logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌

ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌

Umesh Kumar S HT Kannada

Oct 28, 2024 05:25 PM IST

google News

ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ ಎದುರಾಗಿತ್ತು. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು.

  • ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಮುಂದುವರಿದಿವೆ. ಈ ಭಾನುವಾರವೂ ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟ ಆಕಾಶ್ ಏರ್‌ ಮತ್ತು ಬೆಂಗಳೂರಿನಿಂದ ಝಸುಗುಡಾ, ದೆಹಲಿ, ಕೋಲ್ಕತಾಗಳಿಗೆ ಹೊರಟ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿತ್ತು.

ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ ಎದುರಾಗಿತ್ತು. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು.
ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ ಎದುರಾಗಿತ್ತು. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. (PTI)

ಬೆಂಗಳೂರು/ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮ ಕಡೆಗೆ ಅಯೋಧ್ಯೆ ಹೊರಳುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಿಂದ ಅಯೋಧ್ಯೆ ಹೋಗಿದ್ದ ಆಕಾಶ್ ಏರ್‌ಲೈನ್ಸ್‌ ವಿಮಾನಕ್ಕೆ ಬಾಂಬ್ ಬೆದರಿಕೆ ಎದುರಾಗಿದೆ. ಭಾನುವಾರ (ಅಕ್ಟೋಬರ್ 27) ಅಯೋಧ್ಯೆಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಬೆದರಿಕೆ ಕರೆ ಬಂದ ಕಾರಣ, ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಸೂಕ್ಷ್ಮ ತಪಾಸಣೆ ಮಾಡಿದ ಬಳಿಕ ಹುಸಿ ಬಾಂಬ್ ಕರೆ ಎಂಬುದನ್ನು ಭದ್ರತಾ ಪಡೆ ಖಚಿತಪಡಿಸಿಕೊಂಡಿತು ಎಂದು ಎಎನ್‌ಐ ವರದಿ ಮಾಡಿದೆ. ವಿಮಾನದಲ್ಲಿ 173 ಪ್ರಯಾಣಿಕರಿದ್ದರು. ವಿಮಾನಕ್ಕೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಈ ಕರೆ ಬಂದಿರುವುದ ಆತಂಕವನ್ನು ಹೆಚ್ಚಿಸಿದೆ.

ಬೆಂಗಳೂರು- ಅಯೋಧ್ಯೆ ಆಕಾಶ ಏರ್‌ಲೈನ್ಸ್‌ಗೆ ಬಾಂಬ್ ಬೆದರಿಕೆ

ಆಕಾಶ ವಿಮಾನ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೆ, ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ಮತ್ತು ಅದರ ಪ್ರಯಾಣಿಕರ ಸಮಗ್ರ ತಪಾಸಣೆ ನಡೆಸಿದರು. ಪರಿಸ್ಥಿತಿಯು ಕಳವಳವನ್ನು ಉಂಟುಮಾಡಿದರೂ, ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ. ತಪಾಸಣೆಯ ಸಮಯದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿದ್ದರು ಮತ್ತು ಸಹಕಾರ ನೀಡಿದ್ದರು ಎಂದು ವರದಿ ಹೇಳಿದೆ.

ಯಾವುದೇ ಆತಂಕವಿಲ್ಲದೆ ಎಲ್ಲಾ ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಲಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಮಧ್ಯಾಹ್ನ 1:30 ರ ಸುಮಾರಿಗೆ ಬೆದರಿಕೆ ಕರೆ ಬಂದಿತ್ತು. ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಂತೆ ಸೂಚಿಸಲಾಯಿತು. ತಪಾಸಣೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಹುಸಿ ಬೆದರಿಕೆ ಕರೆ ಎಂದು ತೋರುತ್ತಿದೆ. ವಿಮಾನದಲ್ಲಿ 173 ಪ್ರಯಾಣಿಕರಿದ್ದರು ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಖಚಿತಪಡಿಸಿದ್ದಾರೆ. ವಾರದ ಹಿಂದೆ ಇದೇ ರೀತಿಯ ಹುಸಿ ಕರೆ ಬಂದಿದೆ ಎಂದು ಅವರು ನೆನಪಿಸಿಕೊಂಡರು ಎಂದು ಎಎನ್‌ಐ ವರದಿ ಮಾಡಿದೆ. ಇದಕ್ಕೂ ಮೊದಲು ಆಕಾಶ್ ಏರ್‌ಲೈನ್ಸ್‌ನ 15 ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ವರದಿಯಾಗಿತ್ತು. ಇದಲ್ಲದೆ, ಇಂಡಿಗೋ ವಿಮಾನಗಳಿಗೂ ಬೆದರಿಕೆ ಕರೆ ಬಂದ ಬಗ್ಗೆ ವರದಿಯಾಗಿತ್ತು.

ಇಂಡಿಗೋದ 15 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ

ಇಂಡಿಗೋ ವಿಮಾನ ಯಾನ ಸಂಸ್ಥೆ ನಿರ್ವಹಿಸುತ್ತಿರುವ 15 ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆ ಕರೆ ಬಂದಿತ್ತು. ವಿಮಾನ ಯಾನ ಸಂಸ್ಥೆ ತುರ್ತಾಗಿ ಎಚ್ಚರಿಕೆಯೊಂದಿಗೆ ಸಂದರ್ಭವನ್ನು ನಿರ್ವಹಿಸಿದೆ. ಎಲ್ಲವೂ ಹುಸಿ ಬಾಂಬ್‌ ಕರೆಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಂಡಿತು ಎಂದು ಎಎನ್‌ಐ ವರದಿ ಮಾಡಿದೆ. ಬೆಂಗಳೂರು ಝರುಸಗುಡಾ, ದೆಹಲಿ -ಬೆಂಗಳೂರು, ಬೆಂಗಳೂರು- ದೆಹಲಿ, ಬೆಂಗಳೂರು - ಕೋಲ್ಕತ್ತ, ಕೋಲ್ಕತ - ಬೆಂಗಳೂರು ಸೇರಿ 15 ವಿಮಾನಗಳಿಗೆ ಈ ರೀತಿ ಬೆದರಿಕೆ ಕರೆಗಳು ಬಂದಿದ್ದವು.

ಅಕ್ಟೋಬರ್ 24 ರಂದು, ಇಂಡಿಗೋ ಏರ್‌ಲೈನ್ಸ್‌ನ ಒಟ್ಟು 20 ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಭದ್ರತೆಗೆ ಸಂಬಂಧಿಸಿದ ಬೆದರಿಕೆಗಳನ್ನು ಸ್ವೀಕರಿಸಿದವು ಎಂದು ಏರ್‌ಲೈನ್ಸ್ ತಿಳಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಉದ್ದೇಶಿತ ಪ್ರಯಾಣ ಸ್ಥಳಗಳಿಗೆ ತಲುಪಿಸಲಾಗಿದೆ ಎಂದು ಹೇಳಿದೆ.

ಇದಲ್ಲದೆ, ಭಾನುವಾರದಂದು (ಅಕ್ಟೋಬರ್ 27) ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಶ್ವಾನ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಶೋಧ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಹುಸಿ ಬೆದರಿಕೆ ಕರೆಯಾಗಿತ್ತು. ಭಯವನ್ನು ಉಂಟುಮಾಡುವ ಪ್ರಯತ್ನವಾಗಿತ್ತು ಎಂದು ಗೌತಂಪಲ್ಲಿ ಪೊಲೀಸರು ತಿಳಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ