ವಿಮಾನದಲ್ಲಿ ಸಿಗರೇಟ್ ಸೇದಿದ ಯುವಕ; ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಇಂಡಿಗೋ ಅಧಿಕಾರಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  ವಿಮಾನದಲ್ಲಿ ಸಿಗರೇಟ್ ಸೇದಿದ ಯುವಕ; ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಇಂಡಿಗೋ ಅಧಿಕಾರಿಗಳು

ವಿಮಾನದಲ್ಲಿ ಸಿಗರೇಟ್ ಸೇದಿದ ಯುವಕ; ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಇಂಡಿಗೋ ಅಧಿಕಾರಿಗಳು

Mangaluru News: ವಿಮಾನದಲ್ಲಿ ಸಿಗರೇಟ್ ಸೇದಿ ವಿಮಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದ ಯುವಕನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂಡಿಗೋ ವಿಮಾನ.
ಇಂಡಿಗೋ ವಿಮಾನ.

ಮಂಗಳೂರು: ವಿಮಾನದಲ್ಲಿ ಸಿಗರೇಟ್ ಸೇದಿ ದರ್ಪ ಮೆರೆದಿದ್ದ ಮತ್ತು ಸುರಕ್ಷತೆಗೆ ಅಡ್ಡಿಪಡಿಸಿದ್ದ ಪ್ರಯಾಣಿಕನೊಬ್ಬನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಮಾನ ಭೂಸ್ಪರ್ಶ (ಲ್ಯಾಂಡ್) ಆಗುವುದಕ್ಕೆ ಮುನ್ನವೇ ಈತ ಸಿಗರೇಟ್ ಸೇವನೆ ಮಾಡಿದ್ದ. ಆಗಸ್ಟ್​ 31ರ ಶನಿವಾರ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಂಜೇಶ್ವರ ನಿವಾಸಿ ಮುಶದೀಕ್ ಹುಸೈನ್ (24) ಎಂಬಾತ ಅಬುಧಾಬಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಲ್ಯಾಂಡ್ ಆಗುವ ಕೆಲವೇ ಸಮಯಕ್ಕೆ ಮುನ್ನ ವಿಮಾನದ ಟಾಯ್ಲೆಟ್​ನಲ್ಲಿ ಸಿಗರೇಟು ಸೇವನೆ ಮಾಡಿರುವ ಹಿನ್ನಲೆಯಲ್ಲಿ ವಿಮಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಇಂಡಿಗೋ ಅಧಿಕಾರಿಗಳು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಹುಬ್ಬಳ್ಳಿ: 23 ಮೀಟರ್​ ಬಡ್ಡಿ ದಂಧೆಕೋರರ ಬಂಧನ

ಹುಬ್ಬಳ್ಳಿ: ಬಡ್ಡಿ ಕಿರುಕುಳ ನೀಡಿದ ಆರೋಪದ ಮೇಲೆ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 16 ಪ್ರಕರಣ ದಾಖಲಿಸಿ 23 ಮಂದಿಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4 ಲಕ್ಷ ಮೌಲ್ಯದ ಕಾರು, ಬೈಕ್, ಮೊಬೈಲ್ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ 25 ಮಂದಿಯನ್ನು ಬಂಧಿಸಲಾಗಿತ್ತು. ಹೀಗಾಗಿ ಒಟ್ಟು 48 ಮಂದಿ ಸೆರೆಯಾಗಿದ್ದಾರೆ. ಇನ್ನಷ್ಟು ವಿವರಕ್ಕಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬೆಂಗಳೂರಿನಲ್ಲಿ ಸಿದ್ದವಾದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು

ಬೆಂಗಳೂರು: ಭಾರತದಲ್ಲಿ ಸತತ ಐದು ವರ್ಷಗಳ ಪ್ರಯತ್ನದ ಬಳಿಕ ಸೆಮಿಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಿದ್ದವಾಗಿ ಎರಡು ವರ್ಷದಿಂದ ಸೇವೆ ನೀಡುತ್ತಿದೆ. ಈಗ ಒಂದೇ ವರ್ಷದಲ್ಲಿ ವಂದೇ ಭಾರತ್‌ ಸ್ಲೀಪರ್‌ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಅಣಿಯಾಗಿದೆ. ಮೊದಲನೆಯ ಈ ವಿಶೇಷ ರೈಲು ಸಿದ್ದವಾಗಿರುವುದು ಬೆಂಗಳೂರಿನಲ್ಲಿ. ಕೇಂದ್ರ ರಕ್ಷಣಾ ಸಚಿವಾಲಯದ ಭಾರತ್‌ ಅರ್ಥ್‌ಮೂವರ್ಸ್‌ ಲಿಮಿಟೆಡ್‌( ಬೆಮೆಲ್‌- BEML) ಹಾಗೂ ರೈಲ್ವೆ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ( ICF) ಜತೆಯಾಗಿ.

ಸತತ ಒಂದು ವರ್ಷದ ಪ್ರಯತ್ನದ ಬಳಿಕ ಸ್ಲೀಪರ್‌ ವಂದೇ ಭಾರತ್‌ ರೈಲು ಸಿದ್ದವಾಗಿದ್ದು. ಭಾನುವಾರ ಬೆಂಗಳೂರಿನಲ್ಲಿ ರೈಲು ಉದ್ಘಾಟಿಸಲಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಹೊಸ ತಲೆಮಾರಿನ ಹಾಗೂ ಅತ್ಯಾಧುನಿಕ ರೈಲು ಉದ್ಘಾಟಿಸಿದರು. ಈ ರೈಲಿನ ಸಾರ್ವಜನಿಕ ಸೇವೆ ಬರುವ ಡಿಸೆಂಬರ್‌ ನಲ್ಲಿ ಆರಂಭವಾಗುವ ಸಾಧ್ಯತೆಗಳಿವೆ. ಇದರ ಇನ್ನಷ್ಟು ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

Whats_app_banner