logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Anant Ambani Dubai House: ತಾಳೆ ಮರ ಹೋಲುವ ಕೃತಕ ದ್ವೀಪದಲ್ಲಿ ಅನಂತ್‌ ಅಂಬಾನಿ ಹೊಸ ವಿಲ್ಲಾ

Anant Ambani Dubai house: ತಾಳೆ ಮರ ಹೋಲುವ ಕೃತಕ ದ್ವೀಪದಲ್ಲಿ ಅನಂತ್‌ ಅಂಬಾನಿ ಹೊಸ ವಿಲ್ಲಾ

HT Kannada Desk HT Kannada

Aug 28, 2022 09:18 AM IST

google News

Anant Ambani Dubai house: ತಾಳೆ ಮರ ಹೋಲುವ ಕೃತಕ ದ್ವೀಪದಲ್ಲಿ ಅನಂತ್‌ ಅಂಬಾನಿ ಹೊಸ ವಿಲ್ಲಾ

    • ವಿಶ್ವದ ಅಗ್ರ 11 ಶ್ರೀಮಂತ ವ್ಯಕ್ತಿ, ಈಗ 65 ವರ್ಷಕ್ಕೆ ಕಾಲಿಟ್ಟಿರುವ ಮುಕೇಶ್‌ ಅಂಬಾನಿಯು ತನ್ನ ಬಿಸ್ನೆಸ್‌ ನಿಯಂತ್ರಣವನ್ನು ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ. ಅಂದಹಾಗೆ, ಅನಂತ್‌ ಅಂಬಾನಿಗಾಗಿ ಖರೀದಿಸಿರುವ ಹೊಸ ವಿಲ್ಲಾದ ಕುರಿತು ಇಲ್ಲಿಯವರೆಗೆ ಮಾಹಿತಿ ರಹಸ್ಯವಾಗಿಡಲಾಗಿತ್ತು.
Anant Ambani Dubai house: ತಾಳೆ ಮರ ಹೋಲುವ ಕೃತಕ ದ್ವೀಪದಲ್ಲಿ ಅನಂತ್‌ ಅಂಬಾನಿ ಹೊಸ ವಿಲ್ಲಾ
Anant Ambani Dubai house: ತಾಳೆ ಮರ ಹೋಲುವ ಕೃತಕ ದ್ವೀಪದಲ್ಲಿ ಅನಂತ್‌ ಅಂಬಾನಿ ಹೊಸ ವಿಲ್ಲಾ (gacialisdtiyk)

ದುಬೈ: ಇಲ್ಲಿನ ಪಾಮ್‌ ಜುಮೇರಾ ಎಂಬ ತಾಳೆ ಮರವನ್ನು ಹೋಲುವ ಕೃತಕ ದ್ವೀಪದಲ್ಲಿ ಮುಕೇಶ್‌ ಅಂಬಾನಿಯ ಪುತ್ರ ಅನಂತ್‌ ಅಂಬಾನಿ ಸುಮಾರು 80 ಮಿಲಿಯನ್‌ ಡಾಲರ್‌ (ಸುಮಾರು 640 ಕೋಟಿ ರೂ. ) ಮೌಲ್ಯದ ಮನೆ ಖರೀದಿಸಿದ್ದಾರೆ. ಈ ಮನೆಯು ಹತ್ತು ಬೆಡ್‌ರೂಂ, ಒಂದು ಖಾಸಗಿ ಸ್ಪಾ ಮತ್ತು ಒಂದು ಒಳಾಂಗಣ ಮತ್ತು ಹೊರಾಂಗಣ ಈಜುಕೊಳವನ್ನು ಹೊಂದಿದೆಯಂತೆ.

ಈ ಕುರಿತು ಚಿತ್ರ ಮಾಹಿತಿಯನ್ನು ಈಗಾಗಲೇ ಎಚ್‌ಟಿ ಕನ್ನಡ ಪ್ರಕಟಿಸಿದ್ದು, ಅದನ್ನು ನೋಡಲು ಈ ಲಿಂಕ್‌ ಕ್ಲಿಕ್ ಮಾಡಿ.

ವಿಶ್ವದ ಅಗ್ರ 11 ಶ್ರೀಮಂತ ವ್ಯಕ್ತಿ, ಈಗ 65 ವರ್ಷಕ್ಕೆ ಕಾಲಿಟ್ಟಿರುವ ಮುಕೇಶ್‌ ಅಂಬಾನಿಯು ತನ್ನ ಬಿಸ್ನೆಸ್‌ ನಿಯಂತ್ರಣವನ್ನು ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ. ಅಂದಹಾಗೆ, ಅನಂತ್‌ ಅಂಬಾನಿಗಾಗಿ ಖರೀದಿಸಿರುವ ಹೊಸ ವಿಲ್ಲಾದ ಕುರಿತು ಇಲ್ಲಿಯವರೆಗೆ ಮಾಹಿತಿ ರಹಸ್ಯವಾಗಿಡಲಾಗಿತ್ತು.

ಸುರಕ್ಷತೆ ಹೆಚ್ಚಿಸುವ ಸಲುವಾಗಿ ಹಲವು ಮಿಲಿಯನ್‌ ಡಾಲರ್‌ ವಿನಿಯೋಗಿಸಿ ಈ ಮನೆಯನ್ನು ಸಾಕಷ್ಟು ಕಸ್ಟಮೈಸ್‌ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಕೃತಕ ದ್ವೀಪ ಪಾಮ್ ಜುಮೇರಾದಲ್ಲಿರುವ ತಾಳೆ ಮರದ ಆಕಾರದಲ್ಲಿನ ದ್ವೀಪದಲ್ಲಿ ಜಗತ್ತಿನ ಪ್ರಮುಖ ಶ್ರೀಮಂತರು ಈಗಾಗಲೇ ಮನೆ ಖರೀದಿಸಿದ್ದಾರೆ. ಬ್ರಿಟನ್ ಫುಟ್‌ ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ ಅವರ ಪತ್ನಿ ವಿಕ್ಟೋರಿಯಾ ಹಾಗೂ ಬಾಲಿವುಡ್ ಮೆಗಾ ಸ್ಟಾರ್ ಶಾರುಖ್ ಖಾನ್‌ ಕೂಡ ಇಲ್ಲಿ ಮನೆ ಹೊಂದಿದ್ದಾರೆ. ದೀರ್ಘಾವಧಿಯ 'ಗೋಲ್ಡನ್ ವೀಸಾ' ಮತ್ತು ವಿದೇಶಿಯರಿಗೆ ಮನೆ ಮಾಲೀಕತ್ವದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಸರಕಾರವು ಶ್ರೀಮಂತರಿಗೆ ನೆರವಾಗಿದೆ.

ಇಟಾಲಿಯನ್ ಮಾರ್ಬಲ್ ಬಳಸಿದ ಸುಂದರವಾದ ವಿನ್ಯಾಸದಲ್ಲಿ ಈ ಮನೆ ನಿರ್ಮಿಸಲಾಗಿದೆ. ಮನೆಯೊಳಗೆ ಅತ್ಯಾಧುನಿಕ ಸೌಲಭ್ಯಗಳೆಲ್ಲ ಇವೆ. ಅಂದಹಾಗೆ, ದುಬಾರಿ ಪ್ರಾಪರ್ಟಿ ಮೇಲೆ ರಿಲಯೆನ್ಸ್‌ ಹೂಡಿಕೆ ಮಾಡುವುದು ಇದೇ ಮೊದಲಲ್ಲ. ಕಳೆದ ವರ್ಷ ಬ್ರಿಟನ್‌ನ ಸ್ಟೋಕ್ ಪಾರ್ಕ್‌ ಲಿಮಿಟೆಡ್ ಅನ್ನು 79 ದಶಲಕ್ಷ ಡಾಲರ್ ನೀಡಿ ಖರೀದಿಸಿತ್ತು. ಇದು ಜಾರ್ಜಿಯನ್ ಯುಗದ ಮೂಲ ಮಹಲ್ ಆಗಿದ್ದು, ದೊಡ್ಡ ಮಗ ಆಕಾಶ್ ಅಂಬಾನಿಗಾಗಿ ಇದರ ಖರೀದಿ ನಡೆದಿತ್ತು.

ಮಕ್ಕಳಿಗೆ ಆಸ್ತಿ ಹಂಚಿಕೆ

ಜಿಯೋದ ನಿರ್ದೇಶಕ ಸ್ಥಾನದಿಂದ ಮುಕೇಶ್‌ ಅಂಬಾನಿ ಈಗಾಗಲೇ ಕೆಳಗಿಳಿದ್ದಾರೆ. ಈ ಸ್ಥಾನಕ್ಕೆ ಜಿಯೋದ ನಾನ್‌-ಎಕ್ಸಿಕ್ಯುಟವ್‌ ಡೈರೆಕ್ಟರ್‌ ಮತ್ತು ಮುಖೇಶ್‌ ಸುಪುತ್ರ ಆಕಾಶ್‌ ಅಂಬಾನಿಯನ್ನು ನೇಮಕ ಮಾಡಲಾಗಿದೆ.

ಕಳೆದ ವರ್ಷವೇ ರಿಲಯೆನ್ಸ್‌ ಇಂಡಸ್ಟ್ರೀಸ್‌ನ ವಿವಿಧ ಕಂಪನಿಗಳ ಆಡಳಿತ ಮಂಡಳಿಗೆ ಮುಕೇಶ್‌ ಅಂಬಾನಿಯವರ ಮಕ್ಕಳನ್ನು ಸೇರಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ನ ನಾನಾ ಕಂಪನಿಗಳ ಆಡಳಿತ ಮಂಡಳಿಗೆ ಅಧ್ಯಕ್ಷ ಮುಕೇಶ್‌ ಅಂಬಾನಿಯವರ ಮೂವರು ಮಕ್ಕಳು ಸೇರ್ಪಡೆಯಾಗಿದ್ದಾರೆ. ಅಂಬಾನಿ ಕುಟುಂಬದ ಮುಂದಿನ ಪೀಳಿಗೆಯು ಸಮೂಹದ ಜವಾಬ್ದಾರಿಯನ್ನು ಹಂತ ಹಂತವಾಗಿ ವಹಿಸಿಕೊಳ್ಳಲು ವೇದಿಕೆ ನೀಡಲಾಗಿತ್ತು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ