logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Closing Bell: ಹೊಸ ವರ್ಷ ಆರಂಭದಿಂದಲೂ ಷೇರುಪೇಟೆಯಲ್ಲಿ ಓಡದ ಗೂಳಿ; ಇಂದೂ ಕುಸಿದ ಸೆನ್ಸೆಕ್ಸ್‌, ನಿಫ್ಟಿ

Closing Bell: ಹೊಸ ವರ್ಷ ಆರಂಭದಿಂದಲೂ ಷೇರುಪೇಟೆಯಲ್ಲಿ ಓಡದ ಗೂಳಿ; ಇಂದೂ ಕುಸಿದ ಸೆನ್ಸೆಕ್ಸ್‌, ನಿಫ್ಟಿ

Meghana B HT Kannada

Jan 03, 2024 04:09 PM IST

google News

ಮುಂಬೈ ಷೇರು ಮಾರುಕಟ್ಟೆ

    • Sensex-Nifty: ಇಂದು ನೀರಸ ಆರಂಭ ಕಂಡಿದ್ದ ಷೇರುಪೇಟೆ ಮುಕ್ತಾಯದ ವೇಳೆಗೆ, ಎನ್​ಎಸ್​ಇ ಸೆನ್ಸೆಕ್ಸ್ 509 ಅಂಕ ಅಥವಾ ಶೇ 0.71 ರಷ್ಟು ಇಳಿಕೆಯಾಗಿದ್ದು, 71,383ಕ್ಕೆ ಕುಸಿದಿದೆ. ಬಿಎಸ್​​ಸಿ ನಿಫ್ಟಿ 144 ಅಂಕ ಅಥವಾ ಶೇ 0.67ರಷ್ಟು ಇಳಿಕೆಯಾಗಿ 21,521ಕ್ಕೆ ಕುಸಿಯುವ ಮೂಲಕ ವಹಿವಾಟು ಮುಗಿಸಿದೆ.
ಮುಂಬೈ ಷೇರು ಮಾರುಕಟ್ಟೆ
ಮುಂಬೈ ಷೇರು ಮಾರುಕಟ್ಟೆ

ಬಡ್ಡಿದರ ಕಡಿತದ ಕುರಿತ ಅಮೆರಿಕ ಕೇಂದ್ರೀಯ ಬ್ಯಾಂಕ್‌ ನೀತಿ ನಿಯಮ ಕೆಲ ದಿನಗಳಿಂದ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಂದು ಭಾರೀ ಪ್ರಮಾಣದಲ್ಲಿ ಇಳಿಮುಖ ಕಂಡಿದ್ದು, ಮುಂಬೈ ಷೇರು ಮಾರುಕಟ್ಟೆ ನಷ್ಟ ಅನುಭವಿಸಿದೆ.

ಇಂದು ನೀರಸ ಆರಂಭ ಕಂಡಿದ್ದ ಷೇರುಪೇಟೆ ಮುಕ್ತಾಯದ ವೇಳೆಗೆ, ಎನ್​ಎಸ್​ಇ ಸೆನ್ಸೆಕ್ಸ್ 509 ಅಂಕ ಅಥವಾ ಶೇ 0.71 ರಷ್ಟು ಇಳಿಕೆಯಾಗಿದ್ದು, 71,383ಕ್ಕೆ ಕುಸಿದಿದೆ. ಬಿಎಸ್​​ಸಿ ನಿಫ್ಟಿ 144 ಅಂಕ ಅಥವಾ ಶೇ 0.67ರಷ್ಟು ಇಳಿಕೆಯಾಗಿ 21,521ಕ್ಕೆ ಕುಸಿಯುವ ಮೂಲಕ ವಹಿವಾಟು ಮುಗಿಸಿದೆ. ಈ ಮೂಲಕ ಭಾರತೀಯ ಷೇರು ಮಾರುಕಟ್ಟೆ ಇಂದು ರೆಡ್​ ಮಾರ್ಕ್​ನಲ್ಲಿದೆ. ಹೊಸ ವರ್ಷ ಆರಂಭವಾದಾಗಿನಿಂದಲೂ ಮುಂಬೈ ಷೇರು ಪೇಟೆ ಗ್ರೀನ್​ ಮಾರ್ಕ್​ಗೆ ಬಂದಿಲ್ಲ.

ವಲಯಗಳ ಪೈಕಿ ಐಟಿ ಹಾಗೂ ಲೋಹದ ಷೇರುಗಳಲ್ಲಿ ಭಾರಿ ನಷ್ಟ ಉಂಟಾಗಿದೆ. ಐಟಿ ಸೆಕ್ಟರ್​ ಇಂದು ಅತಿಹೆಚ್ಚು ನಷ್ಟ ಕಂಡ ವಲಯವಾಗಿದೆ. ನಿಫ್ಟಿ ಪಿಎಸ್​​ಯು ಬ್ಯಾಂಕ್​, ತೈಲ ಮತ್ತು ಅನಿಲ, ಎಫ್​ಎಂಸಿಗಿ, ಫಾರ್ಮಾ ಮತ್ತು ಮೀಡಿಯಾ ಸ್ಟಾಕ್ಸ್​ ಲಾಭ ಕಂಡ ವಲಯಗಳಾಗಿವೆ. ಅದಾನಿ-ಹಿಂಡೆನ್‌ ಬರ್ಗ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್​ ವರದಿಗೂ ಮುನ್ನ ಹಾಗೂ ನಂತರವೂ ಅದಾನಿ ಷೇರುಗಳು ಲಾಭ ಕಂಡಿದೆ.

ಟಾಟಾ ಸ್ಟೀಲ್​, ಎನ್​ಎಲ್​ಸಿ ಇಂಡಿಯಾ, ಅತಿಹೆಚ್ಚು ನಷ್ಟ ಅನುಭವಿಸಿದ ಷೇರಾಗಿದೆ. ಬಜಾಜ್​ ಆಟೋ ಶೇ.5 ರಷ್ಟು ಹೆಚ್ಚಿನ ಲಾಭ ಪಡೆದಿದೆ. ಬಜಾಜ್​ ಆಟೋ, ಸನ್​​ ಫಾರ್ಮಾ, ಅದಾನಿ ಎನರ್ಜಿ, ಸೋಭಾ ಲಿಮಿಟೆಡ್​, ಅದಾನಿ ಟೋಟಲ್​ ಗ್ಯಾಸ್, ಲಾಭ ಗಳಿಸಿದ ಷೇರುಗಳಾಗಿವೆ.

ಬುಧವಾರ ಮುಕ್ತಾಯದ ವೇಳೆಗೆ ನಿಫ್ಟಿ ವಹಿವಾಟು ಹೀಗಿದೆ

ಎನ್​ಎಸ್​ಇ ನಿಫ್ಟಿ - 21,521 (144 ಅಂಕ​ ಇಳಿಕೆ)

ನಿಫ್ಟಿ ಬ್ಯಾಂಕ್​ - 47,600 (160 ಅಂಕ ಇಳಿಕೆ)

ನಿಫ್ಟಿ ಮಿಡ್​ಕ್ಯಾಪ್​- 46,469 (80 ಅಂಕ ಏರಿಕೆ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ