Gold prices falling: ಚಿನ್ನದ ದರ ಕುಸಿಯುತ್ತಿದೆಯೇ, ಏರಿಕೆ ಕಾಣುತ್ತಿದೆಯೇ, ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಗೋಲ್ಡ್ ರೇಟ್ ಎಷ್ಟು?
Gold prices falling: ಒಂದು ವಾರದ ಹಿಂದೆ ಚಿನ್ನದ ದರ ಇಳಿಕೆ ಕಂಡಿತ್ತು. ಈಗ ಮತ್ತೆ ತುಸುತುಸುವೇ ಏರಿಕೆ ಕಾಣುತ್ತಿದೆ. ಈ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮವೇ? ಹೆಚ್ಚಿನ ವಿವರ ಇಲ್ಲಿದೆ.
Gold prices falling: ಚಿನ್ನದ ದರ ಕೆಲವು ದಿನಗಳ ಹಿಂದೆ ಒಂದಿಷ್ಟು ಕುಸಿತ ಕಂಡಿತ್ತು. ಹತ್ತು ಗ್ರಾಂಗೆ ಸುಮಾರು 4 ಸಾವಿರ ರೂಪಾಯಿ ಇಳಿಕೆ ಕಂಡಿತ್ತು. ಇದೀಗ ಮತ್ತೆ ಚಿನ್ನದ ದರ ತುಸುತುಸುವೇ ಏರಿಕೆ ಕಾಣುತ್ತಿದೆ. ಇದೇ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆಗೆ ಇದು ಸಕಾಲವೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿದೆ. ಚಿನ್ನದ ದರ ಇಳಿಕೆಯಾಗುತ್ತಿದೆ (Gold prices falling), ಈ ಸಮಯದಲ್ಲಿ ಹಳದಿ ಲೋಹ ಖರೀದಿಸಿಡುವುದು ಉತ್ತಮವೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿದೆ. ಈ ರೀತಿ ದರ ಇಳಿಕೆಯಾದ ಸಂದರ್ಭದಲ್ಲಿ ಈಗ ಚಿನ್ನದ ಮೇಲೆ ಹೂಡಿಕೆ ಮಾಡಬೇಕೆ? ಇನ್ನಷ್ಟು ದಿನ ಕಾಯಬೇಕೆ ಎಂಬ ಸಂಶಯವೂ ಸಾಕಷ್ಟು ಜನರಲ್ಲಿ ಮೂಡಿದೆ.
ಭಾರತದಲ್ಲಿ ಇತ್ತೀಚೆಗೆ ಚಿನ್ನದ ದರ ಕುಸಿತ ಕಾಣಲು ಕಾರಣವಾಗಿರುವುದು ದೇಶೀಯ ಮತ್ತು ಅಂತಾರಾಷ್ಟ್ರೀಯ ಟ್ರೆಂಡ್. ಜಾಗತಿಕ ಆರ್ಥಿಕ ಟ್ರೆಂಡ್‌ಗಳು, ಬಡ್ಡಿದರಗಳು, ಕರೆನ್ಸಿ ಏರಿಳಿತ ಇವೆಲ್ಲವೂ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಅಮೆರಿಕದ ಡಾಲರ್ ಸದೃಢಗೊಂಡಿರುವುದು ಮತ್ತು ಚಿನ್ನಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ತುಸು ಕಡಿಮೆಯಾಗಿರುವುದು ಹಳದಿ ಲೋಹದ ದರ ಕುಸಿತಕ್ಕೆ ಕಾರಣವಾಯಿತು. ಇದೀಗ ಮತ್ತೆ ಚಿನ್ನ ಕುಸಿತ ಮರೆತು ತುಸುತುಸುವೇ ಏರಿಕೆ ಕಾಣುತ್ತಿದೆ.
ಚಿನ್ನದ ದರವು ಹಣದುಬ್ಬರ ಮತ್ತು ಮಾರುಕಟ್ಟೆಯ ಅನಿಶ್ಚಿತತೆಗೆ ತಕ್ಕಂತೆ ಏರಿಳಿತ ಕಾಣುತ್ತ ಇರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದಿಷ್ಟು ಸ್ಥಿರತೆ ಕಾಣಿಸಿಕೊಂಡರೆ ಚಿನ್ನದ ಬೇಡಿಕೆ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಜನರು ಷೇರುಪೇಟೆ ಸೇರಿದಂತೆ ತುಸು ಅಪಾಯಕಾರಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಕಂಡು ಬಂದರೆ ಸೇಫ್ ಝೋನ್ ಆಗಿರುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.
ಈ ತಿಂಗಳ ಆರಂಭದಲ್ಲಿ ಹತ್ತು ಗ್ರಾಂ ಚಿನ್ನದ ದರ 80 ಸಾವಿರಕ್ಕರ ತಲುಪಿತ್ತು. ಈ ವರ್ಷದ ಆರಂಭದಲ್ಲಿ ಹತ್ತು ಗ್ರಾಂ ಚಿನ್ನದ ದರ 81 ಸಾವಿರ ಇತ್ತು.ಈಗ ಚಿನ್ನದ ದರ ಸುಮಾರು 76 ಸಾವಿರ ರೂ ಆಸುಪಾಸಿನಲ್ಲಿದೆ.
ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ?
ಚಿನ್ನದ ದರ ಕುಸಿದಿದೆ ಎಂದು ಚಿನಿವಾರ ಪೇಟೆಗೆ ಓಡೋಡಿ ಚಿನ್ನ ಖರೀದಿಸುವುದು ರಿಸ್ಕ್‌ನಿಂದ ಕೂಡಿದೆ. ಇನ್ನಷ್ಟು ದರ ಕಡಿಮೆಯಾಗಬಹುದು. ಜಾಗತಿಕ ಮಾರುಕಟ್ಟೆ ಸದೃಢವಾದ ಸಮಯದಲ್ಲಿ ದರ ಇಳಿಕೆ ಕಾಣಬಹುದು. ಇದರ ಬದಲು ವೈವಿಧ್ಯಮಯ ಹೂಡಿಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಈ ರೀತಿ ದರ ಇಳಿಕೆ ಕಂಡಾಗ ಸ್ವಲ್ಪ ಚಿನ್ನ ಖರೀದಿಸಬಹುದು. ಇನ್ನಷ್ಟು ದರ ಇಳಿಕೆ ಕಂಡಾಗ ಇನ್ನಷ್ಟು ಚಿ್ನ ಖರೀದಿಸಿ.
ಈ ಸಮಯದಲ್ಲಿ ದೀರ್ಘಕಾಲದ ಲಾಭ ನೆನಪಿನಲ್ಲಿಟ್ಟುಕೊಂಡು ದೀರ್ಘಕಾಲಕ್ಕೆ ಚಿನ್ನ ಖರೀದಿಸಬೇಕು. ಈ ವರ್ಷ ಖರೀದಿಸಿ ಮುಂದಿನ ವರ್ಷ ಲಾಭ ಪಡೆಯುವೆ ಎಂದುಕೊಂಡರೆ ಚಿನ್ನ ಅಷ್ಟು ಇಳುವರಿ ನೀಡದೆ ಇರಬಹುದು.
ಕೇವಲ ಚಿನ್ನದ ಮೇಲೆ ಮಾತ್ರ ಹೂಡಿಕೆ ಮಾಡಬೇಡಿ. ಷೇರುಪೇಟೆ, ಮ್ಯೂಚುಯಲ್ ಫಂಡ್, ಉಳಿತಾಯ ಖಾತೆ ಸೇರಿದಂತೆ ಎಲ್ಲಾ ಕಡೆಯೂ ಸ್ವಲ್ಪ ಸ್ವಲ್ಪ ವೈವಿಧ್ಯಮಯವಾಗಿ ಹೂಡಿಕೆ ಮಾಡಿದರೆ ಉತ್ತಮ. ಇಲ್ಲವಾದರೆ, ಒಂದೇ ಬಾರಿ ಯಾವುದಾದರೂ ಒಂದು ಮಾರುಕಟ್ಟೆ ಬಿದ್ದಾಗ ಒಟ್ಟಿಗೆ ಲಾಸ್ ಆಗಬಹುದು.
ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಎಷ್ಟು?
ಕರ್ನಾಟಕದಲ್ಲಿ ಇಂದು (ಗುರುವಾರ) 22 ಕ್ಯಾರೆಟ್ ಚಿನ್ನದ ದರ ಇಂದು ಗ್ರಾಂಗೆ 7,145 ರೂಪಾಯಿ ಇತ್ತು. ನಿನ್ನೆಯ 7,115 ರೂಪಾಯಿಗೆ ಹೋಲಿಸಿದರೆ 30 ರೂಪಾಯಿ ಏರಿಕೆ ಕಂಡಿದೆ. ಇದೇ ರೀತಿ 22 ಕ್ಯಾರೆಟ್ ಚಿನ್ನದ ದರ ಇಂದು ಗ್ರಾಂಗೆ 7,795 ರೂಪಾಯಿ ಇದೆ. ನಿನ್ನೆ 7,762 ರೂ ಇತ್ತು. ನಿನ್ನೆಗೆ ಹೋಲಿಸಿದರೆ 33 ರೂ ಏರಿಕೆ ಕಂಡಿದೆ. ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ ಗೋಲ್ಡ್ ರೇಟ್ ಇಷ್ಟೇ ಇರುತ್ತದೆ.