ಅಮೆರಿಕ ಅಧ್ಯಕ್ಷ ಚುನಾವಣೆ: ಉಪಾಧ್ಯಕ್ಷ ರೇಸ್ನಲ್ಲಿ ಆಂಧ್ರಪ್ರದೇಶದ ಅಳಿಯ; ಯಾರವರು, ಭಾರತಕ್ಕೆ ಕನೆಕ್ಷನ್ ಹೇಗೆ?
- ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶಕ್ಕೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಭ್ರಮ ಮನೆ ಮಾಡಿದೆ. ಏಕೆಂದರೆ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಪರವಾಗಿ ಉಪಾಧ್ಯಕ್ಷ ರೇಸ್ನಲ್ಲಿರುವ ವ್ಯಾನ್ಸ್ ಅವರ ಪತ್ನಿ ಉಷಾ ಆಂಧ್ರದವರು ಎಂಬುದು ವಿಶೇಷ.
- ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶಕ್ಕೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಭ್ರಮ ಮನೆ ಮಾಡಿದೆ. ಏಕೆಂದರೆ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಪರವಾಗಿ ಉಪಾಧ್ಯಕ್ಷ ರೇಸ್ನಲ್ಲಿರುವ ವ್ಯಾನ್ಸ್ ಅವರ ಪತ್ನಿ ಉಷಾ ಆಂಧ್ರದವರು ಎಂಬುದು ವಿಶೇಷ.
(1 / 9)
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಿಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶಕ್ಕಾಗಿ ಕಾತರದಿಂದ ಮತ್ತು ಕುತೂಹಲದಿಂದ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ರಿಪಬ್ಲಿಕನ್ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಅವರ ಪೋಷಕರ ಪೂರ್ವಜರ ಗ್ರಾಮ ವಡ್ಲೂರು. ಇದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂ ಮಂಡಲದಲ್ಲಿರುವ ಒಂದು ಗ್ರಾಮ.(AFP)
(2 / 9)
ರಿಪಬ್ಲಿಕನ್ ಪಕ್ಷದ ಪರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿ ವ್ಯಾನ್ಸ್ ಅವರ ಪತ್ನಿ ಚಿಲುಕುರಿ ಉಷಾ ಅವರ ಕುಟುಂಬವು ಈಗ ಅಮೆರಿಕದಲ್ಲಿ ನೆಲೆಸಿದೆ. ಉಷಾ ಅವರ ಪೋಷಕರು 60ರ ದಶಕದಲ್ಲೇ ಯುಎಸ್ಗೆ ತೆರಳಿದ್ದರು. ಪ್ರಸ್ತುತ ರಿಪಬ್ಲಿಕ್ ಪಕ್ಷವು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಮತ್ತೊಂದೆಡೆ ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಕಮಲಾ ಹ್ಯಾರಿಸ್ ಅವರ ಪೂರ್ವಜರು ತಮಿಳುನಾಡಿನವರು ಎಂಬುದು ವಿಶೇಷ.
(3 / 9)
ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕಾಗಿ ವಡ್ಲೂರು ಗ್ರಾಮದ ಜನರು ತುಂಬಾ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅಲ್ಲದೆ, ಚಿಲುಕುರಿ ಕುಟುಂಬದ ಸಂಬಂಧಿಕರು ಇನ್ನೂ ಈ ಗ್ರಾಮದಲ್ಲಿದ್ದು, ಸಂಭ್ರಮಿಸುತ್ತಿದ್ದಾರೆ.(AFP)
(4 / 9)
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವಡ್ಲೂರು ಗ್ರಾಮದವರಾದ ಚಿಲುಕುರಿ ಉಷಾ ಅವರ ಪೋಷಕರು ಬಹಳ ಹಿಂದೆಯೇ ಅಮೆರಿಕದಲ್ಲಿ ನೆಲೆಸಿದ್ದರು. ಉಷಾ ಅವರು ಅಮೆರಿಕದ ಜೆಡಿ ವ್ಯಾನ್ಸ್ ಅವರನ್ನು 2014ರಲ್ಲಿ ವಿವಾಹವಾದರು.(AFP)
(5 / 9)
ಜೇಮ್ಸ್ ಡೇವಿಡ್ ವ್ಯಾನ್ಸ್ ಅವರು 1984ರ ಆಗಸ್ಟ್ 2ರಂದು ಜನಿಸಿದರು. ಇವರು ಅಮೆರಿಕನ್ ರಾಜಕಾರಣಿಯ ಜೊತೆಗೆ ಲೇಖಕರೂ ಹೌದು. ಅವರು 2023ರಿಂದ ಓಹಿಯೋದಿಂದ ಜೂನಿಯರ್ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಆಗಿ ಸೇವೆ ಸಲ್ಲಿಸಿದ್ದಾರೆ.(AFP)
(6 / 9)
ವ್ಯಾನ್ಸ್ ಅವರು ಯುಎಸ್ ಮೆರೈನ್ ಕಾರ್ಪ್ಸ್ನಲ್ಲಿ 2003 ರಿಂದ 2007 ರವರೆಗೆ ಮಿಲಿಟರಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ಯೇಲ್ ಲಾ ಸ್ಕೂಲ್ನಿಂದ ಪದವಿ ಪಡೆದ ಅವರು, ಸಾಹಸೋದ್ಯಮ ಬಂಡವಾಳಶಾಹಿಯಾಗಿ ಟೆಕ್ ಉದ್ಯಮ ವೃತ್ತಿಜೀವನ ಪ್ರಾರಂಭಿಸುವುದಕ್ಕೂ ಮುನ್ನ ಕಾರ್ಪೊರೇಟ್ ವಕೀಲರಾಗಿ ಅಭ್ಯಾಸ ಮಾಡಿದರು.(AFP)
(7 / 9)
2016ರಲ್ಲಿ ವ್ಯಾನ್ಸ್ ಅವರ ಆತ್ಮಚರಿತ್ರೆ, 'ಹಿಲ್‌ಬಿಲ್ಲಿ ಎಲಿಜಿ' ಪ್ರಕಟವಾಯಿತು. ಇದನ್ನು 2020ರಲ್ಲಿ ಚಲನಚಿತ್ರವಾಗಿ ತೆರೆ ಮೇಲೆ ತರಲಾಯಿತು. ವಾನ್ಸ್ ಓಹಿಯೋದಲ್ಲಿ 2022ರ ಯುಎಸ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಟಿಮ್ ರಯಾನ್ ಅವರನ್ನು ಸೋಲಿಸಿದ್ದರು.(AFP)
ಇತರ ಗ್ಯಾಲರಿಗಳು