World Environment Day: ಸದ್ದಿಲ್ಲದೆ ಮಕ್ಕಳ ದೇಹ ಸೇರುತ್ತಿವೆ ಮೈಕ್ರೊಪ್ಲಾಸ್ಟಿಕ್‌ಗಳು; ಆಟಿಕೆ, ಬಾಟಲಿಗಳಿಂದಲೂ ಅಪಾಯ; ಇರಲಿ ಎಚ್ಚರ
Jun 05, 2023 08:00 AM IST
World Environment Day; ಸದ್ದಿಲ್ಲದೆ ಮಕ್ಕಳ ದೇಹ ಸೇರುತ್ತಿವೆ ಮೈಕ್ರೊಪ್ಲಾಸ್ಟಿಕ್‌ಗಳು; ಇರಲಿ ಎಚ್ಚರ
- Child Health and Microplastic: ಇತ್ತೀಚೆಗೆ ಪ್ಲಾಸ್ಟಿಕ್ ಪರಿಕರಗಳು ಜಗತ್ತನ್ನು ಆಳುತ್ತಿವೆ. ಆಟಿಕೆ, ಬಾಟಲಿಗಳು, ಟಿಫಿನ್‌ಗಳು, ಊಟದ ತಟ್ಟೆಗಳು ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿವೆ. ಆದರೆ ಇವುಗಳ ತಯಾರಿಕೆಯಲ್ಲಿ ಬಳಸಲಾಗುವ ಪ್ಲಾಸ್ಟಿಕ್ ತುಣುಕುಗಳು ಮಕ್ಕಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತಿವೆ.
5 ಮಿಲಿಮೀಟರ್‌ಗೂ ಕಡಿಮೆ ಗಾತ್ರ ಪ್ಲಾಸ್ಟಿಕ್‌ನ ಸಣ್ಣ ತುಣುಕುಗಳಾದ ಮೈಕ್ರೊಪ್ಲಾಸ್ಟಿಕ್‌ಗಳು ನಮ್ಮ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರವಲ್ಲದೆ, ನಮ್ಮ ಆರೋಗ್ಯಕ್ಕೂ ಅಪಾಯವನ್ನುಂಟು ಮಾಡುತ್ತಿವೆ. ಪ್ಲಾಸ್ಟಿಕ್ ಬಾಟಲಿಗಳು, ಟಿಫಿನ್, ಕಂಟೈನರ್‌ಗಳು, ಚಿಪ್ಸ್ ಪ್ಯಾಕೆಟ್‌ಗಳು, ಏಕಬಳಕೆಯ ಸ್ಟ್ರಾಗಳ ಬಳಕೆಯಿಂದ ಮೈಕ್ರೊಪ್ಲಾಸ್ಟಿಕ್‌ಗಳು ನಮ್ಮ ದೇಹವನ್ನು ಪ್ರವೇಶಿಸುತ್ತಿವೆ. ಈ ಪ್ಲಾಸ್ಟಿಕ್ ಕಣಗಳು ಸಾಗರಗಳು, ನದಿ, ಮಣ್ಣು ಹಾಗೂ ನಾವು ಉಸಿರಾಡುವ ಗಾಳಿಯಲ್ಲಿಯೂ ಸಹ ಕಂಡುಬರುತ್ತವೆ.
ಚಿಕ್ಕ ಮಕ್ಕಳು ಮೈಕ್ರೊಪ್ಲಾಸ್ಟಿಕ್‌ಗಳನ್ನು ಸೇವಿಸುವ ಅಪಾಯ ಹೆಚ್ಚು. ಏಕೆಂದರೆ ಮಕ್ಕಳು ತಮ್ಮ ದಿನನಿತ್ಯದ ಬಳಕೆಯ ವಸ್ತುಗಳನ್ನು ಆಗಾಗ್ಗೆ ಬಾಯಿಗೆ ಹಾಕುತ್ತಿರುತ್ತಾರೆ. ಮೈಕ್ರೊಪ್ಲಾಸ್ಟಿಕ್‌ಗಳು ಜೀರ್ಣಕಾರಿ ಸಮಸ್ಯೆ, ಉರಿಯೂತದಂತಹ ಸಮಸ್ಯೆಯನ್ನು ಉಂಟು ಮಾಡುವ ಜೊತೆಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆಗೂ ಅಡ್ಡಿಪಡಿಸಬಹುದು. ಇದು ಮಕ್ಕಳ ಬೆಳವಣಿಗೆಗೂ ಅಡ್ಡಿಪಡಿಸಬಹುದು. ಅಲ್ಲದೆ ಇದು ಮಕ್ಕಳಲ್ಲಿ ಹಲವು ರೀತಿ ತೊಂದರೆಗಳನ್ನು ಉಂಟು ಮಾಡಬಹುದು. ಆ ಕಾರಣಕ್ಕೆ ಮೈಕ್ರೊಪ್ಲಾಸ್ಟಿಕ್ ಅಂಶಗಳಿಂದ ಮಕ್ಕಳನ್ನು ದೂರ ಇರಿಸುವುದು ಬಹಳ ಮುಖ್ಯ.
ಮೈಕ್ರೊಪ್ಲಾಸ್ಟಿಕ್‌ನಿಂದ ಮಕ್ಕಳ ದೇಹದ ಮೇಲಾಗುವ ಅಪಾಯಗಳ ಬಗ್ಗೆ ಮಾತನಾಡುವ ಪುಣೆಯ ಮದರ್‌ಹುಡ್ ಆಸ್ಪತ್ರೆಯ ಶಿಶುರೋಗ ತಜ್ಞ ಡಾ. ಜಗದೀಶ್ ಕಥ್ವಾಟೆ ಹೇಳುವುದು ಹೀಗೆ.
ಭ್ರೂಣದ ಆರೋಗ್ಯದ ಬಗ್ಗೆಯೂ ಇರಲಿ ಎಚ್ಚರ
ʼಮೈಕ್ರೊಪ್ಲಾಸ್ಟಿಕ್‌ಗಳು ಮಕ್ಕಳಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸ್ಥೂಲಕಾಯತೆ, ಅಂಗಾಂಗ ಸಮಸ್ಯೆಗಳು ಮತ್ತು ಮಕ್ಕಳಲ್ಲಿ ಬೆಳವಣಿಗೆಯ ವಿಳಂಬದಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಇವು ಕಾರಣವಾಗಬಹುದು. ಬೊಜ್ಜು ಸಕಲ ರೋಗದ ತಾಯಿ ಎಂಬುದು ಹಲವರಿಗೆ ತಿಳಿದಿರುವ ವಿಚಾರ. ಪ್ರಪಂಚದ ಹಲವು ದೇಶಗಳಲ್ಲಿ ಬೊಜ್ಜು ಸಾಂಕ್ರಾಮಿಕವಾಗಿದೆ. ಇದು ಕೂಡ ಮೈಕ್ರೊಪ್ಲಾಸ್ಟಿಕ್ ಸೇವನೆಯ ಮೂಲದಿಂದ ಕಾಣಿಸಬಹುದು.
ಕುಡಿಯುವ ನೀರು, ಆಹಾರದಲ್ಲೂ ಪ್ಲಾಸ್ಟಿಕ್
ನಾವು ಸೇವಿಸುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಟದ ಮೂಲಕವೂ ಮೈಕ್ರೊಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರುತ್ತದೆ ಎಂಬುದು ಶಾಕಿಂಗ್ ವಿಚಾರವಾದರೂ ಇದು ಸತ್ಯ. ತಾಯಂದಿರು ಈ ರೀತಿ ಆಹಾರ, ನೀರು ಸೇವಿಸುವುದರಿಂದ ಭ್ರೂಣಕ್ಕೆ ತೊಂದರೆಯಾಗಬಹುದು. ಈ ರಾಸಾಯನಿಕ ಯುಕ್ತ ಮೈಕ್ರೊಪ್ಲಾಸ್ಟಿಕ್‌ಗಳು ಭ್ರೂಣಕ್ಕೂ ತೊಂದರೆ ಮಾಡುತ್ತವೆ. ಹೀಗಾಗಿ ಪೋಷಕರು ಮಕ್ಕಳ ಆರೋಗ್ಯ ಮಾತ್ರವಲ್ಲದೇ, ಭ್ರೂಣದ ಆರೋಗ್ಯದ ಬಗ್ಗೆಯೂ ಹೆಚ್ಚು ಎಚ್ಚರಿಕೆ ವಹಿಸಬೇಕುʼ.
ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಂದ ದೂರವಿರುವುದು ಅವಶ್ಯ ಮತ್ತು ಪ್ಲಾಸ್ಟಿಕ್ ಬಾಟಲಿಗಿಂತ ಗಾಜಿನ ಬಾಟಲಿಗಳಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಡಾ. ಕತ್ವಾಟೆ. ಇದರೊಂದಿಗೆ ಮಕ್ಕಳಿಗೆ ಆಡಲು ಪ್ಲಾಸ್ಟಿಕ್ ಆಟಿಕೆಗಳನ್ನು ನೀಡದೇ ಇರುವುದು ಸಹ ಮುಖ್ಯ ಎನ್ನುತ್ತಾರೆ ಅವರು.
ಪ್ಲಾಸ್ಟಿಕ್ ಬದಲು ಮರದ ಆಟಿಕೆ ನೀಡಿ
ʼಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಎಲ್ಲಾ ಸಂದೇಶಗಳನ್ನು ನಿವಾರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಅಷ್ಟೇ ಅಲ್ಲ, ಮೈಕ್ರೊಪ್ಲಾಸ್ಟಿಕ್‌ನಲ್ಲಿನ ರಾಸಾಯನಿಕಗಳು ಪ್ರತಿರಕ್ಷಣಾ ವಿರೋಧಿಗಳಾಗಿವೆ. ಮೈಕ್ರೊಪ್ಲಾಸ್ಟಿಕ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಕಾರಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದಕ್ಕೆ ಪೋಷಕರು ಒತ್ತು ನೀಡಬೇಕು, ಇದು ತೀರಾ ಅನಿವಾರ್ಯ ಕೂಡ. ಪ್ಲಾಸ್ಟಿಕ್ ಪ್ಯಾಕೇಜಿಂಗ್ ಇರುವ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಡಿ. ಮಗುವಿಗೆ ಹಾಲುಣಿಸಲು ಪ್ಲಾಸ್ಟಿಕ್ ಬದಲು ಗಾಜಿನ ಬಾಟಲಿಯನ್ನು ಆರಿಸಿಕೊಳ್ಳಿ. ಮಕ್ಕಳು ಪ್ಲಾಸ್ಟಿಕ್ ಆಟಿಕೆಗಳು ಹಾಗೂ ಬಾಟಲಿಯನ್ನು ಬಾಯಿಗೆ ಹಾಕದಂತೆ ತಡೆಯಿರಿ. ಪ್ಲಾಸ್ಟಿಕ್ ಬದಲು ಮರದ ಆಟಿಕೆಗಳನ್ನು ನೀಡುವುದು ಉತ್ತಮ ಎನ್ನುತ್ತಾರೆ ಡಾ. ಕಥ್ವಾಟೆ.
ವಿಭಾಗ