logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donald Trump: ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ

Donald Trump: ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ

Prasanna Kumar P N HT Kannada

Nov 06, 2024 05:00 PM IST

google News

ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ

    • Donald Trump: ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸಲು ನಾನು ಬದ್ಧ. ಅಮೆರಿಕದ ಹಿರಿಮೆ ಕಾಪಾಡುವ ಸಲುವಾಗಿ ದೇವರು ನನ್ನನ್ನು ರಕ್ಷಿಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ
ನೀವು ಕೊಟ್ಟ ಪ್ರೀತಿಯನ್ನು ವಾಪಸ್ ನೀಡುತ್ತೇನೆ; ಅಮೆರಿಕನ್ನರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ (AP)

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election 2024) ಗೆಲುವಿನ ಸನಿಹದಲ್ಲಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಫ್ಲೊರಿಡಾದ ವೆಸ್ಟ್‌ ಪಾಮ್‌ ಬೀಚ್‌ನಲ್ಲಿ ಮಾತನಾಡಿದ್ದಾರೆ. ಈ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಕ್ಕೆ ಲಕ್ಷಾಂತರ ಅಮೆರಿಕನ್ನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಕೊಟ್ಟ ಪ್ರೀತಿಯನ್ನು ಮತ್ತೆ ವಾಪಸ್ ನೀಡುತ್ತೇನೆ. ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸಲು ನಾನು ಬದ್ಧ. ಅಮೆರಿಕದ ಹಿರಿಮೆ ಕಾಪಾಡುವ ಸಲುವಾಗಿ ದೇವರು ನನ್ನನ್ನು ರಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಯಾರೂ ಊಹಿಸದ ವಿದ್ಯಾಮ್ಯಾನ. ಈ ಗೆಲುವು ಅಮೆರಿಕ ಪರಿಸ್ಥಿತಿಯನ್ನೇ ಸರಿಪಡಿಸಲು ಸಹಾಯವಾಗಲಿದೆ. ನಮ್ಮ ಗಡಿಯನ್ನು ಭದ್ರಪಡಿಸುವೆ. ಅಮೆರಿಕಕ್ಕೆ ಸಂಬಂಧಿಸಿದ ಎಲ್ಲವನ್ನೂ ಸರಿಪಡಿಸಲಾಗುವುದು. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಹೋರಾಡುತ್ತೇನೆ. ರಾಷ್ಟ್ರದ ಜನರಿಗೆ ಅಗತ್ಯ ಇರುವ ಎಲ್ಲವನ್ನೂ ಒದಗಿಸಲು ಹೋರಾಡುತ್ತೇನೆ ಎಂದರು. ಇದೇ ನನ್ನ ಸುಂದರ ಪತ್ನಿ ಮೆಲಾನಿಯಾ, ಪ್ರಥಮ ಮಹಿಳೆಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇಶದಲ್ಲೇ ನಂಬರ್ 1 ಬೆಸ್ಟ್ ಸೆಲ್ಲಿಂಗ್ ಬುಕ್ ಕೂಡ ಅವರ ಬಳಿ ಇದೆ ಎಂದು ಹೇಳಿದ್ದಾರೆ. ನಾವು ಅತ್ಯುತ್ತಮ ಕೆಲಸ ಮಾಡುತ್ತೇವೆ. ಅಮೆರಿಕದ ಜನರು ದೇಶದ ಮೇಲೆ ಹಿಡಿತ ಸಾಧಿಸಿದ ದಿನವಾಗಿ ಇದು ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ. 

ನಾನಿದ್ದಾಗ ಯುದ್ಧವೇ ಇರಲಿಲ್ಲ ಎಂದ ಟ್ರಂಪ್

ನಮ್ಮ ಬಳಿ ಇರುವುದು ಚೀನಾ ಬಳಿ ಇಲ್ಲ. ನಾವು ಶ್ರೇಷ್ಠ ವ್ಯಕ್ತಿಗಳನ್ನು ಹೊಂದಿದ್ದೇವೆ. ಅದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಏಷ್ಯನ್ ಅಮೆರಿಕನ್ನರು, ಮುಸ್ಲಿಂ ಅಮೆರಿಕನ್ನರು, ಅರಬ್ ಅಮೆರಿಕನ್ನರು ಎಲ್ಲರೂ ನಮ್ಮ ಬೆಂಬಲಕ್ಕೆ ಬಂದರು. ಇದು ಐತಿಹಾಸಿಕ ಮರು-ಜೋಡಣೆಯಾಗಿತ್ತು. ರಿಪಬ್ಲಿಕನ್ ಸಾಮಾನ್ಯ ಜ್ಞಾನದ ಪಕ್ಷವಾಗಿದೆ. ನಾವು ಐಸಿಐಸಿ ಅನ್ನು ಸೋಲಿಸಿದ್ದರೂ (ನನ್ನ ಹಿಂದಿನ ಅಧಿಕಾರದಲ್ಲಿ) 4 ವರ್ಷಗಳಲ್ಲಿ ನಾವು ಯಾವುದೇ ಯುದ್ಧಗಳನ್ನು ಹೊಂದಿರಲಿಲ್ಲ ಎಂದು ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೀಗ ಇದು ಅಮೆರಿಕದ ಸುವರ್ಣ ಯುಗವಾಗಲಿದೆ, ಇದು ಅಮೆರಿಕವನ್ನ ಮತ್ತೆ ಶ್ರೇಷ್ಠಗೊಳಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದ್ದಾರೆ ಎಂದರು.

ಅಮೆರಿಕವನ್ನು ಶ್ರೇಷ್ಠಗೊಳಿಸುತ್ತೇನೆ ಎಂದ ಡೊನಾಲ್ಡ್​ ಟ್ರಂಪ್

ಕಳೆದ 4 ವರ್ಷಗಳ ವಿಭಜನೆಯನ್ನು ನಮ್ಮ ಹಿಂದೆ ಹಾಕುವ ಸಮಯ ಇದು. ಯಶಸ್ಸು ನಮ್ಮನ್ನು ಒಗ್ಗೂಡಿಸುತ್ತದೆ. ನಾವು ಸ್ವಲ್ಪ ಸಮಯದವರೆಗೆ ಅಮೆರಿಕವನ್ನು ಮೊದಲು ಇಡಬೇಕು. ನಾವು ಮತ್ತೆ ಅಮೆರಿಕವನ್ನು ಶ್ರೇಷ್ಠಗೊಳಿಸಬೇಕು. ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನಮ್ಮ ಭವಿಷ್ಯವು ಹಿಂದೆಂದಿಗಿಂತಲೂ ಸುರಕ್ಷಿತ ಮತ್ತು ಬಲವಾಗಿರುಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

 

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ