Sensex, Nifty 50 today: ಷೇರು ಮಾರುಕಟ್ಟೆ ಮೇಲೆ ಚುನಾವಣಾ ಫಲಿತಾಂಶ ಇಂದು ಏನು ಪರಿಣಾಮ ಬೀರಬಹುದು? ಈ 5 ಷೇರು ಖರೀದಿಸಲು ತಜ್ಞರ ಶಿಫಾರಸು
Nov 25, 2024 09:31 AM IST
ಗಿಫ್ಟ್ ನಿಫ್ಟಿಯು ನಿಫ್ಟಿ ಮತ್ತು ಸೆನ್ಸೆಕ್ಸ್ ಇಂದು ಸಕಾರಾತ್ಮಕವಾಗಿ ಆರಂಭವಾಗುವ ಸೂಚನೆ ನೀಡಿದೆ.
Sensex, Nifty 50 today: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ. ಮಹಾರಾಷ್ಟ್ರದದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಜಯಗಳಿಸಿರುವುದರಿಂದ ಭಾರತೀಯ ಷೇರು ಮಾರುಕಟ್ಟೆಯು ಉತ್ತಮ ಲಾಭದ ನಿರೀಕ್ಷೆಯಲ್ಲಿದೆ. ಗಿಫ್ಟ್ ನಿಫ್ಟಿ 301 ಪಾಯಿಂಟ್ ಏರಿಕೆಯ ಸೂಚನೆ ನೀಡಿದೆ.
Stock market today: ಭಾರತೀಯ ಷೇರುಪೇಟೆ ಆರಂಭವಾಗುವ ಮೊದಲೇ ತೆರೆಯುವ ಗಿಫ್ಟ್ ನಿಫ್ಟಿಯು ನಿಫ್ಟಿ ಮತ್ತು ಸೆನ್ಸೆಕ್ಸ್ ಇಂದು ಸಕಾರಾತ್ಮಕವಾಗಿ ಆರಂಭವಾಗುವ ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಜಯಗಳಿಸಿರುವುದರಿಂದ ಭಾರತೀಯ ಷೇರು ಮಾರುಕಟ್ಟೆಯು ಉತ್ತಮ ಲಾಭದ ನಿರೀಕ್ಷೆಯಲ್ಲಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟದ ಪ್ರಚಂಡ ಗೆಲುವು ಷೇರುಪೇಟೆಯನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದರೊಂದಿಗೆ ಜಾಗತಿಕ ಷೇರುಪೇಟೆಯ ಸಕಾರಾತ್ಮಕ ಭಾವನೆ ಕೂಡ ಷೇರುಪೇಟೆಗೆ ಇನ್ನಷ್ಟು ಉತ್ತೇಜನ ನೀಡಬಹುದು.
ಗಿಫ್ಟ್ ನಿಫ್ಟಿಯು ಬೆಳಗ್ಗೆ 8:25 ರ ಸುಮಾರಿಗೆ 24,319 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಫ್ಯೂಚರ್ಸ್‌ನ ಈ ಹಿಂದಿನ ಮುಕ್ತಾಯದ ಸಮಯಕ್ಕೆ ಹೋಲಿಸಿದರೆ ಗಿಫ್ಟ್ ನಿಫ್ಟಿ 301 ಅಂಕಗಳಷ್ಟು ಏರಿಕೆ ಕಂಡಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶುಕ್ರವಾರದಂದು ಶೇಕಡಾ 2.5ರಷ್ಟು ಲಾಭ ಗಳಿಸಿತ್ತು. ಈ ಮೂಲಕ ವಾರಾಂತ್ಯ ಪಾಸಿಟೀವ್ ಆಗಿ ಕೊನೆಗೊಂಡಿತ್ತು. ಶುಕ್ರವಾರ ಸೆನ್ಸೆಕ್ಸ್ 1,961 ಅಂಕಗಳು ಅಥವಾ ಶೇಕಡಾ 2.54 ರಷ್ಟು ಜಿಗಿದು 79,117.11ಕ್ಕೆ ವಹಿವಾಟು ಮುಗಿಸಿತ್ತು. ನಿಫ್ಟಿ 50 557 ಪಾಯಿಂಟ್ ಅಥವಾ 2.39 ರಷ್ಟು ಏರಿಕೆಯಾಗಿ 23,907.25ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಬ್ಯಾಂಕ್ 763 ಪಾಯಿಂಟ್‌ಗಳು ಅಥವಾ ಶೇಕಡಾ 1.51 ರಷ್ಟು ಜಿಗಿದು 51,135.40ಕ್ಕೆ ತಲುಪಿದೆ. ಐಟಿ, ರಿಯಾಲ್ಟಿ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇಕಡ 3ರಷ್ಟು ಏರಿಕೆ ಕಂಡಿವೆ.
ಹೀಗೆ, ಶುಕ್ರವಾರ ಷೇರುಪೇಟೆ ಲಾಭ ಗಳಿಸಿದ ಕಾರಣ ಇಂದು ಕೂಡ ಉತ್ತಮ ಆರಂಭದ ಸೂಚನೆ ದೊರಕಿದೆ. "ಆರ್‌ಎಸ್‌ಐ ಬುಲಿಶ್ ಕ್ರಾಸ್‌ಒವರ್ ಅನ್ನು ಪ್ರವೇಶಿಸಿದೆ. ಇದು ಪಾಸಿಟೀವ್ ಬೆಳವಣಿಗೆ. ಇದು ಅಲ್ಪಾವಧಿಯಲ್ಲಿ ರಾಲಿ ನಡೆಸಲು ಅನುಕೂಲಕರವಾಗಿ ಕಂಡುಬಂದಿದೆ. ಆರಂಭಿಕ ಪ್ರಚೋದನೆಯು 23,960-24,000 ಲೆವೆಲ್‌ನಲ್ಲಿ ಇರಬಹುದು. ಬಳಿಕ 24,000 ಕ್ಕಿಂತ ಹೆಚ್ಚು 24,500 ಅಂಕದವರೆಗೆ ಸಾಗಿದರೂ ಅಚ್ಚರಿಯಿಲ್ಲ" ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ವಿಶ್ಲೇಷಕ ರೂಪಕ್ ಡಿ ಹೇಳಿದ್ದಾರೆ.
"ನಿಫ್ಟಿ 50 ಹಿಂದಿನ ಸ್ವಿಂಗ್ ಹೈ 23780 ಅಂಕಕ್ಕೆ ತಲುಪಿತ್ತು. ನಿಫ್ಟಿಯು 24,730 ತಲುಪುವ ನಿರೀಕ್ಷೆ ನಮ್ಮದು" ಎಂದು ಬಿಎನ್‌ಪಿ ಪರಿಬಾಸ್‌ನ ವಿಭಾಗವಾದ ಶೇರ್‌ಖಾನ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರಾದ ಜತಿನ್ ಗೆಡಿಯಾ ಅಭಿಪ್ರಾಯಪಟ್ಟಿದ್ದಾರೆ.
"ಮಾರುಕಟ್ಟೆಯು 200-ದಿನಗಳ ಎಸ್‌ಎಂಎ ಅಥವಾ 23,600/77,500 ಕ್ಕಿಂತ ಹೆಚ್ಚು ವಹಿವಾಟು ನಡೆಸಬಹುದು. ಇದು 24,000-24,200/79,400-79,900 ವರೆಗೆ ಚಲಿಸಬಹುದು. ಎಲ್ಲಾದರೂ ಇಳಿಮುಖವಾದರೆ 23,600/77,500 ಲೆವೆಲ್‌ನಲ್ಲಿ ಇರಬಹುದು. ಇದೇ ಸಮಯದಲ್ಲಿ ದೀರ್ಘಕಾಲದ ವಹಿವಾಟುದಾರರು ಇದು ಮಾರಾಟದ ಸಮಯ ಎಂದುಕೊಂಡರೆ ಒಂದಿಷ್ಟು ಇಳಿಕೆ ಕಾಣಬಹುದು" ಕೋಟಾಕ್ ಸೆಕ್ಯುರಿಟೀಸ್‌ನ ತಾಂತ್ರಿಕ ಸಂಶೋಧನೆಯ ವಿಪಿ ಅಮೋಲ್ ಅಥವಾಲೆ ಹೇಳಿದ್ದಾರೆ.
ಈ 5 ಷೇರು ಖರೀದಿಸಲು ತಜ್ಞರ ಶಿಫಾರಸು
ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ ದಿ ಮಿಂಟ್‌ಗೆ ಚಾಯ್ಸ್ ಬ್ರೋಕಿಂಗ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುಮೀತ್ ಬಾಗಡಿಯಾ ಕೆಲವು ಷೇರುಗಳನ್ನು ಶಿಫಾರಸು ಮಾಡಿದ್ದಾರೆ. ಅವರ ಪ್ರಕಾರ ಇಂದು ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್, ಆಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಅರಬಿಂದೋ ಫಾರ್ಮಾ ಲಿಮಿಟೆಡ್, ಜೈೂಸ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಷೇರು ಮೇಲೆ ಹೂಡಿಕೆ ಮಾಡಬಹುದು. ಇದು ಅವರ ವೈಯಕ್ತಿಕ ಅಭಿಪ್ರಾಯ. ಮಾರುಕಟ್ಟೆಯನ್ನು ಸ್ಟಡಿ ಮಾಡಿ ಮುಂದಡಿ ಇಡಿ.
ಡಿಸ್‌ಕ್ಲೈಮರ್: ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಆಯಾ ತಜ್ಞರ, ವಿಶ್ಲೇಷಕರ, ಬ್ರೋಕರೇಜ್ ಕಂಪನಿಗಳ ವೈಯಕ್ತಿಕ ಅಭಿಪ್ರಾಯವಾಗಿದೆ. ಇದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಅಭಿಪ್ರಾಯವಲ್ಲ. ಷೇರುಪೇಟೆಯ ಹೂಡಿಕೆಯು ಹಣಕಾಸು ಅಪಾಯಗಳನ್ನು ಒಳಗೊಂಡಿರುತ್ತದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ವಿವಿಧ ತಜ್ಞರ ಅಭಿಪ್ರಾಯ ಪಡೆಯುವುದರ ಜತೆ, ವೈಯಕ್ತಿಕವಾಗಿ ಆಯಾ ಕಂಪನಿಯ ಷೇರುಗಳನ್ನು ಅಧ್ಯಯನ ನಡೆಸಿ ಎಚ್ಚರಿಕೆಯಿಂದ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.