ICSE ISC Results 2024: ಐಸಿಎಸ್‌ಇ 10ನೇ ತರಗತಿ, ಐಎಸ್‌ಸಿ 12 ನೇ ತರಗತಿ ಫಲಿತಾಂಶ ಶೀಘ್ರವೇ ಪ್ರಕಟ
Apr 11, 2024 01:18 PM IST
ಐಸಿಎಸ್‌ಇ, ಐಎಸ್‌ಸಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳು 2024: 10, 12 ನೇ ತರಗತಿಯ ಫಲಿತಾಂಶಗಳನ್ನು ಸಿಐಎಸ್‌ಸಿಇ ಶೀಘ್ರದಲ್ಲೇ ಪ್ರಕಟಿಸಲಿದೆ (ಸಾಂಕೇತಿಕ ಚಿತ್ರ)
ICSE ISC Results 2024: ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಿಗೆ ಇನ್ನು ಐಸಿಎಸ್‌ಇ 10ನೇ ತರಗತಿ, ಐಎಸ್‌ಸಿ 12 ನೇ ತರಗತಿ ಫಲಿತಾಂಶ ಶೀಘ್ರವೇ ಪ್ರಕಟವಾಗುವ ನಿರೀಕ್ಷೆಇದೆ. ಕಳೆದ ವರ್ಷ ಮೇ 13ಕ್ಕೆ ರಿಸಲ್ಟ್ ಬಂದಿತ್ತು.
ನವದೆಹಲಿ: ಐಸಿಎಸ್‌ಇ (10 ನೇ ತರಗತಿ), ಐಎಸ್‌ಸಿ (12ನೇ ತರಗತಿ) ಬೋರ್ಡ್ ಎಕ್ಸಾಂ ಫಲಿತಾಂಶ (ICSE, ISC Board Exam Results 2024) ಶೀಘ್ರವೇ ಪ್ರಕಟವಾಗುವ ಸಾಧ್ಯತೆ ಇದೆ. ದ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಫಲಿತಾಂಶ ಪ್ರಕಟಿಸುವುದಕ್ಕೆ ಸಿದ್ದತೆ ನಡೆಸಿದ್ದು, ಈಗಾಗಲೇ ಅಗತ್ಯ ತಯಾರಿ ಶುರುಮಾಡಿದೆ.
ಒಮ್ಮೆ ಫಲಿತಾಂಶ ಘೋಷಣೆಯಾದರೆ ಐಸಿಎಸ್‌ಇ ಮತ್ತು ಐಎಸ್‌ಸಿ ವಿದ್ಯಾರ್ಥಿಗಳು ಮಂಡಳಿ ಅಧಿಕೃತ ವೆಬ್‌ಸೈಟ್ (results.cisce.org) ನಲ್ಲಿ ಫಲಿತಾಂಶವನ್ನು ನೋಡಬಹುದು. ಹಿಂದಿನ ವರ್ಷಗಳ ಟ್ರೆಂಡ್ ಅನ್ನು ಗಮನಿಸಿದರೆ ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಿವೆ. ಕಳೆದ ವರ್ಷ ಮೇ 13ರಂದು ಐಸಿಎಸ್‌ಇ (10 ನೇ ತರಗತಿ), ಐಎಸ್‌ಇ (12ನೇ ತರಗತಿ) ಫಲಿತಾಂಶಗಳು ಪ್ರಕಟವಾಗಿದ್ದವು.
ಈ ವರ್ಷ, ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 21 ರಿಂದ ಮಾರ್ಚ್ 28 ರವರೆಗೆ ನಡೆದಿದ್ದರೆ, ಐಎಸ್‌ಸಿ ಪರೀಕ್ಷೆಗಳು (12 ನೇ ತರಗತಿ) ಫೆಬ್ರವರಿ 12 ರಿಂದ ಏಪ್ರಿಲ್ 2 ರವರೆಗೆ ನಡೆದವು. 12 ನೇ ತರಗತಿಯ ರಸಾಯನಶಾಸ್ತ್ರ ಪರೀಕ್ಷೆಗಳನ್ನು ಫೆಬ್ರವರಿ 26 ರಿಂದ ಮಾರ್ಚ್ 21 ಕ್ಕೆ ಮರು ನಿಗದಿಪಡಿಸಲಾಗಿತ್ತು.
ಐಸಿಎಸ್‌ಇ 10ನೇ ತರಗತಿ ಮತ್ತು ಐಎಸ್‌ಸಿ 12ನೇ ತರಗತಿ ಫಲಿತಾಂಶ ನೋಡುವುದು ಹೀಗೆ:
1) ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್ www.cisce.org ಗೆ ಭೇಟಿ ನೀಡಿ
2). ರಿಸಲ್ಟ್ ಪೇಜ್‌ಗೆ ಹೋಗಿ. ಅಲ್ಲಿ ಐಸಿಎಸ್‌ಇ ಬೋರ್ಡ್ ಎಕ್ಸಾಮ್ಸ್ ರಿಸಲ್ಟ್ಸ್ 2024 ಅಥವಾ ಐಎಸ್‌ಸಿ ಬೋರ್ಡ್ ಎಕ್ಸಾಂ ರಿಸಲ್ಟ್ಸ್ 2024 ಎಂಬುದರ ಮೇಲೆ ಕ್ಲಿಕ್ ಮಾಡಿ.
3) ಐಸಿಎಸ್‌ಇ/ ಐಎಸ್‌ಸಿ ಕೋರ್ಸ್ ಕೋಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾಗಿ ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ಸ್ ಅಂದರೆ ಐಡೆಂಟಿಫಿಕೇಶನ್ ನಂಬರ್, ಜನ್ಮ ದಿನಾಂಕ ಇತ್ಯಾದಿ ವಿವರ ನಮೂದಿಸಿ ಲಾಗಿನ್ ಆಗಬೇಕು.
4) ಇಷ್ಟಾದ ಬಳಿಕ ಸ್ಕ್ರೀನ್ ಮೇಲೆ ಫಲಿತಾಂಶ ಗೋಚರಿಸಲಿದೆ. ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ತಾವು ಗಳಿಸಿದ ಅಂಕಗಳನ್ನು ಪರಿಶೀಲಿಸಬಹುದು.
5) ಈ ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಬಹುದು. ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್ ಔಟ್ ಕೂಡ ತೆಗೆದಿಟ್ಟುಕೊಳ್ಳಬಹುದು.
ಐಸಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ 2023 ಹೀಗಿತ್ತು
ಐಸಿಎಸ್‌ಇ ಮತ್ತು ಐಎಸ್‌ಸಿ ಬೋರ್ಡ್ ಪರೀಕ್ಷೆ 2023 ರಲ್ಲಿ, 98.94 ರಷ್ಟು ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, 12 ನೇ ತರಗತಿಯ ಶೇಕಡಾ 96.93 ರಷ್ಟು ಉತ್ತೀರ್ಣರಾಗಿದ್ದರು. 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಬಾಲಕಿಯರು ಬಾಲಕರ ಸಾಧನೆ ಮಾಡಿದ್ದರು. 10ನೇ ತರಗತಿಯಲ್ಲಿ ಬಾಲಕಿಯರು ಶೇಕಡಾ 99.21 ರಷ್ಟು ಉತ್ತೀರ್ಣರಾಗಿದ್ದರೆ, ಹುಡುಗರು ಶೇಕಡಾ 98.71 ರಷ್ಟು ಉತ್ತೀರ್ಣರಾಗಿದ್ದಾರೆ. 12ನೇ ತರಗತಿಯಲ್ಲಿ ಬಾಲಕಿಯರ ಉತ್ತೀರ್ಣ ಪ್ರಮಾಣ ಶೇಕಡಾ 98.01 ರಷ್ಟಿದ್ದರೆ, ಹುಡುಗರದು ಶೇಕಡಾ 95.96 ಇತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ವಿಜಯಪುರ ಮಕ್ಕಳ ಅನನ್ಯ ಸಾಧನೆ, ಕಲಾ ವಿಭಾಗದ ಟಾಪರ್ ವೇದಾಂತ್ ಓದಿಗೆ ನೆರವಾದ ಗ್ಯಾರಂಟಿ ಹಣ - ವರದಿಗೆ ಇಲ್ಲಿ ಕ್ಲಿಕ್ ಮಾಡಿ
2) ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ, ಏ 29 ರಿಂದ ಮೇ 16ರ ತನಕ ಎಕ್ಸಾಂ - ಪೂರ್ಣ ವಿವರ ಇಲ್ಲಿದೆ
3) ಆಕೆಯದ್ದುಗುಜರಾತ್ ಮೂಲ, ಪಿಯುಸಿ ಸಾಧನೆಗೆ ನೆರವಾಯ್ತು ದಕ್ಷಿಣ ಕನ್ನಡ ನೆಲ - ಸಾಧನೆಯ ವರದಿ ಇಲ್ಲಿದೆ