Insurance Awareness: ಇಂದು ಜೀವ ವಿಮಾ ಜಾಗೃತಿ ದಿನ; ಪ್ರತಿ ಮನೆ ಬಾಗಿಲಿಗೆ ವಿಮಾ ರಕ್ಷಣೆ ಸೌಲಭ್ಯ ತಲುಪಿಸುವುದರ ಪ್ರಯೋಜನದ ವಿವರಣೆ ಇಲ್ಲಿದೆ
Jun 28, 2023 03:51 PM IST
ಜೀವ ವಿಮಾ ಜಾಗೃತಿ ದಿನ 2023 (ಸಾಂಕೇತಿಕ ಚಿತ್ರ)
Insurance Awareness: ಭಾರತದ ರಾಷ್ಟ್ರೀಯ ವಿಮಾ ಜಾಗೃತಿ ದಿನವು ವಿಮೆಯ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ದೇಶದ ವಿಮಾ ಉದ್ಯಮವು ಗಮನಾರ್ಹ ಬೆಳವಣಿಗೆಗೆ ದಾಖಲಿಸಲು ಸಜ್ಜಾಗಿದೆ. ವಿಮಾ ಮಾರುಕಟ್ಟೆ ವ್ಯಾಪ್ತಿ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇಕಡ 3.2 ಮಾತ್ರ ಇದ್ದು, ಬೆಳವಣಿಗೆಗೆ ಇನ್ನಷ್ಟು ಅವಕಾಶ ಇದೆ.
ಭಾರತದಲ್ಲಿ ಇಂದು (ಜೂ.28) ರಾಷ್ಟ್ರೀಯ ವಿಮಾ ಜಾಗೃತಿ ದಿನ (National Insurance Awareness Day). ಪ್ರತಿಯೊಬ್ಬರ ಆರೋಗ್ಯ ಭದ್ರಪಡಿಸುವ ಪ್ರಾಮುಖ್ಯತೆಯ ಸಮಯೋಚಿತವಾದ ಜ್ಞಾಪನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಟರ್ಮ್ ಇನ್ಶೂರೆನ್ಸ್‌ನಿಂದ ಶುರುವಾದರೆ ಜೀವ ವಿಮೆ, ಆರೋಗ್ಯ ವಿಮೆ, ಗೃಹ ವಿಮೆ, ವಾಹನ ವಿಮೆ ಮತ್ತು ಹಲವು ವಿಮೆಗಳು ಈಗ ಚಾಲ್ತಿಯಲ್ಲಿವೆ. ಇವೆಲ್ಲವೂ ಹಣಕಾಸಿನ ದೃಷ್ಟಿಯಿಂದ ರಕ್ಷಣೆಯ ಪದರವನ್ನು ಒದಗಿಸುವಂಥವು.
ಲಿಬರ್ಟಿ ಜನರಲ್ ಇನ್ಶೂರೆನ್ಸ್ ಸಿಇಒ ಮತ್ತು ಫುಲ್ ಟೈಮ್ ಡೈರೆಕ್ಟರ್ ರೂಪಮ್ ಅಸ್ಥಾನಾ, ರಾಷ್ಟ್ರೀಯ ವಿಮಾ ಜಾಗೃತಿ ದಿನವನ್ನು ಆಚರಿಸುವಾಗ, ವ್ಯಕ್ತಿಗಳು, ಕುಟುಂಬಗಳು ಮತ್ತು ವ್ಯವಹಾರಗಳಿಗೆ ಮನಸ್ಸಿನ ಶಾಂತಿ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ವಿಮೆ ವಹಿಸುವ ಪ್ರಮುಖ ಪಾತ್ರವನ್ನು ನಾವು ಹೈಲೈಟ್ ಮಾಡುತ್ತೇವೆ ಎಂದು ಹೇಳಿರುವುದಾಗಿ ದ ಹಿಂದುಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ದ ಲೈವ್ ಮಿಂಟ್ ವರದಿ ಹೇಳಿದೆ.
"ಇಂದು, ನಾವು ನಮ್ಮ ಪ್ರಗತಿಯನ್ನು ಆಚರಿಸುತ್ತೇವೆ. ಮುಂದೆ ಇರುವ ಅಪಾರ ಸಾಮರ್ಥ್ಯವನ್ನು ಗುರುತಿಸುತ್ತೇವೆ. ಭಾರತದ ವಿಮಾ ಉದ್ಯಮವು ಗಮನಾರ್ಹ ಬೆಳವಣಿಗೆಯ ಪಥದಲ್ಲಿದೆ. ಮುಂದಿನ ದಶಕದಲ್ಲಿ ಜಾಗತಿಕವಾಗಿ ಆರನೇ ಅತಿದೊಡ್ಡ ವಿಮಾ ಮಾರುಕಟ್ಟೆಯಾಗಲಿದೆ” ಎಂದು ರೂಪಮ್ ಅಸ್ಥಾನ ಹೇಳಿದರು.
ಆದಾಗ್ಯೂ, ವಿಮಾ ಕ್ಷೇತ್ರದಲ್ಲಿ ಎಲ್ಲರ ಒಳಗೊಳ್ಳುವಿಕೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಭಾರತದಲ್ಲಿ ಪ್ರಸ್ತುತ ವಿಮಾ ಪ್ರವೇಶವು ಸುಮಾರು 3.2 ಪ್ರತಿಶತದಷ್ಟಿದೆ. ಇದು ವಿಮಾ ಕಂಪನಿಗಳಿಂದ ಹೆಚ್ಚಿನ ಸೇವೆಗಳನ್ನು ನಿರೀಕ್ಷಿಸುತ್ತಿರುವ ಮಾರುಕಟ್ಟೆಯ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ರೂಪಮ್ ವಿವರಿಸಿದರು.
ಹಣಕಾಸಿನ ದೃಷ್ಟಿಯಿಂದ ಜೀವ ವಿಮಾ ರಕ್ಷಣೆ ನಿರ್ಣಾಯಕ
ಜೀವ ವಿಮೆಯು ಹಲವಾರು ಪ್ರಯೋಜನಗಳನ್ನು ಹೊಂದಿರುವ ಮೌಲ್ಯಯುತ ಉತ್ಪನ್ನ. ಇದು ಎಲ್ಲ ರೀತಿಯ ಗ್ರಾಹಕರ ಅಗತ್ಯವನ್ನು ಪೂರೈಸುತ್ತದೆ. ಇದು ವ್ಯಕ್ತಿಯ ಹಣಕಾಸು ಪೋರ್ಟ್‌ಫೋಲಿಯೊದಲ್ಲಿ ನಿರ್ಣಾಯಕವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕುಟುಂಬದ ಭವಿಷ್ಯವನ್ನು ರಕ್ಷಿಸುವ ಮೂಲಕ ಇದು ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ. ವ್ಯವಸ್ಥಿತ ಹೂಡಿಕೆ ಮತ್ತು ದೀರ್ಘಾವಧಿಯ ಜೀವನದ ಗುರಿಗಳನ್ನು ಸಾಧಿಸಲು ಶಿಸ್ತುಬದ್ಧ ವಿಧಾನವನ್ನು ಸಕ್ರಿಯಗೊಳಿಸುತ್ತದೆ.
“ವಿಮಾ ಕ್ಷೇತ್ರದಲ್ಲಿ ನಾವು ನಿರಂತರ ಹೊಸತನವನ್ನು ಹುಡುಕುತ್ತಿದ್ದೇವೆ. ವಿಮಾ ನಿಯಂತ್ರಕವು ಗ್ರಾಹಕರಿಗೆ ಮತ್ತು ಉದ್ಯಮಕ್ಕೆ ಹೆಚ್ಚು ಸಬಲೀಕರಣದ ವಾತಾವರಣವನ್ನು ಸಹ ಸಕ್ರಿಯಗೊಳಿಸುತ್ತಿರುವುದು ಸದ್ಯದ ಪರಿಸ್ಥಿತಿಯಲ್ಲಿ ಆಶಾದಾಯಕ ಬೆಳವಣಿಗೆ. ಈ ಉತ್ತೇಜಕ ವಾತಾವರಣದಲ್ಲಿ, ಉದ್ಯಮವು ಹೆಚ್ಚು ಕ್ರಿಯಾತ್ಮಕವಾಗಿ ಮುಂದುವರಿದಂತೆ, ಉತ್ಪನ್ನಗಳು ಸರಳ, ಹೆಚ್ಚು ಪಾರದರ್ಶಕ ಮತ್ತು ವಿವಿಧ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಪೂರೈಸಲು ಅನುಗುಣವಾಗಿರುತ್ತವೆ. ಇದು ನಮ್ಮ ಉತ್ಪನ್ನಗಳನ್ನು ಬಳಸಲು ಗ್ರಾಹಕರೊಂದಿಗೆ ನಮ್ಮೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಸುಲಭಗೊಳಿಸುವ ಪ್ರಯತ್ನ. ಅದೇ ರೀತಿ ನವೀನ ಪ್ರಕ್ರಿಯೆಗಳನ್ನು ಪರಿಚಯಿಸಲು ಮತ್ತು ನಾವು ಒದಗಿಸುವ ಸ್ವಯಂ ಸೇವಾ ಆಯ್ಕೆಗಳನ್ನು ಬಲಪಡಿಸಲು ಅನುವು ಮಾಡಿಕೊಟ್ಟಿದೆ ಎಂದು ಬಜಾಜ್ ಅಲಿಯನ್ಸ್ ಲೈಫ್ ಇನ್ಶುರೆನ್ಸ್‌ನ ಎಂಡಿ ಮತ್ತು ಸಿಇಒ ತರುಣ್ ಛುಗ್ ಹೇಳಿದರು.
ಗ್ರಾಮಗಳತ್ತ ವಿಮಾ ಕ್ಷೇತ್ರದ ಗಮನ ಹರಿಯಲಿ
ರೂಪಮ್ ಅಸ್ಥಾನಾ ಅವರ ಪ್ರಕಾರ, ನಗರ ಪ್ರದೇಶಗಳನ್ನು ಮೀರಿ ನಮ್ಮ ಗಮನವನ್ನು ವಿಸ್ತರಿಸುವುದು ಮತ್ತು ನಮ್ಮ ದೇಶದ ಹಿಂದುಳಿದ ಪ್ರದೇಶಗಳು ಮತ್ತು ಸಮುದಾಯಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಈ ಪ್ರದೇಶಗಳು ಮತ್ತು ಜನರಿಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ, ನಾವು ಪ್ರತಿ ಮನೆ ಬಾಗಿಲಿಗೆ ವಿಮೆಯ ಪ್ರಯೋಜನಗಳನ್ನು ತರಬಹುದು. ಎಲ್ಲರಿಗೂ ಒಳಗೊಳ್ಳುವ ಆರ್ಥಿಕ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಬಹುದು.
“ಈ ರಾಷ್ಟ್ರೀಯ ವಿಮಾ ಜಾಗೃತಿ ದಿನದಂದು, ವಿಮಾ ಜಾಗೃತಿಯನ್ನು ಹೆಚ್ಚಿಸಲು, ಗ್ರಾಹಕ ಬಳಕೆದಾರರ ಜಾಲ ಸುಧಾರಿಸಲು ಮತ್ತು ವಿಮಾ ಉದ್ಯಮವನ್ನು ಬಲಪಡಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಒಟ್ಟಾಗಿ, ವಿಮೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗುವಂತಹ ಭವಿಷ್ಯವನ್ನು ನಾವು ನಿರ್ಮಿಸಬಹುದು, ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವದಿಂದ ಅನಿಶ್ಚಿತತೆಗಳನ್ನು ಎದುರಿಸಲು ಅವರನ್ನು ಸಬಲಗೊಳಿಸಬಹುದು" ಎಂದು ಅಸ್ತಾನಾ ಆಶಾದಾಯಕ ನುಡಿಗಳನ್ನಾಡಿದ್ದಾರೆ.