logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಸರ್ಕಾರ ಶೇ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ; ಈಗ ಕೈಗೆ ಎಷ್ಟು ಬರುತ್ತೆ, ಇಲ್ಲಿದೆ ಆ ಲೆಕ್ಕಾಚಾರ

ಕೇಂದ್ರ ಸರ್ಕಾರ ಶೇ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ; ಈಗ ಕೈಗೆ ಎಷ್ಟು ಬರುತ್ತೆ, ಇಲ್ಲಿದೆ ಆ ಲೆಕ್ಕಾಚಾರ

Umesh Kumar S HT Kannada

Oct 17, 2024 08:51 PM IST

google News

ಕೇಂದ್ರ ಸರ್ಕಾರ ಶೇ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಈಗ ಕೈಗೆ ಎಷ್ಟು ಬರುತ್ತೆ ಎಂಬ ಲೆಕ್ಕಾಚಾರ ಇಲ್ಲಿದೆ. (ಸಾಂಕೇತಿಕ ಚಿತ್ರ)

  • ದೀಪಾವಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಇದು ಜುಲೈ 1ರಿಂದ ಅನ್ವಯವಾಗುವಂತೆ ಜಾರಿಯಾಗುತ್ತಿದೆ. ಕೇಂದ್ರ ಸರ್ಕಾರ ಶೇ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಕಾರಣ ಈಗ ಕೈಗೆ ಎಷ್ಟು ಬರುತ್ತೆ ಎಂಬುದೇ ದೊಡ್ಡ ಲೆಕ್ಕಾಚಾರ. ಅದು ಇಲ್ಲಿದೆ.

ಕೇಂದ್ರ ಸರ್ಕಾರ ಶೇ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಈಗ ಕೈಗೆ ಎಷ್ಟು ಬರುತ್ತೆ ಎಂಬ ಲೆಕ್ಕಾಚಾರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಕೇಂದ್ರ ಸರ್ಕಾರ ಶೇ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಈಗ ಕೈಗೆ ಎಷ್ಟು ಬರುತ್ತೆ ಎಂಬ ಲೆಕ್ಕಾಚಾರ ಇಲ್ಲಿದೆ. (ಸಾಂಕೇತಿಕ ಚಿತ್ರ) (Pexels)

ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನಿರೀಕ್ಷೆಯಂತೆ ಶೇಕಡ 3ರಷ್ಟು ತುಟ್ಟಿ ಭತ್ಯೆ (ಡಿಎ) ಹೆಚ್ಚಳವಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರಿ ನೌಕರರು ಶುಭ ಸುದ್ದಿಯನ್ನೂ ಪಡೆದುಕೊಂಡಿದ್ದಾರೆ. ಈ ತುಟ್ಟಿ ಭತ್ಯೆ ಈ ವರ್ಷದ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಇದು ಜಾರಿಯಾಗುತ್ತಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಣದುಬ್ಬರದಿಂದ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸಲು ನೆರವಾಗುವ ಉದ್ಧೇಶದಿಂದ ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಸಲ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತದೆ. ಈ ಭತ್ಯೆಯನ್ನು ನಿಯತವಾಗಿ ನವೀಕರಿಸಲಾಗುತ್ತದೆ. ಇದನ್ನು ನೌಕರರ ಮೂಲ ವೇತನ ಅಥವಾ ಪಿಂಚಣಿಯ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ. ಈ ಸಲದ ಡಿಎ ಹೆಚ್ಚಳದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 9,448 ಕೋಟಿ ರೂಪಾಯಿ ಖರ್ಚು ಬೀಳಲಿದೆ.

ತುಟ್ಟಿ ಭತ್ಯೆ ಮತ್ತು ಫಲಾನುಭವಿಗಳು

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಸಾರ್ವಜನಿಕ ವಲಯದ ಉದ್ಯೋಗಿಗಳು ತುಟ್ಟಿ ಭತ್ಯೆಯಿಂದ ಪ್ರಯೋಜನ ಪಡೆಯುವ ದೇಶಗಳ ಪಟ್ಟಿಯಲ್ಲಿದ್ದಾರೆ. ಈ ಪ್ರದೇಶಗಳಲ್ಲಿ ಕೆಲವು ಖಾಸಗಿ ವಲಯದ ಉದ್ಯೋಗಿಗಳು ಸಹ ತುಟ್ಟಿ ಭತ್ಯೆಯನ್ನು ಸ್ವೀಕರಿಸುತ್ತಾರೆ.

ಸಾಮಾನ್ಯವಾಗಿ ವರ್ಷಕ್ಕೆ ಎರಡು ಸಲ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಇದು ಜನವರಿ ಮತ್ತು ಜುಲೈನಲ್ಲಿ ಅನ್ವಯವಾಗುವಂತೆ ಜಾರಿಗೆ ಬರುವುದು ವಾಡಿಕೆ. ಭಾರತದಲ್ಲಿ ಮಾರ್ಚ್ ಮತ್ತು ಅಕ್ಟೋಬರ್‌ನಲ್ಲಿ ಈ ವಿಚಾರ ಔಪಚಾರಿಕವಾಗಿ ಪ್ರಕಟವಾಗುತ್ತದೆ. ಡಿಎ ಹೆಚ್ಚಳವು ಪಿಂಚಣಿ ಹೊಂದಾಣಿಕೆಯನ್ನೂ ಒಳಗೊಂಡಿದ್ದು, ಪಿಂಚಣಿದಾರರಿಗೂ ಪಿಂಚಣಿ ಹೆಚ್ಚಳವಾಗುತ್ತದೆ. ಮಾರ್ಚ್ ತಿಂಗಳಲ್ಲಿ ಹೋಳಿ ಹಬ್ಬದ ಆಸುಪಾಸಿನಲ್ಲಿ ಡಿಎ ಹೆಚ್ಚಳವಾದರೆ, ಅಕ್ಟೋಬರ್‌ನಲ್ಲಿ ನವರಾತ್ರಿ, ದೀಪಾವಳಿ ಹಬ್ಬದ ಆಸುಪಾಸಿನಲ್ಲಿ ತುಟ್ಟಿ ಭತ್ಯೆ ಹೆಚ್ಚಳವಾಗುವುದು ವಾಡಿಕೆ.

ತುಟ್ಟಿ ಭತ್ಯೆ ಅಥವಾ ಡಿಎ ಲೆಕ್ಕಚಾರ

ತುಟ್ಟಿ ಭತ್ಯೆ ಲೆಕ್ಕಾಚಾರವು ಆಲ್ ಇಂಡಿಯಾ ಕನ್‌ಸ್ಯೂಮರ್ ಪ್ರೈಸ್ ಇಂಡೆಕ್ಸ್ ಅಥವಾ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಆಧಾರದಲ್ಲಿ ನಡೆಯುತ್ತದೆ. ನಗರ, ಅರೆ ನಗರ, ಗ್ರಾಮೀಣ ಹೀಗೆ ಪ್ರದೇಶವಾರು ಉದ್ಯೋಗಿಗಳ ಡಿಎ ನಿರ್ಧಾರವಾಗುತ್ತದೆ. ಉದಾಹರಣೆಗೆ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಡಿಎ ಲೆಕ್ಕಾಚಾರ ಹಾಕುವಾಗ ಅನುಸರಿಸುವ ಸೂತ್ರ ಇದು.

ಉದಾಹರಣೆಗೆ ಕೇಂದ್ರ ಸರ್ಕಾರದ ನೌಕರ 35,000 ರೂಪಾಯಿ ಮಾಸಿಕ ಮೂಲ ವೇತನ ಹೊಂದಿದ್ದರೆ ಆಗ ಶೇಕಡ 3 ಡಿಎ ಹೆಚ್ಚಳ ಎಂದರೆ, ಪರಿಷ್ಕೃತ ವೇತನ 36,050 ರೂಪಾಯಿ ಮತ್ತು ವಾರ್ಷಿಕ ವೇತನ 4,32,600 ರೂಪಾಯಿ ಆಗುತ್ತದೆ ಎಂದು ಬ್ಯಾಂಕ್ ಬಜಾರ್‌ ವಿವರಿಸಿದೆ.

ಈ ಲೆಕ್ಕಾಚಾರ ಹೀಗಿದೆ ನೋಡಿ- ತುಟ್ಟಿ ಭತ್ಯೆ ಹಚ್ಚಳ ಶೇಕಡ 3. ಉದಾಹರಣೆಗೆ ಮೂಲ ವೇತನ 35,000 ರೂಪಾಯಿ. ಇದರ ಶೇಕಡ 3 ಅಂದರೆ 1050 ರೂಪಾಯಿ. ಇದನ್ನು ಈಗಿರುವ ಮೂಲವೇತನಕ್ಕೆ ಅಂದರೆ 35,000 ರೂಪಾಯಿಗೆ ಕೂಡಿಸಬೇಕು. ಅದುವೇ ಪರಿಷ್ಕೃತ ವೇತನ ಅಂದರೆ 36,050 ರೂಪಾಯಿ. ಇದನ್ನು 12 ರಿಂದ ಗುಣಿಸಿದರೆ ವಾರ್ಷಿಕ ವೇತನ 4,32,600 ರೂಪಾಯಿ ಬರುತ್ತದೆ.

ಡಿಎಗೆ ತೆರಿಗೆ ಇದೆಯೇ?: ತುಟ್ಟಿ ಭತ್ಯೆ ಅಥವಾ ಡಿಎ ತೆರಿಗೆ ವ್ಯಾಪ್ತಿಯಲ್ಲೇ ಬರುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಉದ್ಯೋಗಿಗಳು ತಮ್ಮ ಆದಾಯದ ಭಾಗವಾಗಿ ಡಿಎ ಮೊತ್ತವನ್ನೂ ಘೋಷಿಸಬೇಕು. ಸಂಬಳ ಪಡೆಯುವ ವ್ಯಕ್ತಿಯ ಆದಾಯದ ಜತೆಗೆ ಡಿಎ ಕೂಡಿಕೊಂಡಿರುತ್ತದೆ. ಆದಾಯ ತೆರಿಗೆ ಕಾಯಿದೆ ಪ್ರಕಾರ ಸಂಬಳದ ಆದಾಯದ ವಿಭಾಗಗಳಲ್ಲಿ ಇದೂ ದಾಖಲಾಗುತ್ತದೆ. ಇದಲ್ಲದೆ, ಭವಿಷ್ಯ ನಿಧಿ ಕೊಡುಗೆ, ಪಿಂಚಣಿ ಮಂತಾದ ಪ್ರಯೋಜನಗಳ ಲೆಕ್ಕ ಹಾಕುವಾಗ ಡಿಎ ಕೂಡ ಪರಿಗಣಿಸಲ್ಪಡುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ