logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2023: ರಾಜ್ಯ ಸರಕಾರಗಳಿಗೆ 50 ವರ್ಷ ಬಡ್ಡಿರಹಿತ ಸಾಲ ಸೌಲಭ್ಯ, ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಣೆ

Budget 2023: ರಾಜ್ಯ ಸರಕಾರಗಳಿಗೆ 50 ವರ್ಷ ಬಡ್ಡಿರಹಿತ ಸಾಲ ಸೌಲಭ್ಯ, ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಣೆ

HT Kannada Desk HT Kannada

Feb 01, 2023 07:26 PM IST

ರಾಜ್ಯ ಸರಕಾರಗಳಿಗೆ 50 ವರ್ಷ ಬಡ್ಡಿರಹಿತ ಸಾಲ ಸೌಲಭ್ಯ, ಇನ್ನೂ 1 ವರ್ಷದ ಅವಧಿಗೆ ವಿಸ್ತರಣೆ

    • ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪೂರಕ ನೀತಿ ಕ್ರಮಗಳಿಗೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಇನ್ನೂ ಒಂದು ವರ್ಷ ಮುಂದುವರಿಸಲು ನಿರ್ಧರಿಸಲಾಗಿದೆ.
ರಾಜ್ಯ ಸರಕಾರಗಳಿಗೆ 50 ವರ್ಷ ಬಡ್ಡಿರಹಿತ ಸಾಲ ಸೌಲಭ್ಯ, ಇನ್ನೂ 1  ವರ್ಷದ ಅವಧಿಗೆ ವಿಸ್ತರಣೆ
ರಾಜ್ಯ ಸರಕಾರಗಳಿಗೆ 50 ವರ್ಷ ಬಡ್ಡಿರಹಿತ ಸಾಲ ಸೌಲಭ್ಯ, ಇನ್ನೂ 1 ವರ್ಷದ ಅವಧಿಗೆ ವಿಸ್ತರಣೆ (Sanjay Sharma )

ನವದೆಹಲಿ: ರಾಜ್ಯ ಸರಕಾರಗಳಿಗೆ ಇನ್ನೂ ಒಂದು ವರ್ಷಗಳ ಕಾಲ 50 ವರ್ಷ ಬಡ್ಡಿರಹಿತ ಸಾಲಸೌಲಭ್ಯ ವಿಸ್ತರಿಸುವ ಪ್ರಸ್ತಾಪವನ್ನು ಕೇಂದ್ರ ಬಜೆಟ್‌ 2023-24ರಲ್ಲಿ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯಾದ್ರೂ ಗ್ರಾಹಕರಿಗೆ ಸಂತಸ ನೀಡದ ಚಿನ್ನದ ಬೆಲೆ; ಇಂದು ಕೂಡ ಬೆಳ್ಳಿ ದರ ಹೆಚ್ಚಳ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

"ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪೂರಕ ನೀತಿ ಕ್ರಮಗಳಿಗೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಇನ್ನೂ ಒಂದು ವರ್ಷ ಮುಂದುವರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 1.3 ಲಕ್ಷ ಕೋಟಿ ರೂ. ಮೊತ್ತ ಮೀಸಲಿಡಲಾಗುತ್ತದೆʼʼ ಎಂದು ಅವರು ಹೇಳಿದ್ದಾರೆ.

ರಾಜ್ಯಗಳು 50 ವರ್ಷಗಳ ಸಂಪೂರ್ಣ ಸಾಲವನ್ನು 2023-24 ರೊಳಗೆ ಬಂಡವಾಳ ವೆಚ್ಚದಲ್ಲಿ ಖರ್ಚು ಮಾಡಬೇಕು ಎಂದು ಸೀತಾರಾಮನ್ ಹೇಳಿದ್ದಾರೆ. ಇವುಗಳಲ್ಲಿ ಹೆಚ್ಚಿನವು ರಾಜ್ಯಗಳ ವಿವೇಚನೆಗೆ ಅನುಗುಣವಾಗಿರುತ್ತವೆ, ಆದರೆ ಒಂದು ಭಾಗವು ರಾಜ್ಯಗಳು ತಮ್ಮ ನಿಜವಾದ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಷರತ್ತು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

ಸಾಲದ ಮೊತ್ತವನ್ನು ಹೊಸದಾಗಿ ಘೋಷಣೆಯಾಗಿರುವ ಅಥವಾ ಈಗಾಗಲೇ ಜಾರಿಯಲ್ಲಿರುವ ಬಂಡವಾಳ ಯೋಜನೆಗಳಿಗೆ ವಿನಿಯೋಗಿಸಬೇಕು. ಗುತ್ತಿಗೆದಾರರ, ಪೂರೈಕೆದಾರರ ಪಾವತಿಗಾಗಿ ಸಾಲದ ಮೊತ್ತವನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ.

ಹಳೆಯ ಸರ್ಕಾರಿ ವಾಹನಗಳನ್ನು ರದ್ದುಗೊಳಿಸುವುದು, ನಗರ ಯೋಜನೆ ಸುಧಾರಣೆಗಳು ಮತ್ತು ಕ್ರಮಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸು ಸುಧಾರಣೆಗಳನ್ನು ಪುರಸಭೆಯ ಬಾಂಡ್‌ಗಳಿಗೆ ಸಾಲವಾಗಿಸಲು, ಪೊಲೀಸ್ ಸಿಬ್ಬಂದಿಗೆ ವಸತಿ ಮುಂತಾದ ಉದ್ದೇಶಗಳಿಗೆ ವೆಚ್ಚದ ಭಾಗಗಳನ್ನು ಲಿಂಕ್ ಮಾಡಲಾಗುತ್ತದೆ ಅಥವಾ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೊತ್ತವನ್ನು ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ , ಮಕ್ಕಳು ಮತ್ತು ಹದಿಹರೆಯದವರಿಗೆ ಯೂನಿಟಿ ಮಾಲ್‌ಗಳು, ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ಕೇಂದ್ರ ಯೋಜನೆಗಳ ಬಂಡವಾಳ ವೆಚ್ಚದ ರಾಜ್ಯದ ಪಾಲಿಗೆ ಬಳಸಲು ಅವಕಾಶವಿರುತ್ತದೆ ಎಂದು ಅವರು ಹೇಳಿದ್ದಾರೆ.

5 ಲಕ್ಷ ರೂ.ಗಿಂತ ಅಧಿಕ ಪ್ರೀಮಿಯಂ ಪಾವತಿದಾರರು ತೆರಿಗೆ ಪಾವತಿಸಬೇಕು

ವಾರ್ಷಿಕ ಪ್ರೀಮಿಯಂ 5 ಲಕ್ಷ ರೂ.ಗಿಂತ ಅಧಿಕವಿರುವ ಜೀವ ವಿಮಾ ಪಾಲಿಸಿಗಳ ಮೆಚುರಿಟಿ ಮೊತ್ತದ ಮೇಲೆ ಪಾಲಿಸಿದಾರರು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

"ಜೀವ ವಿಮೆ ಪಾಲಿಸಿಗಳ (ಯುಎಲ್‌ಐಪಿ ಹೊರತುಪಡಿಸಿ) ಪ್ರೀಮಿಯಂ ಅಧಿಕವಿದ್ದರೆ ಏಪ್ರಿಲ್‌ 1, 2023ರ ಬಳಿಕ ತೆರಿಗೆ ಪಾವತಿಸಬೇಕು. ವಾರ್ಷಿಕ ಐದು ಲಕ್ಷ ರೂ.ವರೆಗಿನ ಪ್ರೀಮಿಯಂಗಳಿಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆದರೆ, ಈ ನಿಯಮವು ಜೀವ ವಿಮೆ ಮಾಡಿಸಿಕೊಂಡ ವ್ಯಕ್ತಿ ನಿಧನರಾದ ಬಳಿಕ ಪಡೆಯುವ ಮೊತ್ತಕ್ಕೆ ಅನ್ವಯವಾಗುವುದಿಲ್ಲ. ಅದಕ್ಕೆ ತೆರಿಗೆ ವಿನಾಯಿತಿ ಈಗ ಇರುವಂತೆಯೇ ಇರಲಿದೆ. ಇದೇ ರೀತಿ 2023ರ ಮಾರ್ಚ್‌ 31ರವರೆಗಿನ ವಿಮಾ ಪಾಲಿಸಿಗಳಿಗೂ ಅನ್ವಯವಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್‌ಸಿಎಸ್‌ಎಸ್‌ ಮಿತಿ ದ್ವಿಗುಣ

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌)ನಲ್ಲಿ ಹಣ ಉಳಿತಾಯ ಮಾಡುವ ಮಿತಿಯನ್ನು ದ್ವಿಗುಣಗೊಳಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ.

ಈ ಹಿಂದೆ ಭಾರತ ಸರಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಂಬ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮಿತಿಯನ್ನು 15 ಲಕ್ಷ ರೂ.ಗೆ ನಿಗದಿಪಡಿಸಿತ್ತು. ಈ ಅಪಾಯರಹಿತ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಿರಿಯರಿಗೆ ವರ್ಷಕ್ಕೆ 7.40 ಬಡ್ಡಿದರ ನೀಡಲಾಗುತ್ತಿತ್ತು. ಈ ಬಡ್ಡಿದರವು ಇತರೆ ಉಳಿತಾಯ ಯೋಜನೆಗಳಿಗಿಂತ ತುಸು ಹೆಚ್ಚು. ಹೀಗಾಗಿ, ಇತರೆ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಎಸ್‌ಸಿಎಸ್‌ಎಸ್‌ ಹೂಡಿಕೆಯಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ದೊರಕುತ್ತಿತ್ತು.

ಈ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌)ಯಲ್ಲಿ ಬಂದ ಬಡ್ಡಿದರವನ್ನು ತ್ರೈಮಾಸಿಕದ ಅವಧಿಯಲ್ಲಿ ನೀಡಲಾಗುತ್ತಿತ್ತು. ಅಂದರೆ ಮಾರ್ಚ್‌ 31, ಜೂನ್‌ 30, ಸೆಪ್ಟೆಂಬರ್‌ 30 ಮತ್ತು ಡಿಸೆಂಬರ್‌ 31ಕ್ಕೆ ಬಡ್ಡಿದರವನ್ನು ಹಿರಿಯ ನಾಗರಿಕರ ಖಾತೆಗೆ ಹಾಕಲಾಗುತ್ತಿತ್ತು.

    ಹಂಚಿಕೊಳ್ಳಲು ಲೇಖನಗಳು