logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈ ನಾಗರಿಕ ಸಮಾಜದಲ್ಲಿ, ಪತಿ ಆತನ ಕಾಮ ತಣಿಸಲು ಬೇರೆಲ್ಲಿಗೆ ಹೋಗಬಹುದು: ವರದಕ್ಷಿಣೆ ಕೇಸ್‌ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕಾಮೆಂಟ್

ಈ ನಾಗರಿಕ ಸಮಾಜದಲ್ಲಿ, ಪತಿ ಆತನ ಕಾಮ ತಣಿಸಲು ಬೇರೆಲ್ಲಿಗೆ ಹೋಗಬಹುದು: ವರದಕ್ಷಿಣೆ ಕೇಸ್‌ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕಾಮೆಂಟ್

Umesh Kumar S HT Kannada

Oct 17, 2024 03:01 PM IST

google News

ಈ ನಾಗರಿಕ ಸಮಾಜದಲ್ಲಿ, ಪತಿ ಆತನ ಕಾಮ ತಣಿಸಲು ಬೇರೆಲ್ಲಿಗೆ ಹೋಗಬಹುದು ಎಂದು ವರದಕ್ಷಿಣೆ ಕೇಸ್‌ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕಾಮೆಂಟ್ ಮಾಡಿದೆ.

  • ವರದಕ್ಷಿಣೆ ಕೇಸ್ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್‌, ಈ ನಾಗರಿಕ ಸಮಾಜದಲ್ಲಿ, ಪತಿ ಆತನ ಕಾಮ ತಣಿಸಲು ಬೇರೆಲ್ಲಿಗೆ ಹೋಗಬಹುದು ಎಂದು ಪ್ರಶ್ನಿಸಿರುವುದು ದೇಶದ ಗಮನಸೆಳೆದಿದೆ. ಈ ಕುತೂಹಲಕಾರಿ ಪ್ರಕರಣದ ವಿವರ ಇಲ್ಲಿದೆ.

ಈ ನಾಗರಿಕ ಸಮಾಜದಲ್ಲಿ, ಪತಿ ಆತನ ಕಾಮ ತಣಿಸಲು ಬೇರೆಲ್ಲಿಗೆ ಹೋಗಬಹುದು ಎಂದು ವರದಕ್ಷಿಣೆ ಕೇಸ್‌ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕಾಮೆಂಟ್ ಮಾಡಿದೆ.
ಈ ನಾಗರಿಕ ಸಮಾಜದಲ್ಲಿ, ಪತಿ ಆತನ ಕಾಮ ತಣಿಸಲು ಬೇರೆಲ್ಲಿಗೆ ಹೋಗಬಹುದು ಎಂದು ವರದಕ್ಷಿಣೆ ಕೇಸ್‌ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕಾಮೆಂಟ್ ಮಾಡಿದೆ.

ಅಲಹಾಬಾದ್‌: ಸಭ್ಯ ನಾಗರಿಕ ಸಮಾಜದಲ್ಲಿ ಕಾಮ ಬಯಕೆಗಳನ್ನು ತೀರಿಸಿಕೊಳ್ಳಲು ಸಂಗಾತಿಯನ್ನು ಬಿಟ್ಟು ಬೇರೆಡೆಗೆ ಹೋಗುವುದು ಸಾಧ್ಯವೇ?, ಗಂಡ ಹೆಂಡ್ತಿ ಪರಸ್ಪರ ಕಾಮ ತಣಿಸಿಕೊಳ್ಳದೇ ಇದ್ರೆ ಹೇಗೆ ಎಂದು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್‌ ಮಹಿಳೆಯೊಬ್ಬರು ಸಲ್ಲಿಸಿದ್ದ ವರದಕ್ಷಿಣೆ ಕೇಸ್‌, ಅಸ್ವಾಭಾವಿಕ ಲೈಂಗಿಕ ವರ್ತನೆ ಆರೋಪಗಳ ಎಫ್‌ಐಆರ್‌ ಅನ್ನು ರದ್ದುಗೊಳಿಸಿದೆ. ಮಹಿಳೆ ಮಾಡಿರುವ ಆರೋಪವನ್ನು ಸಾಬೀತು ಮಾಡುವಂತಹ ಪುರಾವೆಗಳು ಸಿಕ್ಕಿಲ್ಲ. ಬಹುಶಃ ಅದು ವ್ಯಕ್ತಿಗತ ವಿವಾದದಿಂದ ಪ್ರೇರಿತವಾದ ಪ್ರಕರಣ ಇದಾಗಿರಬಹುದು. ಸಭ್ಯ ನಾಗರಿಕ ಸಮಾಜದಲ್ಲಿ ಕಾಮ ತಣಿಸಿಕೊಳ್ಳಲು ಸಂಗಾತಿಯ ಬಳಿಗೆ ಹೋಗದೆ ಬೇರೆಲ್ಲಿ ಹೋಗಲು ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿರುವುದು ವ್ಯಾಪಕವಾಗಿ ಗಮನಸೆಳೆದಿದೆ.

ಅಲಹಾಬಾದ್ ಹೈಕೋರ್ಟ್‌ ಕಾಮೆಂಟ್ ಮೂಲಕ ಗಮನಸೆಳೆದ ಪ್ರಕರಣದ ಮುಖ್ಯಾಂಶ

ನ್ಯಾಯಮೂರ್ತಿ ಅನಿಶ್ ಕುಮಾರ್ ಗುಪ್ತಾ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದು, ಪ್ರಾಂಜಲ್‌ ಶುಕ್ಲಾ ಮತ್ತು ಇತರೆ ಇಬ್ಬರ ವಿರುದ್ಧ ದಾಖಲಾಗಿದ್ದ ಕೇಸ್ ಅನ್ನು ರದ್ದುಗೊಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ವರದಕ್ಷಿಣೆ ಕಿರುಕುಳದ ಆರೋಪಕ್ಕೆ ಪೂರಕ ಪುರಾವೆ ಅಥವಾ ಸಾಕ್ಷಿ ಹೇಳಿಕೆ ಕೂಡ ಇಲ್ಲದ ಕಾರಣ ಕೇಸ್ ರದ್ದುಗೊಳಿಸುತ್ತಿರುವುದಾಗಿ ಅವರು ಹೇಳಿದರು. ಕೋರ್ಟ್‌ ಗಮನಿಸಿದ ಅಂಶಗಳಿವು-

1) ವರದಕ್ಷಿಣೆ ಕಿರುಕುಳ ಎಂದು ದಾಖಲಾದ ಕೇಸ್‌ನ ಎಫ್‌ಐಆರ್ ಪ್ರಕಾರ, ದಂಪತಿಯ ಮೊದಲ ಆರೋಪವೇ ಲೈಂಗಿಕ ಬಯಕೆಗಳಿಗೆ ಸಂಬಂಧಿಸಿದ್ದಾಗಿದೆ. ಕೆಲವು ಲೈಂಗಿಕ ನಡವಳಿಕೆಗೆ ಪತ್ನಿ ನಿರಾಕರಿಸುತ್ತಿರುವ ವಿಚಾರ ಪ್ರಸ್ತಾಪವಾಗಿದೆ. ಆದರೆ ಈ ನಡವಳಿಕೆಗಳು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಲ್ಲ. ಇದು ದಂಪತಿ ನಡುವಿನ ತೀರಾ ವೈಯಕ್ತಿಕ ಭಿನ್ನಮತವಷ್ಟೆ.

2) ಕಕ್ಷಿದಾರರ ನಡುವಿನ ವಿವಾದವು ಅವರ ನಡುವಿನ ಲೈಂಗಿಕ ಸಾಮರಸ್ಯದ ಕೊರತೆ ಅಥವಾ ವಿವಾದ ಎಂಬುದು ಸ್ಪಷ್ಟ. ಈ ವಿವಾದದ ಕಾರಣ ದೂರುದಾರರು ಪ್ರತಿವಾದಿಯ ವಿರುದ್ಧ ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿ ಸುಳ್ಳು ಮತ್ತು ಸಂಯೋಜಿತ ಆರೋಪಗಳ ದೂರು ದಾಖಲಿಸಿ ಎಫ್ಐಆರ್ ದಾಖಲಾಗುವಂತೆ ಮಾಡಿರುವಂತಿದೆ.

3) ಒಬ್ಬ ಪುರುಷನು ತನ್ನ ಹೆಂಡತಿಯ ಬಳಿ ಕಾಮದಾಹ ತೀರಿಸುವಂತೆ ಕೋರಿದರೆ ತಪ್ಪೇನು, ಈ ಸಭ್ಯ ನಾಗರಿಕ ಸಮಾಜದಲ್ಲಿ ಅವರು ಕಾಮ ತಣಿಸಲು ಇನ್ನೆಲ್ಲಿಗೆ ಹೋಗಬೇಕು? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಪತಿಯ ವಿರುದ್ಧ ಪತ್ನಿಯ ದೂರು; ಎಫ್‌ಐಆರ್‌ನಲ್ಲಿದ್ದ ಅಂಶಗಳಿವು

1) ಪ್ರಾಂಜಲ್ ಶುಕ್ಲಾ ವಿರುದ್ಧ ಅವರ ಪತ್ನಿ ಮೀನಾ ಶುಕ್ಲ ದೂರು ದಾಖಲಿಸಿದ್ದರು. ಅಸ್ವಾಭಾವಿಕ ಲೈಂಗಿಕ ನಡೆ, ಅಶ್ಲೀಲ ಚಿತ್ರ ವೀಕ್ಷಿಸಲು ಬಲವಂತಮಾಡಿರುವುದು ಸೇರಿ ನಿಂದನೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದರು.

2) ಎಫ್‌ಐಆರ್‌ನಲ್ಲಿ ಪ್ರಾಂಜಲ್ ವಿರುದ್ಧ ಮದ್ಯಪಾನ ಮಾಡಿ ಅಶ್ಲೀಲ ಸಿನಿಮಾ ನೋಡಲು ಬಲವಂತ ಮಾಡುತ್ತಿದ್ದ ಬಗ್ಗೆ ಮತ್ತು ಅಸ್ವಾಭಾವಿಕ ಲೈಂಗಿಕ ಕೃತ್ಯಕ್ಕೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಪತ್ನಿ ನಿರಾಕರಿಸಿದರೂ ಬಿಡದೆ ಕಾಡಿದ್ದಾಗಿ ಆರೋಪವಿದೆ. ಇದಲ್ಲದೆ, ಪತ್ನಿಯನ್ನು ಊರಿನಲ್ಲೇ ಬಿಟ್ಟು ಸಿಂಗಾಪುರಕ್ಕೆ ಹೋದ ಬಗ್ಗೆಯೂ ಆರೋಪಿಸಲಾಗಿದೆ.

3) ಪತಿ ಪ್ರಾಂಜಲ್ ಶುಕ್ಲಾ ಅಪ್ಪ ಮಧು ಶರ್ಮಾ ಮತ್ತು ಅಮ್ಮ ಪುಣ್ಯಶೀಲ ಶರ್ಮಾ ವಿರುದ್ಧವೂ ದೂರು ದಾಖಲಿಸಿರುವ ಮೀನಾ, ಅವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದರು. ಈ ಎಫ್‌ಐಆರ್‌ನಲ್ಲಿ ಮದುವೆಗೆ ಮೊದಲು ವರದಕ್ಷಿಣೆಗೆ ಬೇಡಿಕೆ ಇರಿಸಿದ್ದ ಮತ್ತು ಪಡೆದುಕೊಂಡ ವಿವರ ಇಲ್ಲ.

ಈ ಕೇಸ್‌ನಲ್ಲಿ ಪ್ರಾಂಜಲ್ ವಿರುದ್ಧ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ನ್ಯಾಯಾಲಯ, “ತರಾತುರಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪ್ರತಿವಾದಿಗಳ ವಿರುದ್ಧದ ಆರೋಪ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪ ಹೊರಿಸಿ ಸಾಕ್ಷ್ಯಗಳು, ಪುರಾವೆಗಳನ್ನು ಒದಗಿಸಲಾಗಿಲ್ಲ” ಎಂಬುದನ್ನು ಗಮನಿಸಿರುವುದಾಗಿ ಸ್ಪಷ್ಟಪಡಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ