logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi On 6g Services: 5ಜಿ ಮಾತ್ರವಲ್ಲ, 6ಜಿನೂ ಬರುತ್ತೆ, ಪ್ರಧಾನಿ ನರೇಂದ್ರ ಮೋದಿ ನೀಡಿದ ಮಾಹಿತಿಯೇನು?

PM Modi On 6G Services: 5ಜಿ ಮಾತ್ರವಲ್ಲ, 6ಜಿನೂ ಬರುತ್ತೆ, ಪ್ರಧಾನಿ ನರೇಂದ್ರ ಮೋದಿ ನೀಡಿದ ಮಾಹಿತಿಯೇನು?

HT Kannada Desk HT Kannada

Aug 27, 2022 02:13 PM IST

google News

ಪ್ರಧಾನಿ ಮೋದಿ

    • ದೇಶಕ್ಕೆ ಶೀಘ್ರದಲ್ಲಿ 5ಜಿ ನೆಟ್‌ವರ್ಕ್‌ ಆಗಮಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ದೇಶದಲ್ಲಿ 6ಜಿ ನೆಟ್‌ವರ್ಕ್‌ ಸೇವೆ ಯಾವಾಗ ಆಗಮಿಸಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ. ಈ ದಶಕದ ಕೊನೆಯ ವೇಳೆಗೆ ದೇಶದಲ್ಲಿ 6ಜಿ ನೆಟ್‌ವರ್ಕ್‌ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶಕ್ಕೆ ಶೀಘ್ರದಲ್ಲಿ 5ಜಿ ನೆಟ್‌ವರ್ಕ್‌ ಆಗಮಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ದೇಶದಲ್ಲಿ 6ಜಿ ನೆಟ್‌ವರ್ಕ್‌ ಸೇವೆ ಯಾವಾಗ ಆಗಮಿಸಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ. ಈ ದಶಕದ ಕೊನೆಯ ವೇಳೆಗೆ ದೇಶದಲ್ಲಿ 6ಜಿ ನೆಟ್‌ವರ್ಕ್‌ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2022ರಲ್ಲಿ (Smart India Hackathon 2022) ಪ್ರಧಾನಿ ನರೇಂದ್ರ ಮೋದಿ ಈ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು "ಅಕ್ಟೋಬರ್‌ 12ರಂದು ದೇಶದಲ್ಲಿ 5ಜಿ ಸೇವೆ ಆರಂಭಗೊಳ್ಳಲಿದೆʼʼ ಎಂದು ಟೆಲಿಕಾಂ ಸಚಿವರಾದ ಅಶ್ವಿನಿ ವೈಷ್ಣವ್‌ ತಿಳಿಸಿದ್ದರು.

"ನಾವು ಈ ದಶಕದ ಕೊನೆಗೆ 6ಜಿ ನೆಟ್‌ವರ್ಕ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ಗೇಮಿಂಗ್‌ ಮತ್ತು ಮನರಂಜನಾ ವಿಭಾಗದಲ್ಲಿ ಹೊಸ ಅನ್ವೇಷಣೆಗಳಿಗೆ ಸರಕಾರ ಪ್ರೋತ್ಸಾಹಿಸುತ್ತಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮುಂದಿನ ಎರಡು ಮೂರು ವರ್ಷಗಳಲ್ಲಿ ದೇಶದ ಪ್ರತಿಯೊಂದು ಭೂಭಾಗಗಳಲ್ಲಿಯೂ 5ಜಿ ನೆಟ್‌ವರ್ಕ್‌ ಸೇವೆ ಇರಲಿದೆ ಎಂದು ವೈಷ್ಣವ್‌ ಹೇಳಿದ್ದಾರೆ. "ನಾವು 5ಜಿ ಸೇವೆಯನ್ನು ಕ್ಷಿಪ್ರವಾಗಿ ಅಳವಡಿಸಲು ಯೋಜಿಸಿದ್ದೇವೆ. ಆಕ್ಟೋಬರ್‌ 12ರಂದು ದೇಶದಲ್ಲಿ 5ಜಿ ಲಾಂಚ್‌ ಮಾಡುವ ಉದ್ದೇಶವಿದೆ. ಬಳಿಕ ಈ ಸೇವೆಯನ್ನು ನಗರಗಳು, ಪಟ್ಟಣಗಳು, ಗ್ರಾಮಗಳಿಗೆ ವಿಸ್ತರಿಸಲಿದ್ದೇವೆʼʼ ಎಂದು ಅವರು ಹೇಳಿದ್ದರು.

ಭಾರತ ಟೆಲಿಕಾಂ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿರುವುದು ಮಹತ್ವದ ಹೆಜ್ಜೆಯಾಗಿದೆ. ದೇಶಿಯ ನಿರ್ಮಿತ 5ಜಿ ತಂತ್ರಜ್ಞಾನ ದೇಶದ ಎಲ್ಲ ಹಳ್ಳಿಗಳನ್ನೂ ತಲುಪಲಿದೆ. ಇದು ಹೆಮ್ಮೆಯ ವಿಚಾರವೂ ಹೌದು. ಇದರಿಂದ ಆಡಳಿತದಲ್ಲಿಯೂ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಸಾರಿಗೆ ಸೇರಿ ಪ್ರತಿಯೊಂದು ವಲಯದಲ್ಲಿ ಅಭಿವೃದ್ಧಿಗೆ ಸಹಾಯಕವಾಗಿಯೇ ಕೆಲಸ ಮಾಡಲಿದೆ. ಉದ್ಯೋಗಾವಕಾಶಗಳೂ ಅದೇ ನಿಟ್ಟಿನಲ್ಲಿ ತೆರೆದುಕೊಳ್ಳಲಿವೆ. ಒಟ್ಟಾರೆಯಾಗಿ ಸ್ವಾವಲಂಬನೆ ಮತ್ತು ಆರೋಗ್ಯಕರ ಸ್ಪರ್ಧೆಯು ಸಮಾಜ ಮತ್ತು ಆರ್ಥಿಕತೆಯ ಮೇಲೆ ಹೇಗೆ ಗುಣಾತ್ಮಕ ಪರಿಣಾಮ ಬೀರಬಹುದು ಎಂಬುದಕ್ಕೆ ಟೆಲಿಕಾಂ ವಲಯ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು.

ಬೆಂಗಳೂರು, ಅಹಮಾದಬಾದ್‌, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರ್‌ಗಾಂವ್‌, ಹೈದರಾಬಾದ್‌, ಸೇರಿದಂತೆ ದೇಶದ ಪ್ರಮುಖ ಹದಿಮೂರು ನಗರಗಳಲ್ಲಿ 5ಜಿ ಸೇವೆಯನ್ನು ಹೊರತರುವುದಾಗಿ ದೂರಸಂಪರ್ಕ ಇಲಾಖೆ ಈ ಹಿಂದೆ ತಿಳಿಸಿತ್ತು. ಜಿಯೋ, ಏರ್‌ಟೆಲ್‌ ಮಾತ್ರವಲ್ಲದೆ ವೋಡಾಫೋನ್‌ ಕೂಡ ಈಗಾಗಲೇ ಹದಿಮೂರು ನಗರಗಳಲ್ಲಿ 5ಜಿ ಟ್ರಯಲ್‌ ನಡೆಸುತ್ತಿದೆ.

5ಜಿ ಇಂಟರ್ನೆಟ್‌ ಸೇವೆಗಳು ಈ ತಿಂಗಳು ಪ್ರಾರಂಭವಾಗುತ್ತವೆಯಾದರೂ, ಅವು ದೇಶದ ಎಲ್ಲಾ ಹಳ್ಳಿಗಳಲ್ಲೂ ಸಿಗುತ್ತದೆ ಎಂದು ಹೇಳುವುದು ಕಷ್ಟ. ಆರಂಭದಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರಬಹುದು. ಉದಾಹರಣೆಗೆ ಮೆಟ್ರೋ ಪ್ರದೇಶಗಳು ಮತ್ತು ರಾಜ್ಯಗಳ ರಾಜಧಾನಿಯಂತಹ ನಗರಗಳಲ್ಲಿ ಮಾತ್ರ ಲಭ್ಯವಾಗಬಹುದು. ಇಲ್ಲವೇ ಪ್ರಮುಖ ನಗರಗಳಲ್ಲಿ ಲಭ್ಯವಾಗಬಹುದು.

ಈಗಾಗಲೇ ಹಲವಾರು ತಿಂಗಳುಗಳಿಂದ ಕೆಲವು ಸ್ಥಳಗಳಲ್ಲಿ 5ಜಿ ಪರೀಕ್ಷೆಯು ನಡೆಯುತ್ತಿವೆ. ಆರಂಭಿಕ ಹಂತದಲ್ಲಿ, ಏರ್‌ಟೆಲ್ ದೇಶದ 5,000 ಪಟ್ಟಣ ಮತ್ತು ನಗರಗಳಲ್ಲಿ 5ಜಿ ಸೇವೆಗಳನ್ನು ನೀಡುವ ಗುರಿ ಹೊಂದಿದೆ. ಆದರೆ ರಾಷ್ಟ್ರದಾದ್ಯಂತ 1,000 ಪಟ್ಟಣ ​​ಮತ್ತು ನಗರಗಳಲ್ಲಿ ಮಾತ್ರ ಈ ಸೇವೆ ಆರಂಭವಾಗಬಹುದು. 5ಜಿಯು​ ಸಂಪೂರ್ಣವಾಗಿ 2024ರ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲೂ ಲಭ್ಯವಾಗುವ ನಿರೀಕ್ಷೆಯಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ