logo
ಕನ್ನಡ ಸುದ್ದಿ  /  Nation And-world  /  Case Filed After Twin Sisters Marry Same Man In Mumbai

Twin sisters marriage: ಒಬ್ಬನನ್ನೇ ವಿವಾಹವಾದ ಅವಳಿ ಸಹೋದರಿಯರು; ಮದುವೆ ಬೆನ್ನಲ್ಲೇ ದಾಖಲಾಯ್ತು ಕೇಸ್!

HT Kannada Desk HT Kannada

Dec 04, 2022 10:23 PM IST

ಒಂದೇ ವ್ಯಕ್ತಿಯನ್ನು ಮದುವೆಯಾದ ಸವಳಿ ಸಹೋದರಿಯರು

    • ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ವಿವಾಹ ಸಮಾರಂಭ ನಡೆದಿದ್ದು, ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.
ಒಂದೇ ವ್ಯಕ್ತಿಯನ್ನು ಮದುವೆಯಾದ ಸವಳಿ ಸಹೋದರಿಯರು
ಒಂದೇ ವ್ಯಕ್ತಿಯನ್ನು ಮದುವೆಯಾದ ಸವಳಿ ಸಹೋದರಿಯರು

ಮುಂಬೈನ ಅವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ಮದುವೆಯಾಗಲು ಒಪ್ಪಿಕೊಂಡು ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಈ ಸಹೋದರಿಯರ ವಿರುದ್ಧ ಸೆಕ್ಷನ್ 494ರ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ವಿವಾಹ ಸಮಾರಂಭ ನಡೆದಿದ್ದು, ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕಲಿಯುಗದಲ್ಲೂ, ಒಬ್ಬ ವ್ಯಕ್ತಿಯನ್ನು ಅವಳಿ ಸಹೋದರಿಯರು ಮದುವೆಯಾಗಿರುವುದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.

ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, 36 ವರ್ಷ ವಯಸ್ಸಿನ ಅವಳಿ ಸಹೋದರಿಯರಾದ ರಿಂಕಿ ಮತ್ತು ಪಿಂಕಿ, ಅತುಲ್ ಎಂಬ ಯುವಕನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.‌ ಇವರಿಬ್ಬರೂ ಐಟಿ ಕಂಪನಿಯಲ್ಲಿ ಉದ್ಯೋಗಿಗಳು ಎಂದು ಹೇಳಲಾಗಿದೆ. ಒಬ್ಬನೇ ಯುವಕನನ್ನು ಇಬ್ಬರೂ ವಿವಾಹವಾಗುವ ನಿರ್ಧಾರಕ್ಕೆ ಎರಡೂ ಕುಟುಂಬಗಳು ಒಪ್ಪಿಕೊಂಡಿವೆಯಂತೆ. ವರದಿಗಳ ಪ್ರಕಾರ, ರಿಂಕಿ, ಪಿಂಕಿ ಮತ್ತು ಅತುಲ್ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ರಿಂಕಿ-ಪಿಂಕಿಯ ತಂದೆಯ ಮರಣದ ನಂತರ ಅತುಲ್ ಇವರ ಕುಟುಂಬಕ್ಕೆ ಸಹಾಯ ಮಾಡಿದ್ದನಂತೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣುವಂತೆ, ಇದು ರಹಸ್ಯ ವಿವಾಹವೇನೂ ಆಗಿರಲಿಲ್ಲ. ವ್ಯವಸ್ಥಿತವಾಗಿ ನಡೆದ ವಿವಾಹ ಸಮಾರಂಭದಲ್ಲಿ ವಧು-ವರರ ಹೆಸರನ್ನು ಕೂಡಾ ಬರೆಯಲಾಗಿತ್ತು. ಹಿಂದೂ ಸಂಪ್ರದಾಯದಂತೆ ನಡೆದಿರುವ ವಿವಾಹದ ವಿಧಿವಿಧಾನದಂತೆ, ವರನ ಕೊರಳಿಗೆ ಹೂಮಾಲೆ ಹಾಕಲು ಅವಳಿ ಸಹೋದರಿಯರು ಪ್ರಯತ್ನಿಸುತ್ತಿರುವ ದೃಶ್ಯ ಕಾಣಬಹುದು. ಈ ವೇಳೆ ಅಲ್ಲಿ ಸೇರಿದ್ದ ಜನರು ಹರ್ಷೋದ್ಘಾರ ಮಾಡುವುದನ್ನು ಕಾಣಬಹುದು. ಅವಳಿ ಸಹೋದರಿಯರು ಅದೇ ಸಮಯದಲ್ಲಿ ಅತುಲ್‌ಗೆ ಹಾರ ಹಾಕಲು ಪ್ರಯತ್ನಿಸಿದ್ದಾರೆ.

ಮದುವೆಗೆ ಎರಡೂ ಮನೆಯವರಿಂದ ಯಾವುದೇ ವಿರೋಧ ಇಲ್ಲದಿದ್ದರೂ, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಪೊಲೀಸರಿಗೆ ದೂರು ನೀಡಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ.

ಗಮನಿಸಬಹುದಾದ ಇತರೆ ಸುದ್ದಿಗಳು

ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ ಆದೇಶ

ದೇವಾಲಯದೊಳಗೆ ಭಕ್ತಿಯಿಂದ ಪ್ರಾರ್ಥನೆ ಮಾಡುವ ಸಮಯ. ಏಕಾಗ್ರತೆಗೆ ಭಂಗ ತರುವಂತೆ ಯಾರದ್ದೋ ಮೊಬೈಲ್‌ ರಿಂಗಣಿಸುತ್ತದೆ. ನೆಮ್ಮದಿಯನ್ನು ಅರಸಿ, ಅಧ್ಯಾತ್ಮಿಕತೆಯಲ್ಲಿ ಮುಳುಗಿದ್ದವರಿಗೆ ಒಮ್ಮೆಗೆ ಭ್ರಮನಿರಶನ. ಸಾಕಷ್ಟು ಜನರು ದೇವಾಲಯದೊಳಗೆ ಮೊಬೈಲ್‌ ಬಳಸುತ್ತಿದ್ದು, ದೇವಾಲಯದೊಳಗಿನ ಶಾಂತಿಗೆ ಭಂಗವಾಗುತ್ತದೆ. ಇದೀಗ ಇಂತಹ ಸಮಸ್ಯೆಗೆ ಕೇರಳದಲ್ಲಿ ಮುಕ್ತಿ ದೊರಕಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಈ ಎಟಿಎಂನಲ್ಲಿ ಹಣದ ಬದಲು ಚಿನ್ನ ಬರುತ್ತೆ! ದೇಶದ ಮೊಟ್ಟಮೊದಲ ಚಿನ್ನದ ಎಟಿಎಂ ಇಲ್ಲಿದೆ ನೋಡಿ

ಎಟಿಎಂ (automated teller machine) ಅಂದ್ರೆ, ಹಣವನ್ನು ಡ್ರಾ ಮಾಡಲು ನೆರವಾಗುವ ಯಂತ್ರ. ಬ್ಯಾಂಕ್‌ನಲ್ಲಿ ಕ್ಯೂ ನಿಂತು, ಸಿಬ್ಬಂದಿಯ ನೆರವಿಂದ ಹಣ ಹಿಂಪಡೆಯುವ ಗೋಜಲು ಬೇಡವೆಂದು, ಸುಲಭವಾಗಿ ನಮ್ಮ ಹಣವನ್ನು ಡ್ರಾ ಮಾಡಿಕೊಳ್ಳಲು ಇರುವ ಸಾಧನವಿದು. ಇದರಲ್ಲಿ ಹಣ ಬಿಟ್ಟು ಬೇರೇನೂ ಸಿಗುವುದಿಲ್ಲ. ಕೆಲವೊಮ್ಮೆ ಈ ಯಂತ್ರಕ್ಕೆ ಹಣ ತುಂಬುವವರ ಎಡವಟ್ಟಿನಿಂದ ನೋಟುಗಳು ಬದಲಾಗಿ ಸುದ್ದಿಯಾಗಿರಬಹುದು. ಆದರೆ, ಹಣದ ಹೊರತಾಗಿ ಎಟಿಎಂನಿಂದ ಬೇರೆನೂ ಬರಲ್ಲ. ಆದರೆ, ಈಗ ಎಟಿಎಂನಿಂದ ಚಿನ್ನವನ್ನು ಕೂಡಾ ಡ್ರಾ ಮಾಡಿಕೊಳ್ಳಬಹುದು. ಇಂತಹ ವಿಶಿಷ್ಟ ಎಟಿಎಂ ಅನ್ನು ಈ ನಗರದಲ್ಲಿ ಸ್ಥಾಪಿಸಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು