹೆಚ್ಚಿನ ಜನರು ಇನ್​ಸ್ಟಾಗ್ರಾಮ್​ ಬಳಸುತ್ತಾರೆ. ಆಗ ನಿಮ್ಮ ರೀಲ್‌ಗಳು ಹೆಚ್ಚು ಜನರನ್ನು ತಲುಪಬಹುದು.

ಹಾಗೆಯೆ ಒಂದೇ ರೀತಿಯ ಫೋಟೋ-ವಿಡಿಯೋವನ್ನು ಪುನಃ ಪೋಸ್ಟ್ ಮಾಡಬೇಡಿ. ಯಾವುದಾದರೂ ಒಂದು ಪೋಟೊ ಚೆನ್ನಾಗಿದ್ದರೆ, ಆ ಫೋಟೋವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಯಾಕೆಂದರೆ ಒಂದೇ ರೀತಿಯ ಮತ್ತೊಂದು ಫೋಟೋವನ್ನು ನೀವು ಹಂಚಿಕೊಂಡರೆ ಇನ್​ಸ್ಟಾಗ್ರಾಮ್ ಅದನ್ನು ಡುಪ್ಲಿಕೇಟ್ ಎಂದು ಪರಿಗಣಿಸುವ ಸಾಧ್ಯತೆ ಇರುತ್ತದೆ. ಗಮನ ಸೆಳೆಯುವಂತಹ ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡುವುದು ಉತ್ತಮ.

ಲೇಖನ: ವಿನಯ್‌ ಭಟ್‌

Whats_app_banner