Maruti New Cars: ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಇನ್ನೂ ಹೊಸ 3 ಕಾರುಗಳ ಆಗಮನ, 7 ಸೀಟಿನ ಕಾರೂ ಇದೆ
Nov 20, 2024 03:13 PM IST
ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಇನ್ನೂ ಹೊಸ 3 ಕಾರುಗಳ ಆಗಮನ
Maruti New Cars : ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಂಪನಿಯು ಸಾಕಷ್ಟು ಹೊಸ ಮಾಡೆಲ್‌ಗಳನ್ನು, ಅಪ್‌ಗ್ರೇಡೆಡ್ ಆವೃತ್ತಿಗಳನ್ನು ಪರಿಚಯಿಸುತ್ತಿದೆ. ಮಾರುತಿ ಸುಜುಕಿಯ ಮುಂಬರುವ ಮೂರು ಕಾರುಗಳ ವಿವರ ಪಡೆಯೋಣ.
Maruti New Cars : ಮುಂದಿನ ದಿನಗಳಲ್ಲಿ ಮಾರುತಿ ಸುಜುಕಿಯ ಕಾರುಗಳನ್ನು ಖರೀದಿಸಲು ಬಯಸುತ್ತಿದ್ದರೆ ನಿಮಗೆ ಶುಭ ಸುದ್ದಿಯಿದೆ. ದೇಶದ ಅತಿ ದೊಡ್ಡ ಕಾರು ಮಾರಾಟ ಕಂಪನಿ ಮಾರುತಿ ಸುಜುಕಿ ಮುಂಬರುವ ದಿನಗಳಲ್ಲಿ ತನ್ನ ಹಲವು ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸುದ್ದಿ ವೆಬ್‌ಸೈಟ್ ಗಾಡಿವಾಡಿಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಕಂಪನಿಯ ಮುಂಬರುವ ಮಾದರಿಯು 7-ಆಸನಗಳ ಕಾರು ಸೇರಿದಂತೆ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.
7-ಆಸನಗಳ ಮಾರುತಿ ಗ್ರಾಂಡ್ ವಿಟಾರಾ
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ದೇಶದಲ್ಲಿ ಜನಪ್ರಿಯತೆ ಪಡೆದಿದೆ. ಕಂಪನಿಯು ಮುಂದಿನ ವರ್ಷ ಅಂದರೆ 2025 ರಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 7 ಆಸನಗಳ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ. ಮುಂಬರುವ 7-ಸೀಟರ್ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 1.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪವರ್‌ಟ್ರೇನ್ ಆಗಿ ಬಳಸುವ ನಿರೀಕ್ಷೆಯಿದೆ.
ಮಾರುತಿ ಸುಜುಕಿ ಮೈಕ್ರೋ SUV
ಮಾರುತಿ ಸುಜುಕಿ ಹೊಸ ಮೈಕ್ರೋ ಎಸ್‌ಯುವಿಯನ್ನು ಭಾರತದ ವಾಹನ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಮುಂಬರುವ ಮಾರುತಿ ಸುಜುಕಿ ಮೈಕ್ರೋ ಎಸ್‌ಯುವಿಯು ಮೈಕ್ರೋ ಎಸ್‌ಯುವಿ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟೆರಾ ಮುಂತಾದವುಗಳೊಂದಿಗೆ ಸ್ಪರ್ಧಿಸಲಿದೆ. ಮುಂಬರುವ ಮಾರುತಿ ಮೈಕ್ರೋ ಎಸ್‌ಯುವಿಯು 1.2-ಲೀಟರ್ ಪೆಟ್ರೋಲ್ ಎಂಜಿನ್, 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಪವರ್‌ಟ್ರೇನ್ ಆಗಿ ಬಳಸಬಹುದು ಎಂದು ವರದಿಗಳು ತಿಳಿಸಿವೆ.
ಮಾರುತಿ ಫ್ರಾಂಕ್ಸ್ ಫೇಸ್‌ಲಿಫ್ಟ್
ಮಾರುತಿ ಸುಜುಕಿ ಫ್ರಾಂಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಮಾರಾಟವಾಗುವ ಎಸ್‌ಯುವಿಯಾಗಿದೆ. ಈಗ ಮಾರುತಿ ಫ್ರಾಂಕ್ಸ್‌ನ ಯಶಸ್ಸನ್ನು ಪರಿಗಣಿಸಿ ಫ್ರಾಂಕ್ಸ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲಿದೆ ಎಂದು ವಿವಿಧ ವರದಿಗಳು ತಿಳಿಸಿವೆ.
ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಬಹುಕಾಲದಿಂದ ಬೇಡಿಕೆ ಹೆಚ್ಚಾಗಿದೆ. ಸುಲಭವಾಗಿ ಎಲ್ಲೂ ರಿಪೇರಿ ಮಾಡಲು ಸಾಧ್ಯವಿರುವುದು, ಕಡಿಮೆ ದರದಲ್ಲಿ ಬಿಡಿಭಾಗಗಳ ಲಭ್ಯತೆ, ಗ್ರಾಹಕ ಸ್ನೇಹಿ ಸೇವೆಗಳ ಕಾರಣದಿಂದ ದೇಶದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳು ಗಮನಾರ್ಹವಾಗಿ ಬೇಡಿಕೆ ಪಡೆದುಕೊಂಡಿವೆ. ದೇಶದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಇತ್ತೀಚಿನ ದಿನಗಳಲ್ಲಿ ಹಲವು ಕಾರು ಕಂಪನಿಗಳು ಪೈಪೋಟಿ ನೀಡುತ್ತಿವೆ. ವಿಶೇಷವಾಗಿ ಜನಪ್ರಿಯ ಎಸ್‌ಯುವಿಗಳನ್ನು ಹೊಂದಿರುವ ಕಂಪನಿಗಳಿಂದ ಪೈಪೋಟಿ ಎದುರಾಗಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತದ ಎರಡು ಬೃಹತ್ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಹ್ಯುಂಡೈಗಳ ಮಾರುಕಟ್ಟೆ ಪಾಲು ಗಮನಾರ್ಹವಾಗಿ ಇಳಿಕೆ ಕಂಡಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಈ ಕಂಪನಿಗಳ ಮಾರುಕಟ್ಟೆ ಪಾಲು 12 ವರ್ಷದ ಕೆಳಮಟ್ಟಕ್ಕೆ ಕುಸಿದಿವೆ ಎಂದು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ವರದಿ ಮಾಡಿದೆ. ಭಾರತದಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದು ಮಹೀಂದ್ರ ಮತ್ತು ಟೊಯೊಟಾ ಕಾರುಗಳ ಬೇಡಿಕೆ ಹೆಚ್ಚಾಗಲು ಕಾರಣ ಎಂದು ಜೆಫ್ರೀಸ್ ಅಧ್ಯಯನ ವರದಿ ತಿಳಿಸಿದೆ.