logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ippb Recruitment 2024: ಅಂಚೆ ಬ್ಯಾಂಕ್‌ನಲ್ಲಿ 68 ಸ್ಪೆಷಲಿಸ್ಟ್‌ ಅಧಿಕಾರಿ ಹುದ್ದೆಗಳಿವೆ , ಜನವರಿ 10ರ ಮೊದಲು ಹೀಗೆ ಅರ್ಜಿ ಸಲ್ಲಿಸಿ

IPPB Recruitment 2024: ಅಂಚೆ ಬ್ಯಾಂಕ್‌ನಲ್ಲಿ 68 ಸ್ಪೆಷಲಿಸ್ಟ್‌ ಅಧಿಕಾರಿ ಹುದ್ದೆಗಳಿವೆ , ಜನವರಿ 10ರ ಮೊದಲು ಹೀಗೆ ಅರ್ಜಿ ಸಲ್ಲಿಸಿ

Praveen Chandra B HT Kannada

Dec 23, 2024 02:09 PM IST

google News

IPPB Recruitment 2024: ಅಂಚೆ ಬ್ಯಾಂಕ್‌ನಲ್ಲಿ 68 ಸ್ಪೆಷಲಿಸ್ಟ್‌ ಅಧಿಕಾರಿ ಹುದ್ದೆಗಳಿವೆ

    • IPPB Specialist Officers Recruitment 2024: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಡಿಸೆಂಬರ್‌ 21ರಿಂದ ಜನವರಿ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
IPPB Recruitment 2024: ಅಂಚೆ ಬ್ಯಾಂಕ್‌ನಲ್ಲಿ 68 ಸ್ಪೆಷಲಿಸ್ಟ್‌ ಅಧಿಕಾರಿ ಹುದ್ದೆಗಳಿವೆ
IPPB Recruitment 2024: ಅಂಚೆ ಬ್ಯಾಂಕ್‌ನಲ್ಲಿ 68 ಸ್ಪೆಷಲಿಸ್ಟ್‌ ಅಧಿಕಾರಿ ಹುದ್ದೆಗಳಿವೆ

IPPB Specialist Officers Recruitment 2024: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ)ಯು ದೇಶಾದ್ಯಂತ ಇರುವ ಅಂಚೆ ಬ್ಯಾಂಕ್‌ ಶಾಖೆಗಳಲ್ಲಿರುವ ಕಾಯಂ ಮತ್ತು ಗುತ್ತಿಗೆ ಆಧರಿತ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಕೇಲ್ I, II, & III ರಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌, ಮ್ಯಾನೇಜರ್‌ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 21.12.2024 ರಿಂದ 10.01.2025 ರವರೆಗೆ www.ippbonline.comನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಐಪಿಪಿಬಿಯಲ್ಲಿರುವ ಹುದ್ದೆಗಳ ಸಂಪೂರ್ಣ ವಿವರ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಲ್ಲಿ ಇರಬೇಕಾದ ಅರ್ಹತೆಗಳು, ವಯೋಮಿತಿ ಸೇರಿದಂತೆ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದರೊಂದದಿಗೆ ಐಪಿಪಿಬಿ ನೇಮಕಾತಿ ಪಿಡಿಎಫ್‌ ಕೂಡ ಇಲ್ಲಿ ನೀಡಲಾಗಿದೆ.

ಕ್ವಿಕ್‌ ಲುಕ್‌

  • ಎಲ್ಲಿ ಉದ್ಯೋಗ?: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ)
  • ನೇಮಕಾತಿ ಸ್ಥಳ: ದೇಶಾದ್ಯಂತ ಇರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕಚೇರಿಗಳಲ್ಲಿ
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21.12.2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.01.2025, ರಾತ್ರಿ 11.59 ಗಂಟೆಯವರೆಗೆ.
  • ಒಟ್ಟು ಹುದ್ದೆಗಳು: 68 ಹುದ್ದೆಗಳು
  • ಅರ್ಜಿ ಸಲ್ಲಿಸಲು ವೆಬ್‌ ವಿಳಾಸ: www.ippbonline.com

ಹುದ್ದೆಗಳ ವಿವರ

ಅಸಿಸ್ಟೆಂಟ್‌ ಮ್ಯಾನೇಜರ್‌ ಐಟಿ-54, ಮ್ಯಾನೇಜರ್‌ ಐಟಿ (ಪೇಮೆಂಟ್‌ ಸಿಸ್ಟಮ್ಸ್‌)-1, ಮ್ಯಾನೇಜರ್‌ ಐಟಿ (ಎಂಟರ್‌ಪ್ರೈಸಸ್‌ ಡೇಟಾ ವೇರ್‌ಹೌಸ್‌, ಸೀನಿಯರ್‌ಮ್ಯಾನೇಜರ್‌- ಐಟಿ, ಪೇಮೆಂಟ್‌ ಸಿಸ್ಟಮ್ಸ್‌, ಸೀನಿಯರ್‌ ಮ್ಯಾನೇಜರ್‌ ಐಟಿ, ನೆಟ್‌ವರ್ಕ್‌ ಆಂಡ್‌ ಕ್ಲೌಡ್‌, ಸೀನಿಯರ್‌ ಮ್ಯಾನೇಜರ್‌, ಐಟಿ, ವೆಂಡರ್‌, ಕಾಂಟ್ರಾಕ್ಟ್‌, ಪೇಮೆಂಟ್ಸ್‌ ತಲಾ 1 ಹುದ್ದೆಗಳು, ಸೈಬರ್ ಸೆಕ್ಯುರಿಟಿ ಎಕ್ಸ್‌ಪರ್ಟ್ - 07 ಹುದ್ದೆಗಳು ಸೇರಿದಂತೆ 68 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ

  • ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ - 20 ರಿಂದ 30 ವರ್ಷಗಳು
  • ಮ್ಯಾನೇಜರ್ ಹುದ್ದೆಗಳಿಗೆ - 23 ರಿಂದ 35 ವರ್ಷಗಳು - 03 ವರ್ಷಗಳ ಅನುಭವ
  • ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ - 26 ರಿಂದ 35 ವರ್ಷಗಳು - 06 ವರ್ಷಗಳ ಅನುಭವ

ಅರ್ಜಿ ಶುಲ್ಕ ಎಷ್ಟು?

ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 150 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಉಳಿದ ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ ಏನು?

ಆಯಾ ಹುದ್ದೆಗಳಿಗೆ ತಕ್ಕಂತೆ ಈ ಮುಂದಿನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

  • ಬಿಇ, ಬಿಟೆಕ್‌ (ಕಂಪ್ಯೂಟರ್ ಸೈನ್ಸ್/ ಐಟಿ/ ಕಂಪ್ಯೂಟರ್ ಅಪ್ಲಿಕೇಶನ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್)
  • ಸ್ನಾತಕೋತ್ತರ ಪದವಿ (ಕಂಪ್ಯೂಟರ್ ಸೈನ್ಸ್/ ಐಟಿ/ ಕಂಪ್ಯೂಟರ್ ಅಪ್ಲಿಕೇಶನ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್).
  • ಬಿಇ, ಬಿಟೆಕ್ (ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್) ಅಥವಾ ಬಿಎಸ್ಸಿ (ಎಲೆಕ್ಟ್ರಾನಿಕ್ಸ್, ಫಿಸಿಕ್ಸ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ).

ಇದನ್ನೂ ಓದಿ: SBI Recruitment 2024-25: ಎಸ್‌ಬಿಐನಲ್ಲಿ ಹೊಸ ವರ್ಷದಲ್ಲಿ ನೇಮಕ, 13,735 ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವೇತನ 64480 ರೂ.

ಅರ್ಜಿ ಸಲ್ಲಿಸುವುದು ಹೇಗೆ?

  • ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು https://www.ippbonline.com/web/ippb/current-openings ಲಿಂಕ್‌ಗೆ ಭೇಟಿ ನೀಡಬೇಕು.
  • ಇಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಬೇಕು. ಬಳಿಕ ದೊರಕುವ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಬೇಕು.
  • ಲಾಗಿನ್ ಆದ ನಂತರ ಅಭ್ಯರ್ಥಿಗಳು ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು. ಭಾವಚಿತ್ರ ಮತ್ತು ಸಹಿಯನ್ನು ಅರ್ಜಿ ನಮೂನೆಯಲ್ಲಿ ಅಪ್‌ಲೋಡ್ ಮಾಡಬೇಕು.
  • ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಸಬ್‌ಮಿಟ್‌ ಬಟನ್ ಕ್ಲಿಕ್ ಮಾಡಿ.
  • ಸಂದರ್ಶನದ ಸಮಯದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯುಡಿ ಪ್ರಮಾಣಪತ್ರಗಳ ನಮೂನೆಯು ವೆಬ್‌ಸೈಟ್‌ನಲ್ಲಿದೆ.

ಐಪಿಪಿಬಿ ನೇಮಕಾತಿ ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ