logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ ಹೀಗಿದೆ ನೋಡಿ

ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ ಹೀಗಿದೆ ನೋಡಿ

Umesh Kumar S HT Kannada

Jun 28, 2024 02:16 PM IST

google News

ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ

  • ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಭಾರತದ ಮುಂಚೂಣಿ ಟೆಲಿಕಾಂ ಕಂಪನಿ ಜಿಯೋ ದರ ಏರಿಕೆ ಘೋಷಿಸಿದ ಬೆನ್ನಿಗೆ, ಏರ್‌ಟೆಲ್‌ ಕೂಡ ದರ ಏರಿಕೆಯನ್ನು ಪ್ರಕಟಿಸಿದೆ. ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ ಹೀಗಿದೆ ನೋಡಿ. 

ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ
ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ (Live Mint)

ನವದೆಹಲಿ: ರಿಲಯನ್ಸ್ ಜಿಯೋ ದರ ಏರಿಕೆ ಬೆನ್ನಿಗೆ ಭಾರ್ತಿ ಏರ್‌ಟೆಲ್ ಕೂಡ ಜುಲೈ 3 ರಿಂದ ದರ ಏರಿಸುತ್ತಿರುವುದಾಗಿ ಪ್ರಕಟಿಸಿದೆ. ಷೇರುಪೇಟೆ ನಿಯಂತ್ರಕಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ವಿಚಾರವನ್ನು ಅದು ಘೋಷಿಸಿದೆ. ಇದರಂತೆ, ಆರೋಗ್ಯಕರ ವ್ಯಾಪಾರದ ಮಾದರಿಯಾಗಿ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ 300 ರೂಪಾಯಿ ಮೇಲೆ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಏರ್‌ಟೆಲ್ ಅದರಲ್ಲಿ ಪ್ರತಿಪಾದಿಸಿದೆ.

ಏರ್‌ಟೆಲ್ ಮೊಬೈಲ್ ಡೇಟಾ ಶುಲ್ಕ ಶೇಕಡ 10 ರಿಂದ ಶೇಕಡ 21 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಇದು, 3 ಜುಲೈ 2024 ರಿಂದ ಚಾಲ್ತಿಗೆ ಬರಲಿದೆ. ಆರಂಭಿಕ ಮಟ್ಟದ ಯೋಜನೆಗಳಲ್ಲಿ ದಿನಕ್ಕೆ 70 ಪೈಸೆಗಿಂತ ಕಡಿಮೆ ಬೆಲೆಯ 'ಬಹಳ ಸಾಧಾರಣ' ಬೆಲೆ ಹೆಚ್ಚಳವಾಗಿದೆ ಎಂದು ಏರ್‌ಟೆಲ್ ಹೇಳಿಕೊಂಡಿದೆ.

ಈ ವಾರದ ಆರಂಭದಲ್ಲಿ, ರಿಲಯನ್ಸ್ ಜಿಯೋ ಮೊಬೈಲ್ ಸುಂಕಗಳನ್ನು ಪರಿಷ್ಕರಿಸಿತು. 3 ಜುಲೈ 2024 ರಿಂದ ಜಾರಿಗೆ ಬರುವಂತೆ ಹೊಸ ಅನಿಯಮಿತ ಯೋಜನೆಗಳ ಪ್ಲಾನ್‌ಗಳ ದರವನ್ನು ಅನಾವರಣಗೊಳಿಸಿತ್ತು. ಹೊಸ ದರದ ಯೋಜನೆಗಳು ತಿಂಗಳಿಗೆ 2 GB ಗೆ 189 ರೂಪಾಯಿಯಿಂದ 2.5 GB ವಾರ್ಷಿಕ ಯೋಜನೆಗೆ 3,599 ರೂಪಾಯಿ ತನಕ ಇದೆ. ಈ ಯೋಜನೆಗಳು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ಯೋಜನೆಗಳಿಗೆ ಅನಿಯಮಿತ 5G ಡೇಟಾವನ್ನು ಒಳಗೊಂಡಿವೆ.

ಜುಲೈ 3 ರಿಂದ ಏರ್‌ಟೆಲ್‌ ಅನ್‌ಲಿಮಿಟೆಡ್‌ ಪ್ಲಾನ್‌ಗಳ ಪರಿಷ್ಕೃತ ದರ

ಏರ್‌ಟೆಲ್‌ನ ಹೊಸ ಅನ್‌ಲಿಮಿಟೆಡ್ ವಾಯ್ಸ್ ಪ್ಲಾನ್‌ಗಳ ದರ ವಿವರ ಹೀಗಿದೆ. 199 ರೂಪಾಯಿ ಪ್ಲಾನ್‌ - 2ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ 28 ದಿನ ಅವಧಿ

509 ರೂಪಾಯಿ ಪ್ಲಾನ್ - 6 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 84 ದಿನ ಅವಧಿ

1999 ರೂಪಾಯಿ ಪ್ಲಾನ್ - 24 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 365 ದಿನ ಅವಧಿ

ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ

ಇನ್ನು, ಏರ್‌ಟೆಲ್‌ನ ದೈನಿಕ ಡೇಟಾ ಪ್ಲಾನ್‌ಗಳ ದರ ವಿವರ ಹೀಗಿದೆ

299 ರೂಪಾಯಿ ಪ್ಲಾನ್ - ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 28 ದಿನ ಅವಧಿ

349 ರೂಪಾಯಿ ಪ್ಲಾನ್ - ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 28 ದಿನ ಅವಧಿ

409 ರೂಪಾಯಿ ಪ್ಲಾನ್ - ದಿನಕ್ಕೆ 2.5 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 28 ದಿನ ಅವಧಿ

449 ರೂಪಾಯಿ ಪ್ಲಾನ್ - ದಿನಕ್ಕೆ 3 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 28 ದಿನ ಅವಧಿ

579 ರೂಪಾಯಿ ಪ್ಲಾನ್‌ - ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 56 ದಿನ ಅವಧಿ

649 ರೂಪಾಯಿ ಪ್ಲಾನ್ - ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 56 ದಿನ ಅವಧಿ

859 ರೂಪಾಯಿ ಪ್ಲಾನ್ - ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 84 ದಿನ ಅವಧಿ

979 ರೂಪಾಯಿ ಪ್ಲಾನ್ - ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 84 ದಿನ ಅವಧಿ

3599 ರೂಪಾಯಿ ಪ್ಲಾನ್ - ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ 365 ದಿನ ಅವಧಿ

ಭಾರ್ತಿ ಏರ್‌ಟೆಲ್‌ ದರ ಪರಿಷ್ಕರಣೆ; ಜುಲೈ 3 ರಿಂದ ಜಾರಿಗೆ ಬರುವ ಏರ್‌ಟೆಲ್ ಪ್ಲಾನ್‌ಗಳ ದರ ವಿವರ

ಏರ್‌ಟೆಲ್‌ನ ಪೋಸ್ಟ್‌ ಪೇಯ್ಡ್‌ ಪ್ಲಾನ್‌ಗಳ ದರ ವಿವರ ಹೀಗಿದೆ

ಭಾರ್ತಿ ಏರ್‌ಟೆಲ್‌ನ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ದರ ವಿವರ

449 ರೂಪಾಯಿ ಪ್ಲಾನ್‌ - 1 ಕನೆಕ್ಷನ್‌, 40 ಜಿಬಿ ಡೇಟಾ ಉಳಿಕೆ ಮುಂದಿನ ತಿಂಗಳಿಗೆ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್, ಎಕ್ಸ್‌ಟ್ರೀಮ್ ಪ್ರೀಮಿಯಂ ಚಂದಾದಾರಿಕೆ

549 ರೂಪಾಯಿ ಪ್ಲಾನ್ - 1 ಕನೆಕ್ಷನ್‌, 40 ಜಿಬಿ ಡೇಟಾ ಉಳಿಕೆ ಮುಂದಿನ ತಿಂಗಳಿಗೆ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್, ಎಕ್ಸ್‌ಟ್ರೀಮ್ ಪ್ರೀಮಿಯಂ ಚಂದಾದಾರಿಕೆ, ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ 12 ತಿಂಗಳದ್ದು, ಅಮೆಜಾನ್ ಪ್ರೈಮ್‌ 6 ತಿಂಗಳ ಚಂದಾದಾರಿಕೆ

699 ರೂಪಾಯಿ ಪ್ಲಾನ್ - 2 ಫ್ಯಾಮಿಲಿ ಕನೆಕ್ಷನ್, 105 ಜಿಬಿ ಡೇಟಾ ಉಳಿಕೆ ಮುಂದಿನ ತಿಂಗಳಿಗೆ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್, ಎಕ್ಸ್‌ಟ್ರೀಮ್ ಪ್ರೀಮಿಯಂ ಚಂದಾದಾರಿಕೆ, ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ 12 ತಿಂಗಳದ್ದು, ಅಮೆಜಾನ್ ಪ್ರೈಮ್‌ 6 ತಿಂಗಳ ಚಂದಾದಾರಿಕೆ, ವಿಂಕ್‌ ಪ್ರೀಮಿಯಂ

1199 ರೂಪಾಯಿ ಪ್ಲಾನ್ - 4 ಫ್ಯಾಮಿಲಿ ಕನೆಕ್ಷನ್, 190 ಜಿಬಿ ಡೇಟಾ ಉಳಿಕೆ ಮುಂದಿನ ತಿಂಗಳಿಗೆ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್, ಎಕ್ಸ್‌ಟ್ರೀಮ್ ಪ್ರೀಮಿಯಂ ಚಂದಾದಾರಿಕೆ, ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ 12 ತಿಂಗಳದ್ದು, ಅಮೆಜಾನ್ ಪ್ರೈಮ್‌ 6 ತಿಂಗಳ ಚಂದಾದಾರಿಕೆ, ವಿಂಕ್‌ ಪ್ರೀಮಿಯಂ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ