logo
ಕನ್ನಡ ಸುದ್ದಿ  /  ಜೀವನಶೈಲಿ  /  Eating Eggs In Winter: ಬೇರೆ ಸೀಸನ್‌ಗಳಿಗಿಂತ ಚಳಿಗಾಲದಲ್ಲಿ ಪ್ರತಿದಿನ ಮೊಟ್ಟೆ ತಿನ್ನುವುದು ಎಷ್ಟು ಉಪಯೋಗಕಾರಿ ನೋಡಿ!

Eating eggs in winter: ಬೇರೆ ಸೀಸನ್‌ಗಳಿಗಿಂತ ಚಳಿಗಾಲದಲ್ಲಿ ಪ್ರತಿದಿನ ಮೊಟ್ಟೆ ತಿನ್ನುವುದು ಎಷ್ಟು ಉಪಯೋಗಕಾರಿ ನೋಡಿ!

HT Kannada Desk HT Kannada

Jan 09, 2023 10:13 PM IST

ಚಳಿಗಾಲದಲ್ಲಿ ಮೊಟ್ಟೆ ತಿನ್ನುವ ಉಪಯೋಗಗಳು

    • ಚಳಿಗಾಲದಲ್ಲಿ ಬಿಸಿಲು ಕಡಿಮೆ. ಅಂತಹ ಸಂದರ್ಭಗಳಲ್ಲಿ, ದೇಹದಲ್ಲಿ ವಿಟಮಿನ್ ಡಿ ಕೊರತೆ ಸಂಭವಿಸಬಹುದು. ನಮಗೆ ದಿನಕ್ಕೆ 10 ಎಂಸಿಜಿ ವಿಟಮಿನ್ ಡಿ ಅಗತ್ಯವಿದೆ. ಒಂದು ಮೊಟ್ಟೆಯು 8.2 ಎಮ್‌ಸಿಜಿ ವಿಟಮಿನ್ ಡಿ ಹೊಂದಿರುತ್ತದೆ. ಆದ್ದರಿಂದ ದಿನಕ್ಕೆ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ಸಾಕಷ್ಟು ವಿಟಮಿನ್ ಡಿ ಪಡೆಯಬಹುದು.
ಚಳಿಗಾಲದಲ್ಲಿ ಮೊಟ್ಟೆ ತಿನ್ನುವ ಉಪಯೋಗಗಳು
ಚಳಿಗಾಲದಲ್ಲಿ ಮೊಟ್ಟೆ ತಿನ್ನುವ ಉಪಯೋಗಗಳು (PC: Unsplash)

ಪ್ರತಿ ಋತುವಿನಲ್ಲಿ ಆರೋಗ್ಯ ಏರು ಪೇರಾಗುತ್ತದೆ. ಅದೇ ರೀತಿ ಚಳಿಗಾಲದಲ್ಲಿ ಕೂಡಾ ಕೆಲವೊಂದು ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ತಾಪಮಾನ ಕಡಿಮೆಯಾದಂತೆ, ದೇಹದಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಮೂಳೆ ನೋವು ಪ್ರಾರಂಭವಾಗುತ್ತದೆ, ಕೂದಲು ಉದುರುತ್ತದೆ, ರೋಗ ನಿರೋಧಕ ಶಕ್ತಿಯೂ ಕಡಿಮೆ ಆಗುತ್ತದೆ. ಅಂತಹ ಸಮಯದಲ್ಲಿ, ನಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಹಾಗೇ ನೀವು ಚಳಿಗಾದಲ್ಲಿ ಮೊಟ್ಟೆ ತಿನ್ನುತ್ತಿದ್ದೀರಾ? ಹಾಗಿದ್ರೆ ಖಂಡಿತ ಇದು ನಿಮಗೆ ಸಹಾಯಕವಾಗಲಿದೆ. ಚಳಿಗಾಲದಲ್ಲಿ ಮೊಟ್ಟೆ ತಿನ್ನುವುದು ಬಹಳ ಪ್ರಯೋಜನಕಾರಿ. ಮೊಟ್ಟೆಗಳು ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಾಗಿಸಲು ಸಹಾಯ ಮಾಡುತ್ತದೆ.

ಶೀತ ಮತ್ತು ಕೆಮ್ಮು ತಡೆಗಟ್ಟುತ್ತದೆ

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಆದ್ದರಿಂದ ಜನರಿಗೆ ಕೆಮ್ಮು ಮತ್ತು ನೆಗಡಿ ಬೇಗ ಹರಡುತ್ತದೆ. ಈ ಸಂದರ್ಭದಲ್ಲಿ, ಮೊಟ್ಟೆಯಲ್ಲಿರುವ ಪ್ರೋಟೀನ್, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ವಿಟಮಿನ್ ಬಿ 6 ಮತ್ತು ಬಿ 12 ಅಂಶವನ್ನು ಹೊಂದಿದೆ. ಈ ಪೋಷಕಾಂಶಗಳು ಜ್ವರವನ್ನು ತಡೆಯಲು ಸಹಾಯ ಮಾಡುತ್ತದೆ.

ಮೂಳೆಗಳ ಆರೋಗ್ಯಕ್ಕೆ ಮೊಟ್ಟೆ ಉಪಯುಕ್ತ

ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಕ್ಯಾಲ್ಸಿಯಂ ಸಿಗುತ್ತದೆ. ಇದು ಮೂಳೆಗಳಿಗೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಮೊಟ್ಟೆಯಲ್ಲಿ ವಿಟಮಿನ್ ಡಿ, ಸತು ಮತ್ತು ಆಸ್ಟಿಯೋಜೆನಿಕ್ ಬಯೋಆಕ್ಟಿವ್ ಅಂಶಗಳಿವೆ. ಅವು ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಅಂಶಗಳನ್ನು ಹೆಚ್ಚಿಸುತ್ತವೆ, ಇದು ಮೂಳೆಗಳನ್ನು ಒಳಗಿನಿಂದ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೀಗೆ ಮಾಡಿದರೆ ಚಳಿಗಾಲದಲ್ಲಿ ಕೀಲು ನೋವು, ಮಂಡಿನೋವುಗಳಿಂದ ದೂರವಿರಬಹುದು.

ವಿಟಮಿನ್ ಡಿ ಕೊರತೆಯಿಂದ ಕಾಪಾಡುತ್ತದೆ

ಚಳಿಗಾಲದಲ್ಲಿ ಬಿಸಿಲು ಕಡಿಮೆ. ಅಂತಹ ಸಂದರ್ಭಗಳಲ್ಲಿ, ದೇಹದಲ್ಲಿ ವಿಟಮಿನ್ ಡಿ ಕೊರತೆ ಸಂಭವಿಸಬಹುದು. ನಮಗೆ ದಿನಕ್ಕೆ 10 ಎಂಸಿಜಿ ವಿಟಮಿನ್ ಡಿ ಅಗತ್ಯವಿದೆ. ಒಂದು ಮೊಟ್ಟೆಯು 8.2 ಎಮ್‌ಸಿಜಿ ವಿಟಮಿನ್ ಡಿ ಹೊಂದಿರುತ್ತದೆ. ಆದ್ದರಿಂದ ದಿನಕ್ಕೆ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ಸಾಕಷ್ಟು ವಿಟಮಿನ್ ಡಿ ಪಡೆಯಬಹುದು. ಬಿಸಿಲಿನಲ್ಲಿ ತಿರುಗಾಡದವರಿಗೆ ಪ್ರತಿದಿನ ಮೊಟ್ಟೆ ತಿಂದರೆ ಬಹಳ ಉಪಯುಕ್ತವಾಗಿದೆ.

ವಿಟಮಿನ್ ಬಿ 12 ಕೊರತೆಗೆ ಮೊಟ್ಟೆಗಳು

ಪ್ರತಿದಿನ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ವಿಟಮಿನ್ ಬಿ 12 ಅಂಶದ ದೈನಂದಿನ ಅಗತ್ಯದ 50 ಪ್ರತಿಶತವನ್ನು ಒದಗಿಸುತ್ತದೆ. ಒಂದು ಬೇಯಿಸಿದ ಮೊಟ್ಟೆಯಲ್ಲಿ 0.6 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಬಿ12 ಇರುತ್ತದೆ. ವಿಟಮಿನ್ ಬಿ 12, ಕೊರತೆಯನ್ನು ತಪ್ಪಿಸಲು, ಹಳದಿ ಭಾಗದ ಸಹಿತ ಎರಡು ಮೊಟ್ಟೆಗಳನ್ನು ತಿನ್ನಬೇಕು. ಏಕೆಂದರೆ ಹೆಚ್ಚಿನ ವಿಟಮಿನ್ ಬಿ12 ಹಳದಿ ಭಾಗದಿಂದ ದೊರೆಯುತ್ತದೆ.

ಚಳಿಗಾಲದಲ್ಲಿ ಕೂದಲು ಉದುರುವುದನ್ನು ತಡೆಯಲು ಮೊಟ್ಟೆ ಸಹಾಯಕಾರಿ

ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಮೊಟ್ಟೆ ತಿನ್ನುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ. ಮೊಟ್ಟೆಗಳಲ್ಲಿ ವಿಟಮಿನ್ ಬಿ 12, ಬಿ 5, ಬಯೋಟಿನ್, ರೈಬೋಫ್ಲಾವಿನ್, ಥಯಾಮಿನ್, ಬಿ ಕಾಂಪ್ಲೆಕ್ಸ್ ವಿಟಮಿನ್ ಡಿ, ಇ ಮತ್ತು ಸೆಲೆನಿಯಮ್, ಕಬ್ಬಿಣ ಮತ್ತು ಫೋಲೇಟ್ ನಂತಹ ಖನಿಜಗಳು ಸಮೃದ್ಧವಾಗಿವೆ. ಅವು ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು