logo
ಕನ್ನಡ ಸುದ್ದಿ  /  ಜೀವನಶೈಲಿ  /  Jio Cricket Packs: ಐಪಿಎಲ್‌ ಪ್ರೇಮಿಗಳಿಗೆ ಧಮಕಾ ರಿಚಾರ್ಜ್‌ ಆಫರ್‌ ಪರಿಚಯಿಸಿದ ಜಿಯೋ; ಇಲ್ಲಿದೆ ಪ್ರಿಪೇಯ್ಡ್‌ ಪ್ಲ್ಯಾನ್‌ ವಿವರ

Jio Cricket Packs: ಐಪಿಎಲ್‌ ಪ್ರೇಮಿಗಳಿಗೆ ಧಮಕಾ ರಿಚಾರ್ಜ್‌ ಆಫರ್‌ ಪರಿಚಯಿಸಿದ ಜಿಯೋ; ಇಲ್ಲಿದೆ ಪ್ರಿಪೇಯ್ಡ್‌ ಪ್ಲ್ಯಾನ್‌ ವಿವರ

Reshma HT Kannada

Mar 20, 2024 01:04 PM IST

google News

ಜಿಯೋ ರೀಚಾರ್ಜ್‌ ಆಫರ್‌

    • ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪ್ರಾರಂಭವಾಗಲು ಇನ್ನೆರಡು ದಿನಗಳು ಬಾಕಿ ಇವೆ. ನೀವು ಐಪಿಎಲ್‌ ವೀಕ್ಷಣೆಗಾಗಿ ಎದುರು ನೋಡುತ್ತಿದ್ದರೆ, ಜಿಯೋ ನಿಮಗಾಗಿ ವಿಶೇಷ ಆಫರ್‌ ಘೋಷಿಸಿದೆ. ಇದು ವಿಶೇಷ ಡೇಟಾ  ಪ್ಲಾನ್‌ ಆಗಿರಲಿದ್ದು ವ್ಯಾಲಿಡಿಟಿ, ಮೊತ್ತ ಹಾಗೂ ಎಷ್ಟು ಜಿಬಿ ಸಿಗಲಿದೆ ಎಂಬಿತ್ಯಾದಿ ವಿವರ ಇಲ್ಲಿದೆ.  
ಜಿಯೋ ರೀಚಾರ್ಜ್‌ ಆಫರ್‌
ಜಿಯೋ ರೀಚಾರ್ಜ್‌ ಆಫರ್‌

ದೇಶದಾದ್ಯಂತ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) 2024 ಹವಾ ಜೋರಾಗಿದೆ. ಪ್ರತಿವರ್ಷದಂತೆ ಈ ವರ್ಷವು ಕ್ರಿಕೆಟ್‌ ಪ್ರೇಮಿಗಳು ಐಪಿಎಲ್‌ ಆರಂಭವಾಗುವುದನ್ನು ಎದುರು ನೋಡುತ್ತಿದ್ದಾರೆ. ಇದೀಗ ಕ್ರಿಕೆಟ್‌ ವೀಕ್ಷಕರಿಗಾಗಿ ದೇಶದ ಬಹುದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ಸ್ಪೆಷಲ್‌ ಆಫರ್‌ವೊಂದನ್ನು ಫೋಷಿಸಿದೆ. 667 ರೂ ಹಾಗೂ 444 ರೂಪಾಯಿಗಳ ಎರಡು ವಿಶೇಷ ಆಫರ್‌ ಬಿಡುಗಡೆ ಮಾಡಿದೆ ರಿಲಯನ್ಸ್‌ ಜಿಯೋ. ಈ ಎರಡೂ ಯೋಜನೆಗಳು ಗ್ರಾಹಕರಿಗೆ ಡೇಟಾ ನೀಡುವ ಯೋಜನೆಯಾಗಿದೆ. ಐಪಿಎಲ್‌ ಮ್ಯಾಚ್‌ ವೀಕ್ಷಣೆಗೆ ನೀವು ವೈಫೈ ಸಂಪರ್ಕ ಹೊಂದಿಲ್ಲ ಎಂದಾದರೆ, ಜಿಯೋದ ಈ ವಿಶೇಷ ಆಫರ್‌ ನಿಮಗೆ ಬೆಸ್ಟ್‌ ಅನ್ನಿಸೋದು ಪಕ್ಕಾ.

ಐಪಿಎಲ್‌ನ ಹೊಸ ಆವೃತ್ತಿಯು ಮಾರ್ಚ್‌ 22 ರಿಂದ ಆರಂಭವಾಗಲಿದೆ. ಈ ವಿಶೇಷ ಪ್ಲಾನ್‌ನಲ್ಲಿ ಏನೆಲ್ಲಾ ಸೌಲಭ್ಯವಿರಲಿದೆ ನೋಡಿ.

ಐಪಿಎಲ್‌ ಸ್ಪೆಷಲ್‌ ಪ್ಲಾನ್‌ ಹೀಗಿದೆ

667 ಪ್ಲಾನ್‌ 90 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಇದು ಕೇವಲ ಡೇಟಾ ಆಫರ್‌ ಆಗಿದ್ದು, ಇದರೊಂದಿಗೆ ಯಾವುದೇ ಕರೆ ಅಥವಾ ಎಸ್‌ಎಂಎಸ್‌ ಸೌಲಭ್ಯವಿರುವುದಿಲ್ಲ. ಅಲ್ಲದೇ ನೀವು ಸಕ್ರಿಯ ಬ್ರೇಸ್‌ ಪ್ರಿಪೇಯ್ಡ್‌ ಯೋಜನೆಯ ಜೊತೆಗೆ ಇದನ್ನು ಮಾಡಿಸಬೇಕಾಗುತ್ತದೆ. ಇದರಲ್ಲಿ ಗ್ರಾಹಕರು 150 ಜಿಬಿ ಡೇಟಾ ಪಡೆಯುತ್ತಾರೆ.

444 ರೂ. ಗಳ ವಿಶೇಷ ಪ್ಲಾನ್‌ 60ದಿನಗಳ ವ್ಯಾಲಿಡಿಟಿಯೊಂದಿಗೆ 100 ಜಿಬಿ ಡೇಟಾ ಸಿಗಲಿದೆ. ಈ ಎರಡೂ ಆಫರ್‌ಗಳು ಐಪಿಎಲ್‌ ಸಮಯದಲ್ಲಿ ಗ್ರಾಹಕರಿಗೆ ತಡೆರಹಿತ ಇಂಟರ್‌ನೆಟ್‌ ಅನುಭವ ಪಡೆಯಲು ಸಹಾಯ ಮಾಡುತ್ತದೆ.

ಫೋನ್‌ ಅಥವಾ ಟ್ಯಾಬ್‌ನಲ್ಲಿ ಐಪಿಎಲ್‌ ಮ್ಯಾಚ್‌ ವೀಕ್ಷಿಸಲು ನೀವು ಜಿಯೋಸಿನಿಮಾ ಆಪ್‌ ಡೌನ್‌ಲೋಡ್‌ ಮಾಡಬಹುದು. ಈ ಆಪ್‌ನಲ್ಲಿ ಬಳಕೆದಾರರಿಗೆ ಉಚಿತವಾಗಿ ಲೈವ್‌ಸ್ಟ್ರೀಮ್‌ ನೀಡಲಾಗುತ್ತದೆ. ಇದಕ್ಕಾಗಿ ನೀವು ಜಿಯೋಸಿನಿಮಾ ಪ್ರೀಮಿಯಂ ಚಂದಾದಾರಿಕೆ ಅಗತ್ಯವಿಲ್ಲ. ಜಿಯೋ ಸಿನಿಮಾ ಲಾಗಿನ್‌ ಆಗಲು ಬೇರೆ ಕಂಪನಿಯ ನಂಬರ್‌ಗಳನ್ನೂ ಬಳಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ