ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bharat Mart: ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ

Bharat Mart: ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ

HT Kannada Desk HT Kannada

Feb 16, 2024 08:07 AM IST

ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​

  • Bharat Mart: ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್ ಸದ್ಯ ಭಾರೀ ಸುದ್ದಿಯಲ್ಲಿದೆ. ಏನಿದು ಭಾರತ್​ ಮಾರ್ಟ್..? ಇದರಿಂದ ಭಾರತಕ್ಕೇನು ಲಾಭ..? ದುಬೈನಲ್ಲಿಯೇ ಈ ಮಾರ್ಟ್ ನಿರ್ಮಾಣಗೊಂಡಿದ್ದೇಕೆ..? ಇಲ್ಲಿದೆ ಮಾಹಿತಿ.

ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​
ದುಬೈನಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡ ಭಾರತ್​ ಮಾರ್ಟ್​ (PC: @HSajwanization)

Bharat Mart: ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ಮೊಟ್ಟ ಮೊದಲ ಹಿಂದೂ ದೇವಾಲಯದ ಉದ್ಘಾಟನೆಗೆಂದು ಯುಎಇ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ದುಬೈನಲ್ಲಿ ಭಾರತ್​ ಮಾರ್ಟ್ ಲೋಕಾರ್ಪಣೆಗೊಳಿಸಿದ್ದರು. ಇದಾದ ಬಳಿಕ ಅನೇಕರಿಗೆ ಏನಿದು ಭಾರತ್​ ಮಾರ್ಟ್​..? ದುಬೈನಲ್ಲಿ ಭಾರತ್​ ಮಾರ್ಟ್ ಏಕೆ ಲೋಕಾರ್ಪಣೆಗೊಳಿಸಲಾಯ್ತು..? ದುಬೈನಲ್ಲಿ ಭಾರತ್​ ಮಾರ್ಟ್ ಲೋಕಾರ್ಪಣೆಗೊಂಡರೆ ಭಾರತಕ್ಕೇನು ಲಾಭ..? ಹೀಗೆ ಸಾಕಷ್ಟು ಗೊಂದಲ ಮೂಡಿದೆ . ಈ ಎಲ್ಲಾ ನಿಮ್ಮ ಗೊಂದಲಗಳಿಗೆ ಉತ್ತರ ಇಲ್ಲಿದೆ ನೋಡಿ

ಟ್ರೆಂಡಿಂಗ್​ ಸುದ್ದಿ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

CBSE 10th Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಿಡುಗಡೆ; ಶೇ 93.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

ಭಾರತ್​ ಮಾರ್ಟ್ ಎಂದರೇನು..?

ಭಾರತ್​ ಮಾರ್ಟ್ 2025ರ ಒಳಗಾಗಿ ದುಬೈನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಈ ಭಾರತ್​ ಮಾರ್ಟ್ ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ವಹಿವಾಟು ಹೆಚ್ಚಿಸುವುದು ಮಾತ್ರವಲ್ಲದೇ ಭಾರತದ ರಫ್ತುದಾರರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ ಎನ್ನಲಾಗಿದೆ.

ದುಬೈನಲ್ಲಿ ಈಗಾಗಲೇ ಚೀನಾಗೆ ಸೇರಿದ ಡ್ರ್ಯಾಗನ್​ ಮಾರ್ಟ್ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಚೀನಾದ ಈ ಮಾರ್ಟ್​ಗೆ ಠಕ್ಕರ್​ ಕೊಡಲು ಭಾರತವು ಭಾರತ್​ ಮಾರ್ಟ್​ನ್ನು ದುಬೈನಲ್ಲಿ ಆರಂಭಿಸಿದೆ. ಒಂದು ದೊಡ್ಡ ಮಹಾ ಮಳಿಗೆಯಲ್ಲಿ ಭಾರತದ ರಫ್ತುದಾರರ ವಿವಿಧ ಉತ್ಪನ್ನಗಳ ಪ್ರದರ್ಶನಗಳನ್ನು ಇಲ್ಲಿ ಮಾಡಲಾಗುತ್ತದೆ.

ಒಂದೇ ಸೂರಿನಡಿ ಭಾರತದ ಉತ್ಪನ್ನಗಳು

ವರದಿಗಳ ಪ್ರಕಾರ ಭಾರತ್​ ಮಾರ್ಟ್ ದುಬೈನ ಡಿಪಿ ವರ್ಲ್ಡ್​​ನ ಜಿಬೆಲ್​ ಅಲಿ ಫ್ರೀ ಝೋನ್​ನಲ್ಲಿ ಬರೋಬ್ಬರಿ 1 ಲಕ್ಷ ಚದರ ಮೀಟರ್​ ಸ್ಥಳದಲ್ಲಿ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ. ಈ ಮಾರ್ಟ್​ನಲ್ಲಿ ನಿಮಗೆ ವಿವಿಧ ಪ್ರದರ್ಶನ ಮಳಿಗೆಗಳು, ರಿಟೇಲ್​ ವ್ಯಾಪಾರಕ್ಕೆ ಸಂಬಂಧಿಸಿದ ಮಳಿಗೆ, ಹೋಟೆಲ್​ಗಳು ಹಾಗೂ ಇನ್ನೂ ಅನೇಕ ಸೌಲಭ್ಯಗಳು ಇರಲಿದೆ. ಒಂದೇ ಸೂರಿನ ಅಡಿಯಲ್ಲಿ ಭಾರತದಿಂದ ರಫ್ತಾಗುವ ಎಲ್ಲಾ ಉತ್ಪನ್ನಗಳು ಸಿಗುವುದರಿಂದ ಭಾರತೀಯರ ಉತ್ಪನ್ನಗಳು ದುಬೈನಲ್ಲಿ ಆಮದುದಾರರ ಕಣ್ಣಿಗೆ ಸುಲಭವಾಗಿ ಬೀಳುತ್ತದೆ.

ಅಲ್ಲದೆ ದುಬೈನಲ್ಲಿ ನಿರ್ಮಾಣಗೊಳ್ಳಲಿರುವ ಈ ಭಾರತ್​ ಮಾರ್ಟ್ ಕೇವಲ ಯುಎಇಯನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಫ್ರಿಕಾ, ಯೂರೋಪ್, ಅಮೆರಿಕ ಖಂಡಗಳಿಗೂ ಈ ಮಾರ್ಟ್​ನ ಮೂಲಕ ಭಾರತೀಯ ಉತ್ಪನ್ನಗಳನ್ನು ರಫ್ತು ಮಾಡುವ ಬಗ್ಗೆಯೂ ಪ್ಲಾನ್​ ರೂಪಿಸುತ್ತಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿರುವ ಈ ಭಾರತ್​ ಮಾರ್ಟ್​, ಭಾರತದ ವಿವಿಧ ಉತ್ಪನ್ನಗಳಿಗೆ ವೇದಿಕೆಯಾಗುವ ಜೊತೆಯಲ್ಲಿ ಶತ್ರುರಾಷ್ಟ್ರ ಚೀನಾದ ಡ್ರ್ಯಾಗನ್​ ಮಾರ್ಟ್​ಗೂ ಠಕ್ಕರ್ ಕೊಡಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ