Winter Tips: ಒಡೆದ-ಬಿರುಕು ಬಿಟ್ಟ ಚರ್ಮಕ್ಕೆ ಮನೆಯಲ್ಲೇ ಪರಿಹಾರವಿದೆ; ಚಳಿಗಾಲದಲ್ಲಿ ಚರ್ಮದ ಕಾಳಜಿ ಹೀಗಿರಲಿ
Nov 28, 2024 10:33 AM IST
ಒಡೆದ-ಬಿರುಕು ಬಿಟ್ಟ ಚರ್ಮಕ್ಕೆ ಮನೆಯಲ್ಲೇ ಪರಿಹಾರವಿದೆ; ಚಳಿಗಾಲದಲ್ಲಿ ಚರ್ಮದ ಕಾಳಜಿ ಹೀಗಿರಲಿ
- ಚಳಿಗಾಲದಲ್ಲಿ ಚರ್ಮ ಒಣಗಿದಾಗ ಮಾಯಿಶ್ಚರೈಸರ್ ಬಳಸುವುದು ಅನಿವಾರ್ಯ. ಚರ್ಮವು ಹೈಡ್ರೇಟ್ ಮಾಡಲು ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಅಗತ್ಯವಿದೆ. ಇದರಿಂದ ಚರ್ಮ ಒಣಗುವುದು, ಬಿರುಕು ಬಿಡುವುದು ತಪ್ಪುತ್ತದೆ. ಇದರ ಹೊರತಾಗಿ ಚಳಿಗಾಲದಲ್ಲಿ ಚರ್ಮದ ಕಾಳಜಿ, ಹೆಚ್ಚುವರಿ ಆರೈಕೆ ಅಗತ್ಯ.
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಹೆಚ್ಚು. ಇದೇ ವೇಳೆ ಸಹಜವಾಗಿ ಸೌಂದರ್ಯ ಕಾಳಜಿ ಹೆಚ್ಚಾಗುತ್ತದೆ. ತ್ವಚೆ ಒಣಗುವುದು, ಚರ್ಮದಲ್ಲಿ ಬಿರುಕು ಅಥವಾ ಒಡೆಯುವ ಕಾರಣದಿಂದ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಚರ್ಮ ಬಿರುಕು ಬಿಟ್ಟಾಗ ಕಡಿತ ಮತ್ತು ಕಿರಿಕಿರಿ ಅನುಭವವಾಗುತ್ತದೆ. ಸಾಮಾನ್ಯವಾಗಿ ಚರ್ಮ ಶುಷ್ಕವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆ ಅಥವಾ ಪರಿಹಾರೋಪಾಯಗಳಿವೆ. ಆದರೆ, ಮುಖ್ಯವಾಗಿ ಚರ್ಮವನ್ನು ತೇವಗೊಳಿಸುವುದೇ (ಮಾಯಿಶ್ಚರೈಸ್) ಪ್ರಮುಖ ಪರಿಹಾರ.
ಚಳಿಗಾಲವು ಹೆಚ್ಚಿನ ಜನರ ದೇಹಕ್ಕೆ ಆಗಿಬರುವುದಿಲ್ಲ. ಶುಷ್ಕ ಗಾಳಿಯಿಂದಾಗಿ ಕೈಗಳು, ತುಟಿ ಅಥವಾ ಪಾದಗಳು ಡ್ರೈ ಆಗುತ್ತದೆ. ಕ್ರಮೇಣ ಇಮ್ಮಡಿ ಒಡೆಯುವುದು, ಚರ್ಮ ಬಿರುಕು ಬಿಡುವುದು ಕಾಣಿಸಿಕೊಳ್ಳುತ್ತದೆ. ಎಸ್ಜಿಮಾ ಅಥವಾ ಸೋರಿಯಾಸಿಸ್‌ನಂತಹ ಚರ್ಮದ ಸ್ಥಿತಿಯಿಂದಾಗಿ ಅಥವಾ ಚರ್ಮಕ್ಕೆ ಕಿರಿಕಿರಿ ಉಂಟುಮಾಡುವಂಥಾ ವಸ್ತುವು ಚರ್ಮದ ಸಂಪರ್ಕಕ್ಕೆ ಬಂದಾಗ ಚರ್ಮ ಬಿರುಕು ಬಿಡುತ್ತದೆ.
ಇತರ ಆರೋಗ್ಯ ಸಮಸ್ಯೆಗಳಿದ್ದಾಗ ಬಿರುಕು ಸಮಸ್ಯೆ ಹೆಚ್ಚು. ಉದಾಹರಣೆಗೆ, ಮಧುಮೇಹ ಇರುವ ಜನರಲ್ಲಿ ಚರ್ಮದ ಬಿರುಕನ್ನು ಗಮನಿಸಬಹುದು. ಇಲ್ಲಿ ಕೈ, ಪಾದ ಮತ್ತು ತುಟಿ ಬಿರುಕು ಬಿಡಲು ಸಾಮಾನ್ಯ ಕಾರಣಗಳು, ಅದಕ್ಕೆ ಸೂಕ್ತ ಮನೆಮದ್ದು ಹಾಗೂ ವೈದ್ಯಕೀಯ ಚಿಕಿತ್ಸೆ ಏನು ಎಂಬುದನ್ನು ನೋಡೋಣ.
ಚರ್ಮದ ಬಿರುಕಿಗೆ ಕಾರಣಗಳೇನು?
ಒಣ ಚರ್ಮ
ಕೈ, ಪಾದ ಮತ್ತು ತುಟಿಗಳ ಮೇಲೆ ಚರ್ಮ ಬಿರುಕು ಬಿಡಲು ಹಲವು ಕಾರಣಗಳಿವೆ. ಚಳಿಗಾಲದ ಕಠಿಣ ಚಳಿಗೆ ಗಾಳಿಯು ಚರ್ಮವನ್ನು ಒಣಗಿಸುತ್ತದೆ. ಗಾಳಿಯ ಆರ್ದ್ರತೆ ಕಡಿಮೆಯಾದಾಗ, ಚರ್ಮವು ಒಣಗಿ ಬಿರುಕು ಬಿಡಬಹುದು. ಶೀತ ಅಥವಾ ಶುಷ್ಕ ವಾತಾವರಣದಲ್ಲಿ, ಕೆಲವರು ತುಟಿಯನ್ನು ಕಚ್ಚುವುದು ತೇವಗೊಳಿಸುವ ಪ್ರಯತ್ನ ಮಾಡುವುದರಿಂದ ಬಿರುಕು ಹೆಚ್ಚುತ್ತದೆ.
ಚರ್ಮದ ಬಿರುಕಿಗೆ ಮನೆ ಮದ್ದು
ಚರ್ಮ ಒಡೆಯುವುದಕ್ಕೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಹಲವಾರು ವಿಧಾನಗಳಿವೆ. ಈ ವಿಧಾನಗಳನ್ನು ನೀವು ಪ್ರಯತ್ನಿಸಬಹುದು.
ಆರ್ಧ್ರಕ ಮುಲಾಮು ಅಥವಾ ಕ್ರೀಮ್ (ಮಾಯಿಶ್ಚರೈಸರ್)
ಶುಷ್ಕ ಚರ್ಮವು ಬಿರುಕುಗಳನ್ನು ಉಂಟುಮಾಡಬಹುದು. ಅಥವಾ ಚರ್ಮವನ್ನೇ ಹದಗೆಡಿಸಬಹುದು. ಹೀಗಾಗಿ ಚರ್ಮವನ್ನು ಚೆನ್ನಾಗಿ ಹೈಡ್ರೀಕರಿಸುವುದು ಮುಖ್ಯ. ಆಗಾಗ ಮಾಯಿಶ್ಚರೈಸರ್ ಹಚ್ಚುವ ಮೂಲಕ ಪರಿಹಾರ ಪಡೆಯಬಹುದು. ಸ್ನಾನ ಮಾಡಿದ ತಕ್ಷಣ ಸೇರಿದಂತೆ ದಿನಕ್ಕೆ ಎರಡರಿಂದ ಮೂರು ಬಾರಿ ಮಾಯಿಶ್ಚರೈಸರ್ ಹಚ್ಚಿ. ದೇಹದ ಒಣ ಭಾಗಗಳ ಮೇಲೆ ಕೇಂದ್ರೀಕರಿಸಿ.
ಮನೆಯಲ್ಲೇ ಇರುವ ಈ ಪದಾರ್ಥಗಳನ್ನುಬಳಸಬಹುದು
- ತೆಂಗಿನ ಎಣ್ಣೆ
- ಆಲಿವ್ ಎಣ್ಣೆ
- ಶಿಯಾ ಬೆಣ್ಣೆ
ಇದನ್ನೂ ಓದಿ | ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಾಗಿಸಲು ಸೇವಿಸಿ ಕ್ಯಾರೆಟ್-ಶುಂಠಿ ಸೂಪ್: ಇದನ್ನು ತಯಾರಿಸುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ
ಮೆಡಿಕಲ್‌ನಲ್ಲಿ ಸಿಗುವ ಈ ಮಾಯಿಶ್‌ಚರೈಸರ್ ಬಳಸಬಹುದು
- CeraVe Moisturizing Cream
- Vanicream Moisturizing Skin Cream
- La Roche-Posay Lipikar Balm AP+ Moisturizer
ಪೆಟ್ರೋಲಿಯಂ ಜೆಲ್ಲಿ
ಪೆಟ್ರೋಲಿಯಂ ಜೆಲ್ಲಿ ನಿಮ್ಮ ಚರ್ಮ ಬಿರುಕನ್ನು ಮುಚ್ಚುವ ಮತ್ತು ರಕ್ಷಿಸುವ ಮೂಲಕ ಬಿರುಕುಗಳಿಗೆ ಚಿಕಿತ್ಸೆ ನೀಡುತ್ತದೆ. ಜೆಲ್ಲಿಯು ತೇವಾಂಶವನ್ನು ಲಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ಬಿರುಕು ಬಿಟ್ಟ ಚರ್ಮವನ್ನು ಸರಿಪಡಿಸಲು ಇದು ಸಹಾಯ ಮಾಡುತ್ತದೆ.
ಟಾಪಿಕಲ್ ಹೈಡ್ರೋಕಾರ್ಟಿಸೋನ್ ಕ್ರೀಮ್
ಕೆಂಪು ತೇಪೆಗಳು ಅಥವಾ ತುರಿಕೆ ಇರುವ ಬಿರುಕು ಬಿಟ್ಟ ಚರ್ಮಕ್ಕೆ ಟಾಪಿಕಲ್ ಹೈಡ್ರೋಕಾರ್ಟಿಸೋನ್ ಕ್ರೀಮ್ ಉತ್ತಮ ಆಯ್ಕೆ. ಇದು ಕಿರಿಕಿರಿ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಔಷಧಿ ಅಂಗಡಿಯಲ್ಲಿ ಇದನ್ನು ನೀವು ಖರೀದಿಸಬಹುದು. ಆದರೆ, ಇದನ್ನು ಬಳಸುವಾಗ ಪ್ಯಾಕೇಜ್‌ನ ನಿರ್ದೇಶನಗಳನ್ನು ಸರಿಯಾಗಿ ಅನುಸರಿಸಬೇಕು. ಇಲ್ಲವಾದಲ್ಲಿ ವೈದ್ಯರೊಂದಿಗೆ ಮಾತನಾಡಿ ಬಳಸಬೇಕು.
ಲಿಕ್ವಿಡ್ ಬ್ಯಾಂಡೇಜ್
ಲಿಕ್ವಿಡ್ ಚರ್ಮದ ಬ್ಯಾಂಡೇಜ್ ಕೂಡಾ ಆಳವಾದ ಚರ್ಮದ ಬಿರುಕುಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಬಿರುಕು ಬಿಟ್ಟ ಚರ್ಮವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಕಾರ್ಯನಿರ್ವಹಿಸುತ್ತದೆ. ದ್ರವ ಬ್ಯಾಂಡೇಜ್ ಬಳಸಲು, ಪ್ಯಾಕೇಟ್ ಮೇಲಿನ ನಿರ್ದೇಶನಗಳನ್ನು ಅನುಸರಿಸಿ. ಇದು ಚರ್ಮಕ್ಕೆ ಅಂಟಿಕೊಳ್ಳಬೇಕಾಗಿರುವುದರಿಂದ, ಅದನ್ನು ಇತರ ಕ್ರೀಮ್ ಅಥವಾ ಮಾಯಿಶ್ಚರೈಸರ್ ಹಚ್ಚಿದ ನಂತರ ಬಳಸಬೇಡಿ.
ಎಕ್ಸ್ಫೋಲಿಯೇಶನ್
ಇದು ಒಣ ಚರ್ಮ ನಿವಾರಣೆಗೆ ಬಳಕೆಯಲ್ಲಿರುವ ಕ್ರಮ. ಇದರಿಂದ ಚರ್ಮದ ಮೇಲ್ಮೈಯಿಂದ ಸತ್ತ, ಒಣ ಕೋಶಗಳು ಹೊರಬರುತ್ತವೆ. ಪಾದಗಳನ್ನು ಎಫ್ಫೋಲಿಯೇಟ್ ಮಾಡಲು ಈ ಕ್ರಮ ಅನುಸರಿಸಿ.
- ಪಾದಗಳನ್ನು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ.
- ಒಣ ಚರ್ಮವನ್ನು ನಿಧಾನವಾಗಿ ಸ್ಕ್ರಬ್ ಮಾಡಲು ಲೂಫಾ ಅಥವಾ ಪ್ಯೂಮಿಸ್ ಸ್ಟೋನ್ ಬಳಸಿ.
- ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒಣಗಿಸಿ ಮಾಯಿಶ್ಚರೈಸರ್ ಹಚ್ಚಿ.
- ವಾರಕ್ಕೊಮ್ಮೆ ಅಥವಾ ಎರಡು ಬಾರಿ ಎಫ್ಫೋಲಿಯೇಟ್ ಮಾಡಿ.
ಇದನ್ನೂ ಓದಿ | ಚಳಿಗಾಲದಲ್ಲಿ ಕೋಲ್ಡ್ ಆಗೋದು ಸಹಜ ಅಂತ ನಿರ್ಲಕ್ಷ್ಯ ಮಾಡಬೇಡಿ, ಈ 5 ಲಕ್ಷಣಗಳು ಕ್ಯಾನ್ಸರ್ ಸಂಕೇತವೂ ಆಗಿರಬಹುದು ಎಚ್ಚರ